Chanakya Niti: ದಾಂಪತ್ಯ ಜೀವನ ಸುಖವಾಗಿರಬೇಕೆಂದರೆ ಗಂಡ-ಹೆಂಡತಿ ಹೀಗಿರಬೇಕೆಂದಿದ್ದಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು ಸುಖ ದಾಂಪತ್ಯಕ್ಕೆ ಸಂಬಂಧಿಸಿದ ಹಲವು ಸಲಹೆಗಳನ್ನು ನೀಡಿದ್ದಾರೆ. ಗಂಡನಾದವನು ಹೇಗಿರಬೇಕು, ಎಂತಹ ಸಂಗಾತಿ ಪತಿಗೆ ಅದೃಷ್ಟ ತರುತ್ತಾಳೆ ಹೀಗೆ ಗಂಡ ಹೆಂಡತಿಗೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ದಾಂಪತ್ಯ ಜೀವನ ಸಂತೋಷದಿಂದ ಸಾಗಲು ಪತಿ ಪತ್ನಿಯರಲ್ಲಿ ಈ ಮೂರು ಗುಣಗಳು ಇರಲೇಬೇಕು ಎಂಬುದನ್ನು ಸಹ ಹೇಳಿದ್ದಾರೆ. ಅವು ಯಾವುವು ಎಂಬುದನ್ನು ನೋಡೋಣ ಬನ್ನಿ.

Chanakya Niti: ದಾಂಪತ್ಯ ಜೀವನ ಸುಖವಾಗಿರಬೇಕೆಂದರೆ ಗಂಡ-ಹೆಂಡತಿ ಹೀಗಿರಬೇಕೆಂದಿದ್ದಾರೆ ಚಾಣಕ್ಯ
ಸಾಂದರ್ಭಿಕ ಚಿತ್ರ
Image Credit source: Pinterest

Updated on: May 19, 2026 | 9:32 PM

ಪ್ರತಿಯೊಬ್ಬರೂ ಸಹ ಸಂತೋಷ ಮತ್ತು ಶಾಂತಿಯುತ ದಾಂಪತ್ಯ ಜೀವನವನ್ನು (married life) ಬಯಸುತ್ತಾರೆ, ಆದರೆ ಇಂದಿನ ಒತ್ತಡದ ಜೀವನದಲ್ಲಿ ಕ್ಷುಲ್ಲಕ ವಿಷಯಗಳಿಗೆ ಗಂಡ ಮತ್ತು ಹೆಂಡತಿಯ ನಡುವೆ ಜಗಳಗಳು ನಡೆಯುತ್ತಿವೆ, ಸಂಬಂಧಗಳು ಮುರಿದು ಬೀಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಗಂಡ ಮತ್ತು ಹೆಂಡತಿ ತಮ್ಮ ಸ್ವಭಾವದಲ್ಲಿ, ಗುಣದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸುಂದರ ಜೀವನವನ್ನು ಸಾಗಿಸಬಹುದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಚಾಣಕ್ಯರು ಸಂತೋಷದ ದಾಂಪತ್ಯ ಜೀವನದ ಅಡಿಪಾಯವೆಂದು  ಪರಿಗಣಿಸಿದ ಆ ಮೂರು ವಿಷಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ದಾಂಪತ್ಯ ಜೀವನ ಸಂತೋಷದಿಂದಿರಲು ಗಂಡ ಹೆಂಡತಿ ಹೇಗಿರಬೇಕು?

ತಾಳ್ಮೆಯಿಂದ ಇರುವುದು:  ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ವಿವಾದ ಉಲ್ಬಣಗೊಳ್ಳಲು ದೊಡ್ಡ ಕಾರಣವೆಂದರೆ ಎರಡೂ ಪಕ್ಷದವರು  ಏಕಕಾಲದಲ್ಲಿ ಕೋಪಗೊಳ್ಳುವುದು. ಹೀಗೆ ಇಬ್ಬರೂ ಕೋಪದಲ್ಲಿಯೇ ಮಾತನಾಡಿದರೆ ಸಂಬಂಧ ಇನ್ನಷ್ಟು ಹದಗೆಡುತ್ತದೆ. ಹಾಗಾಗಿ ಒಬ್ಬ ಸಂಗಾತಿ ಕೋಪಗೊಂಡಾಗ, ಇನ್ನೊಬ್ಬರು ಮೌನವಾಗಿರಬೇಕು ಮತ್ತು ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು. ಇದರಿಂದ ಜಗಳಗಳು ನಡೆಯುವುದಿಲ್ಲ ಹಾಗೂ ದಾಂಪತ್ಯ ಜೀವನದಲ್ಲಿ ಸದಾ ಕಾಲ ಸಂತೋಷವೇ ತುಂಬಿರುತ್ತದೆ.

ಪರಸ್ಪರ ಗೌರವ:  ಯಾವುದೇ ಬಲವಾದ ಸಂಬಂಧದ ಅಡಿಪಾಯ ಕೇವಲ ಪ್ರೀತಿ ಮಾತ್ರವಲ್ಲ, ಗೌರವದ ಮೇಲೂ ನಿಂತಿರುತ್ತದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಚಾಣಕ್ಯ ನೀತಿಯ ಪ್ರಕಾರ, ಗಂಡ ಮತ್ತು ಹೆಂಡತಿ ಪರಸ್ಪರ ಗೌರವಿಸಬೇಕು. ನಿಮ್ಮ ಸಂಗಾತಿಯ ಆಲೋಚನೆಗಳು ಮತ್ತು ವ್ಯಕ್ತಿತ್ವವನ್ನು ನೀವು ಗೌರವಿಸಿದಾಗ, ಸಾಮರಸ್ಯವು ಸ್ವಾಭಾವಿಕವಾಗಿ ಬೆಳೆಯುತ್ತದೆ. ಪರಸ್ಪರ ಗೌರವವು ಮೇಲುಗೈ ಸಾಧಿಸುವಲ್ಲಿ ನಕಾರಾತ್ಮಕತೆ ಮತ್ತು ಸಂಘರ್ಷಕ್ಕೆ ಅವಕಾಶವಿಲ್ಲ. ಹೀಗಿದ್ದರೆ ಗಂಡ ಹೆಂಡತಿಯ ಸಂಬಂಧದಲ್ಲಿ ಬಿರುಕು ಸಹ ಮೂಡುವುದಿಲ್ಲ.

ಇದನ್ನೂ ಓದಿ: ನಿಮ್ಮ ವೈಯಕ್ತಿಕ ವಿಚಾರಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ಸರಿಯಲ್ಲ

ಪ್ರಾಮಾಣಿಕತೆ ಮತ್ತು ಸಂತೃಪ್ತಿ: ಆಚಾರ್ಯ ಚಾಣಕ್ಯರ ಪ್ರಕಾರ, ಹೋಲಿಕೆಯು ವೈವಾಹಿಕ ಕಲಹಗಳು ಉಂಟಾಗಲು ಕಾರಣವಾಗುತ್ತದೆ. ಹೌದು ಇತರರ ಜೀವನವನ್ನು ನೋಡಿ ಅವರಂತೆಯೇ ನಾವು ಕೂಡ ಇರಬೇಕೆಂದು  ಸಂಗಾತಿಯ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದಾಗ ಇದು ಗಂಡ ಹೆಂಡತಿಯ ನಡುವೆ ಜಗಳಗಳು ನಡೆಯಲು, ಭಿನ್ನಾಭಿಪ್ರಾಯ ಉಂಟಾಗಲು ಕಾರಣವಾಗುತ್ತದೆ. ಅದೇ ಇರುವುದರಲ್ಲಿಯೇ ತೃಪ್ತರಾಗಿರುವ ಮತ್ತು ಪ್ರಗತಿಗಾಗಿ ಒಟ್ಟಿಗೆ ಶ್ರಮಿಸುವ, ಪ್ರಾಮಾಣಿಕರಾಗಿರುವ ದಂಪತಿಗಳು ಯಾವಾಗಲೂ ಸಂತೋಷವಾಗಿರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us