AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗುರುಗಳು ಆರೋಗ್ಯವನ್ನು ಹೇಳುತ್ತದೆ, ನಿಮ್ಮ ಉಗುರು ಹೀಗಿದ್ದರೆ ಈ ಆರೋಗ್ಯ ಸಮಸ್ಯೆ ಖಂಡಿತ

ಉಗುರುಗಳು ನಿಮ್ಮ ಆರೋಗ್ಯದ ಬಗ್ಗೆ ಹೇಳುತ್ತದೆ. ದುರ್ಬಲ ಉಗುರುಗಳು ಆಂತರಿಕ ಅಂಶಗಳಿಂದ, ಮುಖ್ಯವಾಗಿ ನಮ್ಮ ಆಹಾರದಿಂದ ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. ಪೋಷಕಾಂಶ ಕೊರತೆಯಿಂದಲೇ ಉಗುರುಗಳು ದುರ್ಬಲವಾಗುವುದು. ಈ ಬಗ್ಗೆ ಪೌಷ್ಟಿಕತಜ್ಞ ಸಿಮ್ರುನ್ ಚೋಪ್ರಾ ಅವರು ತಮ್ಮ ಅಧಿಕೃತ Instagram ಪುಟದಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ.

ಉಗುರುಗಳು ಆರೋಗ್ಯವನ್ನು ಹೇಳುತ್ತದೆ, ನಿಮ್ಮ ಉಗುರು ಹೀಗಿದ್ದರೆ ಈ ಆರೋಗ್ಯ ಸಮಸ್ಯೆ ಖಂಡಿತ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Jan 04, 2025 | 5:12 PM

Share

ನಮ್ಮ ದೇಹದ ಪ್ರತಿಯೊಂದು ಭಾಗವು ನಮಗೆ ಮುಖ್ಯವಾಗಿರುತ್ತದೆ. ಇದರಿಂದ ದೇಹದ ಆರೋಗ್ಯ ದೊಡ್ಡ ಹಾನಿಯನ್ನು ಉಂಟು ಮಾಡಬಹುದು. ಉಗುರುಗಳು ದುರ್ಬಲವಾಗಲು ಕಾರಣವೇನು ಎಂಬ ಬಗ್ಗೆ ಪೌಷ್ಟಿಕತಜ್ಞ ಸಿಮ್ರುನ್ ಚೋಪ್ರಾ ಹೇಳಿದ್ದಾರೆ. ನಿಮ್ಮ ಉಗುರುಗಳು ಬೇಗನೇ ಮುರಿಯುತ್ತದೆಯೇ? ಅಥವಾ ಉಗುರು ಬೆಳೆಯುತ್ತಿಲ್ಲವೇ. ಇದಕ್ಕೆ ಕಾರಣ ನಿಮ್ಮ ಉಗುರು ದುರ್ಬಲವಾಗಿದೆ ಎಂದರ್. ಇದಕ್ಕೆ ವಾತಾವರಣ ಹಾಗೂ ಆಗಾಗ್ಗೆ ಕೈ ತೊಳೆಯುವುದು ಕಾರಣವಾಗಿರಬಹುದು ಎಂದು ನಿಮ್ಮ ಕಲ್ಪನೆಯಾಗಿರಬಹುದು. ದುರ್ಬಲ ಉಗುರುಗಳು ಆಂತರಿಕ ಅಂಶಗಳಿಂದ, ಮುಖ್ಯವಾಗಿ ನಮ್ಮ ಆಹಾರದಿಂದ ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. ಪೋಷಕಾಂಶ ಕೊರತೆಯಿಂದಲೇ ಉಗುರುಗಳು ದುರ್ಬಲವಾಗುವುದು. ಈ ಬಗ್ಗೆ ಪೌಷ್ಟಿಕತಜ್ಞ ಸಿಮ್ರುನ್ ಚೋಪ್ರಾ ಅವರು ತಮ್ಮ ಅಧಿಕೃತ Instagram ಪುಟದಲ್ಲಿ ಹಂಚಿಕೊಂಡಿದ್ದಾರೆ.

ನಿಮ್ಮ ಉಗುರುಗಳು ನಿಮ್ಮ ಆರೋಗ್ಯದ ಬಗ್ಗೆ ಸೂಚಿಸುವ 5 ವಿಷಯಗಳು

1. ತೆಳುವಾದ ಮೃದುವಾದ ಉಗುರುಗಳು: ತೆಳುವಾದ ಮತ್ತು ಮೃದುವಾದ ಉಗುರುಗಳು ಅನೇಕರಿಗೆ ತಲೆಬಿಸಿ ಹಾಗೂ ಅದರ ಬಗ್ಗೆ ಕಾಳಜಿಯನ್ನು ಮಾಡುತ್ತಾರೆ. ನೀವು ತೆಳುವಾದ ಮತ್ತು ಮೃದುವಾದ ಉಗುರುಗಳನ್ನು ಹೊಂದಿದ್ದರೆ, ಇದು ವಿಟಮಿನ್ ಬಿ ಕೊರತೆಯನ್ನು ಸೂಚಿಸುತ್ತದೆ. ನಿಮ್ಮ ಆಹಾರದಲ್ಲಿ ನೀವು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಕೊಬ್ಬಿನಾಮ್ಲಗಳ ಕೊರತೆಯನ್ನು ಹೊಂದಿರಬಹುದು.

2. ಚಮಚ ಉಗುರುಗಳು: ಉಗುರುಗಳು ಚಮಚದಂತೆ ಆಕಾರದಲ್ಲಿರುತ್ತವೆ.ನೇರವಾಗಿ ಬೆಳೆಯುವ ಬದಲು, ಅವು ಕಾನ್ಕೇವ್ ಆಗಿ ಕಾಣುತ್ತವೆ. ನೀವು ಚಮಚ ಉಗುರುಗಳನ್ನು ಹೊಂದಿದ್ದರೆ, ನೀವು ರಕ್ತಹೀನತೆ, ಹೈಪೋಥೈರಾಯ್ಡಿಸಮ್ ಅಥವಾ ಯಕೃತ್ತಿನ ಸಮಸ್ಯೆಗಳನ್ನು ಹೊಂದಿರಬಹುದು .ನಿಮ್ಮ ಆಹಾರದಲ್ಲಿ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಸೇರಿಸುವುದು ಅತ್ಯಗತ್ಯ, ಕಬ್ಬಿಣದ ಭರಿತ ಆಹಾರಗಳ ಮೇಲೆ ಗಮನ ನೀಡಬೇಕು.

3.ಬಿಳಿ ಚುಕ್ಕೆಗಳು: ಉಗುರುಗಳ ಮೇಲಿನ ಬಿಳಿ ಚುಕ್ಕೆಗಳು ಕೇವಲ ಚುಕ್ಕೆಗಳಲ್ಲ, ಅದು ನಿಮ್ಮ ಆರೋಗ್ಯದ ಬಗ್ಗೆ ಹಲವಾರು ವಿಷಯಗಳನ್ನು ಬಹಿರಂಗಪಡಿಸಬಹುದು. ಉಗುರುಗಳ ಮೇಲೆ ಬಿಳಿ ಕಲೆಗಳು ಸತು ಕೊರತೆ ಅಥವಾ ಶಿಲೀಂಧ್ರಗಳ ಸೋಂಕಿನ ಸಂಕೇತವಾಗಿರಬಹುದು ಎಂದು ಹೇಳುತ್ತಾರೆ.

4. ಹಳದಿ ಉಗುರುಗಳು: ಸಿಮ್ರುನ್ ಪ್ರಕಾರ, ನಿಮ್ಮ ಉಗುರುಗಳು ಹಳದಿ ಬಣ್ಣಕ್ಕೆ ತಿರುಗಲು ಸಾಮಾನ್ಯ ಕಾರಣವೆಂದರೆ ಅತಿಯಾದ ಧೂಮಪಾನ. ಇದು ಶಿಲೀಂಧ್ರಗಳ ಸೋಂಕು, ಉಸಿರಾಟದ ಕಾಯಿಲೆ, ರುಮಟಾಯ್ಡ್ ಸಂಧಿವಾತ ಅಥವಾ ಥೈರಾಯ್ಡ್ ಕಾಯಿಲೆಯನ್ನು ಸೂಚಿಸುತ್ತದೆ . ಇದಲ್ಲದೆ, ಹಳದಿ ಉಗುರುಗಳು ಮಧುಮೇಹದ ಚಿಹ್ನೆಯಾಗಿರಬಹುದು.

5. ಟೆರ್ರಿ ನೈಲ್ಸ್: ನಿಮ್ಮ ಉಗುರುಗಳು ಈ ರೀತಿ ಕಾಣಿಸಿಕೊಂಡರೆ,ಯಕೃತ್ತು ಅಥವಾ ಮೂತ್ರಪಿಂಡದ ಸಮಸ್ಯೆಗಳ ಸಂಕೇತವಾಗಿರಬಹುದು ಎಂದು ಪೌಷ್ಟಿಕತಜ್ಞರು ಹಂಚಿಕೊಳ್ಳುತ್ತಾರೆ. ನೀವು ಹೃದಯದ ಸಮಸ್ಯೆಯನ್ನು ಸಹ ಅನುಭವಿಸುತ್ತಿರಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ