Kannada News Lifestyle Beetroot Idli: Easy to make healthy Beetroot Idli, here Recipe in kannada
Beetroot Idli: ಆರೋಗ್ಯಕರ ಬೀಟ್ರೂಟ್ ಇಡ್ಲಿ ತಯಾರಿಸಿ ಸವಿಯಿರಿ
ಬೀಟ್ರೂಟ್ ಬಳಸಿ ಇಡ್ಲಿ ತಯಾರಿಸಬಹುದು ಎಂದು ನಿಮಗೆ ತಿಳಿದಿದೆಯೇ? ಬೀಟ್ರೂಟ್ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ.
ದಕ್ಷಿಣ ಭಾರತ(South India)ದ ಬೆಳಗಿನ ಉಪಹಾರ(Breakfast)ದಲ್ಲಿ ಇಡ್ಲಿ ಸಾಂಬಾರ್ ಅತ್ಯಂತ ಜನಪ್ರಿಯ. ಸಾಮಾನ್ಯವಾಗಿ ಅಕ್ಕಿ, ಉದ್ದಿನಬೇಳೆ, ರಾಗಿ ಹಿಟ್ಟು ಮುಂತಾದವುಗಳಿಂದ ಮಾಡುವುದು, ಈಗಾಗಲೇ ತಿಳಿದಿರುವ ವಿಷಯ. ಆದರೆ ಬೀಟ್ರೂಟ್ ಬಳಸಿ ಇಡ್ಲಿ ತಯಾರಿಸಬಹುದು ಎಂದು ನಿಮಗೆ ತಿಳಿದಿದೆಯೇ? ಬೀಟ್ರೂಟ್ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ. ಆದ್ದರಿಂದ ನೀವೂ ಕೂಡ ಒಮ್ಮೆ ಮನೆಯಲ್ಲಿ ಆರೋಗ್ಯಕರವಾದ ಈ ಬೀಟ್ರೂಟ್ ಇಡ್ಲಿ ತಯಾರಿಸಿ.
ಬೀಟ್ರೂಟ್ ಇಡ್ಲಿಗೆ ಬೇಕಾಗುವ ಸಾಮಾಗ್ರಿಗಳು:
1 ಕಪ್ ಹುರಿದ ರವೆ
1 ಕಪ್ ಮೊಸರು
ರುಚಿಗೆ ತಕ್ಕಷ್ಟು ಉಪ್ಪು
1/2 ಕಪ್ ಬೀಟ್ರೂಟ್ ಪ್ಯೂರೀ( ಮಾಡುವ ವಿಧಾನ ಕೆಳಗೆ ನೀಡಲಾಗಿದೆ)
1/2 ಇಂಚು ಶುಂಠಿ
3 ಹಸಿರು ಮೆಣಸಿನಕಾಯಿ
1 ಟೀಸ್ಪೂನ್ ಗೋಡಂಬಿ
1 ಟೀಸ್ಪೂನ್ ಉದ್ದಿನ ಬೇಳೆ
5-6 ಕರಿಬೇವಿನ ಎಲೆಗಳು
ಮೊದಲು ಬೀಟ್ರೂಟ್ ಕತ್ತರಿಸಿ ಮಿಕ್ಸಿ ಜಾರ್‌ಗೆ ತೆಗೆದುಕೊಂಡು ಅದಕ್ಕೆ ಹಸಿಮೆಣಸಿನಕಾಯಿ ಮತ್ತು ಶುಂಠಿ ಸೇರಿಸಿ ಸ್ವಲ್ಪ ನೀರು ಬೆರೆಸಿ ನಯವಾಗಿ ರುಬ್ಬಿ ಕೊಳ್ಳಿ. ಈಗ ಬೀಟ್ರೂಟ್ ಪ್ಯೂರೀ ಸಿದ್ದವಾಗಿದೆ.
ನಂತರ ಒಂದು ಬೌಲ್ ತೆಗೆದುಕೊಂಡು ಅದಕ್ಕೆ 1 ಕಪ್ ಹುರಿದ ರವೆ, 1 ಕಪ್ ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೀಟ್ರೂಟ್ ಪ್ಯೂರೀ ಸೇರಿಸಿ ಮಿಶ್ರಣ ಮಾಡಿ. ಸ್ವಲ್ಪ ನೀರು ಕೂಡ ಹಾಕಿ. ಈಗ ಹಿಟ್ಟು ತಯಾರಾಗಿದೆ.
ನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಬಿಸಿಯಾದ ಮೇಲೆ ಇದಕ್ಕೆ 1 ಟೀಸ್ಪೂನ್ ಉದ್ದಿನ ಬೇಳೆ, 5-6 ಕರಿಬೇವಿನ ಎಲೆಗಳು ಹಾಕಿ ಹುರಿಯಿರಿ. ಈಗ ಇದನ್ನು ಈಗಾಗಲೇ ಮಾಡಿಟ್ಟ ಹಿಟ್ಟಿನೊಂದಿಗೆ ಬೆರೆಸಿ.
ನಂತರ ಇದನ್ನು ಇಡ್ಲಿ ಪಾತ್ರೆಗೆ ಹಾಕಿ ಮತ್ತು 10 ನಿಮಿಷಗಳ ಕಾಲ ಸ್ಟೀಮ್ನಲ್ಲಿ ಬೇಯಿಸಿ.
ಈಗ ಆರೋಗ್ಯಕರ ಬೀಟ್ರೂಟ್ ಇಡ್ಲಿ ಸಿದ್ದವಾಗಿದೆ. ಬಿಸಿ ಬಿಸಿಯಾಗಿ ತೆಂಗಿನಕಾಯಿಯ ಚಟ್ನಿಯೊಂದಿಗೆ ಸವಿಯಿರಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: