Updated on:Apr 22, 2023 | 12:58 PM
ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲಾಗಿರುವ ಭಾರತದ ಪಾರಂಪರಿಕ ತಾಣಗಳ ವಿವರ ಇಲ್ಲಿದೆ. ನೀವು ಜೀವನದಲ್ಲಿ ಭೇಟಿ ನೀಡಲೇಬೇಕಾದ ಸುಂದರತಾಣಗಳು ಇವು.
ಅಜಂತಾ ಗುಹೆ: ಇಲ್ಲಿನ ಶಿಲ್ಪಕಲೆಗಳು ಬೌದ್ಧಮತಕ್ಕೆ ಸಂಬಂಧಿಸಿದ್ದಾಗಿದೆ.ಈ ಗುಹೆಗಳನ್ನು 1983ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲಾಯಿತು.
ಆಗ್ರಾ ಕೋಟೆ: ಇದು 16 ನೇ ಶತಮಾನದ ಮೊಘಲ್ ಸಾಮಾಜ್ರ್ಯಶಾಹಿ ಕೋಟೆಯಾಗಿದೆ. ಇದು ತಾಜ್ ಮಹಲ್‌ನಿಂದ ಸುಮಾರು 2.5 ಕಿಮೀ ದೂರದಲ್ಲಿದೆ. ಇದನ್ನು ಪೊಘಲ್ ವಾಸ್ತುಶಿಲ್ಪದ ಮೇರುಕೃತಿ ಎಂದು ಪರಿಗಣಿಸಲಾಗಿದೆ ಹಾಗೂ ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.
ತಾಜ್ ಮಹಲ್: ಇಂಡೋ ಇಸ್ಲಾಮಿಕ್ ವಾಸ್ತು ಶಿಲ್ಪದ ಅತ್ಯುತ್ತಮ ಉದಾಹರಣೆಯಾಗಿದೆ. ಯಮುನಾ ನದಿಯ ತಟದಲ್ಲಿ ನಿರ್ಮಿಸಲಾಗಿದೆ.
ಕಾಜಿರಂಗ ರಾಷ್ಟ್ರೀಯ ಉದ್ಯಾನವನ: ಸುಮಾರು 429.69 ಚದರ ಕಿ.ಮೀ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ವಿಲಕ್ಷಣವಾದ ಅಭಯಾರಣ್ಯವಾಗಿದೆ. ಇಲ್ಲಿ ಅಪರೂಪದ ಒಂದು ಕೊಂಬಿನ ಘೇಂಡಾಮೃಗಗಳಿಗೆ ಹೆಸರುವಾಸಿಯಾಗಿದೆ. ಇದಲ್ಲದೇ ಕರಡಿಗಳು, ಚಿರತೆ, ಆನೆ ಸೇರಿದಂತೆ ಇನ್ನು ಅನೇಕ ಆಕರ್ಷಕ ಜೀವಿಗಳನ್ನು ನೀವು ಇಲ್ಲಿ ಕಾಣಬಹುದಾಗಿದೆ.
ಕೋನಾರ್ಕ್ ಸೂರ್ಯ ದೇವಾಲಯ: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಈ ದೇವಾಲಯವು ಸೊಗಸಾದ ವಾಸ್ತುಶಿಲ್ಪ ಮತ್ತು ಕಲ್ಲಿನ ಕೆತ್ತನೆಗಳಿಗೆ ವಿಶ್ವ ವಿಖ್ಯಾತಿ ಪಡೆದಿದೆ.
Published On - 12:58 pm, Sat, 22 April 23