Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುದ್ಧ ಗಾಳಿಯನ್ನು ಬಯಸಿದರೆ ಮನೆಯಲ್ಲಿ ಈ ಕೆಲವು ನೈಸರ್ಗಿಕ ಏರ್ ಪ್ಯೂರಿಫೈಯರ್ ಸಸ್ಯಗಳನ್ನು ನೆಡಿ

ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಕಾರಣದಿಂದಾಗಿ ನಾವು ಸೇವಿಸುವ ಗಾಳಿಯು ಕಲುಷಿತಗೊಳ್ಳುತ್ತಿದೆ. ಇದರಿಂದ ಉಸಿರಾಟ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಹೀಗಿರುವಾಗ ಶುದ್ಧ ಗಾಳಿಯನ್ನು ಬಯಸಿದರೆ ನೀವು ಕೆಲವೊಂದು ಏರ್ ಪ್ಯೂರಿಫೈಯರ್ ಗಿಡಗಳನ್ನು ಮನೆಯಲ್ಲಿ ನೆಡಬಹುದು. ಈ ಸಸ್ಯಗಳು ಗಾಳಿಯನ್ನು ಶುದ್ಧೀಕರಿಸುವುದರ ಜೊತೆಗೆ ಮನೆಯ ಸೌಂದರ್ಯವನ್ನು ಸಹ ಹೆಚ್ಚಿಸುತ್ತದೆ.

ಶುದ್ಧ ಗಾಳಿಯನ್ನು ಬಯಸಿದರೆ ಮನೆಯಲ್ಲಿ ಈ ಕೆಲವು ನೈಸರ್ಗಿಕ ಏರ್ ಪ್ಯೂರಿಫೈಯರ್ ಸಸ್ಯಗಳನ್ನು ನೆಡಿ
ಸ್ಪೈಡರ್ ಪ್ಲಾಂಟ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Oct 26, 2023 | 3:40 PM

ನಗರೀಕರಣ, ಕೈಗಾರಿಕರಣ, ಆಧುನೀಕರಣ ಈ ಎಲ್ಲದರ ಕಾರಣದಿಂದಾಗಿ ಇಂದು ಮಾಲಿನ್ಯವೂ ಹೆಚ್ಚಾಗಿದೆ. ಹೆಚ್ಚುತ್ತಿರು ವಾಯುಮಾಲಿನ್ಯದ ಕಾರಣದಿಂದ ಜನರು ಉಸಿರಾಟ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಆಸ್ತಮಾ ಮತ್ತು ಅಲರ್ಜಿಗಳಂತಹ ಸಮಸ್ಯೆಗಳು ವಾಯುಮಾಲಿನ್ಯದಿಂದ ಹೆಚ್ಚಾಗುತ್ತಿವೆ. ಅದರಲ್ಲೂ ನಗರ ಪ್ರದೇಶದಲ್ಲಿ ವಾಯುಮಾಲಿನ್ಯದ ಸಮಸ್ಯೆ ತೀರಾ ಹೆಚ್ಚಿದೆ. ಅಂತಹ ಪರಿಸ್ಥಿತಿಯಲ್ಲಿ ಕೆಲವರು ಗಾಳಿಯನ್ನು ಶುದ್ಧೀಕರಿಸಲು ಏರ್ ಪ್ಯೂರಿಫೈಯರ್ಗಳನ್ನು ಬಳಸುತ್ತಾರೆ. ಇದು ಸಾಕಷ್ಟು ದುಬಾರಿಯಾಗಿದೆ. ಶುದ್ಧ ಗಾಳಿಯನ್ನು ಪಡೆಯಲು ಇಷ್ಟೆಲ್ಲಾ ಖರ್ಚು ಮಾಡುವ ಬದಲು ನೀವು ಮನೆಯಲ್ಲಿ ನೈಸರ್ಗಿಕ ಏರ್ ಪ್ಯೂರಿಫೈಯರ್ ಸಸ್ಯಗಳನ್ನು ನಡೆಬಹುದು. ಇದು ಶುದ್ಧ ಗಾಳಿಯನ್ನು ನೀಡುವುದು ಮಾತ್ರವಲ್ಲದೆ ಮನೆಯ ಸೌಂದರ್ಯವನ್ನು ಸಹ ಹೆಚ್ಚಿಸುತ್ತದೆ.

ನೈಸರ್ಗಿಕ ಏರ್ ಪ್ಯೂರಿಫೈಯರ್ ಸಸ್ಯಗಳು ಇಲ್ಲಿವೆ

ಮನಿ ಪ್ಲಾಂಟ್:

ಮನೆಯ ಒಳಗೆ ಮತ್ತು ಹೊರಗೆ ಸುಲಭವಾಗಿ ಬೆಳೆಯಬಹುದಾದ ಮನಿ ಪ್ಲಾಂಟ್ ಏರ್ ಪ್ಯೂರಿಫೈಯರ್ ಆಗಿಯೂ ಕೆಲಸ ಮಾಡುತ್ತದೆ. ಮನೆಯಲ್ಲಿ ಮನಿ ಪ್ಲಾಂಟ್ ನೆಟ್ಟರೆ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕಿಂತ ಹೆಚ್ಚಾಗಿ ಈ ಸಸ್ಯವು ನಿಮಗೆ ಶುದ್ಧ ಗಾಳಿಯನ್ನು ಒದಗಿಸಿಕೊಡುತ್ತದೆ. ಇದು ಗಾಳಿಯಲ್ಲಿರುವ ವಿಷಕಾರಿ ಅನಿಲಗಳನ್ನು ಹೀರಿಕೊಳ್ಳುತ್ತದೆ ಮತ್ತು ತಾಜಾ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.

ಇದನ್ನೂ ಓದಿ: Capital gain Tax: ನೀವು ಮನೆ ಖರೀದಿಸಿ ಲಾಭಕ್ಕೆ ಮಾರಿದರೆ ಎಷ್ಟು ತೆರಿಗೆ ಕಟ್ಟಬೇಕು? ಇಲ್ಲಿದೆ ಲೆಕ್ಕಚಾರ

ಸ್ನೇಕ್ ಪ್ಲಾಂಟ್:

ಸ್ನೇಕ್ ಪ್ಲಾಂಟ್ ಬಹಳ ಸುಲಭವಾಗಿ ಬೆಳೆಯಬಹುದಾದ ಮತ್ತು ದೀರ್ಘಕಾಲ ಬಾಳಿಕೆ ಬರುವ ಸಸ್ಯವಾಗಿದೆ. ಈ ಸಸ್ಯದ ವಿಶೇಷತೆ ಏನೆಂದರೆ ಇದು ಗಾಳಿಯನ್ನು ಶುದ್ಧೀಕರಣಗೊಳಿಸುವ ಕೆಲಸ ಮಾಡುತ್ತದೆ. ಇದು ಗಾಳಿಯಲ್ಲಿನ ಫಾರ್ಮಾಲ್ಡಿಹೈಡ್, ನೈಟ್ರೋಜನ್ ಡೈ ಆಕ್ಸೈಡ್ನಂತಹ ಹಾನಿಕಾರಕ ಅನಿಲಗಳನ್ನು ಹೀರಿಕೊಂಡು ಶುದ್ಧ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.

ಪೀಸ್ ಲಿಲಿ:

ಒಳಾಂಗಣ ಸಸ್ಯಗಳಲ್ಲಿ ಒಂದಾದ ಪೀಸ್ ಲಿಲಿ ಸುಂದರವಾದ ಗಿಡವಾಗಿದೆ. ಹಸಿರು ಎಲೆಗಳು ಮತ್ತು ಬಿಳಿ ಹೂವುಗಳನ್ನು ಹೊಂದಿರುವ ಲಿಲಿ ಮನೆಯ ಅಂದವನ್ನು ಹೆಚ್ಚಿಸುವುದಲ್ಲದೆ ಗಾಳಿಯನ್ನು ಸಹ ಶುದ್ಧೀಕರಿಸುತ್ತದೆ. ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಲಿಲಿ ಸಹಾಯ ಮಾಡುತ್ತದೆ. ಈ ಸಸ್ಯ ಗಾಳಿಯಲ್ಲಿನ ಕಾರ್ಬನ್ ಮಾನಾಕ್ಸೈಡ್ ಮತ್ತು ಇತರ ವಿಷಕಾರಿ ಅನಿಲಗಳನ್ನು ಹೀರಿಕೊಳ್ಳುವ ಮೂಲಕ ಗಾಳಿಯನ್ನು ಶುದ್ಧೀಕರಿಸುತ್ತದೆ.

ರಬ್ಬರ್ ಪ್ಲಾಂಟ್:

ನಿಮ್ಮ ಮನೆ ಅಥವಾ ಕಛೇರಿ ಸ್ಥಳಗಳಲ್ಲಿ ಶುದ್ಧ ಗಾಳಿಯನ್ನು ಬಯಸಿದರೆ, ನೀವು ರಬ್ಬರ್ ಗಿಡವನ್ನು ನೆಡಬಹುದು. ಇದು ಗಾಳಿಯನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ ಮರದ ಪೀಠೋಪಕರಣಗಳಿಂದ ಬಿಡುಗಡೆಯಾಗುವ ಹಾನಿಕಾರಕ ಸಾವಯವ ಸಂಯುಕ್ತವಾಗಿರುವ ಫಾರ್ಮಾಲ್ಡಿಹೈಡ್ನಿಂದ ಪರಿಸರವನ್ನು ಮುಕ್ತವಾಗಿಡುವ ಸಾಮರ್ಥ್ಯವನ್ನು ಹೊಂದಿದೆ. ಅದ್ದರಿಂದ ಮರದ ಟೇಬಲ್, ಸೋಫಾ ಅಥವಾ ಹಾಸಿಗೆಯ ಬಳಿ ಈ ರಬ್ಬರ್ ಗಿಡವನ್ನು ಇರಿಸಿ.

ಇದನ್ನೂ ಓದಿ: ವಾಯುಮಾಲಿನ್ಯ ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸಬಹುದು

ಅರೆಕಾ ಪಾಮ್ ಸಸ್ಯ:

ಅರೆಕಾ ಪಾಮ್ ಗಿಡ ಮನೆಯ ವಾತಾವರಣವನ್ನು ಸುಂದರವನ್ನಾಗಿ ಕಾಣಿಸುವುದರ ಜೊತೆಗೆ ಈ ಸಸ್ಯವು ಗಾಳಿಯನ್ನು ಸಹ ಶುದ್ಧೀಕರಿಸುತ್ತದೆ. ಮುಖ್ಯವಾಗಿ ಈ ಗಿಡ ಗಾಳಿಯಲ್ಲಿರುವ ಇಂಗಾಲದ ಡೈ ಫಾರ್ಮಾಲ್ಡಿಹೈಡ್ನಂತಹ ಹಾನಿಕಾರಕ ಅನಿಲಗಳನ್ನು ಹೀರಿಕೊಂಡು ಗಾಳಿಯನ್ನು ಶುದ್ಧೀಕರಿಸುತ್ತದೆ.

ಸ್ಪೈಡರ್ ಪ್ಲಾಂಟ್:

ಮನೆಯ ಅಲಂಕಾರವನ್ನು ಹೆಚ್ಚಿಸಲು ಸ್ಪೈಡರ್ ಸಸ್ಯವು ಉತ್ತಮ ಆಯ್ಕೆಯಾಗಿದೆ. ಮಾತ್ರವಲ್ಲದೆ ಇದು ಶುದ್ಧ ಗಾಳಿಯನ್ನು ಸಹ ನೀಡುತ್ತದೆ. ಈ ಸಸ್ಯವು ಗಾಳಿಯಲ್ಲಿರುವ ಕ್ಸಿಲೀನ್, ಬೆಂಬೀನ್, ಫಾರ್ಮಾಲ್ಡಿಹೈಡ್ ಮತ್ತು ಕಾರ್ಬನ್ ಮಾನಾಕ್ಸೈಡ್ನಂತಹ ವಿಷಕಾರಿ ಅನಿಲವನ್ನು ಹೀರಿಕೊಳ್ಳುವ ಮೂಲಕ ಗಾಳಿಯನ್ನು ಶುದ್ಧೀಕರಿಸುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:35 pm, Thu, 26 October 23