AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಮಹಿಳೆಯರು ಈ ವಿಚಾರಗಳಲ್ಲಿ ಪುರುಷರಿಗಿಂತಲೂ ಸಖತ್‌ ಸ್ಟ್ರಾಂಗ್

ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ವೈಯಕ್ತಿಕ ಜೀವನ, ಯಶಸ್ಸು, ದಾಂಪತ್ಯ ಜೀವನ ಸೇರಿದಂತೆ ಅನೇಕಾರು ವಿಷಯಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಸಂಸಾರ, ಕುಟುಂಬವನ್ನು ಹೇಗೆ ನಿಭಾಯಿಸಬೇಕು ಎಂದು ಸ್ತ್ರೀಯರ ಜೀವನಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆಯೂ ಹೇಳಿದ್ದಾರೆ. ಅದರಲ್ಲೂ ಮಹಿಳೆಯರು ಕೆಲವು ವಿಷಯಗಳಲ್ಲಿ ಪುರುಷರಿಗಿಂತಲೂ ಸ್ಟ್ರಾಂಗ್‌, ಆ ವಿಚಾರಗಳಲ್ಲಿ ಅವರನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಆ ಸಂಗತಿಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Chanakya Niti: ಮಹಿಳೆಯರು ಈ ವಿಚಾರಗಳಲ್ಲಿ ಪುರುಷರಿಗಿಂತಲೂ ಸಖತ್‌  ಸ್ಟ್ರಾಂಗ್
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on:Dec 28, 2025 | 5:17 PM

Share

ಈ ಸಮಾಜದಲ್ಲಿ ಪುರುಷರನ್ನು ಬಲಿಷ್ಠರಾಗಿ ಹಾಗೂ ಮಹಿಳೆಯರನ್ನು (women) ಹೆಚ್ಚಾಗಿ ಭಾವನಾತ್ಮಕವಾಗಿ ಕಾಣಲಾಗುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಭಾವನಾತ್ಮಕವಾಗಿ ಬಲಶಾಲಿಗಳಲ್ಲಾ ಎನ್ನುವ ಮಾತಿದೆ. ಆದರೆ ಆಚಾರ್ಯ ಚಾಣಕ್ಯರ ಪ್ರಕಾರ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಈ ಕೆಲವೊಂದು ವಿಚಾರಗಳಲ್ಲಿ ಸಿಕ್ಕಾಪಟ್ಟೆ ಸ್ಟ್ರಾಂಗ್‌. ಅದರಲ್ಲೂ ಮಹಿಳೆಯರು ಭಾವನಾತ್ಮಕವಾಗಿ ಹೆಚ್ಚು ಬಲಶಾಲಿಗಳು, ಅವರು ಅತ್ಯಂತ ಕಷ್ಟದ ಸಮಯಗಳಲ್ಲಿಯೂ ಸಹ ಶಾಂತತೆಯನ್ನು ಕಾಯ್ದುಕೊಳ್ಳುತ್ತಾರೆ. ತಮ್ಮ ಕುಟುಂಬದ ಸಂತೋಷಕ್ಕಾಗಿ ದೊಡ್ಡ ತ್ಯಾಗಗಳನ್ನು ಮಾಡುವ ಧೈರ್ಯ ಮಹಿಳೆಗೆ ಮಾತ್ರ ಇದೆ ಎಂದು ಹೇಳಿದ್ದಾರೆ. ಹಾಗಿದ್ರೆ ಇವರ ಪ್ರಕಾರ ಮಹಿಳೆಯರು ಯಾವೆಲ್ಲಾ ವಿಚಾರದಲ್ಲಿ ಪುರುಷರಿಗಿಂತ ಸಿಕ್ಕಾಪಟ್ಟೆ ಸ್ಟ್ರಾಂಗ್‌ ಅನ್ನೋದನ್ನು ನೋಡೋಣ.

ಮಹಿಳೆಯರು ಈ ವಿಷಯಗಳಲ್ಲಿ ಪುರುಷರಿಗಿಂತಲೂ ಸ್ಟ್ರಾಂಗ್:

ಸಮನ್ವಯ ಮತ್ತು ಸಂಬಂಧ ನಿರ್ವಹಣೆಯ ಕಲೆ: ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸಂಬಂಧಗಳನ್ನು ಪೋಷಿಸುವ ಮತ್ತು ಸಂಬಂಧ ಒಡೆಯುವುದನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಚಾಣಕ್ಯರು ಹೇಳಿದ್ದಾರೆ. ಮಹಿಳೆಯರು ಸ್ವಾಭಾವಿಕವಾಗಿ ಹೆಚ್ಚು ಸಹಿಷ್ಣುರು ಮತ್ತು ಕೆಲವೊಮ್ಮೆ ಕುಟುಂಬದ ಐಕ್ಯತೆಗಾಗಿ ರಾಜಿ ಮಾಡಿಕೊಳ್ಳಲು ಮತ್ತುಎಂತಹ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಮನೆಯಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಯಾವಾಗ ಮೌನವಾಗಿರಬೇಕು ಮತ್ತು ಯಾವಾಗ ಮಾತಾಡಬೇಕು ಎಂಬುದು ಅವರಿಗೆ ತಿಳಿದಿದೆ. ಪುರುಷರು ಹೆಚ್ಚು ಸಂಪಾದನೆ ಮಾಡಬಹುದು ಆದರೆ ಕುಟುಂಬದಲ್ಲಿ ಪ್ರೀತಿಯನ್ನು ಕಾಪಾಡುವ ತಾಕತ್ತು ಕೇವಲ ಮಹಿಳೆಯರಲ್ಲಿ ಮಾತ್ರ ಇರುವುದು.

ಬುದ್ಧಿವಂತಿಕೆ ಮತ್ತು ಬಿಕ್ಕಟ್ಟು ಪರಿಹಾರ: ಚಾಣಕ್ಯನ ಪ್ರಕಾರ, ಮಹಿಳೆಯರು ಪುರುಷರಿಗಿಂತ ಹೆಚ್ಚು ಬುದ್ಧಿವಂತರು ಮತ್ತು ದೂರದೃಷ್ಟಿಯುಳ್ಳವರು. ಅವರು ಯಾವುದೇ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ತಮ್ಮ ಬುದ್ಧಿವಂತಿಕೆಯನ್ನು ಬಳಸುತ್ತಾರೆ. ಮಹಿಳೆಯರು ಹೆಚ್ಚಾಗಿ ಭವಿಷ್ಯದವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಪುರುಷರು ಆತುರ ಅಥವಾ ದುರಹಂಕಾರದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ತಪ್ಪುಗಳು ಆಗುವುದೇ ಹೆಚ್ಚು.

ಇದನ್ನೂ ಓದಿ: ಕೌಟುಂಬಿಕ ಕಲಹಗಳಿಗೆ ಮೂಲ ಕಾರಣವೇ ಅಂಶಗಳು ಎನ್ನುತ್ತಾರೆ

ಸಂವಹನ ಮತ್ತು ಉತ್ತಮ ನಡವಳಿಕೆ:  ಪುರುಷರಿಗಿಂತ ಮಹಿಳೆಯರಿಗೆ ಉತ್ತಮ ಸಂವಹನ ಕಲೆಯಿದೆ. ಚಾಣಕ್ಯರ ಪ್ರಕಾರ ಮಹಿಳೆಯರು ಯಾವಾಗಲೂ ಚಿಂತನಶೀಲವಾಗಿ ಮಾತನಾಡುತ್ತಾರೆ. ಹೃದಯವನ್ನು ಹೇಗೆ ಗೆಲ್ಲುವುದು ಅಥವಾ ತಮ್ಮ ಮಾತುಗಳಿಂದ ಸಮಸ್ಯೆಯನ್ನು ಹೇಗೆ ಸರಿಪಡಿಸುವುದು ಎಂದು ಅವರಿಗೆ ತಿಳಿದಿದೆ. ಆದರೆ ಪುರುಷರು ಹೆಚ್ಚಾಗಿ ಕೋಪದಿಂದ ಕಠಿಣ ಮಾತುಗಳನ್ನಾಗಿ ಸಂಬಂಧವನ್ನು ಹಾಳುಮಾಡಿಕೊಳ್ಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Sun, 28 December 25

ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ