Beetroot wine: ಆರೋಗ್ಯಕರ ಬೀಟ್ರೂಟ್​​ ವೈನ್​ ತಯಾರಿಸಿ, ರೆಸಿಪಿ ಇಲ್ಲಿದೆ

|

Updated on: Feb 21, 2023 | 4:30 PM

ಬೀಟ್ರೂಟ್​ನಲ್ಲಿ ಪೌಷ್ಟಿಕಾಂಶಗಳು ಸಮೃದ್ಧವಾಗಿದ್ದು, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಆದ್ದರಿಂದ ನೀವು ಮನೆಯಲ್ಲಿಯೇ ಬೀಟ್ರೂಟ್​​ನ ವೈನ್​​ ತಯಾರಿಸಿ ಸವಿಯಿರಿ.

Beetroot wine: ಆರೋಗ್ಯಕರ ಬೀಟ್ರೂಟ್​​ ವೈನ್​ ತಯಾರಿಸಿ, ರೆಸಿಪಿ ಇಲ್ಲಿದೆ
ಬೀಟ್ರೂಟ್​​ ವೈನ್
Image Credit source: Onmanorama
Follow us on

ಬೀಟ್ರೂಟ್​ನಲ್ಲಿ ಪೌಷ್ಟಿಕಾಂಶಗಳು ಸಮೃದ್ಧವಾಗಿದ್ದು, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಸೋಡಿಯಂ, ಕಬ್ಬಿಣ, ಪೊಟ್ಯಾಷಿಯಂ, ವಿಟಮಿನ್ ಬಿ-6, ರಂಜಕ, ಮೆಗ್ನೀಷಿಯಂ ಮುಂತಾದ ಪೋಷಕಾಂಶಗಳು ಬೀಟ್ರೂಟ್​ನಲ್ಲಿ ಕಂಡುಬರುತ್ತವೆ. ಈ ತರಕಾರಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮಲಬದ್ಧತೆಯ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ. ಜೊತೆಗೆ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ನೀವು ಮನೆಯಲ್ಲಿಯೇ ಬೀಟ್ರೂಟ್​​ನ ವೈನ್​​ ತಯಾರಿಸಿ ಸವಿಯಿರಿ. ಬೀಟ್ರೂಟ್​​ ವೈನ್​ ಮಾಡುವ ಸುಲಭ ವಿಧಾನ ಇಲ್ಲಿದೆ.

ಬೀಟ್ರೂಟ್​​ ವೈನ್​ ಮಾಡುವ ವಿಧಾನ:

ಹಂತ 1: 

ಮೊದಲು 4 ಬೀಟ್ರೂಟ್​​ ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆಯಿರಿ. ನಂತರ ಅದನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಕುಕ್ಕರ್​ನಲ್ಲಿ ಹಾಕಿ. ಜೊತೆಗೆ ಚಕ್ಕೆ, ಲವಂಗ, ಏಲಕ್ಕಿ, ಶುಂಠಿ ಮತ್ತು ಬೇಯಲು ಬೇಕಾದಷ್ಟು ನೀರು ಹಾಕಿ ಬೇಯಿಸಿ. ಸುಮಾರು 2ಲೀಟರ್​​ನಷ್ಟು ನೀರು ಸೇರಿಸಿ. ಒಂದು​ ವಿಸಿಲ್​​ ಬರುವ ವರೆಗೆ ಬೇಯಿಸಿ, ನಂತರ ತಣ್ಣಗಾಗಲು ಬಿಡಿ.

ಇದನ್ನೂ ಓದಿ: ಮನೆಯಲ್ಲಿ ಸುಲಭವಾಗಿ ಮಾಡುಬಹುದು ವೈನ್, ಇಲ್ಲಿದೆ ರೆಸಿಪಿ ಟಿಪ್ಸ್

ಹಂತ 2:

ನಂತರ ಒಂದು ಮಧ್ಯಮ ಗಾತ್ರದ ಗ್ಲಾಸ್​​ ಜಾರ್​​ ತೆಗೆದುಕೊಳ್ಳಿ. ನಂತರ ಇದಕ್ಕೆ ಈಗಾಗಲೇ ಬೇಯಿಸಿಟ್ಟ ಬೀಟ್ರೂಟ್​​ನ್ನು ನೀರು ಸಮೇತ ಹಾಕಿ. ನಂತರ ಇದಕ್ಕೆ 1/4 ಕಪ್​​​ ಗೋಧಿಯನ್ನು ಹಾಕಿ. ಜೊತೆಗೆ 1/2 ಟೀ ಸ್ಪೂನ್​​​ ಹೀಸ್ಟ್​​​ ಪೌಡರ್​ ಹಾಕಿ. ಇದನ್ನು ಯಾವುದೇ ನೀರಿನ ಅಂಶವಿಲ್ಲದಿರುವ ಸೌಟು ಬಳಸಿ ಮಿಕ್ಸ್​​​ ಮಾಡಿ. ಇದಕ್ಕೆ ಈಗ ಅರ್ಧ ಕಿಲೋ ಸಕ್ಕರೆ ಹಾಕಿ. ಸಕ್ಕರೆ ಕರಗುವ ವರೆಗೆ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಗ್ಲಾಸ್​​ ಜಾರ್​​ನ್ನು ಕಾಟನ್​​ ಬಟ್ಟೆಯನ್ನು ಬಳಸಿ ಗಟ್ಟಿಯಾಗಿ ಕಟ್ಟಿ 7 ದಿನಗಳ ವರೆಗೆ ಇಡಿ. 7 ದಿನದ ನಂತರ ಇದನ್ನು ಚೆನ್ನಾಗಿ ಸೋಸಿ ಒಂದು ಜಾರ್​​ನಿಂದ ಇನ್ನೊಂದು ಜಾರ್​​ಗೆ ವರ್ಗಾಯಿಸಿ. ಈಗ ಬೀಟ್ರೂಟ್​​ ವೈನ್ ಸಿದ್ಧವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:30 pm, Tue, 21 February 23