ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ, ಮುಖದ ಕಾಂತಿ ಹೆಚ್ಚಿಸಲು ಬಳಸಿ!

|

Updated on: Nov 08, 2023 | 9:00 PM

Rice Water Benefits: ಅಕ್ಕಿ ನೀರು ಅಕ್ಕಿಯನ್ನು ನೆನೆಸಿ ಅಥವಾ ಕುದಿಸಿದ ನಂತರ ಉಂಟಾಗುವ ತಿಳಿಯನ್ನು ಸಂಗ್ರಹಿಸಿಟ್ಟುಕೊಂಡರೆ ಅದನ್ನು ಮುಖಕ್ಕೆ ಹಚ್ಚಿಕೊಳ್ಳಬಬಹುದು. ಅದನ್ನು ಕೂದಲಿಗೆ ಕೂಡ ಹಚ್ಚಿಕೊಳ್ಳಬಹುದು. ಅಕ್ಕಿ ನೀರು ಚರ್ಮಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.

ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ, ಮುಖದ ಕಾಂತಿ ಹೆಚ್ಚಿಸಲು ಬಳಸಿ!
ಅಕ್ಕಿ ನೀರು
Image Credit source: iStock
Follow us on

ಅಕ್ಕಿ ತೊಳೆದ ನೀರನ್ನು ಚೆಲ್ಲುತ್ತೀರಾ? ಇನ್ನು ಆ ರೀತಿ ಮಾಡಬೇಡಿ. ನಿಮ್ಮ ಚರ್ಮವನ್ನು ಕಾಂತಿಯುಕ್ತಗೊಳಿಸಲು ಅಕ್ಕಿ ನೀರನ್ನು ಬಳಸಬಹುದು. ಕೆಲವು ಸೌಂದರ್ಯ ಕಂಪನಿಗಳು ಅಕ್ಕಿ ನೀರು ವಯಸ್ಸಾಗುವಿಕೆಯನ್ನು ತಡೆಯುವ ಗುಣಲಕ್ಷಣಗಳನ್ನು ಹೊಂದಿದೆ ಎಂದು ಹೇಳುತ್ತವೆ. ಆದರೆ ಈ ಹಕ್ಕುಗಳನ್ನು ದೃಢೀಕರಿಸಲು ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ.

ಅಕ್ಕಿ ನೀರು ಅಕ್ಕಿಯನ್ನು ನೆನೆಸಿ ಅಥವಾ ಕುದಿಸಿದ ನಂತರ ಉಂಟಾಗುವ ತಿಳಿಯನ್ನು ಸಂಗ್ರಹಿಸಿಟ್ಟುಕೊಂಡರೆ ಅದನ್ನು ಮುಖಕ್ಕೆ ಹಚ್ಚಿಕೊಳ್ಳಬಬಹುದು. ಅದನ್ನು ಕೂದಲಿಗೆ ಕೂಡ ಹಚ್ಚಿಕೊಳ್ಳಬಹುದು. ಅಕ್ಕಿ ನೀರು ಚರ್ಮಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಅಕ್ಕಿಯು ಇನೋಸಿಟಾಲ್‌ನಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಆಂಟಿಆಕ್ಸಿಡೆಂಟ್‌ಗಳು ಸ್ವತಂತ್ರ ರಾಡಿಕಲ್‌ಗಳ ಪರಿಣಾಮಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Skin Care: ಚಳಿಗಾಲದಲ್ಲೂ ಯಾಕೆ ಸನ್​ಸ್ಕ್ರೀನ್ ಲೋಷನ್ ಹಚ್ಚಬೇಕು?

ಅಕ್ಕಿ ನೀರು ಚರ್ಮದ ವಯಸ್ಸನ್ನು ಕಡಿಮೆ ಮಾಡುತ್ತದೆ ಅಥವಾ ನಿಧಾನಗೊಳಿಸುತ್ತದೆ ಎಂಬುದಕ್ಕೆ ಸೀಮಿತ ಪುರಾವೆಗಳಿವೆ. 2018ರ ಅಧ್ಯಯನವು ಅಕ್ಕಿ ನೀರು ಚರ್ಮದ ವಯಸ್ಸಾದ ಕಿಣ್ವವಾದ ಎಲಾಸ್ಟೇಸ್‌ನ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದೆ. ಅಕ್ಕಿ ನೀರು ಚರ್ಮದ ಮೇಲೆ ಸುಕ್ಕುಗಳು ಮತ್ತು ರೇಖೆಗಳ ರಚನೆಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಇದು ಸೂಚಿಸುತ್ತದೆ.

ಅಕ್ಕಿ ನೀರನ್ನು ಹೇಗೆ ತಯಾರಿಸುವುದು?:

ಅಕ್ಕಿ ನೀರನ್ನು ತಯಾರಿಸಲು ಎರಡು ವಿಧಾನಗಳಿವೆ:

1. ನೆನೆಸುವುದು: 1/2 ಕಪ್ ಬೇಯಿಸದ ಅಕ್ಕಿಯನ್ನು 2-3 ಕಪ್ ನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸಿಡಿ.

2. ಕುದಿಸುವುದು: ಅಕ್ಕಿಯನ್ನು ಸಾಮಾನ್ಯವಾಗಿ ಅಡುಗೆಗೆ ಬಳಸುವ ಎರಡು ಪಟ್ಟು ನೀರಿನಲ್ಲಿ ಕುದಿಸಿ ಬೇಯಿಸಿ.

ಬಳಿಕ ಈ ಅಕ್ಕಿಯ ನೀರನ್ನು ಶುದ್ಧವಾದ ಬಟ್ಟಲಿನಲ್ಲಿ ಅಥವಾ ಬಾಟಲಿಗೆ ಹಾಕಿಟ್ಟುಕೊಳ್ಳಿ. ಉಳಿದದ್ದನ್ನು ಬಾಟಲಿಗೆ ಹಾಕಿ ಫ್ರಿಡ್ಜ್​ನಲ್ಲಿಟ್ಟುಕೊಳ್ಳಿ.

ಇದನ್ನೂ ಓದಿ: ಮೊಸರು ಬಳಸಿ ಹೇಗೆಲ್ಲ ಫೇಸ್​ಪ್ಯಾಕ್ ಮಾಡಿಕೊಳ್ಳಬಹುದು ಗೊತ್ತಾ?

ಚರ್ಮದ ಆರೈಕೆಗಾಗಿ ಅಕ್ಕಿ ನೀರನ್ನು ಬಳಸುವುದು ಹೇಗೆ?:

– ಅಕ್ಕಿ ನೀರಿನಿಂದ ಮುಖ ತೊಳೆಯಿರಿ

– ಮುಖವನ್ನು ಸ್ವಚ್ಛವಾಗಿ ತೊಳೆದ ನಂತರ ಅಕ್ಕಿ ನೀರನ್ನು ಟೋನರ್ ಆಗಿ ಮುಖಕ್ಕೆ ಹಚ್ಚಿಕೊಳ್ಳಿ.

– ಸ್ಪ್ರೇ ಬಾಟಲಿಗೆ ಸುರಿದ ನಂತರ ಅಕ್ಕಿ ನೀರನ್ನು ಮುಖದ ಮೇಲೆ ಸಿಂಪಡಿಸಿಕೊಳ್ಳಿ.

– ಸ್ನಾನಕ್ಕೆ ಅಕ್ಕಿ ನೀರನ್ನು ಸೇರಿಸಿ.

– ಕೆಲವರು ಅಕ್ಕಿ ನೀರನ್ನು ಕೂದಲಿನ ಕಂಡೀಷನರ್ ಆಗಿಯೂ ಬಳಸುತ್ತಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ