Chanakya Niti: ನಿಮ್ಮ ಆತ್ಮೀಯರೇ ದ್ರೋಹ ಬಗೆದಾಗ ಈ ವಿಷಯ ನೆನಪಿನಲ್ಲಿಡಿ ಎನ್ನುತ್ತಾನೆ ಚಾಣಕ್ಯ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 04, 2025 | 6:26 PM

ಈ ಕಾಲದಲ್ಲಿ ಯಾರನ್ನು ನಂಬುವುದು, ಯಾರನ್ನು ಬಿಡುವುದು ತಿಳಿಯುವುದಿಲ್ಲ. ನಾವು ಅತಿಯಾಗಿ ನಂಬಿದ ವ್ಯಕ್ತಿಗಳೇ ನಮಗೆ ಮೋಸ ಮಾಡುತ್ತಾರೆ. ಆದರೆ ಎಷ್ಟೋ ಸಲ ಆ ಕಹಿ ನೆನಪಿನಲ್ಲಿ ಕೊರಗುತ್ತೇವೆ. ಹೀಗಾಗಿ ಆಚಾರ್ಯ ಚಾಣಕ್ಯನು ತನ್ನ ನೀತಿಯಲ್ಲಿ ನಂಬಿಕೆ ದ್ರೋಹವಾದಾಗ ಏನು ಮಾಡಬೇಕು ಎನ್ನುವ ಸಲಹೆಗಳನ್ನು ನೀಡಿದ್ದಾನೆ ಆ ಕುರಿತಾದ ಮಾಹಿತಿ ಇಲ್ಲಿದೆ.

Chanakya Niti: ನಿಮ್ಮ ಆತ್ಮೀಯರೇ ದ್ರೋಹ ಬಗೆದಾಗ ಈ ವಿಷಯ ನೆನಪಿನಲ್ಲಿಡಿ ಎನ್ನುತ್ತಾನೆ ಚಾಣಕ್ಯ
ಸಾಂದರ್ಭಿಕ ಚಿತ್ರ
Follow us on

ನಮ್ಮವರು ಎಂದು ನಂಬಿದವರೇ ಮೋಸ ಮಾಡುವುದೇ ಹೆಚ್ಚು. ಎಷ್ಟೋ ಜನರಿಗೆ ಈ ಅನುಭವವಾಗಿರುತ್ತದೆ. ಆತ್ಮೀಯ ವ್ಯಕ್ತಿಯಲ್ಲಿ ಯಾರಾದರೂ ದ್ರೋಹ, ಮೋಸ ಮಾಡಿದಾಗ ಮನಸ್ಸಿಗೆ ತುಂಬಾನೇ ನೋವಾಗುತ್ತದೆ. ಆದರೆ ಆ ವಿಷಯದ ಬಗ್ಗೆ ಚಿಂತಿಸುತ್ತಾ ಸಮಯ ವ್ಯರ್ಥ ಮಾಡದೇ ಈ ಚಾಣಕ್ಯನ ಈ ಸಲಹೆಗಳನ್ನು ಪಾಲಿಸಿದ್ರೆ ಯಶಸ್ವಿ ವ್ಯಕ್ತಿಯಾಗಲು ಸಾಧ್ಯವಂತೆ.

  • ಹಣದ ಸೂಕ್ತ ರೀತಿಯಲ್ಲಿ ಬಳಸಿ : ಹಣವನ್ನು ಸಂಪಾದಿಸುವುದು ಅಷ್ಟೇ ಅಲ್ಲ ಅದನ್ನು ಸರಿಯಾದ ಸ್ಥಳದಲ್ಲಿ ಖರ್ಚು ಮಾಡುವುದು ತಿಳಿದಿರಬೇಕು. ತಪ್ಪಾದ ಸ್ಥಳದಲ್ಲಿ ಹಣವನ್ನು ಹೂಡಿಕೆ ಮಾಡುವುದು ಜೀವನದಲ್ಲಿ ನಷ್ಟಕ್ಕೆ ಕಾರಣವಾಗುತ್ತದೆ. ಹಣವನ್ನು ಸರಿಯಾಗಿ ವಿನಿಯೋಗಿಸಿದರೆ, ಜೀವನದ ಯಶಸ್ಸಿಗೆ ಕಾರಣವಾಗುತ್ತದೆ.
  • ತಪ್ಪುಗಳಿಂದ ಪಾಠ ಕಲಿಯಿರಿ : ತಪ್ಪು ಯಾರು ಮಾಡಲ್ಲ ಹೇಳಿ, ಆದರೆ ಆ ತಪ್ಪುಗಳೇ ಮರಳಿ ಆಗದಿರಲಿ. ಒಬ್ಬ ವ್ಯಕ್ತಿಯು ತನ್ನ ತಪ್ಪುಗಳಿಂದ ಜೊತೆಗೆ ಇತರರ ತಪ್ಪುಗಳಿಂದಲೂ ಪಾಠವನ್ನು ಕಲಿಯಬೇಕು. ಹೀಗೆ ಪಾಠ ಕಲಿತಲ್ಲಿ ತಪ್ಪುಗಳನ್ನು ಮಾಡುವುದಿಲ್ಲ. ಇದರಿಂದ ಸಮಾಜದಲ್ಲಿ ಗೌರವಯುತವಾಗಿ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಇದರಿಂದ ಯಶಸ್ಸು ನಿಮ್ಮನ್ನು ಅರಸಿಕೊಂಡು ಬರುತ್ತದೆ ಎಂದಿದ್ದಾನೆ ಚಾಣಕ್ಯ.
  • ಸುಳ್ಳಿನಿಂದ ಯಶಸ್ಸು ಪಡೆಯಬೇಡಿ : ಕಷ್ಟ ಪಟ್ಟು ಗಳಿಸಿದ ಯಶಸ್ಸಿಗೆ ನಿಜವಾದ ಬೆಲೆ. ಹೀಗಾಗಿ ಸುಳ್ಳಿನಿಂದ ಪಡೆದ ಯಶಸ್ಸು ಶಾಶ್ವತವಾಗಿ ಉಳಿಯುವುದಿಲ್ಲ. ಈ ಯಶಸ್ಸು ಆ ಕ್ಷಣಕ್ಕೆ ಸಂತೋಷವನ್ನು ತಂದುಕೊಟ್ಟರೂ ಕೂಡ ಕಾಲಕ್ರಮೇಣ ನೋವಿಗೆ ಕಾರಣವಾಗುತ್ತದೆ. ಇದು ವ್ಯಕ್ತಿಯ ಜೀವನವನ್ನು ಹಾಳು ಮಾಡುತ್ತದೆ. ಹೀಗಾಗಿ ಯಶಸ್ಸು ಯಾವತ್ತಿಗೂ ಸತ್ಯದ ಮಾರ್ಗದಿಂದ ಇರಲಿ. ಆಗ ಆತ್ಮೀಯ ವ್ಯಕ್ತಿ ಮೋಸ ಮಾಡಿದರೂ ಕೂಡ ಆ ನೋವಿನಿಂದ ಚೇತರಿಸಿಕೊಳ್ಳಲು ಸಾಧ್ಯ ಎನ್ನುತ್ತಾನೆ ಚಾಣಕ್ಯ.
  • ಯಾರನ್ನೂ ಯಾವತ್ತಿಗೂ ನಿರ್ಲಕ್ಷಿಸಬೇಡಿ : ಒಬ್ಬ ವ್ಯಕ್ತಿಯು ಜ್ಞಾನ ಸಂಪಾದಿಸಿಕೊಂಡಾಗ ತನ್ನ ಮುಂದೆ ಇರುವ ವ್ಯಕ್ತಿಯನ್ನು ದುರ್ಬಲ ಎಂದು ಭಾವಿಸುತ್ತಾನೆ. ಆತನ ತಲೆ ಯಲ್ಲಿ ಅಹಂ ಭಾವನೆ ಮೂಡುತ್ತದೆ. ಆದರೆ ತನ್ನ ಎದುರಿಗಿರುವ ವ್ಯಕ್ತಿಯು ದುರ್ಬಲ ಎಂದು ಯಾವತ್ತಿಗೂ ಪರಿಗಣಿಸಲೇಬಾರದು. ಈ ವಿಷಯ ಆ ವ್ಯಕ್ತಿಗೆ ತಿಳಿದರೆ ತನ್ನ ತನ್ನ ಶಕ್ತಿಯನ್ನು ಬಹಿರಂಗ ಪಡಿಸದೇ ಇರಬಹುದು ಈ ವೇಳೆಯಲ್ಲಿ ಆತನನ್ನು ನೀವು ನಿರ್ಲಕ್ಷ್ಯ ಮಾಡುವರಿಂದ ನಿಮ್ಮ ನಾಶಕ್ಕೆ ನೀವೇ ದಾರಿ ಮಾಡಿಕೊಟ್ಟಂತಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ