Chanakya Niti: ನಿಮ್ಮ ಈ ವೈಯಕ್ತಿಯ ವಿಚಾರಗಳನ್ನು ಅಪ್ಪಿತಪ್ಪಿಯೂ ಸಂಬಂಧಿಕರ ಬಳಿ ಶೇರ್‌ ಮಾಡಬೇಡಿ

ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ಅಥವಾ ಆಡಳಿತದ ವಿಚಾರಗಳು ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಮುಖ್ಯ ಮಾರ್ಗದರ್ಶನಗಳನ್ನೂ ನೀಡಿದ್ದಾರೆ. ಅದರಲ್ಲಿ ಸಂಬಂಧಿಕರೊಂದಿಗೆ ಹೇಗಿರಬೇಕು, ಸಂಬಂಧಿಕರೊಂದಿಗೆ ಯಾವ ವಿಚಾರಗಳನ್ನು ಶೇರ್‌ ಮಾಡಬಾರದು, ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡರೆ ಆಗುವ ತೊಂದರೆಗಳೇನು ಎಂಬುದನ್ನು ಸಹ ವಿವರಿಸಿದ್ದಾರೆ. ಹಾಗಿದ್ರೆ ಯಾವ ವಿಷಯಗಳನ್ನು ಸಂಬಂಧಿಕರ ಬಳಿ ಹಂಚಿಕೊಳ್ಳಬಾರದು ಎಂಬುದನ್ನು ತಪ್ಪದೆ ತಿಳಿದುಕೊಳ್ಳಿ.

Chanakya Niti: ನಿಮ್ಮ ಈ ವೈಯಕ್ತಿಯ ವಿಚಾರಗಳನ್ನು ಅಪ್ಪಿತಪ್ಪಿಯೂ ಸಂಬಂಧಿಕರ ಬಳಿ ಶೇರ್‌ ಮಾಡಬೇಡಿ
ಚಾಣಕ್ಯ ನೀತಿ
Image Credit source: Freepik

Updated on: Dec 29, 2025 | 3:49 PM

ನಮ್ಮ ಜೀವನದ ಸಿಹಿ ಕಹಿ ಎಲ್ಲಾ ರೀತಿಯ ವಿಚಾರಗಳನ್ನು ನಮ್ಮವರ ಬಳಿ ಹಂಚಿಕೊಳ್ಳುತ್ತೇವೆ. ಅದರಲ್ಲೂ ಹೆಚ್ಚಾಗಿ ಸಂಬಂಧಿಕರು (relatives) ಮತ್ತು ಸ್ನೇಹಿತರ ಬಳಿ ಎಲ್ಲಾ ವಿಚಾರಗಳನ್ನು ಶೇರ್‌ ಮಾಡುತ್ತಿರುತ್ತೇವೆ. ಆದ್ರೆ ಇಂದಿನ ಈ ಕಾಲದಲ್ಲಿ ಯಾರು ನಂಬಿಕೆಗೆ ಅರ್ಹರು, ಯಾರು ನಮ್ಮ ಬೆನ್ನ ಹಿಂದೆ ಮಾತನಾಡುತ್ತಾರೆ, ನಮ್ಮ ಏಳಿಗೆಯನ್ನು ನೋಡಿ ಅಸೂಯೆ ಪಡುತ್ತಾರೆ ಎನ್ನುವುದು ಗೊತ್ತೇ ಆಗಲ್ಲ. ಅದಕ್ಕಾಗಿ ಎಷ್ಟೇ ಹತ್ತಿರದ ಸಂಬಂಧಿಗಳಾದರೂ ಸರಿ ಅವರ ಬಳಿ ನಿಮ್ಮ ಈ ಕೆಲವೊಂದಿಷ್ಟು ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲೇಬಾರದು, ಇದರಿಂದ ಅನುಕೂಲಕ್ಕಿಂತ ಹಾನಿಯೇ ಹೆಚ್ಚು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಿದ್ರೆ ಯಾವ ಕಾರಣಕ್ಕಾಗಿ ಯಾವೆಲ್ಲಾ ವೈಯಕ್ತಿಕ ವಿಷಯಗಳನ್ನು ಸಂಬಂಧಿಕರ ಬಳಿ ಶೇರ್‌ ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.

ನಿಮ್ಮ ಈ ವೈಯಕ್ತಿಯ ವಿಚಾರಗಳನ್ನು ಸಂಬಂಧಿಕರ ಬಳಿ ಶೇರ್‌ ಮಾಡಬೇಡಿ:

ನಿಮ್ಮ ಆದಾಯ: ನಿಮ್ಮ ಆದಾಯ, ಗಳಿಕೆಯ ಬಗ್ಗೆ ಸಂಬಂಧಿಕರ ಬಳಿ ಹಂಚಿಕೊಳ್ಳದಿರುವುದೇ ಉತ್ತಮ. ಏಕೆಂದರೆ ಕೆಲವರು ನಿಮ್ಮ ಆದಾಯದ ಬಗ್ಗೆ ಅಸೂಯೆ ಪಡುವ ಸಾಧ್ಯತೆ ಇರುತ್ತದೆ. ಇದರಿಂದ ಒಳ್ಳೆಯದಕ್ಕಿಂತ ನಕಾರಾತ್ಮಕ ಪರಿಣಾಮಗಳು ಬೀರುವುದೇ ಹೆಚ್ಚು. ಹಾಗಾಗಿ ಈ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳದಿರಿ.

ಕೌಟುಂಬಿಕ ಕಲಹಗಳು: ಹೆಚ್ಚಿನವರು ತಮ್ಮ ಮನೆಯೊಳಗೆ ನಡೆಯುವ ಕೌಟುಂಬಿಕ ಕಲಹಗಳು ಮತ್ತು ಜಗಳಗಳ ಬಗ್ಗೆ ಸಂಬಂಧಿಕರ ಬಳಿ ಹಂಚಿಕೊಳ್ಳುತ್ತಾರೆ. ಮನೆಯಲ್ಲಿ ನಡೆಯುವ ಕಲಹಗಳ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬಾರದು. ಏಕೆಂದರೆ ಕೆಲವರು ಇದನ್ನು ಗಾಸಿಪ್‌ ಮಾಡುತ್ತಾರೆ. ಇದರಿಂದ ಸಮಸ್ಯೆ ಇನ್ನಷ್ಟು ಹದಗೆಡುತ್ತದೆ.

ಮಾನಸಿಕ ನೋವು: ನಿಮ್ಮ ಮಾನಸಿಕ ನೋವು, ನಿಮ್ಮ ದೌರ್ಜಲ್ಯ, ಹಿಂದೆ ಆದಂತಹ ಅವಮಾನಗಳ ಬಗ್ಗೆ ಸಂಬಂಧಿಕರೊಂದಿಗೆ ಹಂಚಿಕೊಳ್ಳಬೇಡಿ. ಏಕೆಂದರೆ ಎಲ್ಲರೂ ನಿಮಗೆ ಸಹಾನುಭೂತಿ ತೋರುವುದಿಲ್ಲ, ಕೆಲವರು ಅದನ್ನು ಆಯುಧವಾಗಿಯೂ ಬಳಸಬಹುದು.

ಪ್ರೀತಿ ವಿಚಾರ:  ಸಂಬಂಧಿಕರ ಹಸ್ತಕ್ಷೇಪವು ಸಂಬಂಧದಲ್ಲಿ ಅನುಮಾನ ಮತ್ತು ಅಂತರವನ್ನು ಸೃಷ್ಟಿಸಬಹುದು. ನಿಮ್ಮ ಪ್ರೀತಿ ಸಂಬಂಧದ ವಿಚಾರದ ಬಗ್ಗೆ ಯಾರಿಗೂ ಹೇಳಬೇಡಿ ಏಕೆಂದರೆ ನಿಮ್ಮ ನಿಜವಾದ ಪ್ರೀತಿಯ ಇನ್ನೂ ಕೆಲವರು ನಿಮ್ಮ ಪ್ರೀತಿಯ ವಿಚಾರದಲ್ಲಿ ಮೂಗು ತುರಿಸಿ ಸಂಬಂಧದಲ್ಲಿ ಹುಳಿ ಹಿಂಡಬಹುದು.

ಇದನ್ನೂ ಓದಿ: ಕ್ರಿಸ್ಮಸ್‌, ನ್ಯೂ ಇಯರ್‌ಗೆ ಟ್ರಿಪ್‌ ಹೋಗೋ ಪ್ಲಾನ್‌ ಇದ್ಯಾ? ಹಾಗಿದ್ರೆ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ

ಭವಿಷ್ಯದ ಯೋಜನೆಗಳು: ಜೀವನದಲ್ಲಿ ಯಶಸ್ಸನ್ನು ಸಾಧಿಸಲು, ನೀವು ಕಠಿಣ ಪರಿಶ್ರಮದ ಜೊತೆಗೆ ಹಲವಾರು ಇತರ ವಿಷಯಗಳತ್ತ ಗಮನ ಹರಿಸಬೇಕು. ಆಚಾರ್ಯ ಚಾಣಕ್ಯರ ಪ್ರಕಾರ, ನೀವು ನಿಮ್ಮ ಗುರಿಗಳನ್ನು, ಭವಿಷ್ಯದ ಯೋಜನೆಗಳನ್ನು ಸಂಬಂಧಿಕರ ಜೊತೆ ಹಂಚಿಕೊಳ್ಳಬಾರದು. ಏಕೆಂದರೆ ಅವರು  ನಿಮ್ಮ ಪ್ರಗತಿಗೆ ಅಡ್ಡಿ ಉಂಟುಮಾಡಬಹುದು.

ಕೆಟ್ಟ ಅಭ್ಯಾಸಗಳು ಮತ್ತು ನ್ಯೂನತೆಗಳು: ನಿಮ್ಮ ಕೆಟ್ಟ ಅಭ್ಯಾಸಗಳು ಮತ್ತು ನ್ಯೂನತೆಗಳ ಬಗ್ಗೆ ಮುಖ್ಯವಾಗಿ ಸಂಬಂಧಿಕರ ಬಳಿ ಹೇಳಲೇಬೇಡಿ. ನಿಮ್ಮ ಈ ವಿಚಾರಗಳ ಬಗ್ಗೆ ಇತರರೊಂದಿಗೆ ಹಂಚಿಕೊಂಡು ನಿಮ್ಮ ಬಗ್ಗೆ ನಕಾರಾತ್ಮಕತೆಯನ್ನು ಹರಡಬಹುದು. ಇದು ನಿಮಗೆ ಕಳಂಕ ಉಂಟುಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ