AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಚಿ ಹಣ್ಣು ಬಳಸಿ ಚರ್ಮದ ಸನ್​ಬರ್ನ್ ಕಲೆ ತೆಗೆದುಹಾಕುವುದು ಹೇಗೆ?

ಲಿಚಿ ಹಣ್ಣಿನಿಂದ ಸೌಂದರ್ಯ ಹೆಚ್ಚಾಗುತ್ತದೆ ಎಂಬುದು ನಿಮಗೆ ಗೊತ್ತಾ? ಲಿಚಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಚರ್ಮ ಸ್ನೇಹಿ ಪೋಷಕಾಂಶವಾಗಿದೆ. ವಿಟಮಿನ್ ಸಿ ನಿಮಗೆ ಮೃದುವಾದ ಚರ್ಮವನ್ನು ನೀಡುತ್ತದೆ. ಲಿಚಿ ಹಣ್ಣಿನ ಅದ್ಭುತ ತ್ವಚೆಯ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.

ಲಿಚಿ ಹಣ್ಣು ಬಳಸಿ ಚರ್ಮದ ಸನ್​ಬರ್ನ್ ಕಲೆ ತೆಗೆದುಹಾಕುವುದು ಹೇಗೆ?
ಲಿಚಿ ಹಣ್ಣು Image Credit source: iStock
ಸುಷ್ಮಾ ಚಕ್ರೆ
|

Updated on: Nov 25, 2023 | 7:16 PM

Share

ಲಿಚಿ ಹಣ್ಣು ಅತ್ಯಂತ ರುಚಿಕರವಾದ ಹಣ್ಣು. ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಆಹಾರ. ಕ್ಯಾನ್ಸರ್ ಅಪಾಯವನ್ನು ನಿಯಂತ್ರಿಸುವ ಗುಣವನ್ನೂ ಲಿಚಿ ಹೊಂದಿದೆ ಎನ್ನಲಾಗಿದೆ. ಆರೋಗ್ಯದ ಪ್ರಯೋಜನಗಳ ಜೊತೆಗೆ ಲಿಚಿ ಹಣ್ಣಿನಿಂದ ತ್ವಚೆಯ ಸೌಂದರ್ಯಕ್ಕೂ ಹಲವು ಪ್ರಯೋಜನಗಳಿವೆ. ಲಿಚಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಚರ್ಮ ಸ್ನೇಹಿ ಪೋಷಕಾಂಶವಾಗಿದೆ. ವಿಟಮಿನ್ ಸಿ ನಿಮಗೆ ಮೃದುವಾದ ಚರ್ಮವನ್ನು ನೀಡುತ್ತದೆ. ಲಿಚಿ ಹಣ್ಣಿನ ಅದ್ಭುತ ತ್ವಚೆಯ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ:

ಸೂರ್ಯನ ಬೆಳಕು ನಿಮ್ಮ ಚರ್ಮವನ್ನು UV ವಿಕಿರಣಗಳಿಗೆ ಒಡ್ಡುತ್ತದೆ. ಇದು ನಿಮ್ಮ ಚರ್ಮದ ಕಪ್ಪಾಗುವಿಕೆ, ಅಕಾಲಿಕ ವಯಸ್ಸಾದ ಮತ್ತು ದೀರ್ಘಾವಧಿಯಲ್ಲಿ ಚರ್ಮದ ಕ್ಯಾನ್ಸರ್​ಗೆ ಕಾರಣವಾಗಬಹುದು. ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿರುವ ಲಿಚಿ ಸಾರವು ಸೂರ್ಯನಿಂದ ಬರುವ UV ವಿಕಿರಣದ ಹಾನಿಕಾರಕ ಪರಿಣಾಮಗಳಿಂದ ನಿಮ್ಮ ಚರ್ಮವನ್ನು ರಕ್ಷಿಸುತ್ತದೆ.

ಮೈ ಬಣ್ಣವನ್ನು ತಿಳಿಯಾಗಿಸುತ್ತದೆ:

ಲಿಚಿ ಸಾರದಲ್ಲಿರುವ ಫೈಟೊಕೆಮಿಕಲ್ಸ್ ಹೈಪರ್ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡುತ್ತದೆ. ಇದರಿಂದ ಸಾಮಾನ್ಯವಾಗಿ ನಿಮ್ಮ ಚರ್ಮದ ಮೇಲೆ ಕಪ್ಪು ಕಲೆಗಳು ಉಂಟಾಗುತ್ತವೆ. ಲಿಚಿ ಹಣ್ಣಿನ ಸಾರದಲ್ಲಿರುವ ಪಾಲಿಫಿನಾಲ್‌ಗಳು ನಿಮ್ಮ ಚರ್ಮದಲ್ಲಿ ನೈಸರ್ಗಿಕವಾಗಿ ಇರುವ ವರ್ಣದ್ರವ್ಯವಾದ ಮೆಲನಿನ್‌ ಅಂಶವನ್ನು ತಡೆಯುತ್ತದೆ. ಇದರಿಂದ ಚರ್ಮವನ್ನು ಕಪ್ಪಾಗುವುದನ್ನು ತಡೆಯಬಹುದು.

ಇದನ್ನೂ ಓದಿ: ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ರಕ್ಷಿಸುವ 7 ಸೂಪರ್‌ಫುಡ್‌ಗಳಿವು

ಚರ್ಮದ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ:

ಚರ್ಮದ ವಯಸ್ಸಾದ ಚಿಹ್ನೆಗಳನ್ನು ಹಲವಾರು ರೀತಿಯಲ್ಲಿ ನಿಧಾನಗೊಳಿಸಲು ಲಿಚಿ ಸಹಾಯ ಮಾಡುತ್ತದೆ. ಲಿಚಿ ಬೀಜದ ಸಾರವು ಕಾಲಜಿನೇಸ್, ಎಲಾಸ್ಟೇಸ್ ಮತ್ತು ಹೈಲುರೊನಿಡೇಸ್‌ನಂತಹ ಕಿಣ್ವಗಳನ್ನು ಪ್ರತಿಬಂಧಿಸುತ್ತದೆ. ಈ ಕಿಣ್ವಗಳ ಹೆಚ್ಚಿನ ಚಟುವಟಿಕೆಯು ನಿಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಸೂಕ್ಷ್ಮ ರೇಖೆಗಳು, ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

ಉರಿಯೂತವನ್ನು ಕಡಿಮೆ ಮಾಡುತ್ತದೆ:

ಲಿಚಿ ಸಾರವು ಪಾಲಿಫಿನಾಲ್‌ಗಳ ಹೆಚ್ಚಿನ ಅಂಶವನ್ನು ಹೊಂದಿದೆ. ಇದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಸಾಮಾನ್ಯವಾಗಿ ಉರಿಯೂತಕ್ಕೆ ಸಂಬಂಧಿಸಿದ ಕಿರಿಕಿರಿ ಮತ್ತು ತುರಿಕೆಯನ್ನು ಕಡಿಮೆ ಮಾಡುತ್ತದೆ.

ಚರ್ಮದ ಆರೈಕೆಗೆ ಲಿಚಿಯನ್ನು ಹೇಗೆ ಬಳಸುವುದು?:

ಸನ್ ಬರ್ನ್ಸ್ ಕಡಿಮೆ ಮಾಡಲು ಹೀಗೆ ಮಾಡಿ:

ಲಿಚಿ ಹಣ್ಣಿನ ತಿರುಳನ್ನು ತೆಗೆದು ಅದರಿಂದ ರಸ ಹಿಂಡಿಕೊಳ್ಳಿ. ಈ ರಸಕ್ಕೆ ಒಂದು ವಿಟಮಿನ್ ಇ ಕ್ಯಾಪ್ಸುಲ್‌ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಹತ್ತಿ ಉಂಡೆಯಿಂದ ಸನ್​ಬರ್ನ್ ಆದ ಜಾಗಕ್ಕೆ ಇದನ್ನು ಹಚ್ಚಿರಿ. ಬಳಿಕ, ಅರ್ಧ ಗಂಟೆ ಕಾಲ ಹಾಗೆಯೇ ಬಿಡಿ, ನಂತರ ತಣ್ಣೀರಿನಿಂದ ತೊಳೆಯಿರಿ. ಸನ್ ಬರ್ನ್ಸ್ ಸಂಪೂರ್ಣವಾಗಿ ವಾಸಿಯಾಗುವವರೆಗೆ ಇದನ್ನು ಪ್ರತಿದಿನಕ್ಕೊಮ್ಮೆ ಬಳಸುತ್ತಿರಿ.

ಇದನ್ನೂ ಓದಿ: ಚಳಿಗಾಲದಲ್ಲಿ ಮಗುವಿನ ಕೋಮಲ ತ್ವಚೆಯ ಕಾಳಜಿ ಮಾಡುವುದು ಹೇಗೆ?

ಆರೋಗ್ಯಕರ ಚರ್ಮಕ್ಕಾಗಿ ಹೀಗೆ ಮಾಡಿ:

4 ರಿಂದ 5 ಲಿಚಿಗಳ ತಿರುಳಿನಿಂದ ರಸವನ್ನು ಹೊರತೆಗೆಯಿರಿ. ಈ ಮಿಶ್ರಣಕ್ಕೆ ಲ್ಯಾವೆಂಡರ್ ಎಣ್ಣೆಯ ಕೆಲವು ಹನಿಗಳನ್ನು ಸೇರಿಸಿ. ಈ ಮಿಶ್ರಣವನ್ನು ನಿಮ್ಮ ಮುಖ, ಕುತ್ತಿಗೆ ಅಥವಾ ಹೈಪರ್‌ಪಿಗ್ಮೆಂಟೇಶನ್‌ನಿಂದ ಪ್ರಭಾವಿತವಾಗಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಸುಮಾರು 20 ನಿಮಿಷಗಳ ಕಾಲ ಅದನ್ನು ಬಿಡಿ. ಬಳಿಕ ನಿಮ್ಮ ಮುಖವನ್ನು ಒರೆಸಲು ತಣ್ಣೀರಿನಲ್ಲಿ ಅದ್ದಿದ ಸ್ವಚ್ಛವಾದ ಹತ್ತಿ ಟವೆಲ್ ಬಳಸಿ.

ಮೊಡವೆ ತೊಡೆದುಹಾಕಲು ಹೀಗೆ ಮಾಡಿ:

ಮೊಡವೆಗಳನ್ನು ತೆಗೆಯಲು ನೀವು ಲಿಚಿಯ ತಾಜಾ ರಸವನ್ನು ಬಳಸಬಹುದು ಅಥವಾ ಲಿಚಿ ತಿರುಳು ಮತ್ತು ಸ್ವಲ್ಪ ಮೊಸರು ಜೊತೆ ಫೇಸ್​ಪ್ಯಾಕ್ ಮಾಡಬಹುದು. ಮೊಡವೆ ಇರುವ ಜಾಗದ ಮೇಲೆ ಇದನ್ನು ಹಚ್ಚಿ, ಸ್ವಲ್ಪ ಒಣಗಲು ಬಿಡಿ. ನಂತರ ನೀರಿನಿಂದ ತೊಳೆಯಿರಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ