Over Thinking: ಯಾವುದೋ ವಿಷಯದ ಬಗ್ಗೆ ಅತಿಯಾಗಿ ಆಲೋಚಿಸಬೇಡಿ, ಈ ಆರೋಗ್ಯ ಸಮಸ್ಯೆಗಳು ಕಾಡಬಹುದು

|

Updated on: May 31, 2023 | 9:00 AM

ಕಚೇರಿಯ ಒತ್ತಡ, ಕೆಲಸದ ಹೊರೆಯು ಮಾನಸಿಕವಾಗಿ ನಿಮ್ಮನ್ನು ಕುಗ್ಗುವಂತೆ ಮಾಡುತ್ತದೆ. ಕೆಟ್ಟ ಆಲೋಚನೆಗಳು ಬರಲು ಶುರುವಾಗುತ್ತದೆ, ಯಾವುದೇ ಒಂದು ವಿಷಯದ ಬಗ್ಗೆ ಅಗತ್ಯವಿಲ್ಲದಷ್ಟು ಆಲೋಚನೆ ಮಾಡಲು ಶುರು ಮಾಡುತ್ತಾರೆ.

Over Thinking: ಯಾವುದೋ ವಿಷಯದ ಬಗ್ಗೆ ಅತಿಯಾಗಿ ಆಲೋಚಿಸಬೇಡಿ, ಈ ಆರೋಗ್ಯ ಸಮಸ್ಯೆಗಳು ಕಾಡಬಹುದು
ಮಾನಸಿಕ ಆರೋಗ್ಯ
Follow us on

ಕಚೇರಿಯ ಒತ್ತಡ, ಕೆಲಸದ ಹೊರೆಯು ಮಾನಸಿಕವಾಗಿ ನಿಮ್ಮನ್ನು ಕುಗ್ಗುವಂತೆ ಮಾಡುತ್ತದೆ. ಕೆಟ್ಟ ಆಲೋಚನೆಗಳು ಬರಲು ಶುರುವಾಗುತ್ತದೆ, ಯಾವುದೇ ಒಂದು ವಿಷಯದ ಬಗ್ಗೆ ಅಗತ್ಯವಿಲ್ಲದಷ್ಟು ಆಲೋಚನೆ ಮಾಡಲು ಶುರು ಮಾಡುತ್ತಾರೆ. ನಿಮ್ಮ ಸಮಸ್ಯೆ ಏನಿದ್ದರೂ ಪರಿಹಾರವಾಗುತ್ತದೋ ಇಲ್ಲವೋ ಅದು ನಂತರವೇ ತಿಳಿಯುತ್ತದೆ. ಆದರೆ ಅತಿಯಾಗಿ ಯೋಚಿಸುವ ನಿಮ್ಮ ಅಭ್ಯಾಸವು ಖಂಡಿತವಾಗಿಯೂ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಅಭ್ಯಾಸವು ಮಾನಸಿಕ ಹಾಗೂ ದೈಹಿಕವಾಗಿ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ.

ಮಧುಮೇಹಿಗಳ ಮೇಲೆ ಪರಿಣಾಮ
ನೀವು ಅಸಮಾಧಾನಗೊಂಡಾಗ ಮತ್ತು ಏನನ್ನಾದರೂ ಕುರಿತು ಹೆಚ್ಚು ಯೋಚಿಸಿದಾಗ, ಕಾರ್ಟಿಸೋಲ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ.
ಈ ಹಾರ್ಮೋನ್ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸಬಹುದು. ನಿಮ್ಮ ಒತ್ತಡವು ರಕ್ತದ ಸಕ್ಕರೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಈ ಕಾರಣಕ್ಕಾಗಿಯೇ ಸಕ್ಕರೆ ರೋಗಿಗಳಿಗೆ ಒತ್ತಡ ನಿರ್ವಹಣೆಗೆ ಪ್ರತ್ಯೇಕವಾಗಿ ಸಲಹೆ ನೀಡಲಾಗುತ್ತದೆ.

ನರಗಳ ಮೇಲೆ ಕೆಟ್ಟ ಪರಿಣಾಮ
ದೇಹದಲ್ಲಿ ಇರುವ ನರಗಳ ಸಂಪೂರ್ಣ ವ್ಯವಸ್ಥೆಯು ಸಂದೇಶ ಕಳುಹಿಸುವ ಕೆಲಸವನ್ನು ಮಾಡುತ್ತದೆ. ಅತಿಯಾಗಿ ಯೋಚಿಸುವುದರಿಂದ ಅಥವಾ ಒತ್ತಡಕ್ಕೆ ಒಳಗಾಗುವುದರಿಂದ, ಅದೇ ಸಂದೇಶವನ್ನು ನರಗಳಲ್ಲಿ ರವಾನಿಸಲಾಗುತ್ತದೆ.
ಇದು ಹೃದಯ ಮತ್ತು ಉಸಿರಾಟದ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಒತ್ತಡದಿಂದ ಬಳಲುತ್ತಿರುವ ಜನರು ಸುಲಭವಾಗಿ ಒತ್ತಡಕ್ಕೆ ಬಲಿಯಾಗುತ್ತಾರೆ ಅಥವಾ ಪಾರ್ಶ್ವವಾಯುವಿಗೆ ಬಲಿಯಾಗಲು ಇದು ಕಾರಣವಾಗಿದೆ.

ಹೃದಯದ ಮೇಲೆ ಪರಿಣಾಮ
ಒತ್ತಡವನ್ನು ತೆಗೆದುಕೊಳ್ಳುವ ನಿಮ್ಮ ಅಭ್ಯಾಸವು ಮುಂದುವರಿದರೆ, ರಕ್ತದೊತ್ತಡವು ಸಹ ಸಾಮಾನ್ಯವಾಗಿ ಉಳಿಯುವುದಿಲ್ಲ. ಆಗಾಗ ರಕ್ತದೊತ್ತಡ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ಅಪಧಮನಿಯಲ್ಲಿ ಊತ ಉಂಟಾಗಬಹುದು. ಇದರಿಂದಾಗಿ ಹೃದಯಕ್ಕೆ ಹಾನಿಯಾಗುವ ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ, ಹೆಚ್ಚು ಯೋಚಿಸುವುದು ಮಾನಸಿಕ ಆರೋಗ್ಯದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ನೆನಪಿನಲ್ಲಿಡಿ.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ