Braids or open hair: ಮಲಗುವಾಗ ಕೂದಲಿಗೆ ಜಡೆ ಹಾಕಬೇಕೇ, ಬೇಡವೇ ಇಲ್ಲಿದೆ ಉತ್ತರ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 04, 2025 | 5:50 PM

ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಅದನ್ನು ಆರೋಗ್ಯಕರವಾಗಿಡಲು ಆರೈಕೆ ಬಹಳ ಮುಖ್ಯ. ಅದರಲ್ಲಿಯೂ ವಿಶೇಷವಾಗಿ ರಾತ್ರಿ ಮಲಗುವಾಗ ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಲು, ಅದನ್ನು ಹೇಗೆ ಇಟ್ಟುಕೊಳ್ಳುತ್ತೀರಿ ಎಂಬುದರ ಬಗ್ಗೆ ಗಮನ ಹರಿಸುವುದು ಮುಖ್ಯವಾಗುತ್ತದೆ. ಆದರೆ ಜನರು ಇದನ್ನು ನಿರ್ಲಕ್ಷಿಸುತ್ತಾರೆ, ಈ ರೀತಿ ನೀವು ಅರಿತೋ ಅಥವಾ ಅರಿಯದೆಯೋ ಬೆಳೆಸಿಕೊಂಡ ಅಭ್ಯಾಸವು ನಿಮ್ಮ ಕೂದಲಿನ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ.

Braids or open hair: ಮಲಗುವಾಗ ಕೂದಲಿಗೆ ಜಡೆ ಹಾಕಬೇಕೇ, ಬೇಡವೇ ಇಲ್ಲಿದೆ ಉತ್ತರ
ಸಾಂದರ್ಭಿಕ ಚಿತ್ರ
Follow us on

ಬಿಡುವಿಲ್ಲದ ಜೀವನದಲ್ಲಿ, ಕೂದಲಿನ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ. ಆದರೆ ಇದು ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ರಾತ್ರಿ ಮಲಗುವಾಗ ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಲು, ಅದನ್ನು ಹೇಗೆ ಇಟ್ಟುಕೊಳ್ಳುತ್ತೀರಿ ಎಂಬುದರ ಬಗ್ಗೆ ಗಮನ ಹರಿಸುವುದು ಮುಖ್ಯವಾಗುತ್ತದೆ. ಆದರೆ ಜನರು ಇದನ್ನು ನಿರ್ಲಕ್ಷಿಸುತ್ತಾರೆ, ಈ ರೀತಿ ನೀವು ಅರಿತೋ ಅಥವಾ ಅರಿಯದೆಯೋ ಬೆಳೆಸಿಕೊಂಡ ಅಭ್ಯಾಸವು ನಿಮ್ಮ ಕೂದಲಿನ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಕೆಲವರು ಮಲಗುವ ಮೊದಲು ತಮ್ಮ ಕೂದಲನ್ನು ಜಡೆ ಹೆಣೆದು ಇಟ್ಟುಕೊಳ್ಳಲು ಇಷ್ಟಪಡುತ್ತಾರೆ, ಕೆಲವರು ತಮ್ಮ ಕೂದಲನ್ನು ಯಾವುದೇ ರೀತಿಯ ಕ್ಲಿಪ್ ಗಳನ್ನು ಬಳಸದೆಯೇ ಹಾಗೆಯೇ ಬಿಟ್ಟಿಡುತ್ತಾರೆ. ಆದರೆ ಈ ಎರಡು ವಿಧಾನಗಳಲ್ಲಿ ಯಾವುದು ನಿಮ್ಮ ಕೂದಲಿಗೆ ಉತ್ತಮ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಇವೆರಡರಲ್ಲಿ ಉತ್ತಮ ವಿಧಾನವನ್ನು ಆಯ್ಕೆ ಮಾಡಿಕೊಂಡು ಅದನ್ನು ಅನುಸರಿಸುವುದರಿಂದ ನಿಮ್ಮ ಕೂದಲು ಒಡೆಯುವುದನ್ನು ತಡೆಯಬಹುದು. ಮಾತ್ರವಲ್ಲ ಇದು ನಿಮ್ಮ ಕೂದಲನ್ನು ಬಲವಾಗಿ ಮತ್ತು ಹೊಳೆಯುವಂತೆ ಇರಲು ನೋಡಿಕೊಳ್ಳುತ್ತದೆ. ಹಾಗಾದರೆ ಮಲಗುವಾಗ ಕೂದಳಿಗೆ ಜಡೆ ಹಾಕಬೇಕೇ ಅಥವಾ ಹಾಗೆಯೇ ಬಿಟ್ಟರೆ ಒಳ್ಳೆಯದೇ? ಕೂದಲನ್ನು ಆರೋಗ್ಯಕರವಾಗಿ ಮತ್ತು ಸುಂದರವಾಗಿಡಲು ಯಾವ ವಿಧಾನ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

ಜಡೆ ಹಾಕಿಕೊಂಡು ಮಲಗುವುದು

ನಿಮ್ಮ ಕೂದಲು ತುಂಬಾ ಉದ್ದವಿದ್ದರೆ ಸಡಿಲವಾಗಿ ಜಡೆ ಹಾಕಿಕೊಂಡು ಮಲಗುವುದು ಬಹಳ ಉತ್ತಮ. ಇದು ಕೂದಲನ್ನು ಒಡೆಯದಂತೆ ರಕ್ಷಿಸುತ್ತದೆ. ಆದರೆ ಜಡೆಯನ್ನು ತುಂಬಾ ಬಿಗಿಯಾಗಿ ಹಾಕಿಕೊಳ್ಳಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಇಲ್ಲದಿದ್ದರೆ ಇದು ನೆತ್ತಿಗೆ ಒತ್ತಡ ಹೇರಬಹುದು. ಈ ಸಡಿಲವಾದ ಜಡೆ ಕೂದಲಿನ ಬೇರುಗಳನ್ನು ರಕ್ಷಿಸುತ್ತದೆ. ಅವುಗಳ ನೈಸರ್ಗಿಕ ಬೆಳವಣಿಗೆಯ ಪ್ರಕ್ರಿಯೆಯೂ ಉತ್ತಮವಾಗಿರುತ್ತದೆ. ಇದರಿಂದಾಗಿ ಕೂದಲು ಬೇಗ ಉದ್ದ ಬೆಳೆಯುತ್ತದೆ. ಜಡೆ ಹಾಕಿ ಮಲಗುವುದು ತಲೆಯ ಕೂದಲನ್ನು ವ್ಯವಸ್ಥಿತವಾಗಿರಿಸುತ್ತದೆ, ರಾತ್ರಿ ಸಮಯದಲ್ಲಿ ಬೆವರುವ ಸಮಸ್ಯೆಯನ್ನು ಕೂಡ ಕಡಿಮೆ ಮಾಡುತ್ತದೆ. ಈ ವಿಧಾನವು ಬೇಸಿಗೆಯಲ್ಲಿ ವಿಶೇಷವಾಗಿ ಆರಾಮದಾಯಕವಾಗಿದೆ.

ಕೂದಲನ್ನು ತೆರೆದಿಡುವುದು ಅಥವಾ ಹಾಗೆಯೇ ಬಿಟ್ಟುಕೊಂಡು ಮಲಗುವುದು

ನಿಮ್ಮ ಕೂದಲು ಚಿಕ್ಕದಾಗಿದ್ದರೆ ಅಥವಾ ನಿಮ್ಮ ಕೂದಲನ್ನು ಹಾಗೆಯೇ ಬಿಟ್ಟುಕೊಂಡು ಮಲಗಲು ನಿಮಗೆ ಆರಾಮದಾಯಕವಾಗಿದ್ದರೆ, ನಿಮ್ಮ ಕೂದಲನ್ನು ಹಣೆಯಬೇಕು ಎಂಬುದಿಲ್ಲ. ಆದರೆ ಕೂದಲು ಜಟಿಲವಾಗುವುದನ್ನು ಮತ್ತು ಒಡೆಯುವುದನ್ನು ತಡೆಯಲು ರೇಷ್ಮೆ ಅಥವಾ ಸ್ಯಾಟಿನ್ ದಿಂಬುಗಳನ್ನು ಬಳಸಿ. ಇದು ಕೂದಲಿನ ತೇವಾಂಶವನ್ನು ಕಾಪಾಡಿಕೊಳ್ಳುತ್ತದೆ. ಬಿಗಿಯಾದ ಜಡೆ ಅಥವಾ ಪೋನಿಟೆಲ್ನೊಂದಿಗೆ ಮಲಗುವುದು ಕೂದಲಿನ ಬೇರುಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಕೂದಲನ್ನು ಕಟ್ಟದೆಯೇ ಹಾಗೆಯೇ ಬಿಟ್ಟುಕೊಂಡು ಮಲಗುವುದು ನೆತ್ತಿ ಮತ್ತು ಕೂದಲಿನ ಬೇರುಗಳಿಗೆ ಪರಿಹಾರವನ್ನು ನೀಡುತ್ತದೆ, ಇದು ಅವುಗಳ ನೈಸರ್ಗಿಕ ಬೆಳವಣಿಗೆಯ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಇದಲ್ಲದೆ, ಈ ವಿಧಾನ ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಕೂದಲಿನ ಬೇರುಗಳನ್ನು ಪೋಷಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಉಗುರುಗಳು ಆರೋಗ್ಯವನ್ನು ಹೇಳುತ್ತದೆ, ನಿಮ್ಮ ಉಗುರು ಹೀಗಿದ್ದರೆ ಈ ಆರೋಗ್ಯ ಸಮಸ್ಯೆ ಖಂಡಿತ

ಈ ವಿಷಯಗಳನ್ನು ನೆನಪಿನಲ್ಲಿಡಿ

ಮಲಗುವ ಮೊದಲು ನಿಮ್ಮ ಕೂದಲನ್ನು ಲಘುವಾಗಿ ಬಾಚಿಕೊಳ್ಳಿ. ಇದರಿಂದ ಅದು ಒಂದಕ್ಕೊಂದು ಸಿಕ್ಕಿಹಾಕಿಕೊಳ್ಳುವುದಿಲ್ಲ. ಕೂದಲು ಒದ್ದೆಯಾಗಿದ್ದರೆ, ಮೊದಲು ಅವುಗಳನ್ನು ಒಣಗಿಸಿ. ಒದ್ದೆಯಾದ ಕೂದಲು ದುರ್ಬಲವಾಗಿರುತ್ತದೆ ಮತ್ತು ಒಡೆಯಬಹುದು. ವಾರಕ್ಕೊಮ್ಮೆ ಮಾಯಿಶ್ಚರೈಸಿಂಗ್ ಹೇರ್ ಮಾಸ್ಕ್ ಅಥವಾ ಎಣ್ಣೆಯಿಂದ ಕೂದಲನ್ನು ಮಸಾಜ್ ಮಾಡುವುದು ತುಂಬಾ ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ