ಹೃದಯದಂತೆ ಯಕೃತ್ತು ಕೂಡಾ ನಮ್ಮ ದೇಹದ ಪ್ರಮುಖ ಅಂಗವಾಗಿದೆ. ಯಕೃತ್ತು ನಮ್ಮ ದೇಹದಲ್ಲಿ ಒಂದು ಇಂಜಿನ್ ಇದ್ದಂತೆ, ಇದು ರಕ್ತವನ್ನು ಶುದ್ದೀಕರಿಸುವುದು, ಮಲ ಹಾಗೂ ಮೂತ್ರದ ಮೂಲಕ ದೇಹದಿಂದ ವಿಷವನ್ನು ಹೊರ ಹಾಕುವುದು, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸುವಂತಹ ಅನೇಕ ಅಗತ್ಯ ಕಾರ್ಯಗಳನ್ನು ನಿರ್ವಹಿಸುತ್ತದೆ. ಹಾಗಾಗಿ ಹೃದಯ, ಮೂಳೆಗಳು, ಮೂತ್ರಪಿಂಡ ಮತ್ತು ಶ್ವಾಸಕೋಶಗಳಂತೆ ಈ ಅಂಗದ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಬಹಳ ಮುಖ್ಯ. ಯಕೃತ್ತು ಹಾನಿಗೊಳಗಾದರೆ ದೇಹವು ದುರ್ಬಲವಾಗಬಹುದು ಮತ್ತು ನೀವು ವಾಂತಿ, ಹಸಿವಿನ ಕೊರತೆ, ಯಾವಾಗಲೂ ದಣಿದ ಭಾವನೆ, ಅತಿಸಾರ ಮುಂತಾದ ರೋಗಲಕ್ಷಣಗಳನ್ನು ಸಹ ಅನುಭವಿಸಬಹುದು. ಆರೋಗ್ಯ ತಜ್ಞರ ಪ್ರಕಾರ ನಮ್ಮ ಜೀವನಶೈಲಿ ಮತ್ತು ಆಹಾರ ಪದ್ದತಿ ಯಕೃತ್ತಿನ ಆರೋಗ್ಯ ಮೇಲೆ ನೇರ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಯಕೃತ್ತಿಗೆ ಆಲ್ಕೋಹಾಲ್ ದೊಡ್ಡ ಶತ್ರು ಇದ್ದಂತೆ. ಅತಿಯಾದ ಆಲ್ಕೋಹಾಲ್ ಸೇವನೆ ಯಕೃತ್ತಿಗೆ ಅಪಾರ ಹಾನಿಯನ್ನು ಉಂಟುಮಾಡುತ್ತದೆ. ಈ ಕಾರಣಕ್ಕಾಗಿಯೇ ತಜ್ಞರು ಮದ್ಯ ಸೇವನೆಯನ್ನು ಆದಷ್ಟು ಮಿತಿಗೊಳಿಸಬೇಕು ಎಂದು ಹೇಳುತ್ತಾರೆ. ಆಲ್ಕೋಹಾಲ್ನಂತೆ ಈ ಕೆಲವು ಆಹಾರ ಪದಾರ್ಥಗಳೂ ನಮ್ಮ ಯಕೃತ್ತಿನ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಅವುಗಳನ್ನು ಸಹ ಸಿಮಿತ ಪ್ರಮಾಣದಲ್ಲಿ ಸೇವಿಸುವವ ಮೂಲಕ ಪಿತ್ತಜನಕಾಂಗದ ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಬಹುದು.
ಹೆಚ್ಚು ಸಿಹಿಯಾದ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಅಲ್ಲದೆ ಅತಿಯಾದ ಸಕ್ಕರ ಅಥವಾ ಸಿಹಿ ಸೇವನೆಯು ಯಕೃತ್ತಿಗೂ ಒಳ್ಳೆಯದಲ್ಲ. ಹೆಚ್ಚು ಸಕ್ಕರೆಯನ್ನು ಸೇವಿಸಿದಾಗ ಯಕೃತ್ತು ಈ ಹೆಚ್ಚುವರಿ ಸಕ್ಕರೆಯನ್ನು ಕೊಬ್ಬಾಗಿ ಪರಿವರ್ತಿಸುತ್ತದೆ. ಇದು ಆಲ್ಕೋಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗಳಿಗೆ ಕಾರಣವಾಗಬಹುದು.
ನೀವು ತಂಪು ಪಾನೀಯಗಳು ಮತ್ತು ಕಾರ್ಬೋನೇಟೆಡ್ ಪಾನೀಯಗಳನ್ನು ಅತಿಯಾಗಿ ಸೇವನ ಮಾಡುತ್ತೀರಿ ಎಂದಾದರೆ, ಅವುಗಳ ಸೇವನೆಯನ್ನು ಮಿತಿಗೊಳಿಸಿ, ಏಕೆಂದರೆ ಈ ಎಲ್ಲಾ ಪಾನೀಯಗಳು ಬಹಳಷ್ಟು ಸಕ್ಕರೆಯನ್ನು ಹೊಂದಿರುತ್ತವೆ ಮತ್ತು ಯಕೃತ್ತಿಗೆ ಹಾನಿಯುಂಟುಮಾಡುತ್ತದೆ.
ಇದನ್ನೂ ಓದಿ: ಈ ಆಹಾರಗಳು ಲಿವರ್ಗೆ ಅಪಾಯಕಾರಿ, ತಕ್ಷಣವೇ ತಿನ್ನುವುದನ್ನು ನಿಲ್ಲಿಸಿ
ಉಪ್ಪು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ನಿಜ, ಆದರ ಅತಿಯಾದ ಉಪ್ಪಿನ ಸೇವನೆಯು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಉಂಟುಮಾಡುವುದು ಮಾತ್ರವಲ್ಲದೆ, ಯಕೃತ್ತಿಗೂ ಕೂಡಾ ಹಾನಿಕಾರಕವಾಗಿದೆ. ಹೆಚ್ಚು ಉಪ್ಪು ಸೇವನೆಯು ದೇಹದಲ್ಲಿ ನಿರ್ಜಲೀಕರಣವನ್ನು ಉಂಟುಮಾಡಬಹುದು. ಮತ್ತು ಇದು ಯಕೃತ್ತಿನ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸಲು ನೀವು ಸೀಮಿತ ಪ್ರಮಾಣದಲ್ಲಿ ಮಾತ್ರ ಉಪ್ಪನ್ನು ಸೇವಿಸಬೇಕು.
ಉಪ್ಪಿನಂತೆ ಕರಿದ ಆಹಾರ ಪದಾರ್ಥಗಳು ಕೂಡ ಯಕೃತ್ತಿಗೆ ಹಾನಿಕಾರಕವಾಗಿದೆ. ಇದು ಹೆಚ್ಚಿನ ಪ್ರಮಾಣದ ಕೊಬ್ಬು ಹಾಗೂ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇವುಗಳ ನಿಯಮಿತ ಸೇವನೆಯಿಂದ ಆಲ್ಕೋಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗಳು ನಿಮ್ಮನ್ನು ಕಾಡಬಹುದು.
ಕೆಂಪು ಮಾಂಸವನ್ನು ಸಹ ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಏಕೆಂದರೆ ಕೆಂಪು ಮಾಂಸವು ಸಾಕಷ್ಟು ಪ್ರಮಾಣದ ಫ್ರೋಟೀನ್ ಹೊಂದಿರುತ್ತದೆ, ಇದನ್ನು ಜೀರ್ಣಿಸಿಕೊಳ್ಳುವುದು ತುಂಬಾ ಕಷ್ಟ. ಇದು ಯಕೃತಿನ ಆರೋಗ್ಯಕ್ಕೆ ಅಪಾಯವನ್ನು ತಂದೊಡ್ಡಬಹುದು ಹಾಗೂ ಇದು ಆಲ್ಕೋಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯನ್ನು ಉಂಟುಮಾಡಬಹುದು. ಅಲ್ಲದೆ ಇದು ಮೆದುಳು ಹಾಗೂ ಮೂತ್ರಪಿಂಡಗಳಿಗೂ ಹಾನಿಯನ್ನು ಉಂಟುಮಾಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ