ಚಾಣಕ್ಯ ನೀತಿ: ವೈವಾಹಿಕ ಜೀವನದ ಸಂತೋಷಕ್ಕಾಗಿ ದಂಪತಿಗಳಿಗೆ ಆಚಾರ್ಯ ಚಾಣಕ್ಯರ ಕೆಲವು ಸಲಹೆಗಳು

ಚಾಣಕ್ಯ ನೀತಿ: ಪ್ರತಿಯೊಬ್ಬರೂ ತಮ್ಮ ಜೀವನವು ಸಂತೋಷ ಮತ್ತು ಶಾಂತಿಯಿಂದ ಸಾಗಬೇಕೆಂದು ಬಯಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಆಚಾರ್ಯ ಚಾಣಕ್ಯರು ವೈವಾಹಿಕ ಜೀವನದಲ್ಲಿ ತೃಪ್ತಿಗಾಗಿ ಪತಿ-ಪತಿಗೆ ಕೆಲವು ಸಲಹೆಗಳನ್ನು ನೀಡುತ್ತಾರೆ.

ಚಾಣಕ್ಯ ನೀತಿ: ವೈವಾಹಿಕ ಜೀವನದ ಸಂತೋಷಕ್ಕಾಗಿ ದಂಪತಿಗಳಿಗೆ ಆಚಾರ್ಯ ಚಾಣಕ್ಯರ ಕೆಲವು ಸಲಹೆಗಳು
ಸಾಂದರ್ಭಿಕ ಚಿತ್ರ
Follow us
ಅಕ್ಷತಾ ವರ್ಕಾಡಿ
|

Updated on: Jul 31, 2023 | 12:41 PM

ಆಚಾರ್ಯ ಚಾಣಕ್ಯ ಅವರು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಶ್ರೇಷ್ಠ ರಾಜಕಾರಣಿಗಳು, ಅರ್ಥಶಾಸ್ತ್ರಜ್ಞರು ಮತ್ತು ಸಮಾಜಶಾಸ್ತ್ರಜ್ಞರಲ್ಲಿ ಒಬ್ಬರು. ಅವರು ತಮ್ಮ ನೀತಿ ಶಾಸ್ತ್ರದಲ್ಲಿ, ಮಾನವ ಜೀವನವನ್ನು ಸರಳ ಮತ್ತು ಯಶಸ್ವಿಗೊಳಿಸಲು ಸಂಬಂಧಿಸಿದ ಅನೇಕ ವಿಷಯಗಳನ್ನು ವಿವರವಾಗಿ ಉಲ್ಲೇಖಿಸಿದ್ದಾರೆ. ಆಚಾರ್ಯ ಚಾಣಕ್ಯ ಅವರು ತಮ್ಮ ನೀತಿ ಶಾಸ್ತ್ರದಲ್ಲಿ ವೃತ್ತಿ, ಸ್ನೇಹ, ವೈವಾಹಿಕ ಜೀವನ, ಸಂಪತ್ತು ಮತ್ತು ಮಹಿಳೆಯರಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ವಾಸ್ತವವಾಗಿ, ಇಂದಿಗೂ ಆಚಾರ್ಯ ಚಾಣಕ್ಯರು ಹೇಳಿದ ನೀತಿಗಳು ಆಡಳಿತಕ್ಕೆ ಮಾತ್ರವಲ್ಲದೆ ಜೀವನದಲ್ಲಿಯೂ ಬಹಳ ಸಹಾಯಕವಾಗಿವೆ.

ಚಾಣಕ್ಯನು ನೀತಿ ಶಾಸ್ತ್ರದಲ್ಲಿ (ಚಾಣಕ್ಯ ನೀತಿ) ಹಣ, ಪ್ರಗತಿ, ಮದುವೆ, ಸ್ನೇಹ, ದ್ವೇಷ ಮತ್ತು ವ್ಯವಹಾರ ಇತ್ಯಾದಿಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿದ್ದಾರೆ. ಆಚಾರ್ಯ ಚಾಣಕ್ಯರು ಪತಿ-ಪತ್ನಿಯರ ನಡುವಿನ ಸಂಬಂಧವನ್ನು ಬಲಪಡಿಸಲು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಒಬ್ಬರನ್ನೊಬ್ಬರು ಗೌರವಿಸಿ:

ವೈವಾಹಿಕ ಜೀವನವನ್ನು ಸಂತೋಷದಿಂದಿಡಲು ಪತಿ ಮತ್ತು ಪತ್ನಿ ಪರಸ್ಪರ ಪ್ರೀತಿ ಹಾಗೂ ಗೌರವವನ್ನು ಹೊಂದಿರಬೇಕು. ಆಚಾರ್ಯ ಚಾಣಕ್ಯರ ಪ್ರಕಾರ, ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಗೌರವ ಎರಡೂ ಒಳಗೊಂಡಿದ್ದರೆ ಸಂಬಂಧ ಸುಂದರವಾಗಿ ಮುಂದುವರಿಯಲು ಸಾಧ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಯಾಗುತ್ತಿಲ್ಲವೇ? ಚಾಣಕ್ಯ ನೀತಿಯ ಈ 4 ಸಲಹೆಗಳನ್ನು ಅಳವಡಿಸಿಕೊಳ್ಳಿ

ದಾಂಪತ್ಯದಲ್ಲಿ ತಾಳ್ಮೆ ಅಗತ್ಯ:

ಆಚಾರ್ಯ ಚಾಣಕ್ಯರ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ಯಾವುದೇ ಪರಿಸ್ಥಿತಿಯಲ್ಲಿದ್ದರೂ ಒಮ್ಮೆಲೇ ನಿಮ್ಮ ಸಂಗಾತಿಯೊಂದಿಗೆ ಕೋಪಗೊಳ್ಳದೇ ತಾಳ್ಮೆಯಿಂದಿರುವುದು ಅಗತ್ಯ ಎಂದು ಹೇಳುತ್ತಾರೆ. ಯಾವುದೇ ಪರಿಸ್ಥಿತಿಯನ್ನು ಒಟ್ಟಿಗೆ ನಿಯಂತ್ರಿಸಲು ಪ್ರಯತ್ನಿಸಬೇಕು. ತಮ್ಮ ಸಂಬಂಧವನ್ನು ಕಾಪಾಡಿಕೊಳ್ಳಲು ನಿರಂತರ ತಾಳ್ಮೆಯಿಂದ ಕೆಲಸ ಮಾಡುವುದು ಅವಶ್ಯಕ.

ಗಂಡ ಹೆಂಡತಿ ಈ ವಿಷಯ ಒಬ್ಬರಿಗೊಬ್ಬರು ಹೇಳಬಾರದು:

ಆಚಾರ್ಯ ಚಾಣಕ್ಯರು ನೀತಿ ಶಾಸ್ತ್ರದಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ವೈಯಕ್ತಿಕ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಬಾರದು ಎಂದು ಹೇಳಿದ್ದಾರೆ. ಇದರಿಂದ ಪತಿ-ಪತ್ನಿಯರ ನಡುವಿನ ಸಂಬಂಧ ಮುರಿಯಬಹುದು. ಸಂಬಂಧದ ನಿಕಟ ವಿವರಗಳನ್ನು ಹಂಚಿಕೊಳ್ಳುವುದು ಪತಿ ಮತ್ತು ಹೆಂಡತಿಯ ನಡುವಿನ ವಿಶ್ವಾಸವನ್ನು ಮತ್ತಷ್ಟು ಕಳೆದುಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಎರಡೂ ಪಕ್ಷಗಳು ಎಚ್ಚರಿಕೆ ವಹಿಸಬೇಕು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್