ಶೇ.59ರಷ್ಟು ಮಹಿಳೆಯರಿಗೆ ಸ್ತನ ಕ್ಯಾನ್ಸರ್; ಈ 5 ಲಕ್ಷಣಗಳನ್ನು ನಿರ್ಲಕ್ಷ್ಯಿಸಬೇಡಿ
ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಮತೋಲಿತ ಆಹಾರ ಮತ್ತು ಆಗಾಗ ವ್ಯಾಯಾಮವನ್ನು ಮಾಡಬೇಕು. ಹಾಗೇ, ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಬೇಕು. ಸ್ತನ ಕ್ಯಾನ್ಸರ್ 161 ದೇಶಗಳಲ್ಲಿ ಮಹಿಳೆಯರಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಕ್ಯಾನ್ಸರ್ ಆಗಿದೆ.
ಇತ್ತೀಚೆಗೆ ಸ್ತನ ಕ್ಯಾನ್ಸರ್ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಸುಮಾರು ಶೇ. 59ರಷ್ಟು ಮಹಿಳೆಯರು ಸಾಮಾನ್ಯವಾಗಿ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಶೇ. 11ರಷ್ಟು ಮಹಿಳೆಯರಿಗೆ ಮೆಟಾಸ್ಟಾಟಿಕ್ ಅಥವಾ ಅದರ ನಂತರದ ಹಂತದಲ್ಲಿ ರೋಗದ ಬಗ್ಗೆ ಗೊತ್ತಾಗುತ್ತದೆ. ಶೇ. 30ರಷ್ಟು ಜನರಿಗೆ ಆರಂಭದ ಹಂತದಲ್ಲೇ ಈ ಕ್ಯಾನ್ಸರ್ ಇರುವ ಬಗ್ಗೆ ಗೊತ್ತಾಗುತ್ತದೆ.
ಸ್ತನ ಕ್ಯಾನ್ಸರ್‌ನ 5 ಆರಂಭಿಕ ಲಕ್ಷಣಗಳು:
ಗಡ್ಡೆಯ ರಚನೆ:
ಅಂಡರ್ ಆರ್ಮ್ ಪ್ರದೇಶದಲ್ಲಿ ಗೆಡ್ಡೆಗಳ ರಚನೆಯು ಮೊದಲ ಎಚ್ಚರಿಕೆಯ ಚಿಹ್ನೆಗಳಲ್ಲಿ ಒಂದಾಗಿದೆ. ಅದನ್ನು ಎಂದಿಗೂ ನಿರ್ಲಕ್ಷಿಸಬಾರದು.
ಇದನ್ನೂ ಓದಿ: ವಾಯು ಮಾಲಿನ್ಯದಿಂದ ಕ್ಯಾನ್ಸರ್, ಹೃದಯಾಘಾತ ಹೆಚ್ಚಳ; ಏನಿದು ಶಾಕಿಂಗ್ ವಿಷಯ?
ಸ್ತನ ಗಾತ್ರದಲ್ಲಿ ಬದಲಾವಣೆ:
ಸ್ತನದ ಗಾತ್ರ, ಮೃದುತ್ವ, ವಿನ್ಯಾಸದಲ್ಲಿನ ಬದಲಾವಣೆಗಳನ್ನು ನಿರ್ಲಕ್ಷ್ಯ ಮಾಡಬೇಡಿ.
ಮೊಲೆತೊಟ್ಟುಗಳಿಂದ ನೀರು ಸ್ರವಿಸುವಿಕೆ:
ಸ್ತನ ಕ್ಯಾನ್ಸರ್‌ನ ಮತ್ತೊಂದು ಪ್ರಮುಖ ಲಕ್ಷಣವೆಂದರೆ ಮೊಲೆತೊಟ್ಟುಗಳ ಭಾಗದಿಂದ ಅತಿಯಾದ ನೀರು ಅಥವಾ ದ್ರವ ಸ್ರವಿಸುವುದು. ಇದು ರಕ್ತದ ಬಣ್ಣ ಮತ್ತು ಹಳದಿ ಮಿಶ್ರಿತ ಬಣ್ಣದಲ್ಲಿಯೂ ಇರುತ್ತದೆ.
ಕಾಲರ್‌ಬೋನ್‌ನಲ್ಲಿ ಊತ:
ಕಾಲರ್‌ಬೋನ್ ಅಥವಾ ಆರ್ಮ್ಪಿಟ್ ಪ್ರದೇಶದ ಬಳಿ ಊತವು ಸ್ತನ ಕ್ಯಾನ್ಸರ್‌ನ ಮತ್ತೊಂದು ಲಕ್ಷಣವಾಗಿದೆ.
ನೋವು:
ಗಡ್ಡೆಯ ಬಳಿ ಮೃದುತ್ವ ಮತ್ತು ನೋವು ಕಂಡುಬಂದರೆ ತಕ್ಷಣವೇ ವೈದ್ಯರ ಬಳಿ ತೆರಳಬೇಕು.
ಇದನ್ನೂ ಓದಿ: ಮಹಿಳೆಯರಲ್ಲಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು ಹೇಗೆ?
ಇತ್ತೀಚೆಗೆ ಜಗತ್ತಿನಲ್ಲಿ ಪತ್ತೆಯಾಗುತ್ತಿರುವ ಅತಿ ಹೆಚ್ಚು ಕ್ಯಾನ್ಸರ್ಗಳ ಪೈಕಿ ಸ್ತನ ಕ್ಯಾನ್ಸರ್ 2ನೇ ಸ್ಥಾನದಲ್ಲಿದೆ. ವಿಟಮಿನ್ ಡಿ ಮತ್ತು ಸ್ತನ ಕ್ಯಾನ್ಸರ್ ನಡುವಿನ ಸಂಬಂಧದ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ. ಕಡಿಮೆ ವಿಟಮಿನ್ ಡಿ ಮಟ್ಟಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಯಿರುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ವಿಟಮಿನ್ ಡಿ ರೋಗನಿರೋಧಕ ಕಾರ್ಯ ಮತ್ತು ಜೀವಕೋಶದ ಬೆಳವಣಿಗೆಯನ್ನು ನಿಯಂತ್ರಿಸುವ ಮೂಲಕ ಕ್ಯಾನ್ಸರ್ ರಚನೆಯ ಮೇಲೆ ಪರಿಣಾಮ ಬೀರುತ್ತದೆ.
ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಮತೋಲಿತ ಆಹಾರ ಮತ್ತು ಆಗಾಗ ವ್ಯಾಯಾಮವನ್ನು ಮಾಡಬೇಕು. ಹಾಗೇ, ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಬೇಕು. ಸ್ತನ ಕ್ಯಾನ್ಸರ್ 161 ದೇಶಗಳಲ್ಲಿ ಮಹಿಳೆಯರಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಕ್ಯಾನ್ಸರ್ ಆಗಿದೆ. 98 ದೇಶಗಳಲ್ಲಿ ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಸ್ತನ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ. ಇತ್ತೀಚಿನ ಸಂಶೋಧನೆಯು ವಿಟಮಿನ್ ಡಿ ರಿಸೆಪ್ಟರ್ (ವಿಡಿಆರ್) ಜೀನ್‌ಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಹೇಳಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ