ಚಾಣಕ್ಯ ನೀತಿ: ನಿಮ್ಮ ಜೀವನದಲ್ಲಿ ಸದಾ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

|

Updated on: Aug 03, 2023 | 6:11 PM

ಜೀವನದಲ್ಲಿ ಯಶಸ್ಸು ಪಡೆಯಲು ಚಾಣಕ್ಯ ಎರಡು ವಿಶೇಷ ಸೂತ್ರಗಳನ್ನು ಹೇಳಿದ್ದಾರೆ. ಎರಡು ರೆಕ್ಕೆಗಳ ಸಹಾಯದಿಂದ ಪಕ್ಷಿಗಳು ಹೇಗೆ ಆಕಾಶದಲ್ಲಿ ಹಾರುತ್ತವೆಯೋ ಅದೇ ರೀತಿ ಕರ್ಮ ಮತ್ತು ಜ್ಞಾನದ ಎರಡು ರೆಕ್ಕೆಗಳ ಸಹಾಯದಿಂದ ಮನುಷ್ಯನು ಯಶಸ್ಸಿನ ಆಕಾಶದಲ್ಲಿ ಹಾರಲು ಸಾಧ್ಯವಾಗುತ್ತದೆ.

ಚಾಣಕ್ಯ ನೀತಿ: ನಿಮ್ಮ ಜೀವನದಲ್ಲಿ ಸದಾ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
Chanakya Niti
Follow us on

ಆಚಾರ್ಯ ಚಾಣಕ್ಯ(Chanakya) ಅವರು ತಮ್ಮ ನೀತಿಗಳಿಂದಾಗಿ ಇಂದಿಗೂ ಪ್ರಸಿದ್ಧರಾಗಿದ್ದಾರೆ. ಅವರ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ, ದೈನಂದಿನ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು. ಚಾಣಕ್ಯನ ನೀತಿಗಳು ಯಶಸ್ಸಿಗೆ ಹಾದಿ ಮಾಡಿ ಕೊಡುತ್ತದೆ ಎಂದು ಇಂದಿಗೂ ನಂಬುತ್ತಾರೆ. ಆದ್ದರಿಂದ ನೀವು ಎಷ್ಟೇ ಒಳ್ಳೆಯವರಾಗಿದ್ದರೂ ಕೂಡ ನಿಮ್ಮ ಒಂದು ನಿಮ್ಮನ್ನು ಕೆಟ್ಟವರನ್ನಾಗಿ ಸಮಾಜದಲ್ಲಿ ಬಿಂಬಿಸಬಹುದು ಚಾಣಕ್ಯ ನೀತಿ(Chanakya Niti) ಯಲ್ಲಿ ವಿವರಿಸಲಾಗಿದೆ.

ಕರ್ಮ ಮತ್ತು ಜ್ಞಾನ ಯಶಸ್ಸಿನ ಹಾದಿ:

ಜೀವನದಲ್ಲಿ ಯಶಸ್ಸು ಪಡೆಯಲು ಚಾಣಕ್ಯ ಎರಡು ವಿಶೇಷ ಸೂತ್ರಗಳನ್ನು ಹೇಳಿದ್ದಾನೆ. ಎರಡು ರೆಕ್ಕೆಗಳ ಸಹಾಯದಿಂದ ಪಕ್ಷಿಗಳು ಹೇಗೆ ಆಕಾಶದಲ್ಲಿ ಹಾರುತ್ತವೆಯೋ ಅದೇ ರೀತಿ ಕರ್ಮ ಮತ್ತು ಜ್ಞಾನದ ಎರಡು ರೆಕ್ಕೆಗಳ ಸಹಾಯದಿಂದ ಮನುಷ್ಯನು ಯಶಸ್ಸಿನ ಆಕಾಶದಲ್ಲಿ ಹಾರಲು ಸಾಧ್ಯವಾಗುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತದೆ. ನೀವು ಸಂತೋಷದಿಂದ ಮತ್ತು ಯಶಸ್ವಿಯಾಗಲು ಬಯಸಿದರೆ, ಯಾವಾಗಲೂ ಸತ್ಯವನ್ನು ಮಾತನಾಡಿ, ಬುದ್ಧಿವಂತಿಕೆಯಿಂದ ಖರ್ಚು ಮಾಡಿ, ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ ಎಂದು ಚಾಣಕ್ಯ ಹೇಳುತ್ತಾರೆ.

ಶತ್ರು ಹಾಗೂ ಸ್ನೇಹಿತ:

ಚಾಣಕ್ಯ ನೀತಿಯ ಪ್ರಕಾರ ಶತ್ರು ಮತ್ತು ದುರ್ಬಲ ಸ್ನೇಹಿತ ಇಬ್ಬರೂ ಯಾವಾಗಲೂ ನೋವುಂಟುಮಾಡುತ್ತಾರೆ. ಒಬ್ಬರು ಅವರೊಂದಿಗೆ ಜಾಗರೂಕರಾಗಿರಬೇಕು ಎಂದು ಹೇಳುತ್ತಾರೆ.

ಬುದ್ಧಿವಂತಿಕೆಯು ಅಜ್ಞಾನವನ್ನು ನಾಶಪಡಿಸುತ್ತದೆ:

ಪ್ರತಿಯೊಬ್ಬರ ಜೀವನದಲ್ಲೂ ಬುದ್ಧಿವಂತಿಕೆ ಎಂಬುದು ತುಂಬಾ ಮುಖ್ಯವಾಗಿರುತ್ತದೆ. ಬುದ್ಧಿವಂತಿಕೆಯು ಅಜ್ಞಾನವನ್ನು ನಾಶಪಡಿಸುತ್ತದೆ ಮತ್ತು ಬುದ್ಧಿವಂತಿಕೆಯಿಂದ ದೊಡ್ಡ ಸಮಸ್ಯೆಗಳನ್ನು ಸುಲಭವಾಗಿ ಜಯಿಸಬಹುದು. ಹಸಿದಿರುವುದು ಬುದ್ಧಿಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಅದು ವ್ಯಕ್ತಿಯ ಚಿತ್ರಣಕ್ಕೆ ಹಾನಿ ಮಾಡುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.

ಇದನ್ನೂ ಓದಿ: ಚಾಣಕ್ಯ ನೀತಿ: ವೈವಾಹಿಕ ಜೀವನದ ಸಂತೋಷಕ್ಕಾಗಿ ದಂಪತಿಗಳಿಗೆ ಆಚಾರ್ಯ ಚಾಣಕ್ಯರ ಕೆಲವು ಸಲಹೆಗಳು

ಸ್ನೇಹಿತರ ಸಹವಾಸ:

ಚಾಣಕ್ಯನ ಪ್ರಕಾರ, ಗೌರವವಿಲ್ಲದ ಸ್ಥಳ, ಸ್ನೇಹಿತರು ಮತ್ತು ಸಂಬಂಧಿಕರು ಇಲ್ಲದ ಸ್ಥಳದಲ್ಲಿ ಉಳಿಯುವುದು ಯಾವುದೇ ಪ್ರಯೋಜನವನ್ನು ತರುವುದಿಲ್ಲ. ಅಂತಹ ಸ್ಥಳವನ್ನು ತಕ್ಷಣವೇ ಬಿಡಬೇಕು ಎಂದು ಹೇಳುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​​ ಮಾಡಿ: