Diabetes : ಮಧುಮೇಹದವರು ಬಾಳೆಹಣ್ಣನ್ನು ತಿನ್ನಬಹುದು ? ವೈದ್ಯರ ಸಲಹೆ ಏನು ?

ಹಸಿರು ಬಾಳೆಹಣ್ಣುಗಳು ಸುರಕ್ಷಿತವಾಗಿದ್ದರೂ, ನಿಯಂತ್ರಿತ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೊಂದಿರುವ ರೋಗಿಗಳು ಹಳದಿ ಬಾಳೆಹಣ್ಣುಗಳನ್ನು ಸಹ ಸೇವನೆ ಮಾಡಬಹುದು - ಆದರೆ ಅವು ಕಂದು ಬಣ್ಣದ ಚುಕ್ಕೆಗಳನ್ನು ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳಿ, ಏಕೆಂದರೆ  ಬಾಳೆಹಣ್ಣಿನಲ್ಲಿರುವ ಪಿಷ್ಟವು ನೈಸರ್ಗಿಕ ಸಕ್ಕರೆಯಾಗಿ ಪರಿವರ್ತನೆಯಾಗುತ್ತದೆ ಎಂಬ ಅಂಶವನ್ನು ಸೂಚಿಸುತ್ತದೆ.

Diabetes : ಮಧುಮೇಹದವರು ಬಾಳೆಹಣ್ಣನ್ನು ತಿನ್ನಬಹುದು ? ವೈದ್ಯರ ಸಲಹೆ ಏನು ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 09, 2022 | 6:12 PM

ಮಧುಮೇಹದವರು ಯಾಕೆ ಬಾಳೆಹಣ್ಣನ್ನು ತಿನ್ನಬಾರದು ಎಂದು ಹೇಳುತ್ತಾರೆ. ಆದರೆ ಬಾಳೆಹಣ್ಣಿನಿಂದ ನಮ್ಮ ದೇಹದ ಮೇಲೆ ಯಾವ ರೀತಿಯ ಪರಿಣಾಮ ಇದೆ. ಈ ಬಗ್ಗೆ ವೈದ್ಯರು ಹೇಳೊದೇನು? ಮಧುಮೇಹದವರು ಬಾಳೆಹಣ್ಣನ್ನು ತಿನ್ನಬಹುದ, ಹಲವು ಪ್ರಶ್ನೆಗಳು ನಮ್ಮಲ್ಲಿ ಮೂಡುವುದು ಸಹಜ ಆದರೆ ವೈದ್ಯ ಸಲಹೆ ಏನು ಎಂಬುದನ್ನು ನಾವು ಇಲ್ಲಿ ತಿಳಿದುಕೊಳ್ಳಬಹುದು. ಪ್ರಮಾಣೀಕೃತ ಕ್ಲಿನಿಕಲ್ ಡಯೆಟಿಷಿಯನ್, ಉಪನ್ಯಾಸಕ, ಮಧುಮೇಹ ಶಿಕ್ಷಣತಜ್ಞ ಮತ್ತು ನ್ಯೂಟ್ರ್ ಸಂಸ್ಥಾಪಕ ಲಕ್ಷಿತಾ ಜೈನ್ ಹೇಳಿದರು. ಖಾಸಗಿ ಮಾಧ್ಯಮಕ್ಕೆ ಪ್ರಮಾಣೀಕೃತ ಕ್ಲಿನಿಕಲ್ ಡಯೆಟಿಷಿಯನ್, ಉಪನ್ಯಾಸಕ, ಮಧುಮೇಹ ಶಿಕ್ಷಣತಜ್ಞ ಮತ್ತು ನ್ಯೂಟ್ರ್ ಸಂಸ್ಥಾಪಕ ಲಕ್ಷಿತಾ ಜೈನ್  ಸಂದರ್ಶನ ನೀಡಿರುವಂತೆ  ಮಧುಮೇಹ ಅಥವಾ ಪೂರ್ವ-ಮಧುಮೇಹದಿಂದ ಬಳಲುತ್ತಿರುವವರು ತಮ್ಮ ಆಹಾರ ಪದ್ಧತಿಯಲ್ಲಿ ಬಾಳೆಹಣ್ಣನ್ನು ಸೇವನೆ ಮಾಡಬಾರದು ಎಂದು ತಿಳಿದುಕೊಂಡಿದ್ದಾರೆ . “ಆದರೆ, ಡಯೆಟಿಷಿಯನ್ ಆಗಿ, ಮಧುಮೇಹಿಗಳು ಬಾಳೆಹಣ್ಣುಗಳನ್ನು ಹೊಂದಬಹುದು ಎಂದು ನಾನು ಸುರಕ್ಷಿತವಾಗಿ ಹೇಳಬಲ್ಲೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಸ್ನೇಹವು ಮನಸ್ಸಿನ ಮೇಲೆ ಹೇಗೆ ಸಕಾರಾತ್ಮಕ ಪರಿಣಾಮ ಬೀರಬಲ್ಲದು?

ನಾವು ಸಾಮಾನ್ಯವಾಗಿ ಮಾಗಿದ ಬಾಳೆಹಣ್ಣುಗಳನ್ನು (ಹಳದಿ-ಬಣ್ಣದ) ತಿನ್ನುತ್ತೇವೆ ಏಕೆಂದರೆ ಅವು ಸಿಪ್ಪೆ ಸುಲಿಯಲು ಸುಲಭ ಮತ್ತು ತಿನ್ನಲು ಮೃದುವಾಗಿರುತ್ತವೆ ಎಂದು ಅವರು ಹೇಳುತ್ತಾರೆ. “ಆದರೆ, ಬಾಳೆಹಣ್ಣು ಹಸಿರು, ಅದರ ನೈಸರ್ಗಿಕ ಮಾಧುರ್ಯ ಕಡಿಮೆ ಇರುತ್ತದೆ – ಇದು ಮಧುಮೇಹಿಗಳಿಗೆ ಸೂಕ್ತವಾಗಿದೆ,” ಜೈನ್ ಹೇಳಿದ್ದಾರೆ.

ಇದನ್ನೂ ಓದಿ
Image
Friendship: ಸ್ನೇಹವು ಮನಸ್ಸಿನ ಮೇಲೆ ಹೇಗೆ ಸಕಾರಾತ್ಮಕ ಪರಿಣಾಮ ಬೀರಬಲ್ಲದು?
Image
Sugarcane Juice Disadvantages: ಈ ಜನರು ಕಬ್ಬಿನ ರಸವನ್ನು ಸೇವಿಸಬಾರದು, ಇಲ್ಲದಿದ್ದರೆ ತೊಂದರೆಯಾಗಬಹುದು..!
Image
Hair Loss: ಹೆರಿಗೆ ಬಳಿಕ ಕೂದಲು ಉದುರುವ ಸಮಸ್ಯೆ ತಡೆಗಟ್ಟಲು ಇಲ್ಲಿವೆ ಸಲಹೆಗಳು

ಮಧುಮೇಹಿಗಳಿಗೆ ಬಾಳೆಹಣ್ಣು ಯಾವ ಹಂತದಲ್ಲಿ ಉತ್ತಮ?

ಹಸಿರು ಬಾಳೆಹಣ್ಣುಗಳು ಸುರಕ್ಷಿತವಾಗಿದ್ದರೂ, ನಿಯಂತ್ರಿತ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೊಂದಿರುವ ರೋಗಿಗಳು ಹಳದಿ ಬಾಳೆಹಣ್ಣುಗಳನ್ನು ಸಹ ಸೇವನೆ ಮಾಡಬಹುದು – ಆದರೆ ಅವು ಕಂದು ಬಣ್ಣದ ಚುಕ್ಕೆಗಳನ್ನು ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳಿ, ಏಕೆಂದರೆ  ಬಾಳೆಹಣ್ಣಿನಲ್ಲಿರುವ ಪಿಷ್ಟವು ನೈಸರ್ಗಿಕ ಸಕ್ಕರೆಯಾಗಿ ಪರಿವರ್ತನೆಯಾಗುತ್ತದೆ ಎಂಬ ಅಂಶವನ್ನು ಸೂಚಿಸುತ್ತದೆ. ಮಧುಮೇಹಿಗಳು ಇದನ್ನು ತಪ್ಪಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಬಾಳೆಹಣ್ಣು ತಿನ್ನಲು ಉತ್ತಮ ಮಾರ್ಗ?

ದಿನಕ್ಕೆ ಒಂದು ಬಾಳೆಹಣ್ಣು ತಿನ್ನುವುದು ಒಳ್ಳೆಯದು, ಆದರೆ ಅವುಗಳನ್ನು ಯಾವ ರೀತಿ ಬಾಳೆ ಹಣ್ಣು ಎಂಬುದನ್ನು ಪರಿಶೀಲನೆ ಮಾಡುವುದು ಒಳ್ಳೆಯದು ಹಾಗಾಗಿ ಬಾಳೆ ಹಣ್ಣು  ನಮ್ಮ ಆರೋಗ್ಯಕ್ಕೆ ಪೂರಕವಾಗಿರಬೇಕು ಮತ್ತು ಮಧುಮೇಹ ಇರುವವರು ಬಾಳೆಹಣ್ಣನ್ನು ಸೀಮಿತವಾಗಿ ಸೇವನೆ ಮಾಡಬೇಕು ಎಂಬುದ ವೈದ್ಯ ಸಲಹೆ.

ಮಧುಮೇಹಿಗಳು ತಮ್ಮ ಆಹಾರದಲ್ಲಿ ದಿನಕ್ಕೆ ಒಂದು ಬಾಳೆಹಣ್ಣನ್ನು ಸೇವನೆ ಮಾಡಬಹುದು. ಇದು ಸಕ್ಕರೆಯ ಮಟ್ಟ, ಮೂಳೆ ನೋವು, PMS ಲಕ್ಷಣಗಳು, ಸ್ನಾಯು ಸೆಳೆತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. “ನಿಮ್ಮ ಸಕ್ಕರೆ ಮಟ್ಟವು ಅನಿಯಂತ್ರಿತವಾಗಿದ್ದರೆ ಅಥವಾ ಏರಿಳಿತವಾಗಿದ್ದರೆ, ಮೊದಲು ನಿಮ್ಮ ಆಹಾರ ತಜ್ಞರನ್ನು ಸಂಪರ್ಕಿಸಿ” ಎಂದು ಜೈನ್ ಸಲಹೆ ನೀಡಿದರು.

ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:12 pm, Thu, 9 June 22