World Earth Day 2023: ವಿಶ್ವ ಭೂ ದಿನದಂದು ಭೂ ಗ್ರಹದ ಆರೋಗ್ಯವನ್ನು ರಕ್ಷಿಸಲು ಸರಳ ಕಾಯ್ದೆ ತಯಾರಿಸಿದ ತಜ್ಞರು

ಭೂಮಿಯ ತಾಪಮಾನದ ಹೆಚ್ಚಳದಿಂದಾಗಿ ನಾವು ಭೂಮಿಯ ವಿನಾಶಕ್ಕೆ ಮುನ್ನುಡಿಯನ್ನು ಬರೆಯುತ್ತಿದ್ದೇವೆ. ಆದ್ದರಿಂದ ಈ ವಿನಾಶಗಳಿಂದ ಪರಿಸರವನ್ನು ಕಾಪಾಡಿಕೊಳ್ಳಲು ಈ ವಿಶ್ವ ಭೂ ದಿನದಂದು ತಜ್ಞರು ಕೆಲವು ಸರಳ ಕಾಯ್ದೆಗಳ ಪಟ್ಟಿಯನ್ನು ರೂಪಿಸಿದ್ದಾರೆ.

World Earth Day 2023: ವಿಶ್ವ ಭೂ ದಿನದಂದು ಭೂ ಗ್ರಹದ ಆರೋಗ್ಯವನ್ನು ರಕ್ಷಿಸಲು ಸರಳ ಕಾಯ್ದೆ ತಯಾರಿಸಿದ ತಜ್ಞರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 22, 2023 | 12:34 PM

ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಏಪ್ರಿಲ್ 22 ರಂದು ವಿಶ್ವ ಭೂ ದಿನವನ್ನು (World Earth Day) ಆಚರಿಸಲಾಗುತ್ತದೆ. ಈ ದಿನದಂದು ಹೆಚ್ಚಿನ ದೇಶಗಳಲ್ಲಿ ಪರಿಸರ ಪ್ರೇಮಿಗಳು ಮತ್ತು ಸ್ವಯಂ ಸೇವಕರು ಮರಗಳನ್ನು ನೆಡುತ್ತಾರೆ, ಪರಿಸರವನ್ನು ಸ್ವಚ್ಛಗೊಳಿಸುತ್ತಾರೆ. ಮತ್ತು ಹವಾಮಾನದಲ್ಲಿನ ತೀವ್ರವಾದ ಬದಲಾವಣೆಯನ್ನು ತಡೆಗಟ್ಟಲು ಸರ್ಕಾರವು ಸರಿಯಾದ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಾರೆ. ಭೂಮಿಯನ್ನು ವಿನಾಶದಿಂದ ಕಾಪಾಡಲು ಮತ್ತು ಭೂಮಿಯ ಮಹತ್ವವನ್ನು ತಿಳಿಸಲು ಈ ದಿನ ಹಲವಾರು ಕಾರ್ಯಕ್ರಮಗಳು ಪ್ರಪಂಚದಾದ್ಯಂತ ನಡೆಯುತ್ತವೆ. ಮತ್ತು ಭೂ ಗ್ರಹವನ್ನು ಕಲುಷಿತಗೊಳ್ಳದಂತೆ ನೋಡಿಕೊಳ್ಳುವುದು ಪ್ರತಿಯೊಂದು ರಾಷ್ಟ್ರದ ಕರ್ತವ್ಯವಾಗಿದೆ.

ಈ ಬಾರಿ ಬಿಗ್ ಒನ್ ಎಂದು ಕರೆಯಲ್ಪಡುವ ನಾಲ್ಕು ದಿನಗಳ ಕಾರ್ಯಕ್ರವನ್ನು ಶುಕ್ರವಾರದಂದು ಲಂಡನ್​​​ನಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಎಕ್ಸ್ ಟಿಂಕ್ಷನ್ ರೆಬೆಲಿಯನ್ ಆಕ್ಟಿವಿಟಿಸ್ಟ್ ಗುಂಪು ಆಯೋಚಿಸಿದೆ. ಪಳೆಯುಳಿಕೆ ಇಂಧನ ಬಳಕೆಯನ್ನು ಕೊನೆಗೊಳಿಸಲು ಬದ್ಧರಾಗಲು ಅಧ್ಯಕ್ಷ ಜೋ ಬಿಡನ್ ಅವರರನ್ನು ಒತ್ತಾಯಿಸಿ ವಾಷಿಂಗ್ಟನ್​​​ನಲ್ಲಿ ರ್ಯಾಲಿಯನ್ನು ನಡೆಸಲಾಗುವುದು ಎಂದು ರೆಬೆಲಿಯನ್ ಕಾರ್ಯಕರ್ತರು ಹೇಳಿದ್ದಾರೆ.

ಗುರುವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ವಿಶ್ವದ ಅತಿದೊಡ್ಡ ಆರ್ಥಿಕತೆಗಳ ನಾಯಕರೊಂದಿಗಿನ ಸಭೆಯಲ್ಲಿ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಮತ್ತು ಬ್ರೆಜಿಲ್​​​ನ ಅಮೆಜಾನ್ ಮಳೆಗಾಡಿನಲ್ಲಿ ಅರಣ್ಯನಾಶವನ್ನು ತಡೆಯಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಹಾಯ ಮಾಡಲು ಯುಎಸ್ ನಿಧಿಯನ್ನು ಹೆಚ್ಚಿಸುವುದಾಗಿ ವಾಗ್ದಾನ ನೀಡಿದರು.

ತಾಪಮಾನ ಏಕರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ ಗೆ ಮಿತಿಗೊಳಿಸಲು ಹವಾಮಾನ ಕ್ರಿಯೆಯಲ್ಲಿ ಕ್ವಾಂಟಮ್ ಲೀಪ್ ಅಗತ್ಯವಿದೆ ಎಂದು ಯುಸ್ ಅಧ್ಯಕ್ಷರ ಪ್ರಮುಖ ಆರ್ಥಿಕ ವೇದಿಕೆಯಲ್ಲಿ ಭಾಗವಹಿಸುವ ದೇಶಗಳಿಗೆ ಯುನ್ ಸೆಕ್ರೆಟರಿ ಜನರಲ್ (ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ) ಆಂಟೋನಿಯೊ ಗುಟೆರಸ್ ತಿಳಿಸಿದರು. ಈ ಬಾರಿಯ ವಿಶ್ವ ಭೂ ದಿನದ ಸಂದೇಶದಲ್ಲಿ ನಾವು ವಿನಾಶದತ್ತ ನರಕಯಾತನೆಯನ್ನು ತೋರುತ್ತಿದ್ದೇವೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: Earth Day 2022: ವಿವಿಧ ಪ್ರದೇಶದಲ್ಲಿ ಹವಾಮಾನ ಬದಲಾವಣೆ ಪರಿಣಾಮಕ್ಕೆ ಕನ್ನಡಿ ಹಿಡಿದ ಗೂಗಲ್ ಡೂಡಲ್

ಭಾರತದಲ್ಲಿ ವಿಶ್ವಸಂಸ್ಥೆಯ ರೆಸಿಡೆಂಟ್ ಕೋ-ಆರ್ಡಿನೇಟರ್ ಶೋಂಬಿ ಶಾರ್ಪ್ ಅವರು ಈ ಬಾರಿಯ ಅಂತರಾಷ್ಟ್ರೀಯ ಭೂದಿನದಂದು, ಮಾಲಿನ್ಯ, ಜೀವವೈವಿಧ್ಯದ ನಾಶ, ಹವಾಮಾನದ ಬದಲಾವಣೆಯ ಬಿಕ್ಕಟ್ಟಿನ ಮಧ್ಯೆ ನಾವಿದ್ದೇವೆ. ಆದರೂ ನಾವು ಅದೇ ಮಾಲಿನ್ಯ ಗಾಳಿಯನ್ನು ಸೇವಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಅವರ ಮಾತಿನಂತೆ, ನಾವು ಪ್ರಕೃತಿಯೊಂದಿಗೆ ಸೌಹಾರ್ದಯುತವಾಗಿ ಬದುಕಬೇಕು. ಮತ್ತು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಗುಟೆರಸ್ ಅವರು ಚಾಲನೆ ನೀಡಿದ ಲೈಫ್ ಮಿಷನ್ ಅಭಿಯಾನದಲ್ಲಿ ತಿಳಿಸಿರುವಂತೆ ಪರಿಸರಕ್ಕೆ ಪೂರಕವಾದ ನಮ್ಮ ದೈನಂದಿನ ಅಭ್ಯಾಸಗಳನ್ನು ಬದಲಾಯಿಸಲು ನಾವು ಕೆಲವೊಂದು ಕ್ರಮಗಳನ್ನು ಪಾಲಿಸಬೇಕು ಎಂದು ಹೇಳಿದರು. ಶಾಪಿಂಗ್​​​ಗಾಗಿ ಪ್ಲಸ್ಟಿಕ್ ಚೀಲಗಳನ್ನು ಬಳಸದೆ ಬಟ್ಟೆ ಚೀಲಗಳನ್ನು ಕೊಂಡೊಯ್ಯಬೇಕು. ಪ್ಲಾಸ್ಟಿಕ್ ಬಾಟಲಿಯಲ್ಲಿನ ನೀರನ್ನು ಕುಡಿಯದಿರುವುದು, ಹವಾನಿಯಂತ್ರಣವನ್ನು ಅಗತ್ಯವಿದ್ದಾಗ ಮಾತ್ರ ಚಾಲನೆ ಮಾಡುವುದು ಮತ್ತು ಪರಿಸರಕ್ಕೆ ಹಾನಿಯಾಗುವ ಯಾವುದೇ ರೀತಿಯ ಕಾರ್ಯಗಳನ್ನು ಮಾಡಬಾರದು ಎಂದು ಹೇಳಿದರು.

ಭೂ ದಿನದಂದು ಭೂ ಗ್ರಹವನ್ನು ಉತ್ತಮಗೊಳಿಸಲು ಶ್ರಮಿಸುತ್ತಿರುವ ಜನರರನ್ನು ಶ್ಲಾಘಿಸಿದ ಪ್ರಧಾನಿ ಮೋದಿ:

ಇಂದು ಭೂ ದಿನದ ಸಲುವಾಗಿ ಪ್ರಧಾನಿ ಮೋದಿ ಅವರು ನಮ್ಮ ಭೂ ಗ್ರಹವನ್ನು ಉತ್ತಮಗೊಳಿಸಲು ಶ್ರಮಿಸುತ್ತಿರುವ ಎಲ್ಲರನ್ನು ಶ್ಲಾಘಿಸಿದ್ದಾರೆ. ಪ್ರಕೃತಿಯೊಂದಿಗೆ ಸೌಹಾರ್ದಯುತವಾಗಿ ಬದುಕುವ ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಸುಸ್ಥಿರ ಅಭಿವೃದ್ಧಿಯನ್ನು ಮುಂದುವರೆಸಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:34 pm, Sat, 22 April 23

ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್