Chanakya Niti :ನಿಮ್ಮವರನ್ನು ಕಣ್ಣು ಮುಚ್ಚಿ ನಂಬುವ ಮುನ್ನ ಈ ಗುಣಗಳಿವೆಯೇ ಒಮ್ಮೆ ಗಮನಿಸಿ
ನಂಬಿಕೆ ಗಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಬಿಡಿ. ಗಳಿಸಿದ ನಂಬಿಕೆಯನ್ನು ಉಳಿಸಿಕೊಳ್ಳುವುದು ಕಷ್ಟವೇ. ಹೀಗಾಗಿ ಒಬ್ಬ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿಯ ಮೇಲೆ ನಂಬಿಕೆಯೇ ಇಲ್ಲದಿದ್ದರೆ ಆ ಸಂಬಂಧವು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಇತ್ತೀಚೆಗಿನ ದಿನಗಳಲ್ಲಿ ನಂಬಿಕೆಯ ಕೊರತೆಯಿಂದಾಗಿ ಸಂಬಂಧಗಳು ಮುರಿದು ಬೀಳುತ್ತಿದೆ. ಆದರೆ ಚಾಣಕ್ಯ ಒಬ್ಬ ವ್ಯಕ್ತಿಯನ್ನು ನಂಬುವ ಮುನ್ನ ಈ ಗುಣಗಳಿವೆಯೇ ಎಂದು ನೋಡಿ ಎನ್ನುತ್ತಾರೆ. ಹಾಗಾದ್ರೆ ಒಬ್ಬ ವ್ಯಕ್ತಿಯಲ್ಲಿ ಇರಬೇಕಾದ ಗುಣಗಳಾವುವು? ಎನ್ನುವ ಮಾಹಿತಿ ಇಲ್ಲಿದೆ.

Chanakya Niti
ಯಾವುದೇ ಸಂಬಂಧದಲ್ಲಿ ಪ್ರೀತಿ, ಕಾಳಜಿಯೊಂದಿಗೆ ನಂಬಿಕೆ ಇರಲೇಬೇಕು. ಹೀಗಾಗಿ ನಂಬಿಕೆಯೆನ್ನುವುದು ಸಂಬಂಧದ ತಳಹದಿ ಎನ್ನಲಾಗಿದೆ. ಈಗಿನ ಕಾಲದಲ್ಲಿ ವಿಶ್ವಾಸ ಹಾಗೂ ನಂಬಿಕೆಯನ್ನು ಗಳಿಸಿಕೊಳ್ಳುವುದು ಕಷ್ಟವೇ. ಒಮ್ಮೆ ನಂಬಿಕೆಯನ್ನು ಗಳಿಸಿಕೊಂಡರೆ ದೀರ್ಘಕಾಲದವರೆಗೆ ಆ ನಂಬಿಕೆವು ಸಂಬಂಧವನ್ನು ಕಾಯುತ್ತದೆ. ಆದರೆ ಒಮ್ಮೆ ವ್ಯಕ್ತಿಯೂ ಮೋಸ ಮಾಡುತ್ತಿದ್ದಾನೆ ಎಂದು ತಿಳಿದರೆ ಆತ ಏನು ಮಾಡಿದರೂ ತಪ್ಪಾಗಿಯೆ ಅರ್ಥ ಮಾಡಿಕೊಳ್ಳುತ್ತೇವೆ. ಆ ವ್ಯಕ್ತಿಯ ವೇಳೆ ಮತ್ತೊಂದು ನಂಬಿಕೆ ಹುಟ್ಟಲು ಸಾಧ್ಯವಿಲ್ಲ. ಆಚಾರ್ಯ ಚಾಣಕ್ಯ ಹೇಳುವಂತೆ ಒಬ್ಬ ವ್ಯಕ್ತಿಯನ್ನು ನಂಬುವ ಮುನ್ನ ಆತನಲ್ಲಿರುವ ಗುಣಗಳ ಬಗ್ಗೆ ಗಮನಹರಿಸಿ ಎನ್ನುವ ಸಲಹೆಯನ್ನು ಚಾಣಕ್ಯ ನೀಡುತ್ತಾರೆ.
- ಪ್ರತಿಯೊಬ್ಬರ ಜೀವನದಲ್ಲಿಯೂ ಕೆಟ್ಟ ಗುಣಗಳು ಮತ್ತು ಒಳ್ಳೆಯ ಗುಣಗಳು ಇರುತ್ತವೆ. ಹೀಗಾಗಿ ಸೋಮಾರಿಗಳು, ಹೆಮ್ಮೆಪಡುವವರು ಅಥವಾ ಪದೇ ಪದೇ ಸುಳ್ಳು ಹೇಳುವ ಅಭ್ಯಾಸವಿರುವ ಜನರನ್ನು ಎಂದಿಗೂ ನಂಬಬೇಡಿ. ಶಾಂತವಾಗಿ, ಗಂಭೀರವಾಗಿ ಮತ್ತು ಸತ್ಯವಾಗಿ ಮಾತನಾಡುವವರು ಹಾಗೂ ನೀತಿವಂತ ಮಾರ್ಗದಲ್ಲಿ ನಡೆಯುವವರನ್ನು ಮಾತ್ರ ನಂಬಬೇಕು ಎನ್ನುತ್ತಾರೆ ಚಾಣಕ್ಯ.
- ಒಬ್ಬ ವ್ಯಕ್ತಿಯನ್ನು ನಂಬುವ ಮೊದಲು ಅವರಲ್ಲಿ ತ್ಯಾಗದ ಗುಣವಿದೆಯೇ ಎಂದು ನೋಡಿ. ಇತರರ ಜೀವನಕ್ಕೆ ಸಂತೋಷವನ್ನು ತರಲು ತಮ್ಮ ಸ್ವಂತ ಸಂತೋಷವನ್ನು ತ್ಯಾಗ ಮಾಡುತ್ತಾರೆ. ಈ ವ್ಯಕ್ತಿಗಳು ಇತರರ ದುಃಖವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳನ್ನು ಕಣ್ಣು ಮುಚ್ಚಿ ನಂಬಬಹುದಂತೆ.
- ನೀವು ಯಾರನ್ನಾದರೂ ನಂಬುವ ಮೊದಲು, ಕುಟುಂಬದಲ್ಲಿ ಅವರ ಪಾತ್ರವೇನು ಎನ್ನುವ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಆ ವ್ಯಕ್ತಿಯ ಮನೆಯಲ್ಲಿ ಅವರ ಪಾತ್ರವೇನು? ಯಾವ ರೀತಿಯ ಕೆಲಸಗಳನ್ನು ಮಾಡುತ್ತಾರೆ? ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆಯೇ ಅಥವಾ ಕೆಟ್ಟ ಕೆಲಸಗಳನ್ನು ಮಾಡಲು ಬಯಸುತ್ತಾರೆಯೇ ಎಂಬುದನ್ನು ತಿಳಿದುಕೊಳ್ಳಿ. ಆ ಬಳಿಕ ಅವರು ನಂಬಿಕೆಗೆ ಅರ್ಹರೇ ಇಲ್ಲವೇ ಎನ್ನುವುದು ಖಚಿತವಾಗುತ್ತದೆ.
- ಕೆಲವು ಜನರಿಗೆ ಸಂಬಂಧಗಳಿಗಿಂತ ಹಣವು ಹೆಚ್ಚು ಮೌಲ್ಯಯುತವಾಗಿರುತ್ತದೆ. ನೀವು ಯಾರಿಗಾದರೂ ಹಣವನ್ನು ನೀಡಿ ನಂಬಿಕೆಗೆ ಅರ್ಹರೇ ಎಂದು ತಿಳಿದುಕೊಳ್ಳಬಹುದು. ಮೊದಲು ನಿಮ್ಮ ಸುತ್ತಮುತ್ತಲಿನ ವ್ಯಕ್ತಿಗೆ ಸ್ವಲ್ಪ ಹಣವನ್ನು ಸಾಲವಾಗಿ ನೀಡಿ. ಆ ಹಣವನ್ನು ಸರಿಯಾದ ಸಮಯಕ್ಕೆ ಸರಿಯಾಗಿ ಹಿಂದಿರುಗಿಸಿದರೆ, ನೀವು ಅವರನ್ನು ಸಂಪೂರ್ಣವಾಗಿ ನಂಬಬಹುದಂತೆ. ಅದಲ್ಲದೆ, ಕೆಲ ಜನರು, ಸ್ವಾರ್ಥ ಆಲೋಚನೆಗಳಿಂದ, ತಪ್ಪು ಹಾದಿ ಹಿಡಿದು ಹಣ ಸಂಪಾದಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಅವರು ಎಂದಿಗೂ ನಂಬಿಕೆಗೆ ಅರ್ಹರಾಗಿರುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




