Bizarre news: ಗೆಳತಿಯಾಗಲು ನಿರಾಕರಿಸಿದಕ್ಕೆ 24 ಕೋಟಿ ರೂ. ಪರಿಹಾರ ನೀಡುವಂತೆ ಮೊಕದ್ದಮೆ ಹೂಡಿದ ಪ್ರಿಯತಮ
ಸಿಂಗಾಪುರದ ವ್ಯಕ್ತಿಯೊಬ್ಬ ತಾನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡ ಹುಡುಗಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ. ಈ ಮೊಕದ್ದಮೆಯ ಹಿಂದಿನ ವಿಚಿತ್ರ ಕಾರಣ ತಿಳಿದರೆ ನೀವು ಖಂಡಿತವಾಗಿಯೂ ಅಚ್ಚರಿಗೊಳ್ಳುವಿರಿ.
ಸಿಂಗಾಪುರದ ವ್ಯಕ್ತಿಯೊಬ್ಬ ತಾನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಾಗ ನಿರಾರಕರಿಸಿದ ಹುಡುಗಿಯ ವಿರುದ್ಧವೇ ಪ್ರಕರಣ ದಾಖಲಿಸಿದ ವಿಚಿತ್ರ ಘಟನೆಯೊಂದು ನಡೆದಿದೆ. ಈ ಮೊಕದ್ದಮೆಯ ಹಿಂದಿನ ವಿಚಿತ್ರ ಕಾರಣ ತಿಳಿದರೆ ನೀವು ಖಂಡಿತವಾಗಿಯೂ ಅಚ್ಚರಿಗೊಳ್ಳುವಿರಿ. ಕೆ ಕೌಶಿಗನ್ ಎಂಬ ವ್ಯಕ್ತಿ 2016 ರಲ್ಲಿ ನೋರಾ ತಾನ್ ಎಂಬಾಕೆಯನ್ನು ಭೇಟಿಯಾದ್ದಾನೆ. ಹೀಗೆ ಆದ ಭೇಟಿ ನಂತರ ಉತ್ತಮ ಸ್ನೇಹಕ್ಕೆ ಪರಿವರ್ತನೆಯಾಯಿತು. ದಿನಗಳು ಉರುಳುತ್ತಿದ್ದಂತೆ ಕೌಶಿಗನ್ ಹೃದಯಲ್ಲಿ ಪ್ರೇಮದ ಹೂವು ಮೊಳಕೆಯೊಡೆಯಲು ಆರಂಭಿಸಿತು. ಈ ಬಗ್ಗೆ ಆಕೆಯ ಬಳಿ ಹೇಳಿಕೊಂಡಿದ್ದಾನೆ. ಆದರೆ ಆಕೆಗೆ ಕೌಶಿಗನ್ ಮೇಲೆ ಸ್ನೇಹ ಬಿಟ್ಟರೆ ಪ್ರೀತಿ ಆಗಿರಲಿಲ್ಲ. ಈ ಬೆಳವಣಿಗೆ ನಂತರ ಆಕೆ ಕೌಶಿಗನ್ನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಾಳೆ. ಅಲ್ಲದೆ ನಿರ್ಧಾರ ಕೈಗೊಳ್ಳಲು ಕಾಲಾವಕಾಶ ನೀಡುವಂತೆ ಸಲಹೆ ನೀಡಿದ್ದಾಳೆ.
ಈ ನಡುವೆ ಕುಶಿಗನ್, ನೋರಾಗೆ ಒಂದು ಪತ್ರ ಬರೆಯುತ್ತಾನೆ. ನಿರ್ಲಕ್ಷ್ಯದಿಂದ ಉಂಟಾಗುವ ಭಾವನಾತ್ಮಕ ಸಂಕಟ ಮತ್ತು ಸಂಭಾವ್ಯ ಮಾನಹಾನಿಯಿಂದ ಉಂಟಾಗುವ ವಿತ್ತೀಯ ಹಾನಿಗಳ ಬಗ್ಗೆ ಪತ್ರ ಬರೆಯುತ್ತಾನೆ. ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಪ್ರಕಾರ, ನೋರಾಗೆ ಕೇವಲ ಎರಡು ಆಯ್ಕೆಗಳಿದ್ದವು. ಅವುಗಳೆಂದರೆ, ಸಂಬಂಧವನ್ನು ಒಪ್ಪಿಕೊಳ್ಳುವುದು ಅಥವಾ ಅವನ ವೈಯಕ್ತಿಕ ಮತ್ತು ವೃತ್ತಿಪರ ಪ್ರಯತ್ನಗಳಿಗೆ ಹಾನಿಯನ್ನು ಪಾವತಿಸುವುದು.
ಇದನ್ನೂ ಓದಿ: Dragon Lady: ಡ್ರ್ಯಾಗನ್ನಂತೆ ಕಾಣಲು 39 ಲಕ್ಷ ಖರ್ಚು ಮಾಡಿದ ಮಹಿಳೆ; ಹೇಗಿದ್ದಾಳೆ ನೋಡಿ
ಮಾಧ್ಯಮ ವರದಿಗಳ ಪ್ರಕಾರ, ನೋರಾ ಸಮಾಲೋಚನೆಗೆ ಹೋಗಿ ದಂಪತಿಗಳಾಗುವ ಕಲ್ಪನೆಯನ್ನು ತೆಗೆದುಹಾಕಲು ಒಪ್ಪಿಕೊಂಡರು. 18 ತಿಂಗಳ ಪ್ರಯತ್ನದ ನಂತರ ಆಕೆ ಅಂತಿಮವಾಗಿ ಕೌಶಿಗನ್ನನ್ನು ಕೈಬಿಟ್ಟಳು ಮತ್ತು ಕೌಶಿಗನ್ ಜೊತೆ ಮಾತುಕತೆ ನಡೆಸುವುದನ್ನು ನಿಲ್ಲಿಸಿದಳು. ಇದರಿಂದ ಕೋಪಗೊಂಡ ಕೌಶಿಗನ್, ನೋರಾ ವಿರುದ್ಧ 3 ಮಿಲಿಯನ್ ಡಾಲರ್ (ಸುಮಾರು 24 ಕೋಟಿ ರೂ.) ಮೊಕದ್ದಮೆ ಹೂಡಿದ್ದಾನೆ.
ನೋರಾ ತಿರಸ್ಕಾರವು ನನಗೆ ಆಘಾತ ಮತ್ತು ಖಿನ್ನತೆಗೆ ಕಾರಣವಾಗಿದೆ ಎಂದು ಆರೋಪಿಸಿ ಕೌಸಿಗನ್, ಹೈಕೋರ್ಟ್ನಲ್ಲಿ ಎರಡು ಮೊಕದ್ದಮೆಗಳನ್ನು ದಾಖಲಿಸಿದ್ದಾನೆ. ಈ ಪರೀಕ್ಷೆಯು ರಾತ್ರಿಯಲ್ಲಿ ಸಕ್ರಿಯವಾಗಿರುವ ಹೆಚ್ಚಿನ ಬಂಡವಾಳದ ವ್ಯಾಪಾರಿಯಾಗಿ ಮತ್ತು ಹಗಲಿನಲ್ಲಿ ಕಾರ್ಯನಿರತ ಸಿಇಒ ಆಗಿ ಕೆಲಸ ಮಾಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾನೆ.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ