Early Morning Wake Up: ಎಷ್ಟು ಓದಿದರೂ ನೆನಪಿರುವುದಿಲ್ಲ ಎನ್ನುವವರು ಈ ಸಲಹೆಯನ್ನು ಪಾಲಿಸಿ ನೋಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 18, 2024 | 4:53 PM

ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ಅಧ್ಯಯನ ಮಾಡುವುದರಿಂದ ಹೆಚ್ಚಿನ ಪ್ರಯೋಜನವಿದೆ ಎಂದು ನಂಬಲಾಗುತ್ತದೆ. ನಮ್ಮ ಶಾಸ್ತ್ರಗಳು ಕೂಡ ಇದನ್ನೇ ಹೇಳುತ್ತದೆ. ನೀವು ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಎದ್ದು ದಿನವನ್ನು ಆರಂಭಿಸಿದರೆ ನಿಮ್ಮ ಸುತ್ತಲೂ ಶಾಂತಿಯುತ ವಾತಾವರಣವಿರುತ್ತದೆ. ಇದರ ಪರಿಣಾಮವಾಗಿ ನೀವು ಅಧ್ಯಯನ ಮಾಡಿದ ಎಲ್ಲವೂ ನಿಮ್ಮ ತಲೆಯಲ್ಲಿ ಇರುತ್ತದೆ ಅಲ್ಲದೆ ಓದಿದ ಅಥವಾ ತಿಳಿದ ವಿಷಯಗಳು ಎಷ್ಟು ವರ್ಷಗಳು ಕಳೆದರೂ ಮರೆಯುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಜೊತೆಗೆ ಈ ಸಮಯದಲ್ಲಿ ನೀವು ವ್ಯಾಯಾಮ, ಯೋಗ, ಪ್ರಾಣಾಯಾಮ ಮಾಡಿದರೆ ನಿಮ್ಮ ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ ಎಂಬುದು ವಿವಿಧ ಅಧ್ಯಯನಗಳಿಂದಲೂ ಸಾಬೀತಾಗಿದೆ. ಹಾಗಾದರೆ ಪ್ರತಿದಿನ ಬೆಳಿಗ್ಗೆ ಎದ್ದು ನಿಮ್ಮ ದಿನವನ್ನು ಆರಂಭ ಮಾಡುವುದರಿಂದ ಯಾವ ರೀತಿಯ ಪ್ರಯೋಜನಗಳಿವೆ? ಸಂಪೂರ್ಣ ಮಾಹಿತಿ ಇಲ್ಲಿದೆ.

Early Morning Wake Up: ಎಷ್ಟು ಓದಿದರೂ ನೆನಪಿರುವುದಿಲ್ಲ ಎನ್ನುವವರು ಈ ಸಲಹೆಯನ್ನು ಪಾಲಿಸಿ ನೋಡಿ
ಸಾಂದರ್ಭಿಕ ಚಿತ್ರ
Follow us on

ಮನೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಬೆಳಿಗ್ಗೆ ಬೇಗನೆ ಎದ್ದು ಓದಿಕೊಳ್ಳಿ ಎಂದು ಸಲಹೆ ನೀಡುವುದನ್ನು ಕೇಳಿರಬಹುದು. ಏಕೆಂದರೆ ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ಅಧ್ಯಯನ ಮಾಡುವುದರಿಂದ ಹೆಚ್ಚಿನ ಪ್ರಯೋಜನವಿದೆ ಎಂದು ನಂಬಲಾಗುತ್ತದೆ. ನಮ್ಮ ಶಾಸ್ತ್ರಗಳು ಕೂಡ ಇದನ್ನೇ ಹೇಳುತ್ತದೆ. ನೀವು ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಎದ್ದು ದಿನವನ್ನು ಆರಂಭಿಸಿದರೆ ನಿಮ್ಮ ಸುತ್ತಲೂ ಶಾಂತಿಯುತ ವಾತಾವರಣವಿರುತ್ತದೆ. ಇದರ ಪರಿಣಾಮವಾಗಿ ನೀವು ಅಧ್ಯಯನ ಮಾಡಿದ ಎಲ್ಲವೂ ನಿಮ್ಮ ತಲೆಯಲ್ಲಿ ಇರುತ್ತದೆ ಅಲ್ಲದೆ ಓದಿದ ಅಥವಾ ತಿಳಿದ ವಿಷಯಗಳು ಎಷ್ಟು ವರ್ಷಗಳು ಕಳೆದರೂ ಮರೆಯುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಜೊತೆಗೆ ಈ ಸಮಯದಲ್ಲಿ ನೀವು ವ್ಯಾಯಾಮ, ಯೋಗ, ಪ್ರಾಣಾಯಾಮ ಮಾಡಿದರೆ ನಿಮ್ಮ ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ ಎಂಬುದು ವಿವಿಧ ಅಧ್ಯಯನಗಳಿಂದಲೂ ಸಾಬೀತಾಗಿದೆ. ಹಾಗಾದರೆ ಪ್ರತಿದಿನ ಬೆಳಿಗ್ಗೆ ಎದ್ದು ನಿಮ್ಮ ದಿನವನ್ನು ಆರಂಭ ಮಾಡುವುದರಿಂದ ಯಾವ ರೀತಿಯ ಪ್ರಯೋಜನಗಳಿವೆ? ಸಂಪೂರ್ಣ ಮಾಹಿತಿ ಇಲ್ಲಿದೆ.

ರಾತ್ರಿ ಬೇಗನೆ ಮಲಗಿ ಬೆಳಿಗ್ಗೆ 5 ಗಂಟೆಗೆ ಎದ್ದೇಳುವ ಅಭ್ಯಾಸವನ್ನು ರೂಢಿಸಿಕೊಂಡರೆ ನಿಮ್ಮ ಜೀವನವನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯಬಹುದು. ವಿದ್ಯಾರ್ಥಿಗಳು ಈ ಕೆಳಗೆ ನೀಡಿರುವ ಕೆಲವು ದೈನಂದಿನ ಅಭ್ಯಾಸಗಳಿಗೆ ಒಗ್ಗಿಕೊಂಡರೆ ಹೆಚ್ಚು ವ್ಯವಸ್ಥಿತವಾಗಿ ಮತ್ತು ಏಕಾಗ್ರತೆಯಿಂದ ಅಧ್ಯಯನ ಮಾಡಬಹುದು ಎಂದು ಸಂಶೋಧನೆ ತೋರಿಸಿ ಕೊಟ್ಟಿದೆ. ಬೆಳಿಗ್ಗೆ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳು ಶಾಂತವಾಗಿರುತ್ತದೆ ಮತ್ತು ಕಡಿಮೆ ಶಬ್ದವಿರುತ್ತದೆ. ಆದ್ದರಿಂದ ನಿಮ್ಮ ಮನಸ್ಸು ಯಾವುದೇ ರೀತಿಯ ಯೋಚನೆಗಳಿಲ್ಲದೆ ಓದಿದ್ದನ್ನು ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ. ನೀವು ಓದಲು ಕುಳಿತರೆ ಏಕಾಗ್ರತೆ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಬೆಳಿಗ್ಗೆ, ಮನಸ್ಸು ಹಗುರಾಗಿರುವುದರಿಂದ ಈ ಸಮಯದಲ್ಲಿ ನೀವು ಕಷ್ಟಕರ, ಸಂಕೀರ್ಣ ಸಮಸ್ಯೆಗಳನ್ನು ಅಭ್ಯಾಸ ಮಾಡಿದರೆ, ಬಹುಬೇಗ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು.

ಆರೋಗ್ಯ ಕಾಪಾಡಿಕೊಳ್ಳಬಹುದು;

ಬೆಳಗ್ಗಿನ ತಾಜಾ ಗಾಳಿ ಉಲ್ಲಾಸಭರಿತವಾದ ಮನಸ್ಸಿನಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವಾಕಿಂಗ್, ಜಾಗಿಂಗ್ ಅಥವಾ ವ್ಯಾಯಾಮ ಮಾಡುವಾಗ ಪ್ರಕೃತಿಯಲ್ಲಿ ಸ್ವಲ್ಪ ಸಮಯ ಕಳೆಯುವುದರಿಂದ ದೈಹಿಕ ಮತ್ತು ಮಾನಸಿಕ ಆಯಾಸವನ್ನು ನಿವಾರಿಸಬಹುದು. ಜೊತೆಗೆ ಆತಂಕ ಕಡಿಮೆಯಾಗುತ್ತದೆ. ಬೆಳಿಗ್ಗೆ ಬೇಗನೆ ಎದ್ದೇಳುವುದು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಅಲ್ಲದೆ ಮುಂಜಾನೆ ನಮ್ಮ ಮೆದುಳು ತುಂಬಾ ಸಕ್ರಿಯವಾಗಿರುತ್ತದೆ ಎಂದು ಹಲವಾರು ಅಧ್ಯಯನಗಳು ಸಾಬೀತುಪಡಿಸಿವೆ. ಈ ರೀತಿ ಮಾಡುವುದರಿಂದ ನಿಮ್ಮ ಸೃಜನಶೀಲ ಚಿಂತನೆಯೂ ಹೆಚ್ಚಾಗುತ್ತದೆ. ಅದಕ್ಕಾಗಿಯೇ ನೀವು ಈ ಸಮಯವನ್ನು ಅಧ್ಯಯನ ಮಾಡಲು ಬಳಸಿದರೆ, ನಿಮ್ಮ ಬುದ್ಧಿವಂತಿಕೆ ಹೆಚ್ಚಾಗುತ್ತದೆ.

ಇದನ್ನೂ ಓದಿ: ನಿಮ್ಮಲ್ಲಿ ಈ ಗುಣಗಳಿದ್ದರೆ ಕುಟುಂಬದಲ್ಲಿ ದುಃಖಕ್ಕೆ ಜಾಗನೇ ಇಲ್ಲ ಬಿಡಿ

ಬೆಳಿಗ್ಗೆ ಬೇಗನೆ ಎದ್ದೇಳುವುದರಿಂದ, ಅಧ್ಯಯನ, ವ್ಯಾಯಾಮ, ಧ್ಯಾನದ ಹೊರತಾಗಿ, ಈ ಸಮಯವು ನಿಮ್ಮಲ್ಲಿರುವ ಯಾವುದೇ ಹವ್ಯಾಸಗಳನ್ನು ಪೂರೈಸಿಕೊಳ್ಳಲು ನಿಮಗೆ ದಿನದಲ್ಲಿ ಸಾಕಷ್ಟು ಸಮಯ ಸಿಗುತ್ತದೆ. ಒಟ್ಟಾರೆಯಾಗಿ ಎಲ್ಲಾ ವಿಷಯಗಳಲ್ಲಿಯೂ ತಾವು ಸಕಾರಾತ್ಮಕವಾಗಿ ಬೆಳೆಯಬೇಕು ಎಂಬ ಬಯಕೆ ಮತ್ತು ಆಸಕ್ತಿ ಇರುವವರು ಬೆಳಿಗ್ಗೆ ಬೇಗ ಎದ್ದೇಳುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಪರಿಣಾಮವಾಗಿ, ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ.

ಸಕಾರಾತ್ಮಕ ಆಲೋಚನೆ ಮಾಡಲು ಸಹಕಾರಿ

ನೀವು ದಿನವಿಡೀ ಮಾಡುವ ಕಾರ್ಯಗಳನ್ನು ಯೋಜಿತವಾದ ರೀತಿಯಲ್ಲಿ ಸಮಯ ಹಂಚಿಕೊಳ್ಳಲು ಬಯಸಿದರೆ, ಬೆಳಿಗ್ಗೆ ಬೇಗನೆ ಎದ್ದೇಳುವುದು ಉತ್ತಮ. ಸರಿಯಾದ ಯೋಜನೆ ಇರುವವರು ಹಗಲಿನಲ್ಲಿ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ನೀವು ಬೆಳಿಗ್ಗೆ ಬೇಗನೆ ಎದ್ದರೆ, ನಿಮ್ಮ ಅಧ್ಯಯನ ಮುಗಿಸಿದರೆ ಪರೀಕ್ಷೆಗಳ ಬಗ್ಗೆ ಚಿಂತೆ ಇರುವುದಿಲ್ಲ. ಈ ಸಮಯದಲ್ಲಿ, ಸಕಾರಾತ್ಮಕ ಆಲೋಚನೆಗಳು ಮೆದುಳಿಗೆ ಬರುತ್ತವೆ. ಇದು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ