Chanakya Niti: ಬೆಳಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡುವ ತಪ್ಪನ್ನು ಮಾಡಲೇಬೇಡಿ

ಆಚಾರ್ಯ ಚಾಣಕ್ಯರು ಯಶಸ್ಸು, ದಾಂಪತ್ಯ ಜೀವನ, ವೃತ್ತಿ ಜೀವನ ಸೇರಿದಂತೆ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ ಅವರು ಬೆಳಗ್ಗೆ ಎದ್ದ ತಕ್ಷಣ ಏನು ಮಾಡಬೇಕು, ಬೆಳಗ್ಗೆ ಎದ್ದ ತಕ್ಷಣ ಯಾವ ಸಂಗತಿಗಳನ್ನು ನೋಡಬಾರದು, ಇದರಿಂದಾಗುವ ಪರಿಣಾಮಗಳೇನು ಎಂಬುದರ ಬಗ್ಗೆಯೂ ವಿವರಿಸಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Chanakya Niti: ಬೆಳಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡುವ ತಪ್ಪನ್ನು ಮಾಡಲೇಬೇಡಿ
ಚಾಣಕ್ಯ ನೀತಿ
Image Credit source: Pinterest

Updated on: Dec 04, 2025 | 7:14 PM

ನಮ್ಮ ಇಡೀ ದಿನ ಹೇಗಿರುತ್ತದೆ ಎಂಬುದು ಬೆಳಗಿನ ದಿನಚರಿಯ (morning routine) ಮೇಲೆ ಅವಲಂಬಿತವಾಗಿರುತ್ತದೆ. ಹೌದು ಸಕಾರಾತ್ಮಕವಾಗಿ ದಿನವನ್ನು ಆರಂಭಿಸಿದರೆ ಸಂಪೂರ್ಣ ದಿನ ಚೆನ್ನಾಗಿರುತ್ತದೆ. ಅದೇ ನಕಾರಾತ್ಮಕ ಆಲೋಚನೆಗಳಿಂದ ದಿನ ಪ್ರಾರಂಭಿಸಿದರೆ ಆ ದಿನವೇ ಹಾಳಾಗುತ್ತದೆ. ಆದ್ದರಿಂದ ಬೆಳಗಿನ ದಿನಚರಿ ಉತ್ತಮ ರೀತಿಯಲ್ಲಿರಬೇಕು ಎಂದು ಹೇಳುವುದು. ಅದೇ ರೀತಿ ಇಡೀ ದಿನ ಚೆನ್ನಾಗಿರಬೇಕೆಂದರೆ ಬೆಳಗ್ಗೆ ಎದ್ದ ತಕ್ಷಣ ಈ ಕೆಲವು ಸಂಗತಿಗಳನ್ನು ನೋಡಲೇಬಾರದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಆ ವಿಷಯಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಳಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡಬೇಡಿ:

ಕನ್ನಡಿ ನೋಡಬಾರದು: ಬೆಳಗ್ಗೆ ಎದ್ದ ತಕ್ಷಣ ಕನ್ನಡಿ ನೋಡಬಾರದಂತೆ. ಈ ರೀತಿ ಕನ್ನಡಿ ನೋಡುವುದರಿಂದ ನಕಾರಾತ್ಮಕ ಭಾವನೆಗಳು ಬರಬಹುದು, ಇದರಿಂದ ಸಂಪೂರ್ಣ ದಿನ ಹಾಳಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ನಕಾರಾತ್ಮಕ ವ್ಯಕ್ತಿಯನ್ನು ನೋಡಬಾರದು: ಆಚಾರ್ಯ ಚಾಣಕ್ಯರ ಪ್ರಕಾರ, ನಿರಂತರವಾಗಿ ಕೋಪಗೊಳ್ಳುವ, ನಕಾರಾತ್ಮಕತೆಯನ್ನು ಹರಡುವ ಯಾರನ್ನೂ ನೀವು ನೋಡಬಾರದು. ನೀವು ಬೆಳಿಗ್ಗೆ ಎದ್ದಾಗ, ನಿಮ್ಮ ಮನಸ್ಸು ಸಂಪೂರ್ಣವಾಗಿ ಶಾಂತವಾಗಿರುತ್ತದೆ, ಆದರೆ ನೀವು ಅಂತಹ ವ್ಯಕ್ತಿಯನ್ನು ನೋಡಿದಾಗ, ನಿಮ್ಮ ಮನಸ್ಸಿಗೆ ಕಿರಿಕಿರಿ ಉಂಟಾಗುತ್ತದೆ ಮತ್ತು ಇದರಿಂದ ಸಂಪೂರ್ಣ ದಿನವೇ ಹಾಳಾಗುತ್ತದೆ.

ಜಗಳಗಳನ್ನು ನೋಡಬಾರದು: ಆಚಾರ್ಯ ಚಾಣಕ್ಯ ಹೇಳುವಂತೆ ನೀವು ಬೆಳಿಗ್ಗೆ ನೋಡುವ ವಿಷಯಗಳು ನಿಮ್ಮ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಹೀಗಿರುವಾಗ ನೀವು ಬೆಳಗ್ಗೆ ಎದ್ದ ತಕ್ಷಣ ಜಗಳ, ವಾದಗಳು ನಡೆಯುವುದನ್ನು ನೋಡಿದರೆ ನಿಮ್ಮ ಮನಸ್ಸು ಸಂಪೂರ್ಣವಾಗಿ ಹಾಳಾಗುತ್ತದೆ ಮತ್ತು ನೀವು ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ.

ಅವ್ಯವಸ್ಥೆಗಳನ್ನು ನೋಡಬಾರದು: ಚಾಣಕ್ಯ ನೀತಿಯ ಪ್ರಕಾರ, ಬೆಳಿಗ್ಗೆ ಎದ್ದಾಗ ಕೊಳಕು ಕೋಣೆ, ಚದುರಿದ ವಸ್ತುಗಳು ಅಥವಾ ಅಸ್ತವ್ಯಸ್ತವಾಗಿರುವ ವಸ್ತುಗಳನ್ನು ನೋಡಿದರೆ, ನಿಮ್ಮ ಮನಸ್ಸು ಕೆಟ್ಟು ಹೋಗುತ್ತದೆ. ಆದ್ದರಿಂದ ನೀವು ದಿನವಿಡೀ ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಲು ಬಯಸಿದರೆ, ಬೆಳಿಗ್ಗೆ ಅಂತಹ ವಿಷಯಗಳನ್ನು ನೋಡುವುದನ್ನು ತಪ್ಪಿಸಬೇಕು.

ಇದನ್ನೂ ಓದಿ: ಯೌವನದಲ್ಲಿ ಮಾಡುವ ತಪ್ಪುಗಳಿಂದ ಇಡೀ ಜೀವನವೇ ನಾಶವಾಗಬಹುದು ಎನ್ನುತ್ತಾರೆ ಚಾಣಕ್ಯ

ಸೋಮಾರಿ, ಆಲಸ್ಯದಿಂದಿರುವವರನ್ನು ನೋಡಬಾರದು: ಆಚಾರ್ಯ ಚಾಣಕ್ಯ ಹೇಳುವಂತೆ ಬೆಳಗಿನ ಸಮಯವು ಸಕಾರಾತ್ಮಕ ಶಕ್ತಿಯ ಸಮಯ. ಅಂತಹ ಸಮಯದಲ್ಲಿ, ನೀವು ನಿದ್ರಿಸುತ್ತಿರುವವರನ್ನು, ಆಲಸ್ಯದಿಂದ ಕೂಡಿರುವವರನ್ನು ನೋಡಿದರೆ ಅದರಿಂದ ನಿಮ್ಮ ಶಕ್ತಿಯೂ ದುರ್ಬಲವಾಗುತ್ತದೆ. ಹಾಗಾಗಿ ಆದಷ್ಟು ಸಕಾರಾತ್ಮಕ ಅಂಶಗಳೊಂದಿಗೆ ದಿನವನ್ನು ಆರಂಭಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ