AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಲೈಫಲ್ಲಿ ಸಕ್ಸಸ್‌ ಬೇಕಂದ್ರೆ ಯಶಸ್ಸಿನ ಈ ಮೂಲ ಗುಟ್ಟುಗಳ ಬಗ್ಗೆ ಮೊದಲು ತಿಳಿಯಿರಿ

ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕು ಅನ್ನೋ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇದೆ. ಆದ್ರೆ ಯಶಸ್ಸನ್ನು ಸಾಧಿಸಲು ಮೊದಲು ಮಾಡಬೇಕಾದದ್ದೇನು ಎಂಬ ವಿಚಾರ ಹಲವರಿಗೆ ತಿಳಿದೇ ಇಲ್ಲ. ಸಕ್ಸಸ್‌ನ ಈ ರಹಸ್ಯವನ್ನು ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ವಿವರಿಸಿದ್ದಾರೆ, ಇದನ್ನು ಪಾಲಿಸುವ ಮೂಲಕ ನೀವು ಸಹ ಲೈಫಲ್ಲಿ ಸಕ್ಸಸ್‌ ಆಗಬಹುದು.

Chanakya Niti: ಲೈಫಲ್ಲಿ ಸಕ್ಸಸ್‌ ಬೇಕಂದ್ರೆ ಯಶಸ್ಸಿನ ಈ ಮೂಲ ಗುಟ್ಟುಗಳ ಬಗ್ಗೆ ಮೊದಲು ತಿಳಿಯಿರಿ
ಚಾಣಕ್ಯ ನೀತಿImage Credit source: Pexels
ಮಾಲಾಶ್ರೀ ಅಂಚನ್​
|

Updated on: Nov 25, 2025 | 6:01 PM

Share

ಯಶಸ್ಸನ್ನು (success) ಸಾಧಿಸಬೇಕು ಎಂಬ ಹಂಬಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಹಲವರಿಗೆ ಸರಿಯಾದ ಮಾರ್ಗದರ್ಶವನೇ ಇರುವುದಿಲ್ಲ, ಇದರಿಂದ ಯಶಸ್ಸಿನ ಹಾದಿಯಲ್ಲಿ ಎಡವುತ್ತಾರೆ. ಇನ್ನೂ ಲೈಫಲ್ಲಿ ಸಕ್ಸಸ್‌ ಆದವರು ತಮ್ಮ ಯಶಸ್ಸಿನ ಗುಟ್ಟನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಆದರೆ ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಯಶಸ್ಸಿನ ಗುಟ್ಟನ್ನು ವಿವರಿಸಿದ್ದು, ಇದನ್ನು ನೀವು ಪಾಲಿಸಿದ್ದೇ ಆದಲ್ಲಿ ಖಂಡಿತವಾಗಿಯೂ ಲೈಫಲ್ಲಿ ಸಕ್ಸಕ್‌ ಆಗ್ತೀರಿ. ಆ ಯಶಸ್ಸಿನ ಗುಟ್ಟು  ಯಾವುದೆಂದು ನೋಡೋಣ ಬನ್ನಿ.

ಇದುವೇ ಯಶಸ್ಸಿನ ಮೂಲ ಗುಟ್ಟು:

ಯೋಜನೆಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ: ಆಚಾರ್ಯ ಚಾಣಕ್ಯರು ನಿಮ್ಮ ಯೋಜನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅದು ಪೂರ್ಣಗೊಳ್ಳುವವರೆಗೆ ಅದನ್ನು ರಹಸ್ಯವಾಗಿಡಿ ಎಂದು ಸಲಹೆ ನೀಡುತ್ತಾರೆ. ಕೆಲವೊಮ್ಮೆ, ನೀವು ನಿಮ್ಮ ಯೋಜನೆಗಳನ್ನು ಇತರರೊಂದಿಗೆ ಹಂಚಿಕೊಂಡಾಗ, ಅವರು ನಿಮ್ಮ ಆಲೋಚನೆಯನ್ನು ಅಪಹಾಸ್ಯ ಮಾಡಬಹುದು, ಅಡೆತಡೆಗಳನ್ನು ಸೃಷ್ಟಿಸಬಹುದು.

ಕೆಲಸದಲ್ಲಿ ಆತುರಬೇಡ: ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಬದಲಿಗೆ ನೀವು ತಾಳ್ಮೆಯಿಂದಿರಬೇಕು, ಇದರಿಂದ ಪರಿಸ್ಥಿತಿಯನ್ನು ನಿರ್ಣಯಿಸಲು ಸಾಧ್ಯವಾಗುತ್ತದೆ. ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಜೀವನದಲ್ಲಿ ಘಟಿಸುವ ಸಂಗತಿಗಳು ಹಣೆಬರಹದ ಮೇಲೆ ನಿರ್ಧರಿತವಾಗಿರುತ್ತವೆ

ಎಲ್ಲರನ್ನೂ ನಂಬಬೇಡಿ: ಕುರುಡು ನಂಬಿಕೆ ವಿನಾಶಕ್ಕೆ ಕಾರಣವಾಗಬಹುದು ಆದ್ದರಿಂದ ಎಲ್ಲರನ್ನು ನಂಬಲು ಹೋಗಬೇಡಿ, ಎಚ್ಚರಿಕೆಯಿಂದ ಸ್ನೇಹ ಬೆಳೆಸಿ, ನಿಮ್ಮ ಮಿತಿಗಳನ್ನು ನಿರ್ಮಿಸಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

ವೈಫಲ್ಯಕ್ಕೆ ಹೆದರಬೇಡಿ, ಅದರಿಂದ ಕಲಿಯಿರಿ: ವೈಫಲ್ಯಗಳಿಗೆ ಹೆದರಿ ಹಿಂದೆ ಸರಿಯುವವರು ಜೀವನದಲ್ಲಿ ಎಂದಿಗೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ಸೋಲುಗಳಿಂದ ಗೆಲುವಿನ ಪಾಠವನ್ನು ಕಲಿತು ಮುನ್ನಡೆದರೆ ಮಾತ್ರ ಯಶಸ್ಸು ನಿಮ್ಮದಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ