ಕಾಲಿಗೆ ಕಪ್ಪು ದಾರ ಧರಿಸಿರುವ ಅನೇಕರನ್ನು ನೀವು ನೋಡುತ್ತೀರಿ. ಕೆಲವರು ಇದನ್ನು ಸ್ಟೈಲ್‌ಗಾಗಿ ಧರಿಸಬಹುದು. ಆದರೆ, ಅನೇಕ ಜನರು ಜ್ಯೋತಿಷ್ಯ ಕಾರಣಗಳಿಗಾಗಿ ತಮ್ಮ ಪಾದಗಳಿಗೆ (Leg) ಕಪ್ಪು ದಾರವನ್ನು (Black Thread) ಕಟ್ಟುತ್ತಾರೆ. ಇಲ್ಲದಿದ್ದಲ್ಲಿ ಮಗುವಿನ ಕೈ, ಕಾಲು, ಕುತ್ತಿಗೆ ಮತ್ತು ಸೊಂಟದ ಸುತ್ತಲೂ ಕಪ್ಪು ದಾರವನ್ನು ಕಟ್ಟಲಾಗುತ್ತದೆ. ಇದೆಲ್ಲ ಯಾಕೆ? ಇದು ನಿಜವಾಗಿಯೂ ಪ್ರಯೋಜನಕಾರಿಯೇ..? ಜ್ಯೋತಿಷ್ಯ ತಜ್ಞರ (Astrology) ಪ್ರಕಾರ ವಾಸ್ತವದಲ್ಲಿ ಕಾಲಿಗೆ ಕಪ್ಪು ದಾರ ಧರಿಸುವುದರಿಂದ ಹಲವಾರು ಲಾಭಗಳಿವೆ. ಅದರ ಪ್ರಯೋಜನಗಳೇನು (Luck) ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ (Spiritual).
ಶನಿ ದೋಷದಿಂದ ರಕ್ಷಣೆ: ಕಾಲಿಗೆ ಕಪ್ಪು ದಾರ ಕಟ್ಟುವುದರಿಂದ ಶನಿ ದೋಷದ ದುಷ್ಪರಿಣಾಮಗಳು ತಟಸ್ಥವಾಗುತ್ತವೆ. ನಿಮ್ಮ ಕುಂಡಲಿಯಲ್ಲಿ ಶನಿ ದೋಷವು ನಿಮ್ಮನ್ನು ಕಾಡುತ್ತಿದ್ದರೆ, ಶನಿವಾರದಂದು ಕಪ್ಪು ದಾರವನ್ನು ತೆಗೆದುಕೊಂಡು ಅದನ್ನು ನಿಮ್ಮ ಕಾಲಿಗೆ ಭಕ್ತಿ ಭಾವದಿಂದ ಕಟ್ಟಿಕೊಳ್ಳಲು ಸೂಚಿಸಲಾಗುತ್ತದೆ.
ರಾಹು ಕೇತು ಕೋಪ ಶಮನ: ಛಾಯಾ ಗ್ರಹಗಳಾದ ರಾಹು, ಕೇತುಗಳು ನಿಮ್ಮ ಮೇಲೆ ಕೋಪಗೊಂಡರೆ ಶತ್ರು ಗ್ರಹ ಮನೆಗೆ ನುಗ್ಗಿ ನಿಮ್ಮ ಗೃಹ ಜೀವನಕ್ಕೆ ತೊಂದರೆಯಾಗುತ್ತದೆ. ಹಣಕಾಸಿನ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ.. ಹೀಗಾದರೆ ಎಡಗಾಲಿಗೆ ಕಪ್ಪು ದಾರ ಕಟ್ಟಿಕೊಳ್ಳಿ ಎನ್ನುತ್ತಾರೆ ತಜ್ಞರು.
ಆರ್ಥಿಕ ಸಮಸ್ಯೆಗಳಿಂದ ದೂರ: ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ ಹಣದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಈ ಪರಿಹಾರವು ಹಣದ ಕೊರತೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ನಿಮ್ಮ ಮನೆಗೆ ಸಮೃದ್ಧಿಯನ್ನು ತರುತ್ತದೆ. ನಿಮ್ಮ ಜೀವನದಲ್ಲಿ ನೀವು ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಿಮ್ಮ ಬಲಗಾಲಿಗೆ ಕಪ್ಪು ದಾರವನ್ನು ಕಟ್ಟಬೇಕು.
ಕಣ್ಣಿಗೆ ಕಾಣದಂತೆ ಮರೆಮಾಚುವುದು: ತೀವ್ರವಾದ ದ್ವೇಷವನ್ನು ಹೊಂದಿರುವ ನಕಾರಾತ್ಮಕ ಜನರು ಸಂಚು ಮತ್ತು ಪಿತೂರಿಗಳಿಂದ ತುಂಬಿರುತ್ತಾರೆ ಮತ್ತು ಅವರು ಯಾರಿಗಾದರೂ ಅಸೂಯೆಪಟ್ಟರೆ ಹಾನಿ ಮಾಡುತ್ತಾರೆ. ಮಕ್ಕಳು ವಿನಾಕಾರಣ ಅಳುತ್ತಿದ್ದರೆ ಅಥವಾ ಹಠಾತ್ತಾಗಿ ಅನಾರೋಗ್ಯಕ್ಕೆ ಒಳಗಾದಾಗ ಅಥವಾ ನರರೋಗಕ್ಕೆ ಕಪ್ಪು ದಾರವು ಮದ್ದಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ಹೇಳುತ್ತಾರೆ.
ಕಪ್ಪು ದಾರವನ್ನು ಕಟ್ಟುವ ನಿಯಮಗಳು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 9 ಗಂಟುಗಳನ್ನು ಕಟ್ಟಿದ ನಂತರ ದಾರವನ್ನು ಕಟ್ಟಬೇಕು. ಕಪ್ಪು ದಾರವನ್ನು ಧರಿಸಿ ಕಾಲಿಗೆ ಬೇರೆ ಯಾವುದೇ ಬಣ್ಣದ ದಾರವನ್ನು ಕಟ್ಟಬಾರದು. ಜ್ಯೋತಿಷಿಯ ಸೂಚನೆಯಂತೆ ಮಂಗಳವಾರ ಅಥವಾ ಶನಿವಾರದ ಶುಭದಿನಗಳಲ್ಲಿ ಮಾತ್ರ ದಾರವನ್ನು ಕಟ್ಟಬೇಕು. ಕಪ್ಪು ದಾರದ ಪರಿಣಾಮವನ್ನು ಅಧಿಕಗೊಳಿಸಲು, ಅದನ್ನು ಧರಿಸಿದ ನಂತರ ಪ್ರತಿದಿನ ಗಾಯತ್ರಿ ಮಂತ್ರವನ್ನು ಜಪಿಸಿ. ಅಲ್ಲದೆ, ನೀವು ಇದನ್ನು ಪ್ರತಿದಿನ ಒಂದೇ ಸಮಯದಲ್ಲಿ ಮಾಡಬೇಕು. ನೀವು ದಾರವನ್ನು ಧರಿಸಿದ ತಕ್ಷಣ ಶನಿ ಮಂತ್ರವನ್ನು 22 ಬಾರಿ ಜಪಿಸಿ.