Health Tips: ಆಲ್ಕೋಹಾಲ್ ಸೇವನೆಯು ದೇಹದ ದೀರ್ಘಕಾಲ ನೋವಿಗೆ ಕಾರಣವಾಗುತ್ತದೆ: ಅಧ್ಯಯನ

ದೀರ್ಘಕಾಲದವರೆಗೆ ಆಲ್ಕೋಹಾಲ್ ಸೇವನೆ ಮತ್ತು ಆಲ್ಕೋಹಾಲ್ ಹಿಂತೆಗೆದುಕೊಳ್ಳುವಿಕೆ ದೀರ್ಘಕಾಲದ ದೇಹ ನೋವಿಗೆ ಕಾರಣವಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

Health Tips: ಆಲ್ಕೋಹಾಲ್ ಸೇವನೆಯು ದೇಹದ ದೀರ್ಘಕಾಲ ನೋವಿಗೆ ಕಾರಣವಾಗುತ್ತದೆ: ಅಧ್ಯಯನ
ಸಾಂದರ್ಭಿಕ ಚಿತ್ರ : ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 22, 2023 | 2:54 PM

ದೀರ್ಘಕಾಲದ ಆಲ್ಕೋಹಾಲ್ ಸೇವನೆಯು ಎರಡು ವಿಭಿನ್ನ ಜೀವರಾಸಯನಿಕ ಪ್ರಕ್ರಿಯೆಗಳ ಮೂಲಕ ದೇಹದ ನೋವಿನ ಸಂವೇಧನೆಯನ್ನು ಹೆಚ್ಚಿಸಬಹುದು. ಒಂದು ಹಾಲ್ಕೋಹಾಲ್ ಸೇವನೆಯಿಂದ ಮತ್ತು ಇನ್ನೊಂದು ಹಿಂತೆಗೆದುಕೊಳ್ಳುವಿಕೆಯಿಂದ. ಆಲ್ಕೋಹಾಲ್ ಮತ್ತು ನೋವಿನ ನಡುವಿನ ಸಂಕೀರ್ಣ ಸಂಬಂಧಗಳನ್ನು ತನಿಖೆ ಮಾಡುವ ಸ್ಕ್ರಿಪ್ಸ್ ರಿಸರ್ಚ್ನ ವಿಜ್ಞಾನಿಗಳು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಬ್ರಿಟಿಷ್ ಜರ್ನಲ್ ಆಫ್ ಫಾರ್ಮಕಾಲಜಿಯಲ್ಲಿ ಪ್ರಕಟವಾದ ಈ ಸಂಶೋಧನೆಯು, ಆಲ್ಕೋಹಾಲ್ ಸಂಬಂಧಿತ ದೀರ್ಘಕಾಲದ ನೋವು ಮತ್ತು ಅತಿಸೂಕ್ಷ್ಮತೆಗೆ ಚಿಕಿತ್ಸೆ ನೀಡಲು ಸಂಭಾವ್ಯ ಹೊಸ ಔಷಧಿಗಳನ್ನು ಕೂಡಾ ಸೂಚಿಸಿದೆ. ದೀರ್ಘಕಾಲದ ನೋವು ಮತ್ತು ಆಲ್ಕೋಹಾಲ್ ಅವಲಂಬನೆಯ ನಡುವಿನ ಮಾರ್ಗವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ತುರ್ತು ಅವಶ್ಯಕತೆಯಿದೆ ಎಂದು ಮಾಲಿಕ್ಯುಲರ್ ಮೆಡಿಸಿನ್ ನ ಸ್ಕಿಮ್ಮೆಲ್ ಫ್ಯಾಮಿಲಿ ಚೇರ್ ಮತ್ತು ಸ್ಕ್ರಿಪ್ಸ್ ರಿಸರ್ಚ್ನ ನರವಿಜ್ಞಾನದ ಪ್ರಧ್ಯಾಪಕಿ ಹಾಗೂ ಹಿರಿಯ ಲೇಖಕಿ ಮಾರಿಸಾ ರಾಬರ್ಟೊ ಅವರು ಹೇಳುತ್ತಾರೆ. ಹಾಗೂ ಆಲ್ಕೋಹಾಲ್ ಅವಲಂಬನೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ನೋವು ವ್ಯಾಪಕವಾದ ರೋಗಲಕ್ಷಣವಾಗಿದೆ ಎಂದು ಅವರು ಹೇಳುತ್ತಾರೆ.

ಆಲ್ಕೋಹಾಲ್ ಯೂಸ್ ಡಿಸಾರ್ಡರ್ (AUD) ಇದು ಸಾಮಾನ್ಯವಾಗಿ ಆಲ್ಕೋಹಾಲ್ ಅವಲಂಬನೆ ಮತ್ತು ಆಲ್ಕೋಹಾಲ್ ಚಟ ಎಂದು ಕರೆಯಲ್ಪಡುವ ಪರಿಸ್ಥಿತಿಗಳನ್ನು ಒಳಗೊಂಡಿರುತ್ತದೆ. ಇದು 2021ರ ಡ್ರಗ್ ಬಳಕೆ ಮತ್ತು ಆರೋಗ್ಯದ ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ ಅಮೇರಿಕಾದಲ್ಲಿ 29.5ಮಿಲಿಯನ್ ಜನರ ಮೇಲೆ ಪರಿಣಾಮವನ್ನು ಬೀರಿದೆ. ಕಾಲಾನಂತರದಲ್ಲಿ ಈ ಆಲ್ಕೋಹಾಲ್ ಯೂಸ್ ಡಿಸಾರ್ಡರ್ ಹೃದ್ರೋಗ, ಪಾರ್ಶ್ವವಾಯು, ಯಕೃತ್ತಿನ ಕಾಯಿಲೆ ಮತ್ತು ಕ್ಯಾನ್ಸರ್ ಸೇರಿದಂತೆ ಹಲವಾರು ದೀರ್ಘಕಾಲದ ಕಾಯಿಲೆಗಳ ಬೆಳವಣಿಗೆಯನ್ನು ಪ್ರಚೋದಿಸುತ್ತದೆ.

ದೀರ್ಘಾವಧಿಯ ಆಲ್ಕೋಹಾಲ್ ಸೇವನೆಯಿಂದ ಉಂಟಾಗುವ ಅನೇಕ ಪರಿಣಾಮಗಳ ಪೈಕಿ ದೇಹ ನೋವು ಕೂಡಾ ಒಂದು. ಆಲ್ಕೋಹಾಲ್ ಯೂಸ್ ಡಿಸಾರ್ಡರ್ ಹೊಂದಿರುವ ಅರ್ಧಕ್ಕಿಂತ ಹೆಚ್ಚು ಜನರು ಕೆಲವು ರೀತಿಯ ನಿರಂತರ ದೇಹ ನೋವನ್ನು ಅನುಭವಿಸುತ್ತಾರೆ. ಇದು ಆಲ್ಕೋಹಾಲ್ ಯುಕ್ತ ನರರೋಗವನ್ನು ಒಳಗೊಂಡಿದೆ. ಇದು ದೀರ್ಘಕಾಲದ ನೋವು ಮತ್ತು ಇತರ ರೋಗಲಕ್ಷಣಗಳನ್ನು ಉಂಟು ಮಾಡುವ ನರಹಾನಿಯಾಗಿದೆ. ಮೆದುಳು ನೋವಿನ ಸಂಕೇತಗಳನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆಯೋ, ಹಾಗೆಯೇ ಪ್ರತಿರಕ್ಷಣಾ ವ್ಯವಸ್ಥೆಯ ಸಕ್ರಿಯಗೊಳಿಸುವಿಕೆ ಹೇಗೆ ಸಂಭವಿಸುತ್ತದೆ ಎಂಬುದರ ಬದಲಾವಣೆಯೊಂದಿಗೆ ಆಲ್ಕೋಹಾಲ್ ಯೂಸ್ ಡಿಸಾರ್ಡರ್ ಸಂಬಂಧಿಸಿದೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಜೊತೆಗೆ ಈ ನೋವು ಹೆಚ್ಚಿದ ಆಲ್ಕೋಹಾಲ್ ಸೇವನೆಗೂ ಕಾರಣವಾಗಬಹುದು.

ರಾಬರ್ಟೊ ಮತ್ತು ಅವರ ಸಹದ್ಯೋಗಿಗಳು ಈ ವಿವಿಧ ರೀತಿಯ ಆಲ್ಕೋಹಾಲ್ ಸಂಬಂಧಿತ ನೋವಿನ ಮೂಲ ಕಾರಣಗಳನ್ನು ಕಲಿಯಲು ಆಸಕ್ತಿಯನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ. ಮತ್ತು ಅವರು ಹೊಸ ಅಧ್ಯಯನದಲ್ಲಿ ಅವರು ವಯಸ್ಕ ಇಳಿಗಳ ತೆಗೆದುಕೊಂಡಿದ್ದಾರೆ. ಇದನ್ನು ಮೂರು ಗುಂಪುಗಳನ್ನಾಗಿ ವಿಗಂಡಿಸಲಾಗಿದೆ. ಆಲ್ಕೋಹಾಲ್ ಅವಲಂಬಿಸಿರುವ ಇಲಿಗಳು (ಅತಿಯಾಗಿ ಕುಡಿಯುವವರು), ಆಲ್ಕೋಹಾಲ್ ಸೀಮಿತವಾಗಿ ಕುಡಿಯುವ ಇಲಿಗಳು (ಮಧ್ಯಮ ಪ್ರಮಾಣದಲ್ಲಿ ಕುಡಿಯುವವರು) ಮತ್ತು ಆಲ್ಕೋಹಾಲ್ ಸೇವನೆ ಮಾಡದವರು.

ಇವರ ಈ ಪ್ರಯೋಗದಲ್ಲಿ ಆಲ್ಕೋಹಾಲ್ ಅವಲಂಬಿತ ಇಲಿಗಳಲ್ಲಿ ಆಲ್ಕೋಹಾಲ್ ಹಿಂತೆಗೆದುಕೊಳ್ಳುವಿಕೆಯ ಸಮಯದಲ್ಲಿ ಅವುಗಳ ದೇಹದಲ್ಲಿ ಅಯೋಡಿನಿಯಾ ಬೆಳವಣಿಗೆಯಾಯಿತು ಮತ್ತು ನಂತರ ಆಲ್ಕೋಹಾಲ್ ಸೇವನೆಯು ಆ ನೋವಿನ ಸಂವೇದನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿತು. ಮಧ್ಯಮ ಪ್ರಮಾಣದ ಆಲ್ಕೋಹಾಲ್ ಸೇವಿಸಿರುವ ಇಳಿಗಳು ಆಲ್ಕೋಹಾಲ್ ಹಿಂತೆಗೆದುಕೊಳ್ಳುವಿಕೆಯ ಸಮಯದಲ್ಲಿ ಹೆಚ್ಚಿನ ನೋವಿನ ಸಂವೇದನೆಯ ಲಕ್ಷಣಗಳನ್ನು ತೋರಿಸಿದವು. ಆದರೆ ಇವುಗಳು ಆಲ್ಕೋಹಾಲ್ ಅವಲಂಬಿತ ಇಲಿಗಳಂತೆ ಆಲ್ಕೋಹಾಲ್ ನ ಮರುಮಾನ್ಯತೆಯನ್ನು ಹೊಂದಿಲ್ಲ.

ರಾಬರ್ಟೋ ಅವರ ತಂಡ ನಂತರ ಈ ಇಲಿಗಳಲ್ಲಿನ ಉರಿಯೂತದ ಪ್ರೋಟೀನ್​​​ಗಳ ಮಟ್ಟವನ್ನು ಅಳೆದಾಗ, ಆಲ್ಕೋಹಾಲ್ ಅವಲಂಬಿತ ಮತ್ತು ಆಲ್ಕೋಹಾಲ್ ಅವಲಂಬಿತವಲ್ಲದ ಇಲಿಗಳಲ್ಲಿ ಉರಿಯೂತದ ಮಾರ್ಗಗಳನ್ನು ಪರೀಕ್ಷಿಸಿದಾಗ, ಉರಿಯೂತದ ನಿರ್ಧಿಷ್ಟ ಅಣುಗಳು ಆಲ್ಕೋಹಾಲ್ ಅವಲಂಬಿತ ಇಲಿಗಳಲ್ಲಿ ಮಾತ್ರ ಹೆಚ್ಚಾಗುತ್ತವೆ ಎಂದು ಅವರು ಕಂಡುಕೊಂಡರು. ವಿಭಿನ್ನ ಆಣ್ವಿಕ ಕಾರ್ಯವಿಧಾನಗಳು ಎರಡು ರೀತಿಯ ನೋವನ್ನು ಉಂಟುಮಾಡಬಹುದು ಎಂದು ಇವರ ಅಧ್ಯಯನವು ಸೂಚಿಸಿದೆ.

ಇದನ್ನೂ ಓದಿ:Health Tips for 2023: ನಿಮ್ಮನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಈ ಸಿಂಪಲ್ ಟಿಪ್ಸ್ ಪಾಲಿಸಿ

ಈ ಎರಡು ವಿಧದ ನೋವುಗಳು ಬದಲಾಗುತ್ತಿರುತ್ತವೆ. ಅದಕ್ಕಾಗಿಯೇ ಅವುಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಮತ್ತು ಪ್ರತಿ ವಿಧದ ಚಿಕಿತ್ಸೆಗೆ ವಿಭಿನ್ನವಾದ ವಿಧಾನಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂದು ಸ್ಕ್ರಿಪ್ಸ್ ರಿಸರ್ಚ್ನ ಪೋಸ್ಟ್ ಡಾಕ್ಟರಲ್ ಅಸೋಸಿಯೇಟ್ ನ ಲೇಖಕಿ ವಿಕ್ಟೋರಿಯಾ ಬೊರ್ಗೊನೆಟ್ಟಿ ಹೇಳುತ್ತಾರೆ. ಆಲ್ಕೋಹಾಲ್ ಸಂಬಂಧಿತ ದೀರ್ಘಕಾಲದ ನೋವಿನ ಪರಿಸ್ಥಿತಿಗಳನ್ನು ಪತ್ತೆಹಚ್ಚಲು ಅಥವಾ ಚಿಕಿತ್ಸೆ ನೀಡಲು ಈ ಉರಿಯೂತದ ಅಣುಗಳನ್ನು ಹೇಗೆ ಬಳಸಬೇಕು ಎಂಬುದರ ಕುರಿತು ರಾಬರ್ಟೊ ಗುಂಪು ತಮ್ಮ ಅಧ್ಯಯನವನ್ನು ಮುಂದುವರೆಸಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 2:54 pm, Sat, 22 April 23

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ