ಈ ಪಕ್ಷಿಗಳ ಫೋಟೋವನ್ನು ಮನೆಯಲ್ಲಿಟ್ಟರೆ, ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತೆ
ಮಗು ಅಳುವಂತಹದ್ದು, ಮುಳುಗುತ್ತಿರುವ ಹಡಗು, ತಾಜ್‌ಮಹಲ್ ಇತ್ಯಾದಿಗಳ ಫೋಟೋಗಳನ್ನು ಮನೆಯಲ್ಲಿ ಇಡಬಾರದು. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ ಅಲ್ವಾ. ಅದೇ ರೀತಿ ಈ ಕೆಲವೊಂದಿಷ್ಟು ಹಕ್ಕಿಗಳ ಫೋಟೋಗಳನ್ನು ಮನೆಯಲ್ಲಿ ಇಟ್ಟರೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದಂತೆ, ಜೊತೆಗೆ ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತಂತೆ. ಹಾಗಾದರೆ ಯಾವ ಪಕ್ಷಿಗಳ ಫೋಟೋಗಳನ್ನು ಮನೆಯಲ್ಲಿ ಇಟ್ಟರೆ ಶ್ರೇಷ್ಠ ಎಂಬುದನ್ನು ನೋಡೋಣ ಬನ್ನಿ.

ಮನೆಯ ಅಂದವನ್ನು ಹೆಚ್ಚಿಸುವಲ್ಲಿ ಫೋಟೋಗಳು (Photos) ಕೂಡಾ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಇದಕ್ಕಾಗಿ ಅನೇಕರು ಹ್ಯಾಂಡ್‌ಮೇಡ್ ಪೇಂಟಿಂಗ್ಸ್‌ಗಳಿಂದ ಹಿಡಿದು ದುಬಾರಿ ಬೆಲೆಯ ಫೋಟೋಗಳವರೆಗೆ ತರಹೇವಾರಿ ಫೋಟೋ ಫ್ರೇಮ್‌ಗಳನ್ನು ಮನೆ ಗೋಡೆಯ ಮೇಲೆ ನೇತು ಹಾಕುತ್ತಾರೆ. ಹೀಗೆ ಸಿಕ್ಕ ಸಿಕ್ಕ ಫೋಟೋಗಳನ್ನು ಮನೆಯಲ್ಲಿ ಇಡಬಾರದು, ಇದರಿಂದ ದುರಾದೃಷ್ಟ ಮತ್ತು ನಕಾರಾತ್ಮಕತೆ ಮನೆಯಲ್ಲಿ ಆವರಿಸುತ್ತದೆ ಎಂದು ಹೇಳುವ ಮಾತನ್ನು ನೀವು ಸಹ ಕೇಳಿರಬಹುದಲ್ವಾ. ಅದರಂತೆ ಕೆಲವೊಂದಿಷ್ಟು ಫೋಟೋಗಳು ಅದೃಷ್ಟವನ್ನು ತರುತ್ತಂತೆ. ಅದರಲ್ಲೂ ಈ ಕೆಲವೊಂದು ಪಕ್ಷಿಗಳ ಫೋಟೋವನ್ನು (bird photos that bring luck) ಮನೆಯಲ್ಲಿ ಇಡಲೇಬೇಕಂತೆ. ಇದರಿಂದ ನಿಮ್ಮ ಅದೃಷ್ಟವೇ ಬದಲಾಗುತ್ತದಂತೆ. ಹಾಗಿದ್ರೆ ಯಾವ ಪಕ್ಷಿಯ ಫೋಟೋ ಲಕ್ ತಂದು ಕೊಡುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮನೆಯಲ್ಲಿ ಈ ಪಕ್ಷಿಗಳ ಫೋಟೊಗಳನ್ನು ಇಡುವುದು ಅದೃಷ್ಟದ ಸಂಕೇತವಂತೆ:
ನವಿಲಿನ ಫೋಟೋ: ನವಿಲಿನ ಫೋಟೋವನ್ನು ಮನೆಯಲ್ಲಿ ಇಡುವುದು ತುಂಬಾನೇ ಒಳ್ಳೆಯದಂತೆ. ಇದನ್ನು ಶುಭ ಮತ್ತು ಸಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯಲ್ಲಿ ಆಗಾಗ್ಗೆ ಜಗಳಗಳು ನಡೆದು, ಶಾಂತಿ ಎನ್ನುವಂತಹದ್ದು ಹಾಳಾಗಿದ್ದರೆ ನೀವು ನವಿಲಿನ ಫೋಟೋವನ್ನು ಮನೆಯಲ್ಲಿ ಇಡಬಹುದು. ಅದರಲ್ಲೂ ಮನೆಯ ಪೂರ್ವ ಗೋಡೆಯ ಮೇಲೆ ನವಿಲಿನ ಚಿತ್ರವನ್ನು ನೇತು ಹಾಕಬೇಕಂತೆ. ಇದರಿಂದ ಮನೆಯಲ್ಲಿ ಇಡುವುದರಿಂದ ಅದೃಷ್ಟವೂ ಬರುತ್ತದೆ.
ಹಂಸದ ಚಿತ್ರ: ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಬರಬೇಕೆಂದು ಬಯಸಿದರೆ ನೀವು ನಿಮ್ಮ ಮನೆಯ ಲಿವಿಂಗ್ ಕೋಣೆಯಲ್ಲಿ ಹಂಸದ ಚಿತ್ರವನ್ನಿಡಿ. ಇದು ಅದೃಷ್ಟವನ್ನು ತರುವುದು ಮಾತ್ರವಲ್ಲದೆ, ಈ ಫೋಟೋವನ್ನು ಇಡುವುದರಿಂದ ನಕಾರಾತ್ಮಕತೆ ದೂರವಾಗಿ ಮನೆಯಲ್ಲಿ ಸಕಾರಾತ್ಮಕತೆ ಬರುತ್ತದೆ.
ನೀಲಕಂಠ ಹಕ್ಕಿಯ ಚಿತ್ರ: ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿದ್ದರೆ ಮತ್ತು ಮನೆಯ ವಾತಾವರಣವು ಉದ್ವಿಗ್ನತೆಯಿಂದ ಕೂಡಿದ್ದರೆ, ನೀವು ಮನೆಯಲ್ಲಿ ನೀಲಕಂಠ ಹಕ್ಕಿಯ ಫೋಟೋವನ್ನು ಇಡಬಹುದು. ಈ ಫೋಟೋವನ್ನು ಇಡುವುದರಿಂದ ನಕಾರಾತ್ಮಕ ಶಕ್ತಿಯು ಸಕಾರಾತ್ಮಕ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ.
ಇದನ್ನೂ ಓದಿ: ತಪ್ಪಿಯೂ ಮನೆ ಗೊಡೆಯ ಮೇಲೆ ಇಂತಹ ಫೋಟೋಗಳನ್ನು ನೇತುಹಾಕಬೇಡಿ
ಲವ್ ಬರ್ಡ್ಸ್ ಚಿತ್ರ: ಲವ್ ಬರ್ಡ್ಸ್ ಚಿತ್ರವನ್ನು ಶುಭದ ಸಂಕೇತ ಮತ್ತು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಹೀಗಿರುವಾಗ ನೀವು ನಿಮ್ಮ ದಾಂಪತ್ಯ ಜೀವನವು ಸಂತೋಷದಿಂದ ಇರಬೇಕೆಂದು ಮತ್ತು ನಿಮ್ಮ ಮನೆಯಲ್ಲಿ ಸಮೃದ್ಧಿ ನೆಲೆಸಬೇಕು ಎಂದು ಬಯಸಿದರೆ ಲವ್ ಬರ್ಡ್ಸ್ ಫೋಟೋ ಮನೆಯಲ್ಲಿ ಇಡಿ. ಇದು ಸಂತೋಷ ಮತ್ತು ಸಮೃದ್ಧಿ ತರುವುದು ಮಾತ್ರವಲ್ಲದೆ ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ.
ಫೀನಿಕ್ಸ್ ಪಕ್ಷಿ ಚಿತ್ರ: ಯಶಸ್ಸಿನ ಸಂಕೇತವಾಗಿರುವ ಫೀನಿಕ್ಸ್ ಪಕ್ಷಿಯ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ನಿಮ್ಮ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದು ಯಶಸ್ಸಿನ ಹಾದಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ಸಕಾರಾತ್ಮಕತೆಯನ್ನು ಸೃಷ್ಟಿಸುತ್ತದೆ. ಜೊತೆಗೆ ಇದು ಅದೃಷ್ಟದ ಸಂಕೇತವೂ ಹೌದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








