
ಸಕ್ಕರೆ (sugar) ಆರೋಗ್ಯಕ್ಕೆ ಒಳ್ಳೆಯದಲ್ಲ. ಅಗತ್ಯಕ್ಕಿಂತ ಜಾಸ್ತಿ ಶುಗರ್ ಸೇವಿಸಿದರೆ ಮಧುಮೇಹ ಸೇರಿದಂತೆ ಹಲವಾರು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿಯೇ ಸಕ್ಕರೆ ಸೇವನೆ ಮಿತವಾಗಿರಲಿ ಎಂದು ಆರೋಗ್ಯ ತಜ್ಞರು ಸಲಹೆ ನೀಡೋದು. ಆದರೆ ಈ ಸಕ್ಕರೆ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಂತೆ. ಹೌದು ಶಾಂಪೂಗೆ ಸ್ವಲ್ಪ ಸಕ್ಕರೆ ಸೇರಿಸಿ ಕೂದಲು ತೊಳೆಯುವುದರಿದ ಇದು ಕೂದಲನ್ನು ಬುಡದಿಂದ ಸ್ವಚ್ಛಗೊಳಿಸಲು, ಕೂದಲ ಹೊಳಪನ್ನು ಹೆಚ್ಚಿಸಲು ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಸಕ್ಕರೆ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಂತೆ. ವಾಸ್ತವವಾಗಿ ಶಾಂಪೂಗೆ ಸಕ್ಕರೆಯನ್ನು ಸೇರಿಸಿ ಕೂದಲು ತೊಳೆಯುವುದು ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಂತೆ. ಇದು ಸ್ಕ್ರಬ್ಬಿಂಗ್ ತರಹ ಕೆಲಸ ಮಾಡುತ್ತದೆ. ಇದಕ್ಕಾಗಿ ಸ್ವಲ್ಪ ಶಾಂಪೂಗೆ ಒಂದು ಟೀ ಸ್ಪೂನ್ ಸಕ್ಕರೆ ಸೇರಿಸಿ, ನೆತ್ತಿಯನ್ನು ನಿಧಾನಕ್ಕೆ ಮಸಾಜ್ ಮಾಡಿ. ನಂತರ, ಕೂದಲನ್ನು ತಾಜಾ ನೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿ. ಇದು ಜಿಡ್ಡು ಮತ್ತು ಕೊಳೆಯನ್ನು ನಿವಾರಿಸುತ್ತದೆ.
ಇದನ್ನೂ ಓದಿ: ವಾರಕ್ಕೆ ಎಷ್ಟು ಬಾರಿ ತಲೆ ಸ್ನಾನ ಮಾಡಿದರೆ ಉತ್ತಮ? ನೀವು ತಿಳಿಯಲೇಬೇಕಾದ ಮಾಹಿತಿ ಇದು
ಇದು ನೆತ್ತಿಯಲ್ಲಿನ ಸತ್ತ ಜೀವಕೋಶಗಳನ್ನು ತೆಗೆದುಹಾಕಿ ಚರ್ಮವನ್ನು ಸ್ವಚ್ಛಗೊಳಿಸುತ್ತದೆ, ತಲೆಹೊಟ್ಟು ನಿವಾರಿಸುತ್ತದೆ, ತುರಿಕೆಯನ್ನು ಕಡಿಮೆ ಮಾಡುತ್ತದೆ. ನೆತ್ತಿಯ ರಕ್ತಪರಿಚಲನೆಯನ್ನು ಹೆಚ್ಚಿಸಿ, ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ