Chanakya Niti: ಈ ಅಭ್ಯಾಸಗಳಿದ್ದರೆ ಶ್ರೀಮಂತಿಕೆ ನಿಮ್ಮ ಹತ್ತಿರಕ್ಕೂ ಸುಳಿಯಲ್ಲವಂತೆ

ಪ್ರತಿಯೊಬ್ಬರೂ ಸಹ ನಾನು ಶ್ರೀಮಂತನಾಗಬೇಕು, ನನಗೆ ಹಣದ ಸಮಸ್ಯೆಗಳೇ ಎದುರಾಗಬಾರದು ಅಂತೆಲ್ಲಾ ಅಂದುಕೊಳ್ಳುತ್ತಾರೆ. ಶ್ರೀಮಂತರಾಗಲು ಹಗಲಿರುಳು ಕಷ್ಟಪಡುವವರೂ ಇದ್ದಾರೆ. ಆದ್ರೆ ಎಷ್ಟೇ ಪ್ರಯತ್ನಪಟ್ಟರೂ ಈ ಒಂದಷ್ಟು ಅಭ್ಯಾಸಗಳು ನಿಮಗಿದ್ದರೆ, ನೀವು ಎಂದಿಗೂ ಶ್ರೀಮಂತರಾಗಲು ಸಾಧ್ಯವಿಲ್ಲ, ಶ್ರೀಮಂತಿ ಎನ್ನೋದು ನಿಮ್ಮ ಬಳಿಯೂ ಸುಳಿಯೋದಿಲ್ಲ ಎಂದು ಚಾಣಕ್ಯ ಹೇಳಿದ್ದಾರೆ. ಹಾಗಿದ್ರೆ ಜೀವನದಲ್ಲಿ ಯಶಸ್ಸು ಲಭಿಸಲು ಯಾವ ಅಭ್ಯಾಸದಿಂದ ದೂರವಿರಬೇಕು ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ಅಭ್ಯಾಸಗಳಿದ್ದರೆ ಶ್ರೀಮಂತಿಕೆ ನಿಮ್ಮ ಹತ್ತಿರಕ್ಕೂ ಸುಳಿಯಲ್ಲವಂತೆ
ಚಾಣಕ್ಯ ನೀತಿ
Image Credit source: Getty Images

Updated on: Jul 14, 2025 | 6:13 PM

ಮಹಾನ್‌ ವಿದ್ವಾಂಸ, ತತ್ವಜ್ಞಾನಿ, ಅರ್ಥಶಾಸ್ತ್ರಜ್ಞರಾದ ಆಚಾರ್ಯ ಚಾಣಕ್ಯರು (Acharya Chanakya) ರಾಜಕೀಯ ನೀತಿಗಳು ಮಾತ್ರವಲ್ಲದೆ ಜೀವನಕ್ಕೆ ಸಂಬಂಧಿಸಿದ ಪ್ರಮುಖ ವಿಷಾರಗಳ ಬಗ್ಗೆಯೂ ತಮ್ಮ ನೀತಿ ಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಹೌದು ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ವಿಚಾರಗಳಿಂದ ಹಿಡಿದು ವಿವಾಹಕ್ಕೆ ಸಂಬಂಧಿಸಿದ ವಿಚಾರಗಳು, ಸುಖ ದಾಂಪತ್ಯ ಜೀವನ, ಉದ್ಯೋಗ, ಯಶಸ್ಸು, ಒಳ್ಳೆಯ ಸ್ನೇಹ, ನಮ್ಮ ಶತ್ರುಗಳು ಯಾರು ಅಂತೆಲ್ಲಾ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಜೊತೆಗೆ ಎಂತಹ ವ್ಯಕ್ತಿ ಶ್ರೀಮಂತನಾಗಲು ಸಾಧ್ಯವಿಲ್ಲ ಎಂಬುದನ್ನು ಕೂಡಾ ಹೇಳಿದ್ದಾರೆ. ಶ್ರೀಮಂತನಾಗಬೇಕು ಎಂದು ಪ್ರತಿಯೊಬ್ಬರು ಕಷ್ಟಪಡುತ್ತಾರೆ. ಆದರೆ ಈ ಒಂದಷ್ಟು ಅಭ್ಯಾಸಗಳಿದ್ದರೆ, ನಿಮ್ಮ ಬಳಿ ಯಾವತ್ತಿಗೂ ಶ್ರೀಮಂತಿಕೆ ಸುಳಿಯೋದಿಲ್ಲ ಎಂದು ಅವರು ಹೇಳಿದ್ದಾರೆ. ಹಾಗಿದ್ರೆ ಜೀವನದಲ್ಲಿ ಶ್ರೀಮಂತಿಕೆಯನ್ನು ಪಡೆಯಲು ಯಾವ ಅಭ್ಯಾಸದಿಂದ ದೂರವಿರಬೇಕು ಎಂಬುದನ್ನು ನೋಡೋಣ ಬನ್ನಿ.

ಈ ಅಭ್ಯಾಸಗಳಿದ್ದರೆ ಶ್ರೀಮಂತಿಕೆ ನಿಮ್ಮ ಹತ್ತಿರಕ್ಕೂ ಸುಳಿಯಲ್ಲವಂತೆ:

ಸೋಮಾರಿತನ: ಆಚಾರ್ಯ ಚಾಣಕ್ಯ ಹೇಳುವಂತೆ, ಇಂದೇ ಮಾಡಿ ಮುಗಿಸದೆ ಪ್ರತಿಯೊಂದು ಕೆಲಸವನ್ನು ನಾಳೆಯವರೆಗೆ ಮುಂದೂಡುವ ಸೋಮಾರಿ ವ್ಯಕ್ತಿ ಎಂದಿಗೂ ಶ್ರೀಮಂತನಾಗಲು ಸಾಧ್ಯವಿಲ್ಲ.  ಸೋಮಾರಿಗಳು ಸಿಕ್ಕ ಅವಕಾಶಗಳನ್ನು ಎಂದಿಗೂ ಸರಿಯಾಗಿ ಬಳಸಿಕೊಳ್ಳುವುದಿಲ್ಲ, ಅವಕಾಶ ಕೈ ಜಾರಿ ಹೋದಾಗ ಆ ಬಗ್ಗೆ ವಿಷಾದಿಸುತ್ತಾರೆ.  ಹೀಗಿರುವಾಗ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮ ಅಗತ್ಯ.

ಮಹಿಳೆಯರಿಗೆ ಗೌರವ ನೀಡದಿರುವುದು: ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯರಿಗೆ ಗೌರವ ನೀಡದವರು ಎಂದಿಗೂ ಶ್ರೀಮಂತರಾಗುವುದಿಲ್ಲ.  ಮಹಿಳೆಯರಿಗೆ ಗೌರವ ನೀಡದ ಮನೆಯಲ್ಲಿ ಲಕ್ಷ್ಮಿ ದೇವಿ ಎಂದಿಗೂ ವಾಸಿಸುವುದಿಲ್ಲ. ಅಂತಹ ವ್ಯಕ್ತಿಗಳಿಗೆ ಯಾವಾಗಲೂ ಹಣದ ಸಮಸ್ಯೆ ಎದುರಾಗುತ್ತದೆ ಮತ್ತು ಅವರು ಎಂದಿಗೂ ಶ್ರೀಮಂತರಾಗುವುದಿಲ್ಲ ಜೊತೆಗೆ, ಅಹಂಕಾರ ಭಾವವನ್ನು ಹೊಂದಿರುವ, ವಂಚನೆಯಂತಹ ಕೆಲಸಗಳನ್ನು ಮಾಡುವ ಜನರು ಯಾವಾಗಲೂ ಹಣದ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಚಾಣಕ್ಯ ಹೇಳುತ್ತಾರೆ.

ಇದನ್ನೂ ಓದಿ
ತಪ್ಪಿಯೂ ಇಂತಹ ಜನರಿಗೆ ಸಹಾಯ ಮಾಡಬೇಡಿ
ಈ ನಾಲ್ಕು ಜನರನ್ನು ತಂದೆಯಂತೆಯೇ ಗೌರವಿಸಬೇಕು ಎನ್ನುತ್ತಾರೆ ಚಾಣಕ್ಯರು
“ಇಲ್ಲ” ಎಂದು ಹೇಳುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಏಕೆ ಮುಖ್ಯ ಗೊತ್ತಾ?
ಇಂತಹವರಿಗೆ ಯಾವತ್ತಿಗೂ ಸಾಲ ಕೊಡಬಾರದಂತೆ

ರಾತ್ರಿ ಪಾತ್ರೆಗಳನ್ನು ತೊಳೆಯದಿರುವ ಅಭ್ಯಾಸ: ಅನೇಕ ಜನರು ರಾತ್ರಿ ಊಟ ಮಾಡಿದ ನಂತರ ಆ ಪಾತ್ರಗಳನ್ನು ಸ್ವಚ್ಛಗೊಳಿಸದೆ ಅದನ್ನು ಹಾಗೆಯೇ ಸಿಂಕ್‌ನಲ್ಲಿಟ್ಟು ಮಲಗುತ್ತಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ಈ ಅಭ್ಯಾಸದಿಂದಾಗಿ, ಒಬ್ಬ ವ್ಯಕ್ತಿಯು ಲಕ್ಷ್ಮಿ ದೇವಿಯ ಕೋಪವನ್ನು ಎದುರಿಸಬೇಕಾಗಬಹುದು, ಇದರಿಂದಾಗಿ ವ್ಯಕ್ತಿಯು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಈ ಅಭ್ಯಾಸವನ್ನು ಬಿಟ್ಟುಬಿಡಿ.

ಇದನ್ನೂ ಓದಿ: ಚಾಣಕ್ಯರು ಹೇಳ್ತಾರೆ ಯಾವತ್ತಿಗೂ ಇಂತಹ ಜನರಿಗೆ ಸಹಾಯ ಮಾಡಬಾರದೆಂದು

ಕಠೋರ ಮಾತುಗಳನ್ನಾಡುವ ಅಭ್ಯಾಸ:  ಸಿಹಿಯಾಗಿ ಮಾತನಾಡುವ ವ್ಯಕ್ತಿಯತ್ತ ಎಲ್ಲರೂ ಆಕರ್ಷಿತರಾಗುತ್ತಾರೆ, ಆದರೆ ದುರಹಂಕಾರದಿಂದ ವರ್ತಿಸುವ, ಅಸಭ್ಯವಾಗಿ ಮಾತನಾಡುವ ವ್ಯಕ್ತಿಯೊಂದಿಗೆ ಮಾತನಾಡಲು ಯಾರೂ ಇಷ್ಟಪಡುವುದಿಲ್ಲ. ಮತ್ತೊಂದೆಡೆ ಇಂತಹ ಜನಗಳು ಎಂದಿಗೂ ಶ್ರೀಮಂತರಾಗಲು ಸಾಧ್ಯವಿಲ್ಲ ಎಂದು ಚಾಣಕ್ಯ ಹೇಳುತ್ತಾರೆ.

ಬೆಳಗ್ಗೆ ತಡವಾಗಿ ಏಳುವ ಅಭ್ಯಾಸ: ಆಚಾರ್ಯ ಚಾಣಕ್ಯರ ಪ್ರಕಾರ, ಬೆಳಗ್ಗೆ ತಡವಾಗಿ ಏಳುವ ಜನರಿಗೆ ಲಕ್ಷ್ಮೀ ದೇವಿಯ ಆಶೀರ್ವಾದ ಲಭಿಸುವುದಿಲ್ಲ. ಜೊತೆಗೆ ಅಂತಹ ವ್ಯಕ್ತಿಗಳು ಯಾವಾಗಲೂ ಸೋಮಾರಿಯಾಗಿರುತ್ತಾರೆ. ಹಾಗಾಗಿ ನೀವು ಆರ್ಥಿಕವಾಗಿ ಬಲಶಾಲಿಯಾಗಲು ಬಯಸಿದರೆ, ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ