Food Tips: ಗಂಜಿ ಊಟಕ್ಕೆ ಸೂಪರ್ ಕಾಂಬಿನೇಷನ್ ಕೇರಳ ಶೈಲಿಯ ನರಂಗ ಉಪ್ಪಿನಕಾಯಿ
ನರಂಗ ಉಪ್ಪಿನಕಾಯಿ ಕೇರಳ ರಾಜ್ಯದ ಒಂದು ಸಾಂಪ್ರದಾಯಿಕ ನಿಂಬೆ ಉಪ್ಪಿನಕಾಯಿ ಪಾಕವಿಧಾನವಾಗಿದೆ. ಇದು ಕಟುವಾಗಿ ಹಾಗೂ ಮಸಾಲೆಯುಕ್ತವಾಗಿದೆ. ಗಂಜಿ ಊಟದೊಂದಿಗೆ ಸೇವಿಸಲು ಇದರ ಕಾಂಬಿನೇಷನ್ ಉತ್ತಮವಾಗಿದೆ.
ನರಂಗ ಉಪ್ಪಿನಕಾಯಿ ಕೇರಳ ರಾಜ್ಯದ ಒಂದು ಸಾಂಪ್ರದಾಯಿಕ ನಿಂಬೆ ಉಪ್ಪಿನಕಾಯಿ ಪಾಕವಿಧಾನವಾಗಿದೆ. ಇದು ಕಟುವಾಗಿ ಹಾಗೂ ಮಸಾಲೆಯುಕ್ತವಾಗಿದೆ. ಗಂಜಿ ಊಟದೊಂದಿಗೆ ಸೇವಿಸಲು ಇದರ ಕಾಂಬಿನೇಷನ್ ಉತ್ತಮವಾಗಿದೆ. ದಕ್ಷಿಣ ಭಾರತ ಶೈಲಿಯ ಆಹಾರಗಳು ಅಂತ ಬಂದಾಗ ನಮಗೆಲ್ಲರಿಗೂ ಮೊದಲು ನೆನಪಾಗುವಂತಹದ್ದು ಸಾಂಬರ್, ಇಡ್ಲಿ, ದೋಸೆ, ಚಟ್ನಿ ಇತ್ಯಾದಿ. ಈ ಪ್ರದೇಶವು ರುಚಿಕರವಾದ ಖಾದ್ಯಗಳಿಗೆ ಪ್ರಸಿದ್ಧವಾಗಿದೆ. ಹಾಗೂ ದಕ್ಷಿಣ ಭಾರತವು ಉಪ್ಪಿನ ಕಾಯಿಗಳಿಗೂ ಕೂಡ ಪ್ರಸಿದ್ಧವಾಗಿದೆ. ಆಂಧ್ರಪ್ರದೇಶದ ಕ್ಲಾಸಿಕ್ ಆವಕಾಯಾ ಆಗಿರಲಿ, ತಮಿಳುನಾಡಿನ ತೊಕ್ಕು ಅಥವಾ ಕರ್ನಾಟಕದ ಅಪ್ಪೆಮಿಡಿಯಾಗಿರಲಿ, ಈ ರುಚಿಕರವಾದ ಉಪ್ಪಿನಕಾಯಿಗಳು ಯಾವುದೇ ಖಾದ್ಯದ ರುಚಿಯನ್ನು ತಕ್ಷಣವೇ ಹೆಚ್ಚಿಸುತ್ತದೆ. ಇವುಗಳಂತೆಯೇ ಕೇರಳದ ನರಂಗ ಉಪ್ಪಿನಕಾಯಿಯು ತುಂಬಾನೇ ರುಚಿಕರವಾಗಿದೆ. ದೈನಂದಿನ ಊಟದ ಜೊತೆಗೆ ಸೇವಿಸಲು ಇದು ಸೂಕ್ತವಾಗಿದೆ.
ನರಂಗ ಉಪ್ಪಿನಕಾಯಿಯು ಕೇರಳ ರಾಜ್ಯದ ಸಾಂಪ್ರದಾಯಿಕ ನಿಂಬೆ ಉಪ್ಪಿನಕಾಯಿ ಪಾಕವಿಧಾನವಾಗಿದೆ. ನಿಂಬೆಹಣ್ಣುಗಳನ್ನು ಎಳ್ಳೆಣ್ಣೆಯಲ್ಲಿ ಹುರಿಯಲಾಗುತ್ತದೆ. ನಂತರ ಸುವಾಸನೆಭರಿತ ಮಸಾಲೆಗಳು ಮತ್ತು ಗಿಡಮೂಲಿಕೆಗಳನ್ನು ಅದಕ್ಕೆ ಸೇರಿಸಲಾಗುತ್ತದೆ. ಈ ಉಪ್ಪಿನಕಾಯಿಯು ಓಣಂ ಹಬ್ಬದ ಊಟದ ಅವಿಭಾಜ್ಯ ಅಂಗವಾಗಿದೆ. ಇದು ಕುಟುವಾಗಿ ಹಾಗೂ ಮಸಾಲೆಯುಕ್ತವಾಗಿದೆ. ಇದು ವಿಟಮಿನ್ ಸಿ ಅಂಶದಿಂದ ಸಮೃದ್ಧವಾಗಿದೆ ಮತ್ತು ಕಡಿಮೆ ಪ್ರಮಾಣದಲ್ಲಿ ಇದನ್ನು ಸೇವಿಸಿದರೆ ಇದು ನಮ್ಮ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: Food Tips: ಬೆಳಗ್ಗೆ ಚಹಾ ಅಥವಾ ಟೀಯ ಬದಲು ಬಾಳೆಹಣ್ಣಿನ ಸೇವನೆ ಉತ್ತಮ: ತಜ್ಞರ ಸಲಹೆ
ನರಂಗ ಉಪ್ಪಿನಕಾಯಿ ಪಾಕವಿಧಾನ:
ನರಂಗ ಉಪ್ಪಿನಕಾಯಿಯನ್ನು ಹೇಗೆ ಮಾಡುವುದೆಂದರೆ ಮೊದಲಿಗೆ ಒಂದು ಪ್ಯಾನ್‌ಗೆ ಎಣ್ಣೆ ಹಾಕಿ ಅದು ಕಾದ ಬಳಿಕ ಅದಕ್ಕೆ ನಿಂಬೆಹಣ್ಣುಗಳನ್ನು ಸೇರಿಸಿ 2 ರಿಂದ 3 ನಿಮಿಷಗಳ ಕಾಲ ಚೆನ್ನಾಗಿ ಫ್ರೆ ಮಾಡಿ. ನಂತರ ಸ್ಟವ್ ಆಫ್ ಮಾಡಿ, ನಿಂಬೆ ತಣ್ಣಗಾಗಲು ಬಿಡಿ.
ಅವು ಸಂಪೂರ್ಣ ತಣ್ಣಗಾದ ಬಳಿಕ, ನಿಂಬೆಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮತ್ತು ಅವುಗಳಲ್ಲಿರುವ ಬೀಜಗಳನ್ನು ತೆಗೆದುಹಾಕಿ. ಈಗ ಅದಕ್ಕೆ ಅರಶಿನ, ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ ಹಾಗೂ ಮೆಂತ್ಯೆಕಾಳುಗಳನ್ನು ಸೇರಿಸಿ ಅವುಗಳನ್ನು ಸಿಡಿಯಲು ಬಿಡಿ. ನಂತರ ಅದಕ್ಕೆ ಕರಿಬೇವಿನ ಎಲೆಗಳು, ಕತ್ತರಿಸಿದ ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ ಅದರ ಹಸಿ ವಾಸನೆ ಹೋಗುವವರೆಗೆ ಫ್ರೆ ಮಾಡಿ. ನಂತರ ಅಚ್ಚಖಾರದ ಪುಡಿ ಮತ್ತು ಹಿಂಗ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಂತಿಮವಾಗಿ ಮೊದಲೇ ಕತ್ತರಿಸಿಟ್ಟ ನಿಂಬೆ ಮತ್ತು ಬಿಳಿ ವಿನೆಗರ್ ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸ್ಟವ್ ಆಫ್ ಮಾಡಿ. ಈ ಉಪ್ಪಿನಕಾಯಿ ಮಿಶ್ರಣವು ಸಂಪೂರ್ಣವಾಗಿ ತಣ್ಣಗಾದ ಬಳಿಕ ಅದನ್ನು ಗಾಳಿಯಾಡದ ಕಂಟೇನರ್‌ಗೆ ವರ್ಗಾಯಿಸಿ. ಮತ್ತು ಕೋಣೆಯ ಉಷ್ಣಾಂಶದಲ್ಲಿ 2 ದಿನಗಳವರೆಗೆ ಇಟ್ಟು, ಮಸಾಲೆ ಚೆನ್ನಾಗಿ ಹೀರಿಕೊಂಡ ಬಳಿಕ ಆ ಉಪ್ಪಿನಕಾಯಿಯನ್ನು ಊಟದೊಂದಿಗೆ ಸವಿಯಬಹುದು.