Travel Tips: ಹೊಸ ವರ್ಷವನ್ನು ವಿದೇಶದಲ್ಲಿ ಆಚರಿಸಲು ಬಯಸುವಿರಾ?; ಬಜೆಟ್ ಸ್ನೇಹಿ ದೇಶಗಳ ಪಟ್ಟಿ ಇಲ್ಲಿದೆ

|

Updated on: Dec 20, 2024 | 7:34 PM

ಹೊಸ ವರ್ಷವನ್ನು ಆಚರಿಸಲು ವಿದೇಶ ಪ್ರವಾಸ ಯೋಜಿಸುತ್ತಿದ್ದೀರಾ? ಕಡಿಮೆ ಬಜೆಟ್‌ನಲ್ಲೂ ಸುಂದರವಾದ ಪ್ರವಾಸ ಮಾಡಬಹುದು. ಇಂಡೋನೇಷ್ಯಾ, ಥೈಲ್ಯಾಂಡ್, ವಿಯೆಟ್ನಾಂ, ಶ್ರೀಲಂಕಾ ಮತ್ತು ಭೂತಾನ್‌ಗಳಲ್ಲಿ 50,000 ರಿಂದ 1 ಲಕ್ಷ ರೂಪಾಯಿಗಳಲ್ಲಿ ಆಕರ್ಷಕ ಪ್ರವಾಸ ಕೈಗೊಳ್ಳಬಹುದು. ಕಡಲತೀರಗಳು, ದೇವಾಲಯಗಳು, ನೈಸರ್ಗಿಕ ಸೌಂದರ್ಯ, ಮತ್ತು ಅಗ್ಗದ ಆಹಾರ ಇಲ್ಲಿ ಲಭ್ಯವಿದೆ.

Travel Tips: ಹೊಸ ವರ್ಷವನ್ನು ವಿದೇಶದಲ್ಲಿ ಆಚರಿಸಲು ಬಯಸುವಿರಾ?; ಬಜೆಟ್ ಸ್ನೇಹಿ ದೇಶಗಳ ಪಟ್ಟಿ ಇಲ್ಲಿದೆ
Cheap New Year Trips
Image Credit source: Pinterest
Follow us on

ಹೊಸ ವರ್ಷವನ್ನು ಆಚರಿಸಲು ನೀವು ಬೇರೆ ದೇಶಕ್ಕೆ ಹೋಗಲು ಬಯಸುವಿರಾ? ಬಜೆಟ್ ಕಡಿಮೆಯಿದ್ದರೆ ಚಿಂತಿಸಬೇಡಿ, ಏಕೆಂದರೆ ಸುಂದರವಾದ ಮತ್ತು ತುಂಬಾ ಕಡಿಮರ ದುಡ್ಡಿನಲ್ಲಿ ಪ್ರವಾಸ ಕೈಗೊಳ್ಳಬಹುದಾದ ಅನೇಕ ದೇಶಗಳಿವೆ. ನೀವು ಕೇವಲ 50 ಸಾವಿರದಿಂದ 1 ಲಕ್ಷ ರೂಪಾಯಿಗಳಲ್ಲಿ ಹೊಸ ವರ್ಷದ ಆಚರಣೆಯ ಪ್ರವಾಸವನ್ನು ಪೂರ್ಣಗೊಳಿಸಬಹುದು. ಅಂತಹ 5 ಬಜೆಟ್ ಸ್ನೇಹಿ ವಿದೇಶಿ ತಾಣಗಳ ಬಗ್ಗೆ ಇಲ್ಲಿದೆ ಮಾಹಿತಿ.

ಇಂಡೋನೇಷ್ಯಾ:

ಇಂಡೋನೇಷ್ಯಾದಲ್ಲಿ, ವಿಶೇಷವಾಗಿ ಬಾಲಿ ಹೊಸ ವರ್ಷದ ಆಚರಣೆಗೆ ಅತ್ಯುತ್ತಮ ತಾಣವೆಂದು ಪರಿಗಣಿಸಲಾಗಿದೆ. ಕಡಲತೀರಗಳು, ದೇವಾಲಯಗಳು ಮತ್ತು ಜಲಪಾತಗಳನ್ನು ಕಣ್ತುಂಬಿಸಿಕೊಳ್ಳಬಹುದು. ಇಲ್ಲಿ ಅನೇಕ ಕಡಿಮೆ ಬಜೆಟ್ ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳು ಲಭ್ಯವಿದೆ. ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಸ್ಥಳೀಯ ಆಹಾರಗಳು ಸಹ ಅತ್ಯಂತ ಅಗ್ಗವಾಗಿ ಲಭ್ಯವಿವೆ.

ಥೈಲ್ಯಾಂಡ್:

ಭಾರತೀಯ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಬ್ಯಾಂಕಾಕ್, ಫುಕೆಟ್ ಮತ್ತು ಪಟ್ಟಾಯ ಮುಂತಾದ ಸ್ಥಳಗಳಿವೆ. ಈ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ಹೊಸ ವರ್ಷದ ಆಚರಣೆಯನ್ನು ಸ್ಮರಣೀಯವಾಗಿಸಬಹುದು. ಇಲ್ಲಿನ ಸ್ಟ್ರೀಟ್ ಫುಡ್, ನೈಟ್ ಮಾರ್ಕೆಟ್‌ಗಳು ಮತ್ತು ಬೀಚ್ ಪಾರ್ಟಿಗಳು ಪ್ರವಾಸದ ಆಕರ್ಷಣೆಯಾಗುತ್ತವೆ. ಇಲ್ಲಿನ ಹೋಟೆಲ್‌ಗಳು ಮತ್ತು ಆಹಾರಗಳು ಸಾಕಷ್ಟು ಬಜೆಟ್ ಸ್ನೇಹಿಯಾಗಿವೆ.

ವಿಯೆಟ್ನಾಂ:

ಇತಿಹಾಸ, ಸಂಸ್ಕೃತಿ ಮತ್ತು ಕಲೆಗಳು ನಿಮ್ಮನ್ನು ಆಕರ್ಷಿಸಿದರೆ, ನೀವು ಖಂಡಿತವಾಗಿಯೂ ಹೊಸ ವರ್ಷದಂದು ವಿಯೆಟ್ನಾಂಗೆ ಭೇಟಿ ನೀಡಬೇಕು. ಹೋ ಚಿ ಮಿನ್ಹ್ ಸಿಟಿ, ಹನೋಯಿ ಮತ್ತು ಹಾ ಲಾಂಗ್ ಬೇ ಮುಂತಾದ ಸ್ಥಳಗಳು ಸಾಕಷ್ಟು ಆಸಕ್ತಿದಾಯಕವಾಗಿವೆ. ಸ್ಥಳೀಯ ಆಹಾರಗಳು ಮತ್ತು ಕಡಿಮೆ-ವೆಚ್ಚದ ಸಾರಿಗೆ ಸೇವೆಗಳು ಕಡಿಮೆ ಬಜೆಟ್‌ನಲ್ಲಿ ಸಂಪೂರ್ಣ ಪ್ರವಾಸವನ್ನು ಪೂರ್ಣಗೊಳಿಸಲು ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಈ ದೇಶದಲ್ಲಿ ಕಳೆದ 95 ವರ್ಷಗಳಿಂದ ಒಂದೇ ಒಂದು ಮಗು ಹುಟ್ಟಿಲ್ಲ!

ಶ್ರೀಲಂಕಾ:

‘ರತ್ನಗಳ ದ್ವೀಪ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಶ್ರೀಲಂಕಾ ತುಂಬಾ ಸುಂದರವಾಗಿದೆ. ಈ ನೆರೆಯ ಭಾರತದಲ್ಲಿ ಹೊಸ ವರ್ಷವನ್ನು ಆಚರಿಸುವುದು ತುಂಬಾ ಅಗ್ಗವಾಗಿದೆ. ಇಲ್ಲಿರುವ ಕಡಲತೀರಗಳು, ಪುರಾತನ ದೇವಾಲಯಗಳು ಮತ್ತು ಅನೇಕ ನೈಸರ್ಗಿಕ ತಾಣಗಳು ನಿಮ್ಮ ಪ್ರವಾಸವನ್ನು ಸ್ಮರಣೀಯವಾಗಿಸಬಹುದು. ಕೊಲಂಬೊ, ಕ್ಯಾಂಡಿ ಮತ್ತು ಗಾಲೆಯಂತಹ ನಗರಗಳಲ್ಲಿ ಪ್ರತಿ ಕ್ಷಣವೂ ವಿಶೇಷವಾಗಿರುತ್ತದೆ. ಶ್ರೀಲಂಕಾದ ಎಲಾ ರಾಕ್, ಸಿಗಿರಿಯಾ ರಾಕ್ ಮತ್ತು ಯಾಲಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವುದು ಉತ್ತಮ ಅನುಭವವನ್ನು ನೀಡುತ್ತದೆ. ಸ್ಥಳೀಯ ಆಹಾರಗಳು, ಸಾರಿಗೆ ಮತ್ತು ಹೋಟೆಲ್‌ಗಳು ಇಲ್ಲಿ ಅತ್ಯಂತ ಕೈಗೆಟುಕುವ ದರದಲ್ಲಿ ಲಭ್ಯವಿದೆ.

ಭೂತಾನ್:

ನೀವು ಭೂತಾನ್‌ನಲ್ಲಿ ಹೊಸ ವರ್ಷವನ್ನು ಆಚರಿಸಲು ಯೋಜಿಸಬಹುದು. ಶಾಂತಿ ಮತ್ತು ನೈಸರ್ಗಿಕ ಸೌಂದರ್ಯದ ಮಡಿಲಲ್ಲಿ ನೆಲೆಸಿರುವ ಈ ಸ್ಥಳವು ಸಾಕಷ್ಟು ಬಜೆಟ್ ಸ್ನೇಹಿಯಾಗಿದೆ. ಭಾರತದ ಜನರು ಇಲ್ಲಿಗೆ ಹೋಗಲು ವೀಸಾ ಅಗತ್ಯವಿಲ್ಲ. ಇದರಿಂದಾಗಿ ಇದು ಇನ್ನಷ್ಟು ಅಗ್ಗವಾಗುತ್ತದೆ. ಭೂತಾನ್‌ಗೆ ಹೋಗುವುದರ ಮೂಲಕ ಮತ್ತು ಥಿಂಪು, ಪಾರೋ ಮತ್ತು ಪುನಾಖಾ ಮುಂತಾದ ಸ್ಥಳಗಳನ್ನು ಅನ್ವೇಷಿಸುವ ಮೂಲಕ ನೀವು ಹೊಸ ವರ್ಷವನ್ನು ಆನಂದಿಸಬಹುದು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:15 pm, Fri, 20 December 24