Body Acne : ಬೆನ್ನ ಮೇಲಿನ ಮೊಡವೆಗಳಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ? ಇಲ್ಲಿದೆ ಸುಲಭ ಪರಿಹಾರ
ಮುಖದ ಮೇಲೆ ಮಾತ್ರವಲ್ಲದೇ ಎದೆ ಕುತ್ತಿಗೆ, ತೋಳು ಹಾಗೂ ಬೆನ್ನ ಮೇಲೆ ಕೂಡ ಈ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಸತ್ತ ಚರ್ಮದ ಕೋಶಗಳಿಂದ ದೇಹದ ಮೇಲೆ ಸಣ್ಣ ಸಣ್ಣ ಮೊಡವೆಗಳು ಉಂಟಾಗುತ್ತವೆ. ದೇಹದ ಭಾಗಗಳಲ್ಲಿ ಇರುವ ಎಣ್ಣೆ ಗ್ರಂಥಿಗಳಿಂದ ಹೊರಬರುವ ಎಣ್ಣೆ ಹಾಗೂ ಕೊಳೆಯಿಂದಾಗಿ ದೇಹದ ಮೇಲೆ ಈ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತದೆ. ಈ ಮೊಡವೆಗಳ ನಿವಾರಣೆಗೆ ಮನೆಯಲ್ಲೇ ಈ ಕೆಲವು ಮನೆಮದ್ದಿನಿಂದ ಪರಿಹಾರ ಸುಲಭ ಸಾಧ್ಯ.
ಹದಿಹರೆಯದ ವಯಸ್ಸಿನವರಲ್ಲಿ ಕಾಡುವ ಸಮಸ್ಯೆಯೆಂದರೆ ಅದುವೇ ಈ ಮೊಡವೆ. ಕೆಲವರಂತೂ ಮುಖದ ಮೇಲೆ ಒಂದೇ ಒಂದು ಮೊಡವೆ ಕಾಣಿಸಿಕೊಂಡರೆ ಆಕಾಶವೆ ತಲೆ ಮೇಲೆ ಬಿತ್ತು ಎನ್ನುವ ಹಾಗೆ ವರ್ತಿಸುತ್ತಾರೆ. ಆದರೆ ನಮ್ಮಲ್ಲಿ ಬಹಳಷ್ಟು ಮಂದಿಗೆ ಮುಖದ ಮೇಲೆ ಮಾತ್ರವಲ್ಲದೇ ದೇಹದ ಮೇಲೆಯು ಮೊಡವೆಗಳು ಬೀಳುತ್ತವೆ. ಹವಾಮಾನ ಬದಲಾವಣೆ, ದೈಹಿಕ ಬದಲಾವಣೆ, ಹಾರ್ಮೋನುಗಳ ಬದಲಾವಣೆ, ಅತಿಯಾದ ಬೆವರುವಿಕೆಯು ಕೂಡ ಕಾರಣವಾಗುತ್ತದೆ. ಅಂದವನ್ನು ಹಾಳು ಮಾಡುವ ಈ ಮೊಡವೆಗೆ ಮನೆಯಲ್ಲೇ ಈ ಸರಳ ಮನೆಮದ್ದಿನ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು.
ಬೆನ್ನ ಮೇಲಿನ ಮೊಡವೆಯನ್ನು ಹೋಗಲಾಡಿಸಲು ಮನೆಮದ್ದುಗಳು
* ಆಪಲ್ ಸೈಡರ್ ವಿನೆಗರ್: ಆಪಲ್ ಸೈಡರ್ ವಿನೆಗರ್ ನೈಸರ್ಗಿಕ ಸಂಕೋಚಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದ ಪಿಹೆಚ್ ಅನ್ನು ಸಮತೋಲನಗೊಳಿಸಲು ಮತ್ತು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ಆಂಟಿಮೈಕ್ರೋಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಆಪಲ್ ಸೈಡರ್ ವಿನೆಗರ್ ಹಾಗೂ ನೀರನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಹತ್ತಿಯಿಂದ ಮೊಡವೆಗಳಿರುವಲ್ಲಿಗೆ ಅನ್ವಯಿಸಬೇಕು. ಹತ್ತು ಹದಿನೈದು ನಿಮಿಷಗಳ ಕಾಲ ಬಿಟ್ಟು ತೊಳೆದರೆ ಮೊಡವೆಗಳು ಕಡಿಮೆಯಾಗುತ್ತದೆ.
* ಬೇಕಿಂಗ್ ಸೋಡಾ: ಇದು ಮೃದುವಾದ ಎಕ್ಸ್‌ಫೋಲಿಯಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಮತ್ತು ರಂಧ್ರಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಅಡುಗೆ ಸೋಡಾಗೆ ಒಂದೆರಡು ಚಮಚ ನೀರು ಬೆರೆಸಿ ದಪ್ಪವಾದ ಪೇಸ್ಟ್ ಮಾಡಿಕೊಳ್ಳಿ. ಮೊಡವೆಗಳಿರುವ ಪ್ರದೇಶಗಳಿಗೆ ಈ ಪೇಸ್ಟ್ ಅನ್ವಯಿಸಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
* ಜೇನುತುಪ್ಪ ಮತ್ತು ದಾಲ್ಟಿನ್ನಿ: ಜೇನುತುಪ್ಪ ಮತ್ತು ದಾಲ್ಟಿನ್ನಿ ಎರಡೂ ನೈಸರ್ಗಿಕ ಬ್ಯಾಕ್ಟಿರಿಯಾ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಬೆನ್ನು ಹಾಗೂ ದೇಹದ ಮೇಲಿರುವ ಮೊಡವೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಎರಡು ಚಮಚ ಜೇನುತುಪ್ಪಕ್ಕೆ ಒಂದು ಚಮಚ ದಾಲ್ಟಿನ್ನಿ ಸೇರಿಸಿ , ಇದನ್ನು ಮೊಡವೆಗಳಿರುವಲ್ಲಿಗೆ ಅನ್ವಯಿಸಬೇಕು. ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಹಾಗೆ ಬಿಟ್ಟು ತೊಳೆಯಿರಿ. ಎರಡು ಮೂರು ಬಾರಿ ಈ ಮಿಶ್ರಣವನ್ನು ಅನ್ವಯಿಸಿದರೆ ಈ ಸಮಸ್ಯೆಯು ದೂರವಾಗುತ್ತದೆ.
* ಗ್ರೀನ್ ಟೀ: ಗ್ರೀನ್ ಟೀಯು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ ಹಾಗೂ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಒಂದು ಕಪ್ ನಷ್ಟು ಗ್ರೀನ್ ಟೀಯನ್ನ ಕುದಿಸಿ, ಹತ್ತಿಉಂಡೆಗಳಲ್ಲಿ ಅದ್ದಿಕೊಂಡು ಮೊಡವೆಗಳಿರುವಲ್ಲಿ ಅನ್ವಯಿಸಿದರೆ ಉತ್ತಮ ಫಲಿತಾಂಶವು ದೊರೆಯುತ್ತದೆ.
ಇದನ್ನೂ ಓದಿ: ಸೊಳ್ಳೆಗಳು ನಿಮ್ಮನ್ನೇ ಪದೇ ಪದೇ ಕಚ್ಚುತ್ತಿದೆಯೇ, ಇದೆ ಕಾರಣವಂತೆ
* ಅಲೋವೆರಾ: ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಹಾಗೂ ಕಿರಿಕಿರಿಯೆನಿಸುವ ಚರ್ಮವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಈ ಅಲೋವೆರಾ ಜೆಲ್ ಅನ್ನು ಮೊಡವೆಗಳಿರುವಲ್ಲಿ ಅನ್ವಯಿಸಿ 15-20 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ಆ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಉರಿಯೂತದಂತಹ ಸಮಸ್ಯೆಯು ನಿವಾರಣೆಯಾಗುತ್ತದೆ.
* ಟೀ ಟ್ರಿ ಆಯಿಲ್: ಟೀ ಟೀ ಆಯಿಲ್ ಬ್ಯಾಕ್ಟಿರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಚರ್ಮದ ಮೇಲೆ ಮೊಡವೆ ಉಂಟುಮಾಡುವ ಬ್ಯಾಕ್ಟಿರಿಯಾವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯೊಂದಿಗೆ ಒಂದೆರಡು ಹನಿ ಚಹಾ ಮರದ ಎಣ್ಣೆಯನ್ನು ಬೆರೆಸಿ ಹತ್ತಿ ಉಂಡೆಗಳಲ್ಲಿ ಅದ್ದಿ ಮೊಡವೆಗಳಿರುವ ಪ್ರದೇಶಕ್ಕೆ ಅನ್ವಯಿಸಿ, ಇಪ್ಪತ್ತು ನಿಮಿಷಗಳ ಬಳಿಕ ತೊಳೆಯಬೇಕು. ವಾರಕ್ಕೆ ಮೂರು ಬಾರಿ ಹೀಗೆ ಮಾಡುವುದರಿಂದ ಮೊಡವೆ ಸಮಸ್ಯೆಗಳು ದೂರವಾಗುತ್ತದೆ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ