ಮುಖದ ಆರೋಗ್ಯ ಮತ್ತು ಸೌಂದರ್ಯ ಹೆಚ್ಚಿಸಿಕೊಳ್ಳಲು ನಾವು ಮನೆಯಲ್ಲಿ ದಿನನಿತ್ಯ ಬಳಸುವ ಕೆಲವು ವಸ್ತುಗಳನ್ನು ಬಳಸಿ ಫೇಸ್ಪ್ಯಾಕ್ ತಯಾರಿಸಿಕೊಳ್ಳಬಹುದು. ಸ್ಪಾಗೆ ಹೋಗಿ ಸಾವಿರಾರು ರೂ. ಕೊಟ್ಟು ಕೆಮಿಕಲ್ಯುಕ್ತ ಫೇಸ್ಪ್ಯಾಕ್ ಮಾಡಿಸಿಕೊಳ್ಳುವುದರ ಬದಲು ಮನೆಯಲ್ಲೇ ನೈಸರ್ಗಿಕವಾಗಿ ಲಭ್ಯವಿರುವ ಪದಾರ್ಥಗಳಿಂದ ಮುಖದ ಚರ್ಮದ ಆರೈಕೆ ಮಾಡಬಹುದು. ಮೊಸರು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತದೆ. ಈ ಮೊಸರು ನಮ್ಮ ಚರ್ಮದ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾದ ಪದಾರ್ಥವಾಗಿದೆ.
ಮೊಸರನ್ನು ಯಾವುದರ ಜೊತೆ ಬೆರೆಸಿ ಫೇಸ್ಪ್ಯಾಕ್ ಮಾಡಿಕೊಳ್ಳಬಹುದು?:
ಮೊಸರು ಮತ್ತು ಸೌತೆಕಾಯಿಯ ಫೇಸ್ಪ್ಯಾಕ್ ಅನ್ನು ವಾರಕ್ಕೊಮ್ಮೆ ಮಾಡಿಕೊಳ್ಳಿ. ಮೊಸರು ಮತ್ತು ಟೊಮ್ಯಾಟೊ ಫೇಸ್ಪ್ಯಾಕ್, ಮೊಸರು ಮತ್ತು ಅರಿಶಿನದ ಫೇಸ್ಪ್ಯಾಕ್, ಮೊಸರು ಮತ್ತು ಆಲೂಗಡ್ಡೆಯ ಫೇಸ್ಪ್ಯಾಕ್ ಅನ್ನು ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಬಳಸಬಹುದು. ಇವುಗಳು ಎಲ್ಲಾ ಚರ್ಮದ ಪ್ರಕಾರಗಳಿಗೂ ಹೊಂದಿಕೆಯಾಗುತ್ತವೆ.
ಇದನ್ನೂ ಓದಿ: ಎಣ್ಣೆ ಚರ್ಮದವರಿಗೆ ಮೊಡವೆ ನಿವಾರಿಸಲು ಬೆಸ್ಟ್ ಫೇಸ್ಪ್ಯಾಕ್ ಇಲ್ಲಿದೆ
ಮೊಸರು ಮತ್ತು ಜೇನುತುಪ್ಪ ಬೆರೆಸಿ ವಾರಕ್ಕೊಮ್ಮೆ ಫೇಸ್ಪ್ಯಾಕ್ ಮಾಡಿಕೊಳ್ಳಿ. ಇದು ನಾರ್ಮಲ್ ಮತ್ತು ಒಣ ಚರ್ಮದವರಿಗೆ ಹೊಂದಿಕೆಯಾಗುತ್ತದೆ. ಮೊಸರು ಮತ್ತು ಕಡಲೆಹಿಟ್ಟು ಬಳಸಿ ವಾರಕ್ಕೊಮ್ಮೆ ಫೇಸ್ಪ್ಯಾಕ್ ಮಾಡಿಕೊಳ್ಳಿ. ಇದು ಸಾಮಾನ್ಯ ಚರ್ಮದಿಂದ ಎಣ್ಣೆಯುಕ್ತ ಚರ್ಮದವರಿಗೆ ಹೊಂದಿಕೆಯಾಗುತ್ತದೆ. ಮೊಸರು ಮತ್ತು ನಿಂಬೆ ಹಣ್ಣಿನ ಫೇಸ್ಪ್ಯಾಕನ್ನು ವಾರಕ್ಕೊಮ್ಮೆ ಬಳಸಬಹುದು. ಇದು ಸಾಮಾನ್ಯ ಚರ್ಮದಿಂದ ಎಣ್ಣೆಯುಕ್ತ ಚರ್ಮದವರಿಗೆ ಅತ್ಯುತ್ತಮವಾದ ಫೇಸ್ಪ್ಯಾಕ್.
ಎಣ್ಣೆಯ ಚರ್ಮ ಹೊಂದಿದವರು ಮೊಸರು ಮತ್ತು ಓಟ್ಸ್ ಮಿಕ್ಸ್ ಮಾಡಿ ವಾರಕ್ಕೊಮ್ಮೆ ಫೇಸ್ಪ್ಯಾಕ್ ಮಾಡಿಕೊಳ್ಳಿ. ಅಥವಾ ಮೊಸರು ಮತ್ತು ಕಿತ್ತಳೆ ಸಿಪ್ಪೆಯ ಪುಡಿ ಬೆರೆಸಿ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಫೇಸ್ಪ್ಯಾಕ್ ಮಾಡಿಕೊಳ್ಳಬಹುದು. ಇದರ ಜೊತೆಗೆ ಮೊಸರಿನೊಂದಿಗೆ ಲೋಳೆಸರ, ಕ್ಯಾಮೊಮೈಲ್, ಕಾಫಿ, ಅಕ್ಕಿ ಹಿಟ್ಟು, ರೋಸ್ ವಾಟರ್ ಬೆರೆಸಿ ಫೇಸ್ಪ್ಯಾಕ್ ಮಾಡಿಕೊಳ್ಳಬಹುದು. ಇದರಿಂದಲೂ ಮುಖದ ಕಾಂತಿ ಹೆಚ್ಚುತ್ತದೆ.
ಇದನ್ನೂ ಓದಿ: ಚರ್ಮ, ಮುಖದ ಸೌಂದರ್ಯಕ್ಕೆ ಮೊಸರಿನಿಂದ ಆಗುವ 10 ಪ್ರಯೋಜನಗಳಿವು
ಮೊಸರಿನ ಫೇಸ್ಪ್ಯಾಕ್ ಮಾಡಿಕೊಳ್ಳುವುದರಿಂದ ಏನೆಲ್ಲ ಪ್ರಯೋಜನಗಳಿವೆ?:
ಮೊಸರಿನ ಫೇಸ್ಪ್ಯಾಕ್ ಸತ್ತ ಚರ್ಮದ ಕೋಶಗಳನ್ನು ಎಫ್ಫೋಲಿಯೇಟ್ ಮಾಡುತ್ತದೆ. ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಾಪಾಡುತ್ತದೆ ಮತ್ತು ಚರ್ಮದ ಹೊಳಪನ್ನು ಉತ್ತೇಜಿಸುತ್ತದೆ. ಚರ್ಮವನ್ನು ಚೆನ್ನಾಗಿ ಹೈಡ್ರೇಟ್ ಮಾಡುತ್ತದೆ. ಮುಖದ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ಚರ್ಮ ಸುಕ್ಕಾಗುವುದನ್ನು ತಡೆಯುತ್ತದೆ. ಚರ್ಮದ ರಂಧ್ರಗಳನ್ನು ಬಿಗಿಗೊಳಿಸುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ