Earth Tone Color: ಮನೆ ಇಂಟೀರಿಯರ್ಸ್, ಮದುವೆ, ಹಬ್ಬ ಎಲ್ಲಿ ನೋಡಿದರೂ ಭೂಮಿಯ ಬಣ್ಣವೇ ಏಕೆ ಟ್ರೆಂಡ್ ಆಗುತ್ತಿದೆ?
Earth Tone in Interiors and Fashion: ಎಲ್ಲಾ ಬಣ್ಣ ಒಂದೊಂದು ಭಾವನೆಗಳನ್ನು ಸಂಕೇತಿಸುತ್ತದೆ. ಸೈಕಾಲಾಜಿಕಲಿ ಪ್ರತಿ ಬಣ್ಣ ಮನುಷ್ಯನ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಈ ಭೂಮಿಯ ಬಣ್ಣಗಳು ಪ್ರಶಾಂತತೆಯ ಸಂಕೇತವಾಗಿದೆ.
ಇತ್ತೀಚಿನ ದಿನಗಳಲ್ಲಿ ಭೂಮಿಯ ಬಣ್ಣಗಳು (Earthy Colors) ಎಲ್ಲೆಡೆ ಟ್ರೆಂಡ್ ಅಲ್ಲಿರುವುದನ್ನ ನೋಡಬಹುದು. ಇದೇ ಐದಾರು ವರ್ಷಗಳ ಹಿಂದೆ ಹೊಳೆಯುವ ಬಣ್ಣಗಳು ಟ್ರೆಂಡ್‘ನಲ್ಲಿ ಇತ್ತು. ಮದುವೆ–ಮುಂಜಿಯಲ್ಲಿ ಕೆಂಪು, ನೇರಳೆ, ಕೇಸರಿ, ಹಸಿರು ಇಂತ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸುತ್ತಿದ್ದರು. ಆದರೆ ಈಗ ಕೆಲವು ವರ್ಷಗಳಿಂದ ಭೂಮಿಯ ಬಣ್ಣಗಳು ಟ್ರೆಂಡಿಂಗ್‘ನಲ್ಲಿದೆ. ಯಾವುದೇ ಬಣ್ಣದಲ್ಲಿ ಕಂದು ಬಣ್ಣದ ಟೋನ್ ಕಂಡುಬಂದಲ್ಲಿ ಅದು ಭೂಮಿಯ ಬಣ್ಣ ಎನ್ನಬಹುದು. ಅಥವಾ ಮಣ್ಣಿನ ಬಣ್ಣವನ್ನು ಹೋಲುವ ಕೆಲವು ಬಣ್ಣಗಳನ್ನು ಭೂಮಿಯ ಬಣ್ಣ ಎಂದು ಉಲ್ಲೇಖಿಸಬಹುದು. ತುಕ್ಕು, ಮಾರಿಗೋಲ್ಡ್, ಸುಟ್ಟ ಸಿಯೆನ್ನಾ ಕಂದು, ಟೆರಾಕೋಟಾ, ಅರಿಶಿನ ಇವೆಲ್ಲ ಭೂಮಿಯ ಬಣ್ಣಗಳು.
ಈ ಭೂಮಿಯ ಬಣ್ಣಗಳು ಟ್ರೆಂಡ್ ಆಗಲು ಕಾರಣವೇನು?
ಎಲ್ಲಾ ಬಣ್ಣ ಒಂದೊಂದು ಭಾವನೆಗಳನ್ನು ಸಂಕೇತಿಸುತ್ತದೆ. ಸೈಕಾಲಾಜಿಕಲಿ ಪ್ರತಿ ಬಣ್ಣ ಮನುಷ್ಯನ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಈ ಭೂಮಿಯ ಬಣ್ಣಗಳು ಪ್ರಶಾಂತತೆಯ ಸಂಕೇತವಾಗಿದೆ. ಕಣ್ಣಿಗೆ ಕುಕ್ಕದೆ ಒಂದು ರೀತಿಯ ಸಮಾಧಾನವನ್ನು ನೀಡುವ ಬಣ್ಣಗಳು ಇದಾಗಿದೆ. ಅಷ್ಟೇ ಅಲ್ಲದೆ ಈ ಬಣ್ಣಗಳ ಉಡುಗೆಗೆ ಎಲ್ಲ ರೀತಿಯ ಆಭರಣಗಳು ತುಂಬ ಚನ್ನಾಗಿ ಹೊಂದಿಕೊಳ್ಳುತ್ತದೆ.
ಭೂಮಿಯ ಟೋನ್ಗಳು 2022 ರಲ್ಲಿ ಒಂದು ಪ್ರಮುಖ ವಿನ್ಯಾಸದ ಅಂಶವಾಗಿದೆ. ಬಾಹ್ಯವನ್ನು ಒಳಗೆ ತರಲು ಮತ್ತು ಜಾಗದಲ್ಲಿ ಶಾಂತತೆಯಯನ್ನು ಕಾಪಾಡಲು ಸಹಾಯ ಮಾಡುತ್ತದೆ. ಇದೇ ಕಾರಣದಿಂದ ಹಲವರು ತಮ್ಮ ಮನೆ ಇಂಟೀರಿಯರ್ಸ್‘ಗೂ ಇದೇ ಬಣ್ಣಗಳನ್ನು ಬಳಸಲು ಮುಂದಾಗುತ್ತಿದ್ದಾರೆ. ಮನೆಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಮನೆ ನೆಮ್ಮದಿ ಕಾಪಾಡುವಲ್ಲೂ ಈ ಬಣ್ಣಗಳು ಉಪಾಯಕಾರಿಯಾಗಿದೆ.
ಇದನ್ನೂ ಓದಿ: Silk Sarees: ಹೆಣ್ಣಿನ ಅಂದವನ್ನು ಹೆಚ್ಚಿಸುವ ರೇಷ್ಮೆ ಸೀರೆಗಳ ಕಲೆಕ್ಷನ್ಸ್ ಇಲ್ಲಿವೆ
ಕೊಹ್ಲಿ–ಅನುಷ್ಕಾ, ರಂಬೀರ್–ಆಲಿಯಾ, ಅಂಕಿತ ಲೋಖಂಡೆ–ವಿಕಿ ಜೈನ್, ನೀತಿ ಟೈಲರ್– ಪರೀಕ್ಷಿತ್ ಬಾವಾ, ಹೀಗೆ ಹತ್ತು ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಮದುವೆಯಲ್ಲಿ ಇದೇ ಭೂಮಿಯ ಬಣ್ಣಗಳ ಅದ್ದೂರಿ ಉಡುಗೆಗಳನ್ನ ಧರಿಸಿ ಸಪ್ತಪದಿ ತುಳಿದಿದ್ದಾರೆ.
Published On - 12:04 pm, Fri, 3 February 23