Skin Care: ನಿಮ್ಮ ಮುಖವನ್ನು ತಕ್ಷಣ ತಾಜಾಗೊಳಿಸುತ್ತೆ ಈ ಫೇಸ್ ಸ್ಕ್ರಬ್
ಕಾಫಿ ಪುಡಿಯಿಂದ ಮಾಡಿದ ಫೇಸ್ಪ್ಯಾಕ್, ಸ್ಕ್ರಬ್‌ಗಳು ಅಥವಾ ಪೇಸ್ಟ್‌ಗಳನ್ನು ಬಳಸಿ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಕಾಫಿಯು ಚರ್ಮವನ್ನು ಪುನರುಜ್ಜೀವನಗೊಳಿಸುವ ಗುಣ ಹೊಂದಿದೆ. ಕೆಫೀನ್ ನಿಮ್ಮ ಚರ್ಮಕ್ಕೆ ಹೊಸ ಜೀವವನ್ನು ನೀಡುತ್ತದೆ.
ಕಾಫಿಪುಡಿಯಿಂದ ಕಾಫಿಯನ್ನು ಮಾತ್ರ ಮಾಡುವುದಲ್ಲ; ಅದರಿಂದ ಮುಖದ ಅಂದವನ್ನೂ ಹೆಚ್ಚಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ? ಕಾಫಿ ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡುತ್ತದೆ. ಅಕಾಲಿಕವಾಗಿ ಚರ್ಮ ವಯಸ್ಸಾಗುವುದನ್ನು ತಡೆಯುತ್ತದೆ. ಚರ್ಮದ ಕಾಂತಿ ಹೆಚ್ಚಿಸುತ್ತದೆ. ಕಾಫಿ ಪುಡಿಯಿಂದ ಮಾಡಿದ ಫೇಸ್ಪ್ಯಾಕ್, ಸ್ಕ್ರಬ್‌ಗಳು ಅಥವಾ ಪೇಸ್ಟ್‌ಗಳನ್ನು ಬಳಸಿ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಕಾಫಿಯು ಚರ್ಮವನ್ನು ಪುನರುಜ್ಜೀವನಗೊಳಿಸುವ ಗುಣ ಹೊಂದಿದೆ. ಕೆಫೀನ್ ನಿಮ್ಮ ಚರ್ಮಕ್ಕೆ ಹೊಸ ಜೀವವನ್ನು ನೀಡುತ್ತದೆ. ಕಾಫಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ.
ಕಾಫಿಪುಡಿಯಿಂದ ಫೇಸ್ಪ್ಯಾಕ್ ಮಾಡಿಕೊಳ್ಳುವುದು ಹೇಗೆ?:
1 ಚಮಚ ಕಾಫಿ ಪುಡಿ, 1 ಟೀಸ್ಪೂನ್ ಹಸಿ ಹಾಲು, 1 ಟೀಸ್ಪೂನ್ ಅರಿಶಿನ ಪುಡಿಯನ್ನು ಒಂದು ಬಟ್ಟಲಿನಲ್ಲಿ ಹಾಕಿಕೊಂಡು, ಪೇಸ್ಟ್ ರೀತಿ ಮಿಕ್ಸ್ ಮಾಡಿಕೊಳ್ಳಿ. ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ, ಈ ಫೇಸ್ ಪ್ಯಾಕ್ ಅನ್ನು ಮುಖದ ಮೇಲೆ ಸಮವಾಗಿ ಹಚ್ಚಿಕೊಳ್ಳಿ. ಕುತ್ತಿಗೆಯ ಸುತ್ತಲೂ ಹಚ್ಚಲು ಕೂಡ ಮರೆಯಬೇಡಿ. ಇದನ್ನು 10-15 ನಿಮಿಷಗಳ ಕಾಲ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
ಇದನ್ನೂ ಓದಿ: ಮನೆಯಲ್ಲೇ ಜೇನುತುಪ್ಪದ ಫೇಸ್ ಸ್ಕ್ರಬ್ ತಯಾರಿಸುವುದು ಹೇಗೆ?
ಇನ್ನೊಂದು ರೀತಿಯಲ್ಲಿ ಕೂಡ ಕಾಫಿ ಫೇಸ್ಪ್ಯಾಕ್ ಮಾಡಿಕೊಳ್ಳಬಹುದು. ಇದಕ್ಕೆ 1 ಚಮಚ ಕಾಫಿ ಪುಡಿ, 1 ಟೀಸ್ಪೂನ್ ನಿಂಬೆ ರಸ ಮಿಕ್ಸ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಸರಿಯಾಗಿ ಹಚ್ಚಿಕೊಳ್ಳಿ. 15-20 ನಿಮಿಷಗಳ ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.
ಕಾಫಿ ನಿಮ್ಮ ಚರ್ಮದ ಡೆಡ್ ಸ್ಕಿನ್ಗಳನ್ನು ತೆಗೆದುಹಾಕುತ್ತದೆ. ಕಾಫಿ ಬೀಜಗಳು ನೈಸರ್ಗಿಕ ಎಕ್ಸ್‌ಫೋಲಿಯೇಟಿಂಗ್ ಏಜೆಂಟ್‌ಗಳಾಗಿವೆ. ತೆಂಗಿನೆಣ್ಣೆ ಅಥವಾ ಮೊಸರಿನೊಂದಿಗೆ ಕಾಫಿ ಪುಡಿಯನ್ನು ಬೆರೆಸಿದಾಗ ಅದು ಸತ್ತ ಚರ್ಮದ ಕೋಶಗಳನ್ನು ಸೂಕ್ಷ್ಮವಾಗಿ ತೆಗೆದುಹಾಕುವ ಮೂಲಕ ನಿಮ್ಮ ಚರ್ಮವನ್ನು ಎಫ್ಫೋಲಿಯೇಟ್ ಮಾಡಲು ಸಹಾಯ ಮಾಡುತ್ತದೆ. ಕಾಫಿಯ ಕೆಫೀನ್ ಅಂಶ ಚರ್ಮವನ್ನು ತಾತ್ಕಾಲಿಕವಾಗಿ ಬಿಗಿಗೊಳಿಸುತ್ತದೆ. ಚರ್ಮದ ರಕ್ತದ ಹರಿವನ್ನು ಉತ್ತೇಜಿಸುತ್ತದೆ.
ಇದನ್ನೂ ಓದಿ: ಒಣ ಚರ್ಮದವರು ಮುಖಕ್ಕೆ ಒಮ್ಮೆ ಈ ಫೇಸ್ಪ್ಯಾಕ್ ಹಚ್ಚಿ ನೋಡಿ
ಮುಖದಲ್ಲಿರುವ ಕಪ್ಪು ಕಲೆಗಳನ್ನು ತೆಗೆದುಹಾಕಲು 1 ಸ್ಪೂನ್ ಕಾಫಿ ಪುಡಿಗೆ 1 ಸ್ಪೂನ್ ಸಕ್ಕರೆ ಸೇರಿಸಿ. ಅದಕ್ಕೆ ನಿಂಬೆ ರಸ ಹಿಂಡಿಕೊಂಡು ಮುಖಕ್ಕೆ ಹಚ್ಚಿಕೊಂಡರೆ ಫೇಸ್ ಸ್ಕ್ರಬ್ ಆಗುತ್ತದೆ. ಇದು ಒಣಗಿದ ನಂತರ ಮುಖದ ಮೇಲೆ ಚೆನ್ನಾಗಿ ನೀರಿನಿಂದ ಉಜ್ಜಿ ಉಜ್ಜಿ ಮುಖ ತೊಳೆದುಕೊಳ್ಳಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ