ಬೆತ್ತಲೆಯಾಗಿ ಓಡಾಡಲು ಈತನಿಗೆ ಬಾಡಿಗೆಗೆ ಗಾರ್ಡನ್ ಬೇಕಂತೆ: ವೃದ್ದನ ಹುಚ್ಚಾಸೆ ಹಿಂದಿನ ಕಥೆ ಇಲ್ಲಿದೆ

ಬ್ರಿಟನ್ ವ್ಯಕ್ತೊಯೊಬ್ಬ ಬೆತ್ತಲೆಯಾಗಿ ಓಡಾಡಲು ಬಾಡಿಗೆಗೆ ಗಾರ್ಡನ್​ ಹುಡುಕುತ್ತಿದ್ದಾನೆ. ವೃದ್ದನ ಹುಚ್ಚಾಸೆ ಹಿಂದಿನ ಕಥೆ ಇಲ್ಲಿದೆ.

ಬೆತ್ತಲೆಯಾಗಿ ಓಡಾಡಲು ಈತನಿಗೆ ಬಾಡಿಗೆಗೆ ಗಾರ್ಡನ್ ಬೇಕಂತೆ: ವೃದ್ದನ ಹುಚ್ಚಾಸೆ ಹಿಂದಿನ ಕಥೆ ಇಲ್ಲಿದೆ
Stuart Haywood
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Nov 13, 2022 | 4:51 PM

ಜೀವನದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಆಸೆ ಇದ್ದೇ ಇರುತ್ತೆ. ಆದ್ರೆ,  ಈ ಬ್ರಿಟನ್ ಪ್ರಜೆಗೆ ವಿಚಿತ್ರ ಆಸೆ ಹೊಂದಿದ್ದಾರೆ. ಗಾರ್ಡನ್​ನಲ್ಲಿ ಬೆತ್ತಲೆಯಾಗಿ ಆಯಾಗಿ ಸಮಯಕ ಕಳೆಯುವುದೇ ಈ ಮನುಷ್ಯ ತುಂಬ ಆಸೆಯಂತೆ. ಹೌದು..ಅಚ್ಚರಿ ಜೊತೆಗೆ ವಿಚಿತ್ರ ಎನಿಸಿದರೂ ಸತ್ಯ.

ಹಣಕ್ಕಾಗಿ ಕಟ್ಟಿಕೊಂಡ ಪತ್ನಿಯನ್ನೇ ಬೇರೊಬ್ಬನಿಗೆ ಮಾರಾಟ ಮಾಡಿ ಮದ್ವೆ ಮಾಡಿಸಿದ ಪತಿರಾಯ!

ಹೌದು…ಬ್ರಿಟನ್ ಪ್ರಜೆಯಾಗಿರುವ 86 ವರ್ಷದ ಪರಿಸರವಾದಿ ಸ್ಟುವರ್ಟ್ ಹವುಡ್​ಗೆ ಮೈಮೇಲೆ ಬಟ್ಟೆ ಇಲ್ಲದೇ ಆಯಾಗಿ ಬೆತ್ತಲೆಯಾಗಿ ಓಡಾಡುವುದಂದ್ರೆ ಇಷ್ಟವಂತೆ. ಈ ಹಿನ್ನೆಲೆಯಲ್ಲಿ ಬೆತ್ತಲೆಯಾಗಿ ಓಡಾಡಲು ಸ್ಟುವರ್ಟ್ ಹವುಡ್​, ಬಾಡಿಗೆ ಉದ್ಯಾನವನವನ್ನ ಹುಡುಕುತ್ತಿದ್ದಾರೆ.

ಸ್ಟುವರ್ಟ್ ಹವುಡ್​ಗೆ 2008 ರಿಂದಲೂ ಬೆತ್ತಲೆಯಾಗಿ ಓಡಾಡುವ ಅಭ್ಯಾಸ ಇದೆ. ಅಂದಿನಿಂದ ಸಮಯ ಸಿಕ್ಕಾಗೆಲ್ಲ ಕೆಲ ಕಡೆ ಹೋಗಿ ಉದ್ಯಾನವನದಲ್ಲಿ ಬೆತ್ತಲೆಯಾಗಿ ಸುತ್ತಾಡಿ ತಮ್ಮ ಆಸೆ ಈಡೇರಿಸಿಕೊಳ್ಳುತ್ತಿದ್ದಾರೆ. ಆದ್ರೆ, ಇದೀಗ ವಯಸ್ಸಾಗಿದ್ದರಿಂದ ಅವರು ಬೇರೆ ಕರೆ ಹೋಗಲು ಸಾಧ್ಯವಾಗುತ್ತಿಲ್ಲ.

14 ವರ್ಷದ ಹಿಂದೆ, ದಕ್ಷಿಣ ಡರ್ಬಿಶೈರ್‌ನ ಸ್ಮಾಡಿನ್ ‌ಕೋಟ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸ್ಟುವರ್ಟ್ ಮತ್ತು ಇವರ ಪತ್ನಿ ಭಾಗವಹಿಸಿದ್ದರು. ಅಲ್ಲಿ ತೋರಿಸಲಾದ ಸಾಕ್ಷ್ಯಚಿತ್ರ ವೀಕ್ಷಿಸಿ, ಹಾಗೂ ಅಲ್ಲಿನ ಸೆಷನ್‌ನಲ್ಲಿ ಭಾಗವಹಿಸಿದ್ದ ನಂತರ ಇವರು ಜೀವನ ನೋಡುವ ದೃಷ್ಟಿಯೇ ಬದಲಾಗಿದೆ. ಪ್ರತಿವರ್ಷ ಸೈಗ್ರೆಸ್ ಬಳಿಯ ಲೇಕ್ ಸೈಡ್ ಫಾರ್ಮಗೆ, ವರ್ಷಕ್ಕೆ ಏನಿಲ್ಲ ಅಂದರೂ ಎರಡು ಬಾರಿ ಇವರು ಭೇಟಿ ಕೊಟ್ಟು, ಅಲ್ಲಿ ಕೆಲ ದಿನ ಬೆತ್ತಲೆಯಾಗಿ ಓಡಾಡಿ ಬರುತ್ತಿದ್ದರು. ಆದರೆ ಈಗ ವಯಸ್ಸಾದ ಕಾರಣ ಅಷ್ಟು ದೂರ ಪ್ರಯಾಣ ಮಾಡುವುದು ಕಷ್ಟವಾಗಿದೆ. ಈ ಕಾರಣಕ್ಕೆ ಸ್ಟುವರ್ಟ್ ಹವುಡ್ ಬೆತ್ತಲೆಯಾಗಿ ಓಡಾಡಲು ಈಗ ತಮ್ಮ ಮನೆಯ ಸುತ್ತಾಮುತ್ತ ತೋಟಗಳನ್ನ ಹುಡುಕುತ್ತಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೊಂಡಿರುವ ಸ್ಟುವರ್ಟ್, ನನಗೆ ಬೆತ್ತಲೆಯಾಗಿ ಓಡಾಡುವುದಕ್ಕೆ ಖುಷಿಯಾಗುತ್ತೆ. ನಾನು ಸ್ವತಂತ್ರವಾಗಿದ್ದೇನೆ ಅನ್ನೋ ಭಾವ. ಬೆತ್ತಲೆಯಾಗುವುದಕ್ಕೆ ವಯಸ್ಸು ಅಡ್ಡಿ ಬರುವುದಿಲ್ಲ. ನಿಮ್ಮ ದೇಹದ ಬಗ್ಗೆ ಹೆಮ್ಮೆ ಇರಬೇಕೇ ವಿನಃ ನಾಚಿಕೆಯಲ್ಲ. ಯಾರಾದರೂ ಬಾಡಿಗೆಗೆ ತೋಟ ಕೊಟ್ಟಿದ್ದೇ ಆದಲ್ಲಿ ಅವರಿಗೆ ಬಾಡಿಗೆ ಹಣ ಕೊಡುವುದಲ್ಲದೇ ತೋಟದ ಮಾಲೀಕನಿಗೆ ಉದ್ಯಾನವನದ ಕುರಿತಾಗಿ ಉಪಯುಕ್ತವಾದ ಕೆಲ ಸಲಹೆಗಳನ್ನು ನೀಡಲು ಸಿದ್ಧನಿದ್ದೇನೆ ಎಂದಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:43 pm, Sun, 13 November 22

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ