ಸ್ತನ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುವ ಆಹಾರಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವ ಹಲವಾರು ಸಂಶೋಧನೆಗಳು ನಡೆದಿವೆ. ಆದ್ದರಿಂದ ಮಹಿಳೆಯ ಆಹಾರಕ್ರಮವು ಸ್ತನ ಕ್ಯಾನ್ಸರ್ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ, ನಾವು ಯಾವ ರೀತಿಯ ಆಹಾರಕ್ರಮವನ್ನು ಅನುಸರಿಸುತ್ತೇವೆ, ನಮ್ಮ ಡಯೆಟ್ನಲ್ಲಿ ಯಾವೆಲ್ಲ ಆಹಾರಗಳನ್ನು ಸೇರಿಸಿಕೊಳ್ಳುತ್ತೇವೆ ಎಂಬುದು ಕೂಡ ಬಹಳ ಮುಖ್ಯ.
ಆರ್ಗಾನಿಕ್ ಆಹಾರಗಳು, ಕಡಿಮೆ ಕೀಟನಾಶಕಗಳ ಬಳಕೆಯ ಆಹಾರಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ನಾವು ಸೇವಿಸುವ ಪ್ರತಿಯೊಂದು ತುತ್ತು ಕೂಡ ನಮ್ಮ ಆಯ್ಕೆಯೇ ಆಗಿರಬೇಕು. ಒಂದೊಂದು ತುತ್ತಿನಲ್ಲೂ ಪೌಷ್ಟಿಕಾಂಶಗಳು ಇರುತ್ತವೆ. ನಮ್ಮ ದೇಹಕ್ಕೆ ಯಾವ ರೀತಿಯ ಆಹಾರ ಬೇಕೆನ್ನುವುದು ನಮ್ಮ ಆಯ್ಕೆಯಾಗಿರಬೇಕು. ಆದಷ್ಟೂ ಆರ್ಗಾನಿಕ್ ಆಹಾರವನ್ನೇ ಆಯ್ಕೆ ಮಾಡಿಕೊಳ್ಳಬೇಕು. ಸ್ತನ ಕ್ಯಾನ್ಸರ್‌ನಂತಹ ಕಾಯಿಲೆಗಳ ವಿರುದ್ಧ ನಮ್ಮನ್ನು ರಕ್ಷಿಸಿಕೊಳ್ಳಲು ಇದು ಉತ್ತಮ ನಿರ್ಧಾರವಾಗಿದೆ. ನಾವು ತಿನ್ನುವ ಆಹಾರ ಕೂಡ ಆರೋಗ್ಯದ ಅಪಾಯಗಳ ಜೊತೆ ನಿಕಟ ಸಂಬಂಧ ಹೊಂದಿದೆ. ಹೀಗಾಗಿ ಹಾನಿಕಾರಕ ರಾಸಾಯನಿಕಗಳಿಲ್ಲದ ಆಹಾರವನ್ನು ಸೇವಿಸುವುದು ಅತ್ಯಗತ್ಯ.
ಇದನ್ನೂ ಓದಿ: ಶೇ.59ರಷ್ಟು ಮಹಿಳೆಯರಿಗೆ ಸ್ತನ ಕ್ಯಾನ್ಸರ್; ಈ 5 ಲಕ್ಷಣಗಳನ್ನು ನಿರ್ಲಕ್ಷ್ಯಿಸಬೇಡಿ
ಆಹಾರದ ಆಯ್ಕೆಗಳು ಸ್ತನ ಕ್ಯಾನ್ಸರ್ ಮೇಲೆ ಹೇಗೆ ಪರಿಣಾಮ ಬೀರುತ್ತವೆ?:
ಧಾನ್ಯಗಳು, ಸೇಬು ಮತ್ತು ಪೇರಳೆಗಳಂತಹ ಹಣ್ಣುಗಳು ಮತ್ತು ಕ್ಯಾರೆಟ್ ಮತ್ತು ಎಲೆಗಳ ಸೊಪ್ಪಿನಂತಹ ತರಕಾರಿಗಳಂತಹ ಫೈಬರ್ ಸಮೃದ್ಧವಾಗಿರುವ ಆಹಾರಗಳು ಚಿಕ್ಕ ವಯಸ್ಸಿನಿಂದಲೇ ಆರೋಗ್ಯಕ್ಕೆ ಭದ್ರ ಬುನಾದಿ ಹಾಕುತ್ತದಎ. ಫೈಬರ್‌ನ ಶಕ್ತಿಯು ಹಾರ್ಮೋನ್ ಸಮತೋಲನವನ್ನು ಬೆಂಬಲಿಸುವ ಮತ್ತು ಜೀರ್ಣಕಾರಿ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದು ಕ್ಯಾನ್ಸರ್ ತಡೆಗಟ್ಟುವಲ್ಲಿ ನಿರ್ಣಾಯಕ ಅಂಶಗಳಾಗಿವೆ.
ಸಾವಯವ ಆಹಾರದ ಸ್ತನ ಕ್ಯಾನ್ಸರ್ ಸೇರಿದಂತೆ ವಿವಿಧ ಆರೋಗ್ಯ ಅಪಾಯಗಳಿಂದ ನಮ್ಮನ್ನು ರಕ್ಷಿಸುತ್ತದೆ. ಹೂಕೋಸು, ಎಲೆಕೋಸು ಮತ್ತು ಕೋಸುಗಡ್ಡೆಯಂತಹ ಕ್ರೂಸಿಫೆರಸ್ ತರಕಾರಿಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಿವೆ. ಇವುಗಳ ನಿಯಮಿತ ಸೇವನೆಯು ಆಕ್ರಮಣಕಾರಿ ಕ್ಯಾನ್ಸರ್ ಪ್ರಕಾರಗಳ ವಿರುದ್ಧ ನಮ್ಮನ್ನು ರಕ್ಷಿಸುತ್ತವೆ.
ಇದನ್ನೂ ಓದಿ: ಸ್ತನ ಕ್ಯಾನ್ಸರ್ ಬಗ್ಗೆ ಇರುವ 15 ತಪ್ಪು ಕಲ್ಪನೆಗಳಿವು
ಕೆಲವು ಅಧ್ಯಯನಗಳು ನಿಮ್ಮ ಆಹಾರದಲ್ಲಿ ಮಿಲೆಟ್ ಧಾನ್ಯಗಳನ್ನು ಸೇರಿಸುವುದರಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸೂಚಿಸುತ್ತವೆ. ಸಿರಿಧಾನ್ಯಗಳು ಉತ್ಕರ್ಷಣ ನಿರೋಧಕಗಳು, ಫೈಬರ್ ಅಂಶಗಳು ಸಮೃದ್ಧವಾಗಿರುವ ಧಾನ್ಯಗಳಾಗಿವೆ. ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತವೆ, ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುವ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ.
ಸಿರಿ ಧಾನ್ಯಗಳು ಸ್ತನ ಕ್ಯಾನ್ಸರ್ ಅಪಾಯದ ಮೇಲೆ ಪ್ರಭಾವ ಬೀರುವ ಹಾರ್ಮೋನ್‌ಗಳು ಮತ್ತು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುವ ಅಂಶಗಳೊಂದಿಗೆ ಸಂಬಂಧ ಹೊಂದಿವೆ. ಮಿಲೆಟ್ನಲ್ಲಿನ ಫೈಬರ್ ಅಂಶವು ಜೀರ್ಣಕಾರಿ ಆರೋಗ್ಯವನ್ನು ಉತ್ತೇಜಿಸುವಲ್ಲಿ ಪಾತ್ರವನ್ನು ವಹಿಸುತ್ತದೆ. ಇದರ ಜೊತೆಗೆ ಸ್ತನ ಕ್ಯಾನ್ಸರ್ ತಡೆಗಟ್ಟುವಿಕೆಯ ಸಮಗ್ರ ವಿಧಾನವು ಆರೋಗ್ಯಕರ ಜೀವನಶೈಲಿ, ನಿಯಮಿತ ವ್ಯಾಯಾಮವನ್ನು ಒಳಗೊಂಡಿರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ