Diabetes diet: ಪಪ್ಪಾಯ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದೆ?

ಮಧುಮೇಹಿಗಳು ಆದಷ್ಟು ಆರೋಗ್ಯಕರ ಜೀವನಶೈಲಿ ಹಾಗೂ ಆಹಾರ ಕ್ರಮಗಳನ್ನು ಪಾಲಿಸುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನವರು ಹಣ್ಣುಗಳ ಸೇವನೆಯನ್ನು ಮಾಡುತ್ತಾರೆ. ಇನ್ನು ಸಾಮಾನ್ಯವಾಗಿ ಲಭ್ಯವಿರುವಂತಹ ಪಪ್ಪಾಯಿ ಮಧುಮೇಹಿಗಳಿಗೆ ಉತ್ತಮವೇ? ಅದರ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ.

Diabetes diet: ಪಪ್ಪಾಯ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದೆ?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: May 10, 2023 | 9:19 AM

ಮಧುಮೇಹವು ಜೀವನಶೈಲಿಯ ಕಾಯಿಲೆಯಾಗಿದ್ದು, ಅದು ರಕ್ತದಲ್ಲಿನ ಸಕ್ಕರೆಯ ಮಟ್ಟ ಅಥವಾ ರಕ್ತದಲ್ಲಿನ ಗ್ಲೂಕೋಸ್ ಅಂಶವು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾದಾಗ ಸಂಭವಿಸುತ್ತದೆ. ಮಧುಮೇಹ ಮತ್ತು ಆಹಾರದ ನಡುವೆ ನಿಕಟವಾದ ಸಂಬಂಧವಿದೆ. ಜೀವನಶೈಲಿ ಮತ್ತು ಮತ್ತು ಆಹಾರ ಪದ್ಧತಿಗಳು ಸೇರಿದಂತೆ ಹಲವಾರು ಅಂಶಗಳು ಮಧುಮೇಹದ ಬೆಳವಣಿಗೆಗೆ ಕಾರಣವಾಗಬಹುದು. ಹಾಗಾಗಿ ಮಧುಮೇಹದ ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ನಾವು ಸೇವಿಸುವ ಆಹಾರಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆಹಾರದ ಆಯ್ಕೆಯಲ್ಲಿ ಹಣ್ಣು ಎಲ್ಲಾ ಜನರಿಗೆ ಯೋಗ್ಯವಾಗಿದೆ ಜೊತೆಗೆ ಹಣ್ಣುಗಳು ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತವೆ. ಆದರೂ ಮಧುಮೇಹ ಹೊಂದಿರುವ ರೋಗಿಗೆ ಹಣ್ಣಿನಲ್ಲಿರುವ ಸಕ್ಕರೆ ಅಂಶದ ಬಗ್ಗೆ ಜಾಗರೂಕವಾಗಿರಬೇಕು. ಹಾಗಾಗಿ ಮಧುಮೇಹ ಹೊಂದಿರುವ ಜನರಿಗೆ ಪಪ್ಪಾಯಿ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಗ್ಲೆಸೆಮಿಕ್ ಸೂಚ್ಯಂಕವು ಮಧ್ಯಮವಾಗಿದ್ದು, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹಠಾತ್ ಏರಿಕೆಗೆ ಕಾರಣವಾಗುವುದಿಲ್ಲ. ಅಲ್ಲದೆ ಪಪ್ಪಾಯವು ನೈಸರ್ಗಿಕ ಉತ್ಕರ್ಷಣ ನಿರೋಧಕಗಳಾದ ಲೈಕೋಪಿನ್ ಮತ್ತು ಫ್ಲೇವನಾಯ್ಡ್ ಗಳನ್ನು ಹೊಂದಿರುತ್ತವೆ.

ಮಧುಮೇಹಿಗಳಿಗೆ ಪಪ್ಪಾಯಿ ಹೇಗೆ ಪ್ರಯೋಜನಕಾರಿ?

ಪಪ್ಪಾಯಿಯು ಗ್ಲೆಸೆಮಿಕ್ ಸೂಚ್ಯಂಕ (ಜಿಐ) ಪ್ರಮಾಣದಲ್ಲಿ ಕಡಿಮೆಯಾಗಿದೆ, ಅಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸುವುದಿಲ್ಲ. ಇದು 60 ಜಿಐ ನ್ನು ಹೊಂದಿದೆ, ಇದು ಮಧುಮೇಹಿಗಳಿಗೆ ಸುರಕ್ಷಿತವಾಗಿದೆ.

ಪಪ್ಪಾಯಿ ಪಪೈನ್ ಮತ್ತು ಚೈಮೊಪಪೈನ್ ಎಂಬ ಕಿಣ್ವಗಳನ್ನು ಹೊಂದಿರುತ್ತವೆ. ಇದು ಕಾರ್ಬೋಹೈಡ್ರೇಟ್, ಪ್ರೋಟಿನ್ ಮತ್ತು ಕೊಬ್ಬನ್ನು ಸುಲಭವಾಗಿ ಜೀರ್ಣವಾಗುವ ರೂಪಕಗಳಾಗಿ ವಿಭಜಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಹೆಚ್ಚಳವನ್ನು ತಡೆಯುತ್ತದೆ.

ಪಪ್ಪಾಯಿಯಲ್ಲಿರುವ ನಾರಿನಾಂಶವು ರಕ್ತದ ಹರಿವಿಗೆ ಸಕ್ಕರೆಯನ್ನು ಹೀರಿಕೊಳ್ಳುವುದನ್ನು ನಿಧಾನಗೊಳಿಸುವ ಮೂಲಕ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಮತ್ತು ಮಲಬದ್ಧತೆಯನ್ನು ತಡೆಯುತ್ತದೆ.

ಪಪ್ಪಾಯಿಯು ವಿಟಮಿನ್ ಸಿ ಮತ್ತು ಎ ಅಂಶಗಳಿಂದ ಸಮೃದ್ಧವಾಗಿದೆ. ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾಗಿದ್ದು, ಇದು ಮಧುಮೇಹಕ್ಕೆ ಸಂಬಂಧಿಸಿದ ತೊಡಕುಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪಪ್ಪಾಯಿಯನ್ನು ತಿನ್ನುವುದರಿಂದ ಮಧುಮೇಹದ ಇತರ ದೀರ್ಘಕಾಲದ ತೊಡಕುಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ತಡೆಯಲು ಸಹಾಯ ಮಾಡುತ್ತದೆ.

ಪಪ್ಪಾಯಿಯು ಫ್ಲೆವನಾಯ್ಡ್ ಗಳನ್ನು ಹೊಂದಿರುತ್ತವೆ. ಇದು ನಿಮ್ಮ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಇದನ್ನೂ ಓದಿ:Diabetes Diet: ಈ ಬೇಸಿಗೆಯಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಮಧುಮೇಹಿಗಳು ಸೇವಿಸಬೇಕಾದ 5 ಪಾನೀಯಗಳು

ಪಪ್ಪಾಯಿಯನ್ನು ಸೇವಿಸಲು ಉತ್ತಮ ಮಾರ್ಗ ಯಾವುದು?

ತಾಜಾ, ಮಾಗಿದ ಪಪ್ಪಾಯಿಯನ್ನು ಲಘು ಆಹಾರವಾಗಿ ಅಥವಾ ಊಟದ ಭಾಗವಾಗಿ ಸೇವಿಸಿ. ಕತ್ತರಿಸಿದ ಪಪ್ಪಾಯಿಯನ್ನು ಫ್ರೂಟ್ ಸಲಾಡ್ ಅಥವಾ ಸ್ಮೂಥಿ ರೂಪದಲ್ಲಿ ಸೇವಿಸಿ. ಆದರೂ ಪಪ್ಪಾಯವನ್ನು ಮಿತವಾಗಿ ತಿನ್ನುವುದು ಉತ್ತಮ. ಏಕೆಂದರೆ ಯಾವುದೇ ಹಣ್ನಿನ ಹೆಚ್ಚಿನ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟದ ಹೆಚ್ಚಳಕ್ಕೆ ಕಾರಣವಾಗಬಹುದು.

ಪಪ್ಪಾಯಿಯನ್ನು ದಿನದಲ್ಲಿ ಯಾವಾಗ ಬೇಕಾದರೂ ಸೇವಿಸಬಹುದಾದರೂ, ಉಪಹಾರ ಮೆನುವಿನಲ್ಲಿ ಅದನ್ನು ಹೆಚ್ಚಾಗಿ ಸೇವಿಸಲು ಸಲಹೆ ನೀಡಲಾಗುತ್ತದೆ. ಈ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್ ಗಳು ನಮ್ಮ ದೇಹವನ್ನು ದಿನಪೂರ್ತಿ ವಿಷಮುಕ್ತವಾಗಿಡಲು ಸಹಾಯ ಮಾಡುತ್ತದೆ. ಮತ್ತು ಊಟದ ನಡುವಿನ ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹಿ ರೋಗಿಗೆ ತುಂಬಾ ಮುಖ್ಯವಾಗಿದೆ.

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ