Chamomile Tea: ಕ್ಯಾಮೊಮೈಲ್ ಟೀಯಲ್ಲಿದೆ ಆರೋಗ್ಯದ ಗುಟ್ಟು; ಕಾಫಿ ಪಕ್ಕಕ್ಕಿಟ್ಟು ಹರ್ಬಲ್ ಚಹಾ ಕುಡಿದು ನೋಡಿ

| Updated By: ಸುಷ್ಮಾ ಚಕ್ರೆ

Updated on: Sep 01, 2021 | 9:42 PM

Health Tips | ಕ್ಯಾಮೊಮೈಲ್ ಹರ್ಬಲ್ ಮೆಡಿಸಿನ್​ಗಳಲ್ಲಿ ಬಳಸಲಾಗುವ ಒಂದು ಹೂವು. ನೆಗಡಿ, ಜೀರ್ಣಕ್ರಿಯೆ, ಹೃದಯ ಸಂಬಂಧಿ ಸಮಸ್ಯೆ, ಚರ್ಮದ ಆರೋಗ್ಯ ಹೀಗೆ ನಾನಾ ಕಾರಣಗಳಿಗೆ ಕ್ಯಾಮೊಮೈಲ್ ಟೀ ಬಹಳ ಪ್ರಮುಖದ್ದಾಗಿದೆ.

Chamomile Tea: ಕ್ಯಾಮೊಮೈಲ್ ಟೀಯಲ್ಲಿದೆ ಆರೋಗ್ಯದ ಗುಟ್ಟು; ಕಾಫಿ ಪಕ್ಕಕ್ಕಿಟ್ಟು ಹರ್ಬಲ್ ಚಹಾ ಕುಡಿದು ನೋಡಿ
ಕ್ಯಾಮೊಮೈಲ್ ಟೀ
Follow us on

ಜನರು ಆಧುನಿಕತೆಗೆ ಒಗ್ಗಿಕೊಳ್ಳುತ್ತಾ ಹೋದಂತೆ ಹರ್ಬಲ್ ವಸ್ತುಗಳ ಬಗ್ಗೆಯೂ ಒಲವು ಬೆಳೆಸಿಕೊಳ್ಳುತ್ತಿದ್ದಾರೆ. ಈಗಿನ ಯುವಪೀಳಿಗೆ ಕೂಡ ಆರೋಗ್ಯದತ್ತ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಅಯುರ್ವೇದ, ಆರ್ಗಾನಿಕ್, ಹರ್ಬಲ್​ನಂತಹ ಆಯ್ಕೆಗಳತ್ತ ಗಮನ ಹರಿಸುತ್ತಿದೆ. ಈಗೀಗ ಫಿಲ್ಟರ್ ಕಾಫಿಯ ಬದಲು ಗ್ರೀನ್ ಟೀ, ಜಿಂಜರ್ ಟೀ, ಬ್ಲಾಕ್ ಕಾಫಿ, ಲೆಮನ್ ಟೀ, ಪುದೀನಾ ಟೀ ಹೀಗೆ ಹರ್ಬಲ್ ಟೀಗಳು ಪ್ರತಿಷ್ಠೆಯ ಪ್ರಶ್ನೆಯೂ ಆಗಿ ಗುರುತಿಸಿಕೊಳ್ಳುತ್ತಿವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆಯೆಂದರೆ ಕ್ಯಾಮೊಮೈಲ್ ಟೀ (Chamomile Tea).

ಕ್ಯಾಮೊಮೈಲ್ ಹರ್ಬಲ್ ಮೆಡಿಸಿನ್​ಗಳಲ್ಲಿ ಬಳಸಲಾಗುವ ಒಂದು ಹೂವು. ಇದರಿಂದ ಆರೋಗ್ಯಕ್ಕೆ ಸಾಕಷ್ಟು ಉಪಯೋಗಗಳಿವೆ. ಕ್ಯಾಮೊಮೈಲ್ ಹೂವುಗಳ ಎಸಳುಗಳಿಂದ ಮಾಡಲಾಗುವ ಟೀ ಪುಡಿಗೆ ಈಗ ಭಾರೀ ಬೇಡಿಕೆಯಿದೆ. ಈ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ನಾನಾ ರೀತಿಯ ಉಪಯೋಗಗಳಿವೆ. ಕ್ಯಾಮೊಮೈಲ್ ಟೀ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಪ್ರತಿದಿನವೂ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಏನೆಲ್ಲ ಉಪಯೋಗಗಳಿವೆ ಎಂಬ ಮಾಹಿತಿ ಇಲ್ಲಿದೆ.

ಕ್ಯಾಮೊಮೈಲ್ ಟೀ ಬ್ಯಾಗ್​ಗಳು ಈಗ ಬಹುತೇಕ ಕಡೆ ಸಿಗುತ್ತದೆ. ಇದನ್ನು ಗ್ರೀನ್ ಟೀಯಂತೆ ಬಳಸಬಹುದು. ಈ ಚಹಾ ಗಾಯವನ್ನು ಮಾಗಿಸುವುದು, ಸಂಧಿವಾತ, ಸುಟ್ಟ ಗಾಯಗಳು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣ ಪಡಿಸಲು ಸಹಕಾರಿಯಾಗಿದೆ.

ಕ್ಯಾಮೋಮೈಲ್ ಹೂವಿನ ಎಣ್ಣೆಯಲ್ಲಿ ಉರಿಯೂತ ನಿವಾರಕ ಗುಣಗಳಿರುವುದರಿಂದ ಗಂಟಲ ಹಿಂಭಾಗದ ಸ್ನಾಯುಗಳನ್ನು ಸಡಿಲಗೊಳಿಸಿ ನಿದ್ದೆಗೆ ಜಾರಲು ನೆರವಾಗುತ್ತದೆ. ಇದಕ್ಕಾಗಿ ಒಂದು ಲೋಟ ಬಿಸಿನೀರಿನಲ್ಲಿ ಕೆಲವು ಹನಿ ಕ್ಯಾಮೋಮೈಲ್ ಹೂವಿನ ಎಣ್ಣೆ ಮತ್ತು ಅಷ್ಟೇ ಪ್ರಮಾಣದ ಜೇನು ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯಿ

ಕ್ಯಾಮೊಮೈಲ್ ಟೀ ಕ್ಯಾನ್ಸರ್ ವಿರುದ್ಧವೂ ಹೋರಾಡುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ದೇಹದಲ್ಲಿನ ಆರೋಗ್ಯಕರ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣಗಳನ್ನು ಉತ್ತಮ ಮಟ್ಟದಲ್ಲಿರಿಸುವ ಮೂಲಕ ಹೃದಯ ಸಂಬಂಧಿ ರೋಗಗಳನ್ನು ಕ್ಯಾಮೊಮೈಲ್ ಕಡಿಮೆ ಮಾಡುತ್ತದೆ. ಕ್ಯಾಮೊಮೈಲ್ ಟೀಯಲ್ಲಿರುವ ಎಪಿಜೆನಿನ್ ಎಂಬ ಅಂಶ ಸುಖವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಕ್ಯಾಮೊಮೈಲ್ ಟೀ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುವ ಶೀತ, ಅಸ್ವಸ್ಥತೆ, ನಿತ್ರಾಣ, ಹೆರಿಗೆ ಬಳಿಕ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ನೆಗಡಿಯಾದಾಗ ಒಂದು ಕಪ್ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಆರಾಮವೆನಿಸುತ್ತದೆ. ದಿನನಿತ್ಯವೂ ಒಂದು ಕಪ್ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ.

ಇದನ್ನೂ ಓದಿ: Health Tips: ಏಲಕ್ಕಿಯಲ್ಲಿದೆ ಮ್ಯಾಜಿಕ್; ಲೈಂಗಿಕ ಸಾಮರ್ಥ್ಯ ಹೆಚ್ಚಾಗಲು ಪುರುಷರು ಹೀಗೆ ಮಾಡಿ

Health Tips: ಮನೆಯ ಹಿತ್ತಲಲ್ಲಿ ಬೆಳೆಯುವ ಈ ಸಸ್ಯಗಳಲ್ಲಿ ಅಡಗಿದೆ ಅನೇಕ ಆರೋಗ್ಯಕರ ಗುಣ

(Chamomile Tea Health Benefits Of Chamomile Tea for Skin, Hair, Heart and Sleep)