
ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳು ಮಾತ್ರವಲ್ಲ ನಮ್ಮ ಜೀವನಕ್ಕೆ ಬೇಕಾಗಿರುವಂತಹ ಹಲವಾರು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಅವರ ಈ ತತ್ವ, ಮಾರ್ಗದರ್ಶನಗಳನ್ನು ಸರಿಯಾಗಿ ಅನುಸರಿಸಿದರೆ, ಒಬ್ಬ ವ್ಯಕ್ತಿ ಯಶಸ್ವಿ, ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸಬಹುದು. ಇದೇ ರೀತಿ ನೀವು ಸಹ ಶಾಂತಿ ಮತ್ತು ಸಂತೋಷದಾಯಕ ಜೀವನವನ್ನು ನಡೆಸಲು ಬಯಸುವಿರಾ? ಹಾಗಿದ್ರೆ ಈ ಸರಳ ಸೂತ್ರಗಳನ್ನು ಪಾಲಿಸಿ. ಇದರಿಂದ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಸಂತೋಷ ನೆಲೆಸುತ್ತದೆ.
ಸಕಾರಾತ್ಮಕ ಚಿಂತನೆಯನ್ನು ಇಟ್ಟುಕೊಳ್ಳಿ: ನೀವು ಸಂತೋಷವಾಗಿರಲು ಬಯಸಿದರೆ, ಸಕಾರಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ನೀವು ಎಷ್ಟೇ ಸವಾಲುಗಳನ್ನು ಎದುರಿಸಿದರೂ, ಪ್ರತಿಯೊಂದು ಸನ್ನಿವೇಶದ ಸಕಾರಾತ್ಮಕ ಬದಿಯನ್ನು ನೋಡಲು ಪ್ರಯತ್ನಿಸಿ. ನಕಾರಾತ್ಮಕ ಚಿಂತನೆಯು ನಿಮ್ಮ ಒತ್ತಡ ಮತ್ತು ಅತೃಪ್ತಿಯನ್ನು ಮಾತ್ರ ಹೆಚ್ಚಿಸುತ್ತದೆ ಆದರೆ ಸಕಾರಾತ್ಮಕ ಚಿಂತನೆಯು ಪ್ರತಿಯೊಂದು ಸನ್ನಿವೇಶದಲ್ಲಿಯೂ ಪರಿಹಾರ ಮತ್ತು ತೃಪ್ತಿಯ ಮಾರ್ಗವನ್ನು ತೋರಿಸುತ್ತದೆ.ಹಾಗಾಗಿ ಯಾವಾಗಲೂ ಪಾಸಿಟಿವ್ ಆಗಿರಿ.
ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಬೇಡಿ: ನಾವು ನಮ್ಮ ಜೀವನವನ್ನು ಇತರರೊಂದಿಗೆ ಹೋಲಿಸಿಕೊಳ್ಳುವ ತಪ್ಪನ್ನು ಮಾಡುತ್ತೇವೆ. ಚಾಣಕ್ಯರ ಪ್ರಕಾರ, ಈ ಸಣ್ಣ ಅಭ್ಯಾಸವು ವ್ಯಕ್ತಿಯ ಎಲ್ಲಾ ಸಂತೋಷವನ್ನು ಕಸಿದುಕೊಳ್ಳಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ನಿಮ್ಮ ಜೀವನವನ್ನು ಇತರರೊಂದಿಗೆ ಹೋಲಿಕೆ ಮಾಡಬೇಡಿ. ನೀವು ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ನಿಲ್ಲಿಸಿದಾಗ, ನಿಮ್ಮ ಮನಸ್ಸು ಹಗುರವಾಗುತ್ತದೆ ಮತ್ತು ನೀವು ಸಂತೋಷವಾಗಿರಲು ಪ್ರಾರಂಭಿಸುತ್ತೀರಿ.
ಸರಳ ಮತ್ತು ಸಮತೋಲಿತ ಜೀವನವನ್ನು ನಡೆಸಿ:
ಭೌತಿಕ ವಸ್ತುಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವುದು ಎಂದಿಗೂ ಸರಿಯಲ್ಲ ಅಂತಹ ವಿಷಯಗಳು ನಿಮಗೆ ಕೇವಲ ತಾತ್ಕಾಲಿಕ ಸಂತೋಷವನ್ನು ತರಬಹುದು. ಆದರೆ ಸರಳ ಮತ್ತು ಸಮತೋಲಿತ ಜೀವನವು ನಿಮಗೆ ನಿಜವಾದ ಸಂತೋಷವನ್ನು ತರಬಹುದು. ನೀವು ಅತಿಯಾದ ಆಸೆಗಳನ್ನು ಮತ್ತು ದುರಾಸೆಯನ್ನು ಹೊಂದಿದಾಗ, ನೀವು ಮಾನಸಿಕವಾಗಿ ಅಶಾಂತರಾಗುತ್ತೀರಿ. ಇದರಿಂದ ನಿಮಗೆ ಸಂತೋಷವಾಗಿರಲು ಸಾಧ್ಯವಾಗುವುದಿಲ್ಲ. ಅದೇ ನಿಮ್ಮಲ್ಲಿರುವದರಲ್ಲಿ ನೀವು ತೃಪ್ತರಾಗಲು ಕಲಿತಾಗ ನೀವು ಸಂತೋಷವಾಗಿರುತ್ತೀರಿ ಎಂದು ಚಾಣಕ್ಯ ಹೇಳುತ್ತಾರೆ.
ಇದನ್ನೂ ಓದಿ: ಈ ಭಯವನ್ನು ತೆಗೆದುಹಾಕಿದರೆ ಮಾತ್ರ ಜೀವನದಲ್ಲಿ ಜಯಿಸಲು ಸಾಧ್ಯ
ಉತ್ತಮ ಸ್ನೇಹಿತ, ಸಂಗಾತಿಯನ್ನು ಆರಿಸಿ: ಆಚಾರ್ಯ ಚಾಣಕ್ಯರ ಪ್ರಕಾರ, ನಿಮ್ಮ ಸ್ನೇಹಿತರು ಮತ್ತು ಸಂಗಾತಿ ನಿಮ್ಮ ಜೀವನದ ಮೇಲೆ ಮಾತ್ರವಲ್ಲದೆ ನಿಮ್ಮ ಮನಸ್ಥಿತಿಯ ಮೇಲೂ ಆಳವಾದ ಪರಿಣಾಮ ಬೀರುತ್ತಾರೆ. ಆದ್ದರಿಂದ ಉತ್ತಮ ವ್ಯಕ್ತಿಯನ್ನು ಸಂಗಾತಿಯನ್ನಾಗಿ ಆಯ್ಕೆ ಮಾಡಿ, ಉತ್ತಮ ವ್ಯಕ್ತಿಗಳ ಸ್ನೇಹ ಬೆಳೆಸಿ. ಜೀವನದಲ್ಲಿ ಸಂತೋಷವಾಗಿರಲು, ನೀವು ಸಕಾರಾತ್ಮಕ ಮತ್ತು ಪ್ರೇರಣಾದಾಯಕ ಜನರೊಂದಿಗೆ ನೀವು ಇರಬೇಕು. ಅದೇ ನಕಾರಾತ್ಮಕ ಜನರು ಮತ್ತು ಇತರರನ್ನು ನಿರಂತರವಾಗಿ ಟೀಕಿಸುವವರು ನಿಮ್ಮ ಸಂತೋಷವನ್ನೇ ಕಸಿದುಕೊಳ್ಳುತ್ತಾರೆ.
ನಿಮ್ಮ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಿ: ಚಾಣಕ್ಯರ ಪ್ರಕಾರ, ಸಮಯಕ್ಕಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ. ಸಮಯವನ್ನು ಬುದ್ಧಿವಂತಿಕೆಯಿಂದ ಹೇಗೆ ಬಳಸಬೇಕೆಂದು ತಿಳಿದಿರುವವರು ಜೀವನದಲ್ಲಿ ಯಾವಾಗಲೂ ಸಂತೋಷವಾಗಿರುತ್ತಾರೆ ಮತ್ತು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಹಾಗಾಗಿ ನೀವು ನಿಮ್ಮ ಜೀವನದ ಪ್ರತಿ ಕ್ಷಣವನ್ನೂ ಸಹ ಒಳ್ಳೆಯ ಕಾರ್ಯಗಳು ಮತ್ತು ಸಕಾರಾತ್ಮಕ ಆಲೋಚನೆಗಳಿಗೆ ಮೀಸಲಿಡಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ