Relationship Tips : ಮದುವೆಯಾಗಿದ್ರು ಪರ ಸ್ತ್ರೀ ಮೇಲೆ ಪುರುಷರು ಆಕರ್ಷಿತರಾಗೋದು ಏಕೆ? ಚಾಣಕ್ಯ ಬಿಚ್ಚಿಟ್ಟ ಕಾರಣ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 20, 2024 | 5:36 PM

ಇತ್ತೀಚೆಗಿನ ದಿನಗಳಲ್ಲಿ ವಿವಾಹೇತ್ತರ ಸಂಬಂಧಗಳು ಹೆಚ್ಚಾಗುತ್ತಿದೆ. ಮುದ್ದಾದ ಮಡದಿಯಿದ್ದರೂ ಪುರುಷರು ಪರಸ್ತ್ರೀಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಕೊನೆಗೆ ಈ ಸಂಬಂಧಗಳೇ ಸಂಸಾರಕ್ಕೆ ಮುಳುವಾಗುತ್ತದೆ. ಆದರೆ ಗಂಡನು ಯಾವ ಕಾರಣಕ್ಕಾಗಿ ಬೇರೊಬ್ಬ ಮಹಿಳೆಯ ಸಹವಾಸಕ್ಕೆ ಮಾಡಿದ್ದಾನೆ ಎನ್ನುವುದು ತಿಳಿದುಕೊಳ್ಳುವ ವೇಳೆಗೆ ಕಾಲ ಮಿಂಚಿ ಹೋಗಿರುತ್ತದೆ. ಆದರೆ ಪತಿಯು ತನ್ನ ಹೆಂಡತಿಯಿಂದ ದೂರವಾಗಲು ಚಾಣಕ್ಯನು ಕೆಲವು ಕಾರಣಗಳನ್ನು ನೀಡಿದ್ದು, ಆ ಕುರಿತಾದ ಸಂಪೂರ್ಣ ಮಾಹಿತಿಯು ಇಲ್ಲಿದೆ.

Relationship Tips : ಮದುವೆಯಾಗಿದ್ರು ಪರ ಸ್ತ್ರೀ ಮೇಲೆ ಪುರುಷರು ಆಕರ್ಷಿತರಾಗೋದು ಏಕೆ? ಚಾಣಕ್ಯ ಬಿಚ್ಚಿಟ್ಟ ಕಾರಣ
ಸಾಂದರ್ಭಿಕ ಚಿತ್ರ
Follow us on

ಮದುವೆ ಎನ್ನುವುದು ಪವಿತ್ರ ಬಂಧ ಎಂದು ಭಾವಿಸಲಾಗಿದೆ. ಹೆಣ್ಣು ಹಾಗೂ ಗಂಡು ಇಬ್ಬರೂ ಪ್ರಾಮಾಣಿಕರಾಗಿದ್ದು ಸಂಸಾರ ನಡೆಸಿದರೆ ಬದುಕು ಸ್ವರ್ಗವಾಗುತ್ತದೆ. ಆದರೆ ಕೆಲವೊಮ್ಮೆ ಪುರುಷರು ಮದುವೆಯಾಗಿದ್ರು ಬೇರೊಬ್ಬ ಮಹಿಳೆಯ ಸಹವಾಸವನ್ನು ಮಾಡುತ್ತಾರೆ. ಇದರಿಂದ ಮದುವೆಯಾದ ಹೆಣ್ಣಿನ ಬದುಕು ಹಾಳಾಗುತ್ತದೆ. ಈ ಸಮಯದಲ್ಲಿ ಹೆಣ್ಣಾದವಳು ಎಚ್ಚೆತ್ತುಕೊಂಡು ಗಂಡನನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿದರೆ ಸಂಸಾರವು ಸರಿಯಾಗಬಹುದು. ಆದರೆ ಗಂಡನ ಮನಸ್ಸು ಬೇರೆ ಹೆಣ್ಣಿನತ್ತ ಆಕರ್ಷಿತರಾಗಲು ಚಾಣಕ್ಯನು ಈ ಕೆಲವು ಕಾರಣಗಳನ್ನು ನೀಡಿದ್ದಾನೆ.

* ಸಣ್ಣ ವಯಸ್ಸಿನಲ್ಲಿ ಮದುವೆ : ಸಣ್ಣ ವಯಸ್ಸಿನಲ್ಲಿ ಮದುವೆಯಾಗುವುದು ಕೂಡ ಪತಿ-ಪತ್ನಿಯ ನಡುವಿನ ಸಂಬಂಧವನ್ನು ಹಾಳು ಮಾಡುತ್ತದೆ. ಹೌದು ಸಣ್ಣ ವಯಸ್ಸಿನಲ್ಲಿ ವೃತ್ತಿ ಜೀವನದ ಕಡೆಗೆ ಗಮನ ಹರಿಸುವ ವ್ಯಕ್ತಿಯು ತನ್ನ ವೈಯುಕ್ತಿಕ ಆಸೆಗಳಿಗೆ ಗಮನ ಹರಿಸುವುದಿಲ್ಲ. ಆದರೆ ವೃತ್ತಿ ಜೀವನವು ಸ್ಥಿರವಾದಾಗ ತನ್ನ ಪತ್ನಿಯ ಮೇಲೆ ಆಸಕ್ತಿಯು ಇಲ್ಲದಿರಬಹುದು. ಸಹಜವಾಗಿ ಗಂಡು ತನ್ನ ಆಸೆ ಆಕಾಂಕ್ಷೆಯಂತೆ ಪರ ಸ್ತ್ರೀ ಮೇಲೆ ಆಕರ್ಷಿತರಾಗುತ್ತಾರೆ ಎನ್ನುತ್ತಾನೆ ಚಾಣಕ್ಯ.

* ದೈಹಿಕ ತೃಪ್ತಿ ಇಲ್ಲದಿರುವುದು : ವೈವಾಹಿಕ ಸಂಬಂಧದಲ್ಲಿ ಭಾವನಾತ್ಮಕ ಸಂಬಂಧದ ಜೊತೆಗೆ ದೈಹಿಕ ಸಂಬಂಧವು ಮುಖ್ಯವಾಗುತ್ತದೆ. ಆದರೆ ಕೆಲವೊಮ್ಮೆ ದೈಹಿಕ ತೃಪ್ತಿಯೂ ಇಲ್ಲದಿದ್ದಾಗ ಸಹಜವಾಗಿ ಗಂಡು ಬೇರೊಬ್ಬ ಹೆಣ್ಣಿನ ಸಹವಾಸಕ್ಕೆ ಬೀಳುತ್ತಾನೆ ಎನ್ನುತ್ತಾನೆ ಚಾಣಕ್ಯ. ಸಂಸಾರದಲ್ಲಿ ದೈಹಿಕ ಸಂಬಂಧವು ಚೆನ್ನಾಗಿಲ್ಲವೆಂದಲ್ಲಿ ಗಂಡ ಹೆಂಡತಿ ಪರಸ್ಪರ ಮಾತನಾಡಿಕೊಳ್ಳುವುದು. ಇಲ್ಲವಾದರೆ ಅನೈತಿಕ ಸಂಬಂಧಗಳಿಗೆ ದಾರಿ ಮಾಡಿಕೊಡಬಹುದಂತೆ.

* ನಂಬಿಕೆಯ ಕೊರತೆ : ಗಂಡ ಹೆಂಡಿರ ನಡುವೆ ನಂಬಿಕೆಯಿರಬಹುದು. ಸಂಬಂಧದ ಜೀವಾಳವೇ ಈ ನಂಬಿಕೆಯಾಗಿರುತ್ತದೆ. ಒಬ್ಬರಿಗೆ ಇನ್ನೊಬ್ಬರ ಮೇಲೆ ನಂಬಿಕೆಯಿದ್ದರೆ ಸಂಬಂಧವು ಪ್ರಾಮಾಣಿಕವಾಗಿರುತ್ತದೆ. ಒಂದು ವೇಳೆ ಪತ್ನಿಯಾದವಳು ಪತಿಯ ನಡವಳಿಕೆಯ ಬಗ್ಗೆ ಸಂಶಯ ಪಡುತ್ತಿದ್ದರೆ ಇದರಿಂದ ನೊಂದು ಅನೈತಿಕ ಸಂಬಂಧವನ್ನು ಹೊಂದುವ ಸಾಧ್ಯತೆಯೇ ಹೆಚ್ಚು ಎಂದು ಹೇಳುತ್ತಾನೆ ಚಾಣಕ್ಯ.

* ಪೋಷಕರಾಗುವುದು : ಬಹುತೇಕ ಸಂಸಾರದಲ್ಲಿ ಪೋಷಕರಾಗುವವರೆಗೂ ಪ್ರೀತಿಯು ಹೆಚ್ಚಿರುತ್ತದೆ. ಆದರೆ ಮಗು ಹುಟ್ಟಿದ ಬಳಿಕ ಪುರುಷರು ತಮ್ಮ ಹೆಂಡತಿಯಿಂದ ದೂರವಾಗುತ್ತಾರೆ. ಇಲ್ಲಿ ಪತ್ನಿ ಗಂಡನ ಯೋಗಕ್ಷೇಮದ ಬಗ್ಗೆ ಗಮನ ಹರಿಸುವುದು ಕಡಿಮೆಯಾಗುತ್ತದೆ. ಹೆಂಡತಿಯು ಪತಿಗಿಂತ ಹೆಚ್ಚು ಮಗುವಿಗೆ ಆದ್ಯತೆಯನ್ನು ನೀಡಲು ಪ್ರಾರಂಭಿಸುವುದೇ ಇದಕ್ಕೆ ಕಾರಣ ಎಂದು ಚಾಣಕ್ಯನು ಹೇಳುತ್ತಾನೆ.

ಇದನ್ನೂ ಓದಿ: ಈ ಬುಡಕಟ್ಟಿನ ಮಹಿಳೆಯರ ಸೌಂದರ್ಯವೇ ಈ ಕುತ್ತಿಗೆ, ವಯಸ್ಸು ಆದಂತೆ ಹೆಚ್ಚಾಗುತ್ತೆ ಈ ಉಂಗುರಗಳ ಸಂಖ್ಯೆ

* ಸಣ್ಣ ಸಣ್ಣದಕ್ಕೂ ಅಸಮಾಧಾನಗೊಳ್ಳುವುದು : ಗಂಡ ಹೆಂಡಿರು ಕೆಲವೊಮ್ಮೆ ಸಣ್ಣ ಸಣ್ಣ ವಿಷಯಗಳಿಗೂ ನಿರಾಸೆ ಹಾಗೂ ಅಸಮಾಧಾನಗೊಳ್ಳುತ್ತಾರೆ. ಆದರೆ ಈ ಪುರುಷರು ತನ್ನ ಸಂಗಾತಿಯಲ್ಲಿ ಯಾವುದರ ಕೊರತೆ ಇದೆಯೋ ಅದರ ಬಗ್ಗೆ ಅಸಮಾಧಾನ ಹೊಂದಿರುತ್ತಾರೆ. ಪತ್ನಿಯಲ್ಲಿ ಒಳ್ಳೆಯದನ್ನು ಹುಡುಕುವುದನ್ನು ಬಿಟ್ಟು ಬಿಡುತ್ತಾರೆ. ಚಾಣಕ್ಯ ಹೇಳುವಂತೆ ಈ ಅಸಮಾಧಾನವೇ ಪುರುಷರು ಬೇರೆ ಮಹಿಳೆಯರ ಮೋಹಕ್ಕೆ ಬೀಳಲು ಕಾರಣವಾಗುತ್ತದೆಯಂತೆ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ