ನಿತ್ಯ ಎಲ್ಲರೂ ಜಿಮ್‌ಗೆ ಹೋಗಲು ಸಾಧ್ಯವಿಲ್ಲ, ಬಿಡುವಿಲ್ಲದ ಕೆಲಸದ ಮಧ್ಯೆ ನಾವೇ ನಮ್ಮ ದೇಹವನ್ನು ಉತ್ತಮವಾಗಿರಿಸಿಕೊಳ್ಳಬೇಕು. ಹಾಗಾಗಿ ಕುರ್ಚಿಯನ್ನು ಬಳಸಿಕೊಂಡು ಕಾಲುಗಳು ಹಾಗೂ ತೋಳುಗಳಿಗೆ ಬಲ ತುಂಬುವ ಆಸನಗಳನ್ನು ನೀವು ಮಾಡಬಹುದು.
ಒತ್ತಡದ ಜೀವನಶೈಲಿಯು ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಆದರೆ ಪೌಷ್ಟಿಕಾಂಶದ ಆಹಾರದೊಂದಿಗೆ ವ್ಯಾಯಾಮಕ್ಕೆ ಸಮಯವನ್ನು ಮೀಸಲಿಡುವುದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಸಹಾಯ ಮಾಡಬಹುದು ಮತ್ತು ದೀರ್ಘಾವಧಿಯ ಜೀವನವನ್ನು ಸಕ್ರಿಯಗೊಳಿಸಬಹುದು.
ವ್ಯಾಯಾಮ ಮಾಡಲು ನಿಜವಾಗಿಯೂ ಜಿಮ್‌ಗೆ ಹೋಗಬೇಕಾಗಿಲ್ಲ. ವಾಸ್ತವವಾಗಿ, ದೇಹವನ್ನು ಫಿಟ್ ಮತ್ತು ಆರೋಗ್ಯಕರವಾಗಿಡಲು ಮನೆಯಲ್ಲಿಯೇ ಮಾಡಬಹುದಾದ ಹಲವಾರು ರೀತಿಯ ವ್ಯಾಯಾಮಗಳಿವೆ.
ಫಿಟ್ನೆಸ್ ಎಕ್ಸ್ಪರ್ಟ್ ಯಾಸ್ಮಿನ್ ಕರಾಚಿವಾಲಾ ಅವರು ಇತ್ತೀಚೆಗೆ Instagram ನಲ್ಲಿ ಕೆಲವು ವ್ಯಾಯಾಮಗಳ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸೀಟೆಡ್ ಟ್ವಿಸ್ಟ್
ನಿಮ್ಮ ಕೈಗಳನ್ನು ತಲೆಯ ಹಿಂಭಾಗದಲ್ಲಿರಿಸಿಕೊಳ್ಳಿ. ನಿಮ್ಮ ಕಾಲು ನೆಲಕ್ಕೆ ತಾಗಿರಲಿ. ಬಳಿಕ ನಿಮ್ಮ ದೇಹದ ಮೇಲ್ಭಾಗವನ್ನು ಎಷ್ಟು ಸಾಧ್ಯವೋ ಅಷ್ಟು ಟ್ವಿಸ್ಟ್ ಮಾಡಿ.ಸಾಮಾನ್ಯ ಸ್ಕ್ವಾಟ್‌ಗಳಂತೆಯೇ, ಕುರ್ಚಿಯ ಆಸನವನ್ನು ಸ್ಕ್ವಾಟ್‌ಗಳನ್ನು ಮಾಡುವ ಅತ್ಯಂತ ಕಡಿಮೆ ಬಿಂದುವಾಗಿ ಇರಿಸಿ. ಕೇವಲ ಯಾಸ್ಮಿನ್, ಈ ಪ್ರಕ್ರಿಯೆಯನ್ನು ಮೂರು ಸೆಟ್ಗಳಲ್ಲಿ 30 ಬಾರಿ ಪುನರಾವರ್ತಿಸಿ. ಸ್ಕ್ವಾಟ್‌ಗಳು ತೊಡೆಗಳನ್ನು ಬಲಪಡಿಸುತ್ತದೆ ಮತ್ತು ತೆಳ್ಳನೆಯ ಸೊಂಟದ ರೇಖೆಯನ್ನು ಒದಗಿಸುತ್ತದೆ. ಇದು ಉತ್ತಮ ಕಾರ್ಡಿಯೋ ವ್ಯಾಯಾಮವೂ ಆಗಿದೆ.
ಕುಳಿತಲ್ಲೇ ಕಾಲನ್ನು ಮೇಲಕ್ಕೆತ್ತುವುದು
ನಾವು ಕುಳಿತ ಆಸನವನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ನಂತರ ಬೆನ್ನನ್ನು ನೇರವಾಗಿರಿಸಕೊಂಡು ಕಾಲನ್ನು ನೇರವಾಗಿ ಎತ್ತಬೇಕು. ಇದು ನಮ್ಮ ದೇಹದ ಮೇಲ್ಭಾಗದಲ್ಲಿ 90 ಡಿಗ್ರಿಯಲ್ಲಿರಬೇಕು. ಕಾಲುಗಳನ್ನು ಮೇಲಕ್ಕೆ ಎತ್ತುವಾಗ ಉಸಿರನ್ನು ಒಳಗೆಳೆದುಕೊಂಡು, ಕಾಲನ್ನು ಕೆಳಗಿಳಿಸುವಾಗ ಉಸಿರನ್ನು ಹೊರಕ್ಕೆ ಬಿಡಬೇಕು.
ಚೇರ್ ಜಾಕ್ನೈಫ್
ಕುರ್ಚಿಯನ್ನು ಬಳಸಿ, ಜಾಕ್ನೈಫ್ ವ್ಯಾಯಾಮ ಮಾಡುವುದು ಸುಲಭವಾಗಿದೆ ಮತ್ತು ಹೊಟ್ಟೆಯ ಕೊಬ್ಬನ್ನು ಗುರಿಯಾಗಿಸುತ್ತದೆ, ಇದು ಬೆನ್ನುಹುರಿ ಮತ್ತು ಮೇಲಿನ ಮತ್ತು ಕೆಳ ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ.
ಸೀಟೆಡ್ ಸ್ಕೇಟರ್
ಕುರ್ಚಿಯ ತುದಿಯಲ್ಲಿ ಕುಳಿತು, ಬಾಗಿ ನಿಮ್ಮ ಎಡಗೈಯನ್ನು ಬಲಗಾಲಿಗೆ, ಬಲಗೈಯನ್ನು ಎಡಗಾಲಿಗೆ ಸ್ಪರ್ಶಿಸಿ. ಕಾಲುಗಳಿಗೆ ಒಂದು ಕೈಯನ್ನು ಸ್ಪರ್ಶಿಸಿದರೆ ಇನ್ನೊಂದು ಕೈ ದೇಹದ ಹಿಂದೆ ನೇರವಾಗಿದ್ದು, ಮೇಲ್ಮುಖವಾಗಿರಬೇಕು. ಇದನ್ನು ವೇಗವಾಗಿ ಮಾಡಬೇಕು.
ಚೇರ್ ಹೋಲ್ಡ್
ನಿಮ್ಮ ದೇಹದ ಮೇಲ್ಭಾಗವನ್ನು ನೇರವಾಗಿ ಇರಿಸಿಕೊಳ್ಳಿ. ಕಾಲನ್ನು ನೆಲದ ಭಾಗದಿಂದ ಮೇಲಕ್ಕೆ ಎತ್ತಿ. ನಂತರ ನಿಮಗೆ ಎಷ್ಟು ಸಮಯ ನೇರವಾಗಿ ಇಟ್ಟುಕೊಳ್ಳಲು ಸಾಧ್ಯವೋ ಅಷ್ಟು ಕಾಲ ಹಾಗೆಯೇ ಇರಿ.
ಹೈ ನೀಸ್:
ಕುರ್ಚಿಯ ಮೇಲೆ ನೀವು ನೇರವಾಗಿ ಕುಳಿತುಕೊಳ್ಳಬೇಕು, ಬಳಿಕ ಮೊಣಕಾಲು ಮೇಲಕ್ಕೆ ಎತ್ತುವಾಗ ಕೈ ಸ್ವಲ್ಪ ಮಡಚಿಟ್ಟುಕೊಳ್ಳಿ. ಬಳಿಕ ನಿಮ್ಮ ಮೊಣಕಾಲು ಕೈಯನ್ನು ಸ್ಪರ್ಶಿಸಲಿ. ಇದನ್ನು ಪುನರಾವರ್ತಿಸಿ.
ಸೀಟೆಡ್ ಲೆಗ್ ಪ್ರೆಸ್
ಕುರ್ಚಿಯನ್ನು ಹಿಡಿದುಕೊಂಡು ಕಾಲನ್ನು ಮೇಲಕ್ಕೆ ಎತ್ತಿ ನೇರವಾಗಿ ಇರಿಸಿಕೊಳ್ಳಿ. ಬಳಿಕ ಮೊಣಕಾಲನ್ನು ಸ್ವಲ್ಪ ಬಾಗಿಸಿ, ಕಾಲನ್ನು ಎದೆಯ ಹತ್ತಿರ ತೆಗೆದುಕೊಂಡು ಬನ್ನಿ, ಕಾಲನ್ನು ನಂತರ ನೇರ ಮಾಡಿ. ಇದನ್ನು ಪುನರಾವರ್ತಿಸಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ