Chanakya Niti: ಈ ಅಮೂಲ್ಯ ಸಂಗತಿಗಳನ್ನು ಕಳೆದುಕೊಂಡರೆ ಮರಳಿ ಪಡೆಯಲು ಸಾಧ್ಯವಿಲ್ಲ

ಯಾವುದಾದ್ರೂ ವಸ್ತು ಕಳೆದುಹೋದರೆ ಅದನ್ನು ಮರಳು ಪಡೆಯಬಹುದು, ಖರ್ಚಾದ ಹಣವನ್ನು ಹೆಚ್ಚು ಹೆಚ್ಚು ಸಂಪಾದನೆ ಮಾಡಿ ಮರಳಿ ಪಡೆಯಬಹುದು. ಆದರೆ ಈ ಒಂದಷ್ಟು ಅಮೂಲ್ಯ ಸಂಗತಿಗಳನ್ನು ಎಷ್ಟು ದುಡ್ಡು ಖರ್ಚು ಮಾಡಿದರೂ ಸಹ ಮರಳಿ ಪಡೆಯಲು ಸಾಧ್ಯವೇ ಇಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

Chanakya Niti: ಈ ಅಮೂಲ್ಯ ಸಂಗತಿಗಳನ್ನು ಕಳೆದುಕೊಂಡರೆ ಮರಳಿ ಪಡೆಯಲು ಸಾಧ್ಯವಿಲ್ಲ
ಚಾಣಕ್ಯ ನೀತಿ
Image Credit source: Pinterest

Updated on: Nov 26, 2025 | 6:27 PM

ಮಹಾನ್‌ ವಿದ್ವಾಂಸರಾದ ಆಚಾರ್ಯ ಚಾಣಕ್ಯರು (Acharya Chanakya) ಜೀವನ ಹೇಗೆ ನಡೆಸಬೇಕು, ಎಂತಹವರ ಸಹವಾಸ ಮಾಡಬೇಕು, ಯಶಸ್ಸಿಗಾಗಿ ಏನು ಮಾಡಬೇಕು ಇತ್ಯಾದಿ ನಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ಈ ಒಂದಷ್ಟು ಅಮೂಲ್ಯ ಸಂಗತಿಗಳನ್ನು ಮರಳಿ ಪಡೆಯಲು ಸಾಧ್ಯವಾಗದು ಎಂದಿದ್ದಾರೆ. ಹೌದು ಸಮಯ, ನಂಬಿಕೆ ಮತ್ತು ಅವಕಾಶಗಳು ಜೀವನದ ಅತ್ಯಂತ ಅಮೂಲ್ಯ ಅಂಶಗಳಾಗಿದ್ದು, ಇವು ಒಮ್ಮೆ ಕಳೆದುಹೋದರೆ, ಅವುಗಳನ್ನು ಮತ್ತೆಂದೂ ಮರಳಿ ಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಇವುಗಳನ್ನು ಕಳೆದುಕೊಂಡರೆ ಮರಳಿ ಪಡೆಯಲು ಸಾಧ್ಯವಿಲ್ಲ:

ಸಮಯ: ಒಮ್ಮೆ ಕಳೆದುಹೋದ ಸಮಯವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಸಮಯವನ್ನು ಗೌರವಿಸದ ಜನರು ನಂತರ ವಿಷಾದಿಸಬೇಕಾಗುತ್ತದೆ. ಈ ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡರೆ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ.

ನಂಬಿಕೆ: ಆಚಾರ್ಯ ಚಾಣಕ್ಯರ ಪ್ರಕಾರ, ಪ್ರತಿಯೊಂದು ಸಂಬಂಧದ ನಿಜವಾದ ಶಕ್ತಿ ನಂಬಿಕೆ. ಈ ನಂಬಿಕೆ ಒಮ್ಮೆ ಮುರಿದರೆ, ಅದನ್ನು ಎಂದಿಗೂ ಮರಳಿ ಪಡೆಯಲು ಸಾಧ್ಯವಿಲ್ಲ.ಆದ್ದರಿಂದ, ನಂಬಿಕೆ ಮುರಿಯದಂತೆ ಮತ್ತು ಸಂಬಂಧವು ಬಲವಾಗಿ ಉಳಿಯುವಂತೆ ಸಂಬಂಧಗಳಲ್ಲಿ ಯಾವಾಗಲೂ ಪ್ರಾಮಾಣಿಕತೆ ಮತ್ತು ಸತ್ಯತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: ಲೈಫಲ್ಲಿ ಸಕ್ಸಸ್‌ ಬೇಕಂದ್ರೆ ಯಶಸ್ಸಿನ ಮೂಲ ಗುಟ್ಟುಗಳ ಬಗ್ಗೆ ಮೊದಲು ತಿಳಿಯಿರಿ

ಅವಕಾಶಗಳು:  ಆಚಾರ್ಯ ಚಾಣಕ್ಯರ ಪ್ರಕಾರ, ಜೀವನವು ಅನೇಕ ಅವಕಾಶಗಳನ್ನು ನೀಡುತ್ತದೆ, ಆದರೆ ಪ್ರತಿಯೊಂದು ಅವಕಾಶವೂ ಮತ್ತೆ ಬರುವುದಿಲ್ಲ. ಇವುಗಳನ್ನು ಸರಿಯಾಗಿ ಬಳಸಿಕೊಂಡರೆ ಮಾತ್ರ ಮುಂದೆ ಸಾಗಬಹುದು. ಇಲ್ಲದಿದ್ದರೆ ವಿಷಾದಿಸಬೇಕಾಗುತ್ತದೆ. ಆದ್ದರಿಂದ, ಅವಕಾಶವನ್ನು ಗುರುತಿಸುವುದು ಮತ್ತು ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಯಶಸ್ಸಿನ ಕೀಲಿಯಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ