ನಾಗ ಸಂಪಿಗೆ/ನಾಗ ಚಂಪಾ (Ceylon Ironwood) ಭಾರತ, ಶ್ರೀಲಂಕಾ, ಬರ್ಮಾ, ಫಿಲಿಪೈನ್ಸ್, ಮಲೇಷ್ಯಾ, ನೇಪಾಳ, ಸುಮಾತ್ರಾ, ಇಂಡೋಚೈನಾ ಮತ್ತು ಥೈಲ್ಯಾಂಡ್‌ನ ಉಷ್ಣವಲಯದ (Tropical) ಪ್ರದೇಶಗಳಲ್ಲಿ ಬೆಳೆಯುವ ಸುಪ್ರಸಿದ್ಧ ಮರವಾಗಿದೆ. ಇದನ್ನು ಭಾರತದಲ್ಲಿ ವಿವಿಧ ಉದ್ದೇಶಗಳಿಗಾಗಿ ವಿಶೇಷವಾಗಿ ಅದರ ಔಷಧೀಯ (Medicinal Values) ಮೌಲ್ಯಕ್ಕಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದರಿಂದ ನಾಗ ಕೇಸರಿ ತೆಗೆದು ಮಸಾಲೆ ಮಾಡಲೂ ಉಪಯೋಗಿಸುತ್ತಾರೆ. ಈ ಮಸಾಲೆ ಮರದ ವೈಜ್ಞಾನಿಕ ಹೆಸರು ಮೆಸುವಾ ಫೆರಿಯಾ ಮತ್ತು ಇದನ್ನು ಸಿಲೋನ್ ಐರನ್‌ವುಡ್ ಅಥವಾ ಕೋಬ್ರಾ ಕೇಸರಿ ಎಂದೂ ಕರೆಯುತ್ತಾರೆ. ನಾಗಕೇಸರಿ ಅಥವಾ ಕೋಬ್ರಾ ಕೇಸರಿ ಭಾರತದಲ್ಲಿ ಕಂಡುಬರುವ ಪ್ರಮುಖ ಮಸಾಲೆಗಳಲ್ಲಿ ಒಂದಾಗಿದೆ. ನಾಗಸಂಪಿಗೆ ಮರದ ಮೊಗ್ಗಿನಿಂದ ನಾಗಕೇಸರಿಯನ್ನು ತೆಗೆಯುತ್ತಾರೆ.
ಇದು ಶ್ರೀ ಲಂಕಾದ ರಾಷ್ಟ್ರೀಯ ಮರ, ಮಿಜೋರಾಂ ರಾಜ್ಯ ಮರ ಮತ್ತು ತ್ರಿಪುರಾದ ರಾಜ್ಯ ಹೂವು. ನಾಗ ಚಂಪಾ ನಿಧಾನವಾಗಿ ಬೆಳೆಯುವ ಮರವಾಗಿದ್ದು, ನೆಟ್ಟ 4 ವರ್ಷಗಳ ನಂತರ ಹೂವುಗಳನ್ನು ಹೊರಲು ಪ್ರಾರಂಭಿಸುತ್ತದೆ ಮತ್ತು ಇದರ ಹೂವುಗಳು ಬಹಳ ಬಲವಾದ ಪರಿಮಳವನ್ನು ಹೊಂದಿರುತ್ತವೆ, ಅವುಗಳನ್ನು ಸೌಂದರ್ಯವರ್ಧಕಗಳು ಮತ್ತು ಬಣ್ಣಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ನಾಗಕೇಸರಿ ಭಾರತದ ಕಡಿಮೆ ತಿಳಿದಿರುವ ಮಸಾಲೆಗಳಲ್ಲಿ ಒಂದಾಗಿದೆ ಮತ್ತು ಕೆಲವು ಸ್ಥಳಗಳಿಗೆ ಸೀಮಿತವಾಗಿದೆ, ಈ ಕಾರಣಕ್ಕಾಗಿ ಇದನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸಲಾಗುವುದಿಲ್ಲ. ಭಾರತದಲ್ಲಿ ನಾಗ ಚಂಪಾ ಮರವನ್ನು ಸಾಮಾನ್ಯವಾಗಿ ಅಸ್ಸಾಂ, ಬಂಗಾಳ, ಕರ್ನಾಟಕ, ಕೊಂಕಣ ಮತ್ತು ಪೂರ್ವ ಹಿಮಾಲಯದ ಮಧ್ಯದ ಬೆಟ್ಟಗಳಲ್ಲಿ ಬೆಳೆಯಲಾಗುತ್ತದೆ. ನಾವು ನಾಗಕೇಸರಿ ಮಸಾಲೆಯ ರುಚಿಯ ಬಗ್ಗೆ ಮಾತನಾಡಿದರೆ, ಇದು ಸ್ವಲ್ಪ ಹುಳಿ, ಖಾರ ಮತ್ತು ಸ್ವಲ್ಪ ಕಹಿ ಇರುತ್ತದೆ, ಆದರೆ ಇದು ಮಣ್ಣಿನ ಪರಿಮಳವನ್ನು ಹೊಂದಿದೆ.
ಗರಂ ಮಸಾಲಾವನ್ನು ಅನೇಕ ಮಸಾಲೆಗಳನ್ನು ಒಟ್ಟಿಗೆ ಬೆರೆಸಿ ತಯಾರಿಸಲಾಗುತ್ತದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ, ನಿಮ್ಮ ಮನೆಯಲ್ಲಿ ತಯಾರಿಸಿದ ಯಾವುದೇ ಒಣ ಮಸಾಲೆಗೆ ನಾಗಕೇಸರಿಯನ್ನು ಸೇರಿಸುವುದು ಉತ್ತಮ ಆಯ್ಕೆಯಾಗಿದೆ. ಆದರೆ ಇಲ್ಲಿ ನೀವು ಅದರ ಸರಿಯಾದ ಪ್ರಮಾಣವನ್ನು ತಿಳಿದುಕೊಳ್ಳಬೇಕು ಏಕೆಂದರೆ ಈ ಮಸಾಲೆ ಬಹಳ ಬಲವಾದ ಪರಿಮಳವನ್ನು ಹೊಂದಿರುತ್ತದೆ. ನಾಗಕೇಸರಿ ಮಸಾಲೆಯ ಸ್ವಲ್ಪ ಹೆಚ್ಚಾದರೂ ಅದು ಇತರ ರುಚಿಗಳನ್ನು ನಿಗ್ರಹಿಸಬಹುದು ಮತ್ತು ಇಡೀ ಆಹಾರವನ್ನು ಹಾಳುಮಾಡುತ್ತದೆ. ಇದನ್ನು ಗರಂ ಮಸಾಲಾಗೆ ಸೇರಿಸುವುದರ ಹೊರತಾಗಿ, ನೀವು ಅದನ್ನು ನೇರವಾಗಿ ಭಕ್ಷ್ಯಕ್ಕೆ ಸೇರಿಸಬಹುದು.
ಮಹಾರಾಷ್ಟ್ರಾದಲ್ಲಿ ಗೋಡ ಮಸಾಲಾವನ್ನು ವಿವಿಧ ಭಕ್ಷ್ಯಗಳಲ್ಲಿ ಬಳಸುತ್ತಾರೆ. ಇದು ಒಂದು ಇದು ಮಹಾರಾಷ್ಟ್ರದಲ್ಲಿ ಬಹಳ ಜನಪ್ರಿಯವಾಗಿರುವ ಒಂದು ರೀತಿಯ ಗರಂ ಮಸಾಲಾ, ಈ ಮಸಾಲೆಯಲ್ಲಿ ಮುಖ್ಯವಾಗಿ ನಾಗಕೇಸರಿಯನ್ನು ಬಳಸುತ್ತಾರೆ.
ಇದನ್ನೂ ಓದಿ: ಆರೋಗ್ಯಕರವೆಂದು ತೋರುವ 5 ಸಾಮಾನ್ಯ ಆಹಾರಗಳ ಕರಾಳ ಮುಖ; ಇಂದೇ ಇವುಗಳನ್ನು ಸೇವಿಸುವುದನ್ನು ನಿಲ್ಲಿಸಿ
ಯಾವುದೇ ಕಾಯಿಲೆಯ ಚಿಕಿತ್ಸೆಗಾಗಿ ನಾಗಕೇಸರಿವನ್ನು ಬಳಸುವ ಮೊದಲು, ಅದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪಡೆಯಿರಿ, ಮತ್ತು ನಾಗಕೇಸರಿ ಬಳಸುವ ಮೊದಲು ಇದರ ಪ್ರಮಾಣದ ಬಗ್ಗೆ ಗಮನಹರಿಸಿ.
Published On - 4:45 pm, Sat, 8 April 23