Chanakya Niti: ಕೈಯಲ್ಲಿ ಹಣ ನಿಲ್ಲದಿರಲು ಈ ಅಭ್ಯಾಸಗಳೇ ಕಾರಣ ಎನ್ನುತ್ತಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ನೀತಿಗಳು ಮಾತ್ರವಲ್ಲದೆ ದಾಂಪತ್ಯ ಜೀವನದಿಂದ ಹಿಡಿದು ಜೀವನದ ಯಶಸ್ಸಿನವರೆಗೆ ಜೀವನಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆಯೂ ಹೇಳಿದ್ದಾರೆ. ಜೊತೆಗೆ ಯಾವ ಅಭ್ಯಾಸಗಳಿಂದ ಕೈಯಲ್ಲಿ ಹಣ ಉಳಿಯುವುದಿಲ್ಲ, ಶ್ರೀಮಂತಿಕೆ ಗಳಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಸಹ ತಿಳಿಸಿಕೊಟ್ಟಿದ್ದಾರೆ. ಹಾಗಿದ್ದರೆ ನಮ್ಮ ಯಾವ ಅಭ್ಯಾಸದಿಂದ ಕೈಯಲ್ಲಿ ಹಣ ಎನ್ನುವಂತಹದ್ದು ನಿಲ್ಲುವುದಿಲ್ಲ ಎಂಬುದನ್ನು ನೋಡೋಣ.

Chanakya Niti: ಕೈಯಲ್ಲಿ ಹಣ ನಿಲ್ಲದಿರಲು ಈ ಅಭ್ಯಾಸಗಳೇ ಕಾರಣ ಎನ್ನುತ್ತಾರೆ ಚಾಣಕ್ಯ
ಚಾಣಕ್ಯ ನೀತಿ
Image Credit source: Getty Images

Updated on: Aug 03, 2025 | 7:15 PM

ಪ್ರತಿಯೊಬ್ಬರೂ ಕೂಡಾ ಯಾವುದಾದರೂ ಒಂದು ಕೆಲಸಕ್ಕೆ ಹೋಗಿ ಸಂಪಾದನೆ ಎನ್ನುವಂತಹದ್ದನ್ನು ಮಾಡೇ ಮಾಡುತ್ತಾರೆ. ಜೀವನ ನಡೆಸಲು ಸಂಪಾದನೆ ಬೇಕೇಬೇಕು. ಆದರೆ ಅನೇಕ ಜನರು ಎಷ್ಟು ದುಡಿದರೂ ಏನು ಪ್ರಯೋಜನ, ಕೈಯಲ್ಲಿ ಒಂದು ರೂಪಾಯಿ ಕೂಡಾ ಉಳಿಯೋದಿಲ್ಲ (financial loss) ಎಂದು ಗೊಣಗುತ್ತಿರುತ್ತಾರೆ. ಹೀಗೆ ಕೈಯಲ್ಲಿ ಒಂದು ರೂಪಾಯಿ ಹಣ ಸಹ ನಿಲ್ಲದಿರಲು, ಪದೇ ಪದೇ ಆರ್ಥಿಕ ತೊಂದರೆಗಳು ಕಾಣಿಸಿಕೊಳ್ಳಲು ನಮ್ಮ ಈ ಒಂದಷ್ಟು ಅಭ್ಯಾಸಗಳೇ ಕಾರಣವಂತೆ. ಹೌದು ಈ ಬಗ್ಗೆ ಆಚಾರ್ಯ ಚಾಣಕ್ಯರು (Chanakya) ತಮ್ಮ ನೀತಿ ಶಾಸ್ತ್ರದಲ್ಲಿ ತಿಳಿಸಿದ್ದು, ಇವರ ಪ್ರಕಾರ ಯಾವ ಅಭ್ಯಾಸಗಳ ಕಾರಣ ಎಷ್ಟೇ ಸಂಪಾದನೆ ಇದ್ದರೂ ಕೈಯಲ್ಲಿ ಹಣ ಉಳಿಯುವುದಿಲ್ಲ ಎಂಬುದನ್ನು ನೋಡೋಣ ಬನ್ನಿ.

ಚಾಣಕ್ಯರ ಪ್ರಕಾರ ಈ ಅಭ್ಯಾಸಗಳೇ ಆರ್ಥಿಕ ನಷ್ಟಕ್ಕೆ ಕಾರಣ:

ಸೋಮಾರಿತ: ಸೋಮಾರಿತನ ಮನುಷ್ಯನ ಅತಿ ದೊಡ್ಡ ಶತ್ರು ಎಂದು ಚಾಣಕ್ಯ ಹೇಳಿದ್ದಾರೆ. ಕೆಲಸ ಮುಂದೂಡುವುದು, ಸಿಕ್ಕಂತಹ ಅವಕಾಶಗಳನ್ನು ಕಳೆದುಕೊಳ್ಳುವುದು ಮತ್ತು ಸಮಯಕ್ಕೆ ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದು ಆರ್ಥಿಕ ತೊಂದರೆಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿ ಸೋಮರಿತನವನ್ನು ಬಿಟ್ಟುಬಿಡಬೇಕು.

ಅತಿಯಾದ ಖರ್ಚು: ಚಾಣಕ್ಯರು ಹೇಳುವಂತೆ,  ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವವರ ಕೈಯಲ್ಲಿ ಯಾವಾಗಲೂ ಹಣ ಉಳಿಯುವುದಿಲ್ಲ. ಅಂತಹವರು ಯಾವಾಗಲೂ ಸಾಲದಲ್ಲಿಯೇ ಇರುತ್ತಾರೆ. ಅದಕ್ಕಾಗಿಯೇ ಯಾವುದೇ ಖರ್ಚು ಮಾಡುವ ಮೊದಲು 10 ಬಾರಿ ಯೋಚಿಸಬೇಕು. ಇದಲ್ಲದೆ ಒಬ್ಬ ವ್ಯಕ್ತಿ ತನ್ನ ಸಾಮಾರ್ಥ್ಯಕ್ಕಿಂತ ಹೆಚ್ಚು ಎಂದಿಗೂ ಖರ್ಚು ಮಾಡಬಾರದು, ವಿಶೇಷವಾಗಿ ಸಾಲವನ್ನು ಮಾಡಲೇಬಾರದು ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ
ಈ ಅಭ್ಯಾಸಗಳಿದ್ದರೆ ಶ್ರೀಮಂತಿಕೆ ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ
ತಪ್ಪಿಯೂ ಇಂತಹ ಜನರಿಗೆ ಸಹಾಯ ಮಾಡಬೇಡಿ
ಈ ನಾಲ್ಕು ಜನರನ್ನು ತಂದೆಯಂತೆಯೇ ಗೌರವಿಸಬೇಕು ಎನ್ನುತ್ತಾರೆ ಚಾಣಕ್ಯರು
ಇಂತಹವರಿಗೆ ಯಾವತ್ತಿಗೂ ಸಾಲ ಕೊಡಬಾರದಂತೆ

ಕೆಟ್ಟ ಚಟಗಳ ಅಭ್ಯಾಸ: ಧೂಮಪಾನ, ಮದ್ಯಪಾನದಂತಹ ಕೆಟ್ಟ ಚಟಗಳನ್ನು ಹೊಂದಿರುವವರ ಬಳಿಯೂ ಹಣ ಎನ್ನುವುದು ಉಳಿಯುವುದಿಲ್ಲ. ಹೌದು ಅವರು ಹಣವನ್ನು ಉಳಿತಾಯ ಮಾಡುವುದಿಲ್ಲ, ಬದಲಾಗಿ ತಮ್ಮ ಸಂಪಾದನೆಯನ್ನು ತಮ್ಮ ಚಟಗಳಿಗೆಯೇ ಖರ್ಚು ಮಾಡಿ ಬಿಡುತ್ತಾರೆ. ಹಾಗಾಗಿ ಇಂತಹ ಚಟಗಳಿಂದ ಮನುಷ್ಯ ಆದಷ್ಟು ದೂರವಿರಬೇಕು ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: ಈ ಅಭ್ಯಾಸಗಳಿದ್ದರೆ ಶ್ರೀಮಂತಿಕೆ ನಿಮ್ಮ ಹತ್ತಿರಕ್ಕೂ ಸುಳಿಯಲ್ಲವಂತೆ

ಜವಾಬ್ದಾರಿ ಇಲ್ಲದಿರುವುದು: ಮನೆಯ ಜವಾಬ್ದಾರಿ ತೆಗೆದುಕೊಳ್ಳದವರು ಬೇಕಾಬಿಟ್ಟಿ ಖರ್ಚು ಮಾಡುತ್ತಾರೆ. ಅವರ ಕೈಯಲ್ಲಿ ಹಣ ಎನ್ನುವಂತಹದ್ದೇ ಇರುವುದಿಲ್ಲ. ಆದರೆ ನಾವು ಜವಾಬ್ದಾರಿಗಳನ್ನು ತೆಗೆದುಕೊಂಡರೆ ಅದರಿಂದ ನಾವು ಉಳಿತಾಯ ಮತ್ತು ಹೂಡಿಕೆಯ ಅಭ್ಯಾಸವನ್ನು ರೂಢಿಸಿಕೊಳ್ಳುತ್ತೇವೆ. ಹಾಗಾಗಿ ಪ್ರತಿಯೊಬ್ಬರಿಗೂ ಜವಾಬ್ದಾರಿ ಎನ್ನುವುದು ಇರಲೇಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ