Chanakya Niti : ನೀವು ಜೀವನದಲ್ಲಿ ಸುಖವಾಗಿರಬೇಕಾದ್ರೆ ಈ ರಹಸ್ಯ ನಿಮಗೆ ತಿಳಿದಿರಲಿ

ಜೀವನದಲ್ಲಿ ಯಾರಿಗೆ ತಾನೇ ಖುಷಿ ಖುಷಿಯಾಗಿ ಇರಬೇಕೆಂದು ಅನ್ನಿಸುವುದಿಲ್ಲ ಹೇಳಿ? ಆದರೆ ಅನೇಕ ವಿಷಯಗಳು ಅನೇಕರನ್ನು ಜೀವನದಲ್ಲಿ ಖುಷಿ ಖುಷಿಯಾಗಿರಲು ಅನುವು ಮಾಡಿಕೊಡುವುದಿಲ್ಲ. ನೀವು ಕೂಡ ಜೀವನದಲ್ಲಿ ಸಂತೋಷವಾಗಿರಲು ಬಯಸುತ್ತಿದ್ದರೆ ಚಾಣಕ್ಯ ಹೇಳುವ ಈ ವಿಷಯ ಗಳನ್ನು ತಪ್ಪದೇ ಪಾಲಿಸಿ. ಇದನ್ನು ಅನುಸರಿಸಿದರೆ ನೀವು ಅಂದುಕೊಂಡದ್ದಕ್ಕಿಂತ ಅದ್ಭುತವಾಗಿ ಬದುಕನ್ನು ನಡೆಸಬಹುದು.

Chanakya Niti : ನೀವು ಜೀವನದಲ್ಲಿ ಸುಖವಾಗಿರಬೇಕಾದ್ರೆ ಈ ರಹಸ್ಯ ನಿಮಗೆ ತಿಳಿದಿರಲಿ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 11, 2024 | 5:21 PM

ಜೀವನದಲ್ಲಿ ಎಲ್ಲರೂ ಖುಷಿಯಾಗಿರಲು ಬಯಸುತ್ತಾರೆ. ಇದಕ್ಕಾಗಿ ಜೀವನಪರ್ಯಂತ ಕಷ್ಟ ಪಟ್ಟು ದುಡಿದು ಹಣ ಸಂಪಾದಿಸುತ್ತಾರೆ. ಆದರೆ ಹಣದಿಂದಲೇ ಖುಷಿಯಂತೂ ಸಿಗುವುದಿಲ್ಲ. ಬದುಕಿನಲ್ಲಿ ಸದಾ ಖುಷಿಯಾಗಿರಬೇಕೆಂದರೆ ಚಾಣಕ್ಯ ಹೇಳುವ ಈ ಕೆಲವು ಸೂತ್ರಗಳನ್ನು ಪಾಲಿಸಬೇಕು. ಹೀಗಿದ್ದರೆ ಮಾತ್ರ ನೀವು ಅಂದುಕೊಂಡಂತಹ ಸಂತೋಷವನ್ನು ಪಡೆಯಲು ಸಾಧ್ಯ.

  1. ಶಾಂತ ಮನಸ್ಸು : ಚಾಣಕ್ಯನು ಹೇಳುವಂತೆ ಎಷ್ಟೇ ದೊಡ್ಡ ಸಮಸ್ಯೆಯಾದರೂ ಎಲ್ಲದಕ್ಕೂ ಶಾಂತ ಮನಸ್ಸಿದ್ದರೆ ಪರಿಹಾರ ಸಾಧ್ಯ. ಈಗಿನ ಕಾಲದಲ್ಲಿ ಹಣವಿದ್ದರೂ ಮನಸ್ಸಿಗೆ ನೆಮ್ಮದಿ ಸಿಗುತ್ತಿಲ್ಲ. ಎಲ್ಲಾ ಸೌಕರ್ಯಗಳಿದ್ದಾಗಲೂ ಸಂತೋಷವಾಗಿರಲು ಸಾಧ್ಯವಿಲ್ಲ. ಆದರೆ ಮನಸ್ಸನ್ನು ಸದಾ ಶಾಂತವಾಗಿಟ್ಟುಕೊಂಡರೆ ಖುಷಿಯಾಗಿರಲು ಸಾಧ್ಯ. ಜೀವನದಲ್ಲಿ ಕಷ್ಟದ ಸಂದರ್ಭವು ಎದುರಾದಾಗ ಶಾಂತ ಮನಸ್ಸಿನಲ್ಲಿದ್ದರೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
  2. ತೃಪ್ತಿ ಕಾಣುವುದು : ಈಗಿನ ಕಾಲದಲ್ಲಿ ಎಷ್ಟೇ ಇದ್ದರೂ ಸಾಕಾಗುವುದಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಎಂದು ಸ್ವೀಕರಿಸುವ ಮನೋಭಾವವೇ ಇರುವುದಿಲ್ಲ. ಮೊದಲು ಬದುಕಿನಲ್ಲಿ ತೃಪ್ತಿ ಕಾಣುವುದು ಮುಖ್ಯ. ಬೇರೆಯವರನ್ನು ಹೋಲಿಕೆ ಮಾಡಿ ನಮ್ಮಲ್ಲಿರುವ ಕೊರತೆಗಳ ಬಗ್ಗೆ ಚಿಂತಿಸುವುದು ಸರಿಯಲ್ಲ. ವ್ಯಕ್ತಿ ಯಾವಾಗಲೂ ಸ್ವಂತ ಮನಸ್ಸಿನಲ್ಲಿ ತೃಪ್ತಿಯನ್ನು ಅನುಭವಿಸುವುದೇ ಯಶಸ್ಸು ಆಗಿರುತ್ತದೆ. ಆ ತೃಪ್ತ ಭಾವ ಎಲ್ಲರಿಗೂ ಬಂದರೆ ಮಾತ್ರ ಜೀವನದಲ್ಲಿ ಸಂತೋಷವಾಗಿರುತ್ತಾನೆ.
  3. ದುರಾಸೆ ಪಡದಿರುವುದು : ಮನುಷ್ಯನಲ್ಲಿರುವ ಕೆಟ್ಟ ಗುಣವೆಂದರೆ ದುರಾಸೆ. ಅತಿಯಾಗಿ ಆಸೆ ಪಡುವುದನ್ನು ಬಿಟ್ಟು ಸಿಕ್ಕಿದ್ದನ್ನು ಗೌರವದಿಂದ ಸ್ವೀಕರಿಸುವುದನ್ನು ಕಲಿಯಿರಿ. ಈ ಮನೋಭಾವವು ಇಲ್ಲದೇ ಹೋದರೆ ನೆಮ್ಮದಿ ಯು ಮರೀಚಿಕೆಯಾಗುತ್ತದೆ. ಸಿಗಲಿಲ್ಲ ಎನ್ನುವ ನೋವು ಕಾಡುವುದಲ್ಲದೆ, ದುಃಖಕ್ಕೆ ಕಾರಣವಾಗುತ್ತದೆ ಎನ್ನುತ್ತಾನೆ ಚಾಣಕ್ಯ.
  4. ಯಶಸ್ಸಿನತ್ತ ಗಮನ ಕೊಡಿ : ನೀವು ಜೀವನದಲ್ಲಿ ಪ್ರಗತಿ ಹೊಂದಬೇಕಾದರೆ ಸದಾ ತನ್ನ ಗುರಿಯ ಬಗ್ಗೆ ಯೋಚಿಸಬೇಕು, ಅದರತ್ತ ಕೆಲಸ ಮಾಡಬೇಕು. ಇದರೊಂದಿಗೆ, ಲಾಭಕ್ಕಾಗಿ ಏನು ಮಾಡಬೇಕೆಂದು ನಿಮಗೆ ಯಾವಾಗಲೂ ತಿಳಿದಿರುವುದು ಮುಖ್ಯ. ಯಶಸ್ಸಿನಿಂದ ಜೀವನದಲ್ಲಿ ಸಂತೋಷವು ದೊರೆಯುತ್ತದೆ.
  5.  ದಾನ ಮಾಡುವುದು : ದಾನ ಮಾಡಿದಷ್ಟೂ ನಮ್ಮಲ್ಲಿರುವ ಸಂಪತ್ತು ಕಡಿಮೆಯಾಗುತ್ತದೆ ಎಂದು ಭಾವಿಸುತ್ತೇವೆ. ದಾನ ಮಾಡುವುದರಿಂದ, ಆತ್ಮವು ಯಾವಾಗಲೂ ಪರಿಶುದ್ಧವಾಗಿರುತ್ತದೆ. ದೇವರ ಆಶೀರ್ವಾದವು ಇರುತ್ತದೆ. ದಾನ ಮಾಡುವ ಪ್ರವೃತ್ತಿಯು ಆರ್ಥಿಕ ಲಾಭದ ಜೊತೆಗೆ ಸಂತೋಷ ಹಾಗೂ ಮನಸ್ಸು ಶಾಂತವಾಗಿರಲು ಕಾರಣವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಒಳ್ಳೆಯ ರಿಪೋರ್ಟ್ ಇದೆ’: ಮಾರ್ಟಿನ್​ ಬಿಡುಗಡೆ ಬಳಿಕ ಧ್ರುವ ಪ್ರತಿಕ್ರಿಯೆ
‘ಒಳ್ಳೆಯ ರಿಪೋರ್ಟ್ ಇದೆ’: ಮಾರ್ಟಿನ್​ ಬಿಡುಗಡೆ ಬಳಿಕ ಧ್ರುವ ಪ್ರತಿಕ್ರಿಯೆ
ಮುಡಾ ಹಗರಣ ಸಿದ್ದರಾಮಯ್ಯರನ್ನು ಹೆಚ್ಚು ಆಸ್ತಿಕರನ್ನಾಗಿ ಮಾಡಿರುವಂತಿದೆ!
ಮುಡಾ ಹಗರಣ ಸಿದ್ದರಾಮಯ್ಯರನ್ನು ಹೆಚ್ಚು ಆಸ್ತಿಕರನ್ನಾಗಿ ಮಾಡಿರುವಂತಿದೆ!
ಗೃಹಲಕ್ಷ್ಮಿ ಹಣದ ಉಪಯೋಗ ಹೇಗೆ? ಇಲ್ಲಿದೆ ಬಾಗವ್ವ ಸಣ್ಣಕ್ಕಿಯ ಉದಾಹರಣೆ
ಗೃಹಲಕ್ಷ್ಮಿ ಹಣದ ಉಪಯೋಗ ಹೇಗೆ? ಇಲ್ಲಿದೆ ಬಾಗವ್ವ ಸಣ್ಣಕ್ಕಿಯ ಉದಾಹರಣೆ
ನವರಾತ್ರಿ ಪೂಜಾವಿಧಿಗಳ 9 ನೇ ದಿನ ಜನಿಸಿದ ಮಗು ಶುಭದಾಯಯಕ: ಡಾ ಶೆಲ್ವಪಿಳ್ಳೆ
ನವರಾತ್ರಿ ಪೂಜಾವಿಧಿಗಳ 9 ನೇ ದಿನ ಜನಿಸಿದ ಮಗು ಶುಭದಾಯಯಕ: ಡಾ ಶೆಲ್ವಪಿಳ್ಳೆ
ಅಭಿಮಾನಿಗಳಿಂದ ಧ್ರುವ ಸರ್ಜಾಗೆ ಹೂಮಳೆ, ಸ್ಟೆಪ್ ಹಾಕಿದ ಧ್ರುವ
ಅಭಿಮಾನಿಗಳಿಂದ ಧ್ರುವ ಸರ್ಜಾಗೆ ಹೂಮಳೆ, ಸ್ಟೆಪ್ ಹಾಕಿದ ಧ್ರುವ
ಬಾಗಲಕೋಟೆ: ಮೊಸಳೆ ಬಾಯಿಯಿಂದ ಮಾಲೀಕನನ್ನು ಕಾಪಾಡಿದ ಎತ್ತು
ಬಾಗಲಕೋಟೆ: ಮೊಸಳೆ ಬಾಯಿಯಿಂದ ಮಾಲೀಕನನ್ನು ಕಾಪಾಡಿದ ಎತ್ತು
ಲೋಕಸಭಾ ಚುನಾವಣೆ ಡಿಬ್ಯಾಕಲ್ ನಂತರ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಸುರೇಶ್
ಲೋಕಸಭಾ ಚುನಾವಣೆ ಡಿಬ್ಯಾಕಲ್ ನಂತರ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಸುರೇಶ್
‘ಮಾರ್ಟಿನ್’ ರಿಲೀಸ್ ವೇಳೆ ಗೋಪೂಜೆ ಮಾಡಿದ ಧ್ರುವ ಸರ್ಜಾ
‘ಮಾರ್ಟಿನ್’ ರಿಲೀಸ್ ವೇಳೆ ಗೋಪೂಜೆ ಮಾಡಿದ ಧ್ರುವ ಸರ್ಜಾ
ಶಿವಕುಮಾರ್​​ಗೆ ವಿಶ್ ಮಾಡಲು ಬೆಳಗ್ಗೆಯೇ ಮನೆ ಮುಂದೆ ಅಭಿಮಾನಿಗಳ ದಂಡು
ಶಿವಕುಮಾರ್​​ಗೆ ವಿಶ್ ಮಾಡಲು ಬೆಳಗ್ಗೆಯೇ ಮನೆ ಮುಂದೆ ಅಭಿಮಾನಿಗಳ ದಂಡು
ಸಿದ್ದರಾಮಯ್ಯ ವಾಪಸ್ಸು ಕೊಟ್ಟಿದ್ದು ಅವರ ಸ್ವಂತ ಸೈಟುಗಳಲ್ಲ: ಕುಮಾರಸ್ವಾಮಿ
ಸಿದ್ದರಾಮಯ್ಯ ವಾಪಸ್ಸು ಕೊಟ್ಟಿದ್ದು ಅವರ ಸ್ವಂತ ಸೈಟುಗಳಲ್ಲ: ಕುಮಾರಸ್ವಾಮಿ