AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಪ್ಪಿಯೂ ಮನೆ ಗೊಡೆಯ ಮೇಲೆ ಇಂತಹ ಫೋಟೋಗಳನ್ನು ನೇತುಹಾಕಬೇಡಿ

ಮನೆಯ ಅಂದವನ್ನು ಹೆಚ್ಚಿಸುವ ಸಲುವಾಗಿ ಅನೇಕರು ತಮ್ಮ ಮನೆಯ ಗೋಡೆಗಳ ಮೇಲೆ ಚೆಂದ ಚೆಂದದ ಫೋಟೋಗಳನ್ನು ನೇತು ಹಾಕುತ್ತಾರೆ. ತಾಜ್‌ ಮಹಲ್‌, ಬುದ್ಧ, ಹೂವು, ಪ್ರಾಣಿಗಳು ಒಂದಷ್ಟು ವಿಶೇಷವೆನಿಸುವ ಫೋಟೋಗಳನ್ನು ಮನೆಯ ಗೋಡೆಯ ಮೇಲೆ ನೇತು ಹಾಕುತ್ತಾರೆ. ಆದ್ರೆ ಶಾಸ್ತ್ರಗಳ ಪ್ರಕಾರ ಈ ಒಂದಷ್ಟು ಫೋಟೋಗಳನ್ನು ಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ಹರಡುತ್ತಂತೆ. ಹಾಗಾದ್ರೆ ಯಾವೆಲ್ಲಾ ಫೋಟೋಗಳನ್ನು ಮನೆ ಗೋಡೆಯ ಮೇಲೆ ನೇತು ಹಾಕಬಾರದು ಎಂಬುದನ್ನು ನೋಡಿ.

ತಪ್ಪಿಯೂ ಮನೆ ಗೊಡೆಯ ಮೇಲೆ ಇಂತಹ ಫೋಟೋಗಳನ್ನು ನೇತುಹಾಕಬೇಡಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
|

Updated on: Jul 07, 2025 | 8:38 PM

Share

ಸಾಮಾನ್ಯವಾಗಿ ಎಲ್ಲರೂ ತಮ್ಮ ಮನೆಯ ಅಂದವನ್ನು ಹೆಚ್ಚಿಸುವ ಸಲುವಾಗಿ ಮನೆಯ ಗೋಡೆಯ ಮೇಲೆ ವಿವಿಧ ರೀತಿಯ ಫೋಟೋಗಳನ್ನು(wall frames) ನೇತು ಹಾಕುತ್ತಾರೆ. ಈ ಫೋಟೋಗಳು ಮನೆಯ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಮನೆಯಲ್ಲಿ ಸಕಾರಾತ್ಮಕತೆ, ನಕಾರಾತ್ಮಕತೆ ಹರಡುವ ಶಕ್ತಿಯನ್ನೂ ಹೊಂದಿರುತ್ತವೆ. ಹೌದು ಕೆಲವು ಫೋಟೋಗಳು ಮನೆಯಲ್ಲಿ ಸಮೃದ್ಧಿಯನ್ನು ತಂದರೆ, ಮನೆಯಲ್ಲಿ ನೇತು ಹಾಕುವ ಕೆಲವು ಫೋಟೋಗಳು ನಕಾರಾತ್ಮಕತೆಯನ್ನು ಹರಡುತ್ತವೆ. ಆದರೆ ಹೀಗೆ ಮನೆಯಲ್ಲಿ ಯಾವ ಫೋಟೋ ಇಡಬೇಕು, ಇಡಬಾರದು ಎಂಬುದರ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಹೀಗಿರುವಾಗ ಯಾವ ಫೋಟೋಗಳನ್ನು ಮನೆಯ ಗೋಡೆಯ ಮೇಲೆ ನೇತು ಹಾಕಿದರೆ (Avoid putting these photo on walls)ನಕಾರಾತ್ಮಕ ಶಕ್ತಿ ಹರಡುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಮನೆಯ ಗೊಡೆಯ ಮೇಲೆ ಇಂತಹ ಫೋಟೋಗಳನ್ನು ನೇತುಹಾಕಬೇಡಿ:

ಯುದ್ಧದ ಚಿತ್ರ: ಯುದ್ಧಕ್ಕೆ ಸಂಬಂಧಿಸಿದ ಫೋಟೋಗಳನ್ನು ಅಥವಾ ಬೇಟೆಗೆ ಸಂಬಂಧಿಸಿದ ಚಿತ್ರಗಳನ್ನು ಮನೆಯಲ್ಲಿ ಇಡಲೇಬಾರದು ಎಂದು ಹೇಳುತ್ತಾರೆ. ಅವು ಯಾವಾಗಲೂ ಮನೆಯಲ್ಲಿ ಅಶಾಂತಿಯನ್ನು ಉಂಟು ಮಾಡುತ್ತದೆ. ಜೊತೆಗೆ ಮನೆಯಲ್ಲಿ ಅಪಶ್ರುತಿಯ ಪರಿಸ್ಥಿತಿಯನ್ನು ಉಂಟು ಮಾಡುತ್ತದೆ.

ತಾಜ್‌ ಮಹಲ್‌ ಫೋಟೋ: ಪ್ರೀತಿಯ ಸಂಕೇತ ಎಂದು ಕೆಲವರು ಮನೆಯಲ್ಲಿ ತಾಜ್‌ ಮಹಲ್‌ ಫೋಟೋವನ್ನು ಇಡುತ್ತಾರೆ. ಆದ್ರೆ ಈ ಫೋಟೋವನ್ನು ಮನೆಯಲ್ಲಿ ಇಡಲೇಬಾರದು. ಶಾಸ್ತ್ರಗಳ ಪ್ರಕಾರ, ಸಮಾಧಿಯ ಚಿತ್ರವನ್ನು ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ.

ಇದನ್ನೂ ಓದಿ
Image
ಬೆಳಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡಬೇಕಂತೆ
Image
ಇಂತಹವರಿಗೆ ಯಾವತ್ತಿಗೂ ಸಾಲ ಕೊಡಬಾರದಂತೆ
Image
ಮನೆ ಮುಂದೆ ಈ ಹೂವಿನ ಗಿಡಗಳನ್ನು ನೆಡಲೇಬೇಕಂತೆ
Image
ಬೆಳಗ್ಗೆ ಎದ್ದ ತಕ್ಷಣ ತಪ್ಪಿಯೂ ಈ ವಸ್ತುಗಳನ್ನು ನೋಡಬೇಡಿ

ನೋವು: ನೋವು, ದುಃಖಿತ, ಕೋಪ ಭಾವನೆಯಂತಿರುವ ಫೋಟೋಗಳನ್ನು ಮನೆಯ ಗೋಡೆಯ ಮೇಲೆ ನೇತು ಹಾಕಬಾರದು. ಅಷ್ಟೇ ಅಲ್ಲದೇ ಆಕ್ರಮಣಕಾರಿ ಪ್ರಾಣಿಗಳ ಚಿತ್ರವನ್ನು ಸಹ ಮನೆ ಗೋಡೆಯ ಮೇಲೆ ನೇತು ಹಾಕಬಾರದು. ಇವುಗಳು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಯಾವಾಗಲೂ ಸಂತೋಷ ಮತ್ತು ಖುಷಿಯ ಸೂಚಕವಾದ ಫೋಟೋಗಳನ್ನು ಮಾತ್ರ ಇಟ್ಟುಕೊಳ್ಳಬೇಕು.

ಮಗು ಅಳುವ ಫೋಟೋ: ನಿಮ್ಮ ಮನೆಯ ಗೋಡೆಯ ಮೇಲೆ ಮಗು ಅಳುವ ಫೋಟೊವನ್ನು ಎಂದಿಗೂ ನೇತು ಹಾಕಬೇಡಿ. ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಮುಳುಗುತ್ತಿರುವ ಹಡಗು: ಕೆಲವರು ಮನೆಯ ಗೋಡೆಯ ಮೇಲೆ ಮುಳುಗುತ್ತಿರುವ ಹಡಗಿನ ಫೋಟೋವನ್ನು ನೇತು ಹಾಕುತ್ತಾರೆ. ಆದರೆ ಅಂತಹ ಫೋಟೋಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅಶಾಂತಿಯನ್ನು ಉಂಟು ಮಾಡುತ್ತದೆ. ಅಲ್ಲದೆ ಇದು ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೂ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.

ಗುಲಾಬಿ ಗಿಡ: ಕೆಲವರಿಗೆ ಗುಲಾಬಿ ಗಿಡಗಳೆಂದರೆ ಇಷ್ಟ. ಅದಕ್ಕಾಗಿ ಮನೆಯ ಗೋಡೆಯ ಮೇಲೆ ಗುಲಾಬಿ ಗಿಡಗಳ ಫೋಟೋವನ್ನು ಸಹ ನೇತು ಹಾಕುತ್ತಾರೆ. ಆದರೆ  ಮುಳ್ಳುಗಳಿರುವ ಈ ಗಿಡಗಳ ಫೋಟೋ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಇದು ಆರ್ಥಿಕ ನಷ್ಟಕ್ಕೂ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡಿದ್ರೆ ನಿಮ್ಮ ಇಡೀ ದಿನ ಚೆನ್ನಾಗಿರುತ್ತಂತೆ

ಜಲಪಾತದ ಚಿತ್ರ: ಕೆಲವರು ಮನೆಯಲ್ಲಿ ಜಲಪಾತಗಳ ಫೋಟೋವನ್ನು ಗೋಡೆಗೆ ನೇತು ಹಾಕುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಈ ಫೋಟೋಗಳನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ. ಏಕೆಂದರೆ ಇದರಿಂದ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ. ನೀರು ಹರಿದಂತೆ ನಿಮ್ಮ ಹಣವೂ ಹರಿದು ಹೋಗುತ್ತದೆ ಎಂದು ಹೇಳಲಾಗುತ್ತದೆ.

ಹೀಗಿರುವಾಗ ನಿಮ್ಮ ಮನೆಯಲ್ಲಿ ನೀವು ಇರಿಸಿಕೊಳ್ಳುವ ಯಾವುದೇ ಫೋಟೋಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಮಸುಕಾದ, ತುಂಡಾದ ಅಥವಾ ಒಡೆದ ಗಾಜನ್ನು ಹೊಂದಿರುವ ಫೋಟೋಗಳನ್ನು ಎಂದಿಗೂ ಇಡಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ