
ಗಂಡನಾದವನು ಹೆಂಡತಿಯ (wife) ಮಾತನ್ನು ಕೇಳಬೇಕು, ಹೆಂಡತಿಯಾದವನು ಗಂಡನ ಮಾತುಗಳನ್ನು ಪಾಲಿಸಬೇಕು ಎಂದು ಹೇಳ್ತಾರೆ. ಆದ್ರೆ ಹೀಗೆ ಹೆಂಡತಿ ಹೇಳುವ ಪ್ರತಿಯೊಂದು ವಿಷಯವನ್ನು ಗಂಡನಾದವನು ಕೇಳಬೇಕೆಂದಿಲ್ಲ, ಕುಟುಂಬದಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕೆಂದರೆ, ಸಂಬಂಧಗಳು ಉಳಿಯಬೇಕೆಂದರೆ ಈ ಕೆಲವೊಂದು ವಿಷಯಗಳಿಗೆ ಗಂಡನಾದವನು ಕಿವಿ ಕೊಡದಿದ್ದರೆಯೇ ಒಳಿತು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅವರ ಪ್ರಕಾರ, ಕೆಲವು ನಿರ್ಧಾರಗಳನ್ನು ಭಾವನಾತ್ಮಕವಾಗಿ ಅಲ್ಲ, ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು. ಆಗ ಮಾತ್ರ ಕುಟುಂಬದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ. ಹಾಗಿದ್ರೆ ಗಂಡನಾದವನು ಹೆಂಡತಿಯ ಯಾವ ನಿರ್ಧಾರಗಳಿಗೆ ಒಪ್ಪಿಗೆ ಸೂಚಿಸಬಾರದು ಎಂಬುದನ್ನು ನೋಡೋಣ ಬನ್ನಿ.
ಚಾಣಕ್ಯರ ಪ್ರಕಾರ, ಹೆಂಡತಿ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸಲು ಒತ್ತಾಯಿಸಿದರೆ, ಗಂಡನು ಆ ಬಗ್ಗೆ ಆತುರದ ನಿರ್ಧಾರಗಳನ್ನು ತೆಗೆದುಕೊಂಡು ಬೇರೆ ಮನೆ ಮಾಡಬಾರದಯ. ಅವನು ಮೊದಲು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಮತ್ತು ಅದನ್ನು ಮಾತುಕತೆಯ ಮೂಲಕ ಹೇಗೆ ಪರಿಹರಿಸಲು ಪ್ರಯತ್ನಿಸಬೇಕು. ಅದೇ ಪ್ರತ್ಯೇಕವಾಗಿ ವಾಸಿಸಿದರೆ ಕುಟುಂಬವೇ ಒಡೆದು ಹೋಗುತ್ತದೆ.
ಹೆಂಡತಿ ಏನಾದ್ರೂ ತನ್ನ ಸಂಗಾತಿಯ ಆಸ್ತಿಯನ್ನು ಅಥವಾ ಕುಟುಂಬದ ಇತರ ಸದಸ್ಯರ ಹೆಸರಿನಲ್ಲಿರುವ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಒತ್ತಾಯಿಸಿದರೆ, ಗಂಡನಾದವನು ಯಾವತ್ತೂ ಅದಕ್ಕೆ ಒಪ್ಪಿಗೆ ನೀಡಬಾರದು ಎಂದಿದ್ದಾರೆ ಚಾಣಕ್ಯ. ಅಂತಹ ನಿರ್ಧಾರಗಳು ಹೆಚ್ಚಾಗಿ ಸಂಬಂಧಗಳು ಮತ್ತು ಕೌಟುಂಬಿಕ ವಿವಾದಗಳಿಗೆ ಕಾರಣವಾಗಬಹುದು.
ಇನ್ನೊಬ್ಬ ವ್ಯಕ್ತಿಗೆ ಅವಮಾನಿಸುವ, ಹಾನಿ ಮಾಡುವ ಅಥವಾ ಇನ್ನೊಬ್ಬರ ಬಳಿ ಜಗಳ ಮಾಡುವಂತೆ ಹೆಂಡತಿ ಹೇಳಿದರೆ, ಗಂಡನಾದವನು ಅದಕ್ಕೆ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು ಅಥವಾ ಆಕೆಯನ್ನು ಈ ವಿಷಯದಲ್ಲಿ ಬೆಂಬಲಿಸಬಾರದು. ಏಕೆಂದರೆ ಅಂತಹ ಕ್ರಿಯೆಗಳು ನಿಮ್ಮ ಸಂಬಂಧಗಳು ಮತ್ತು ಸಾಮಾಜಿಕ ಸ್ಥಾನಮಾನ ಎರಡರ ಮೇಲೂ ಪರಿಣಾಮ ಬೀರಬಹುದು.
ಇದನ್ನೂ ಓದಿ: ಪುರುಷರೇ… ನೀವು ಯಾವತ್ತಿಗೂ ಇಂತಹ ಜನರನ್ನು ನಂಬೇಡಿ
ಹೆಂಡತಿಯಾದವಳು ಬೇಡವಾದ ವಿಷಯಗಳಿಗೆ ಖರ್ಚು ಮಾಡಲು ಹೇಳಿದರೆ ಗಂಡನಾದವನು ಅದಕ್ಕೆ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು ಎಂದು ಆಚಾರ್ಯ ಚಾಣಕ್ಯರು ಸಲಹೆಯನ್ನು ನೀಡಿದ್ದಾರೆ. ಖರ್ಚಿನ ಬದಲು ಆದಷ್ಟು ಉಳಿತಾಯ ಮಾಡಬೇಕು, ಭವಿಷ್ಯದ ಭದ್ರತೆಗೆ ಆರ್ಥಿಕ ಸಮತೋಲನವನ್ನು ಕಾಪಾಡಿಕೊಳ್ಳಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ