ಮಕ್ಕಳಲ್ಲಿ ಬೊಜ್ಜು ಹೆಚ್ಚಿಸುವ ಜಂಕ್​ಫುಡ್ ಚಟ ಬಿಡಿಸುವುದು ಹೇಗೆ?

ಮಕ್ಕಳು ಯಾವುದಾದರೂ ಒಂದನ್ನು ಇಷ್ಟಪಡತೊಡಗಿದರೆ ಅದರಿಂದ ಆ ಮಕ್ಕಳನ್ನು ದೂರ ತರುವುದು ಬಹಳ ಕಷ್ಟ. ಮಕ್ಕಳಿಗೆ ಯಾವುದು ಆರೋಗ್ಯಕರ ಎಂಬುದು ಗೊತ್ತಾಗುವುದಿಲ್ಲ. ಅವರಿಗೆ ಯಾರು ಏನು ರುಚಿಯಾದುದನ್ನು ಕೊಡುತ್ತಾರೋ ಅದನ್ನೇ ತಿನ್ನುತ್ತಾರೆ. ಹೀಗಾಗಿ, ಮಕ್ಕಳಿಗೆ ಯಾವ ರೀತಿಯ ಆಹಾರ ಕೊಡಬೇಕೆನ್ನುವುದು ಪೋಷಕರ ಜವಾಬ್ದಾರಿಯಾಗಿದೆ.

ಮಕ್ಕಳಲ್ಲಿ ಬೊಜ್ಜು ಹೆಚ್ಚಿಸುವ ಜಂಕ್​ಫುಡ್ ಚಟ ಬಿಡಿಸುವುದು ಹೇಗೆ?
ಜಂಕ್​ಫುಡ್ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Mar 07, 2024 | 10:15 AM

ಜಂಕ್​ಫುಡ್ (Junk Food) ಮಕ್ಕಳ ಆಹಾರಪದ್ಧತಿಯನ್ನು ಆವರಿಸಿಕೊಂಡುಬಿಟ್ಟಿದೆ. ಮಕ್ಕಳಿಗೆ ಆರೋಗ್ಯಕರ ಆಹಾರಕ್ಕಿಂತಲೂ ಜಂಕ್​ಫುಡ್​ಗಳೇ ಹೆಚ್ಚು ಇಷ್ಟವಾಗುತ್ತಿದೆ. ಇಂತಹ ಆಹಾರಗಳಿಂದ ಮಕ್ಕಳಲ್ಲಿ ಸ್ಥೂಲಕಾಯತೆಯ ಸಮಸ್ಯೆ ಬಹಳ ಹೆಚ್ಚಾಗುತ್ತಿದೆ. ಇದು ಚಿಕ್ಕ ಮಕ್ಕಳಲ್ಲಿ ಹೃದ್ರೋಗ (Heart Problem), ಮಧುಮೇಹ, ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಮೂಳೆಯ ದೌರ್ಬಲ್ಯ ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಅಲ್ಟ್ರಾ ಸಂಸ್ಕರಿಸಿದ ಆಹಾರಗಳ ಜನಪ್ರಿಯತೆಯು ಕಳೆದ ಕೆಲವು ದಶಕಗಳಿಂದ ಹೆಚ್ಚುತ್ತಿದೆ. ಮಕ್ಕಳ ದೇಹದಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾಗುವುದಕ್ಕೆ ಇದು ಮುಖ್ಯ ಕಾರಣವಾಗಿದೆ. ಬರ್ಗರ್ ಮತ್ತು ಪಿಜ್ಜಾ ಅಥವಾ ಆಲೂಗೆಡ್ಡೆ ಚಿಪ್ಸ್ ಅಥವಾ ಚಾಕೊಲೇಟ್ ಮುಂತಾದವು ಹೆಚ್ಚಿನ ಕ್ಯಾಲೋರಿ, ಸಕ್ಕರೆ ಮತ್ತು ಕೊಬ್ಬಿನ ಅಂಶವನ್ನು ಹೊಂದಿರುತ್ತವೆ. ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನ 1990ರಿಂದ ಮಕ್ಕಳಲ್ಲಿ ಸ್ಥೂಲಕಾಯದ ಜಾಗತಿಕ ದರ 4 ಪಟ್ಟು ಹೆಚ್ಚಾಗಿದೆ ಮತ್ತು ವಯಸ್ಕರಲ್ಲಿ ಈ ಬೊಜ್ಜಿನ ಸಮಸ್ಯೆ ದುಪ್ಪಟ್ಟಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: Child Health: ಮಕ್ಕಳಲ್ಲಿ ಬೊಜ್ಜು ಹೆಚ್ಚುತ್ತಿರುವುದಕ್ಕೆ ಪೋಷಕರೇ ಕಾರಣ!

ಮಕ್ಕಳಲ್ಲಿ ಜಂಕ್ ಫುಡ್ ಸೇವನೆಯನ್ನು ನಿಯಂತ್ರಿಸುವುದು ಹೇಗೆ?:

ವಿಟಮಿನ್​ಗಳು, ಖನಿಜಗಳು ಮತ್ತು ಫೈಬರ್‌ ಅಂಶ ಸಮೃದ್ಧವಾಗಿರುವ ಸಂಪೂರ್ಣ ಆಹಾರವನ್ನು ಸೇವಿಸುವ ಪ್ರಾಮುಖ್ಯತೆಯ ಬಗ್ಗೆ ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣ ನೀಡುವುದು ಅಗತ್ಯ. ಇದು ಜೀವನಪರ್ಯಂತ ಆರೋಗ್ಯಕರ ಆಹಾರ ಪದ್ಧತಿಯನ್ನು ಬೆಳೆಸಲು ಬಹಳ ಮುಖ್ಯವಾಗಿದೆ. ಜಂಕ್ ಫುಡ್‌ನಿಂದ ಮಕ್ಕಳನ್ನು ದೂರವಿಡಲು ಪೋಷಕರು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬಹುದು.

ಊಟದ ಯೋಜನೆ ಮತ್ತು ಅಡುಗೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಿ:

ಊಟವನ್ನು ಯೋಜಿಸುವ ಮತ್ತು ತಯಾರಿಸುವ ಪ್ರಕ್ರಿಯೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದರಿಂದ ಹೊಸ ಆಹಾರಗಳ ರುಚಿ ನೋಡಲು ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವಂತೆ ಮಾಡಲು ಅವರನ್ನು ಪ್ರೋತ್ಸಾಹಿಸಬಹುದು.

ನಿಮ್ಮ ಶಾಪಿಂಗ್ ಪಟ್ಟಿಯಿಂದ ಅನಾರೋಗ್ಯಕರ ತಿಂಡಿಗಳನ್ನು ತೆಗೆದುಹಾಕಿ:

ಜಂಕ್ ಫುಡ್ ಖರೀದಿಸುವುದನ್ನು ತಪ್ಪಿಸುವ ಮೂಲಕ ನಿಮ್ಮ ಮಕ್ಕಳಿಗೆ ಜಂಕ್​ಫುಡ್ ತಿನ್ನುವ ಆಸೆ ಉಂಟಾಗದಂತೆ ನೋಡಿಕೊಳ್ಳಿ. ಇದರ ಬದಲಿಗೆ ಸಂಪೂರ್ಣ ಆಹಾರ, ಆರೋಗ್ಯಕರ ಆಹಾರ ಮತ್ತು ಮನೆಯಲ್ಲಿ ತಯಾರಿಸಿದ ಊಟಕ್ಕೆ ಆದ್ಯತೆ ನೀಡಿ.

ಪೌಷ್ಠಿಕಾಂಶವುಳ್ಳ ಊಟವನ್ನು ಹೆಚ್ಚು ಆಕರ್ಷಕವಾಗಿ ಮಾಡಿ:

ಆರೋಗ್ಯಕರ ಆಹಾರವನ್ನು ಸೃಜನಾತ್ಮಕವಾಗಿ ಮತ್ತು ಆನಂದದಾಯಕ ರೀತಿಯಲ್ಲಿ ಪ್ರಸ್ತುತಪಡಿಸುವ ಮೂಲಕ ಮಕ್ಕಳಿಗೆ ಅದರ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿ. ಉದಾಹರಣೆಗೆ; ಹಣ್ಣು ಕಟ್ಟರ್‌ಗಳನ್ನು ಬಳಸುವುದು ಅಥವಾ ನೋಡಲು ಇಷ್ಟವಾಗುವ ವಿನ್ಯಾಸಗಳಲ್ಲಿ ತರಕಾರಿಗಳನ್ನು ಜೋಡಿಸುವುದು ಇಂತಹ ಪ್ರಯತ್ನಗಳನ್ನು ಮಾಡಿ.

ಇದನ್ನೂ ಓದಿ: Iron Deficiency: ಶೇ. 60ರಷ್ಟು ಮಹಿಳೆಯರಲ್ಲಿ ಕಬ್ಬಿಣದ ಕೊರತೆ; ಇದಕ್ಕೆ ಪರಿಹಾರ ಇಲ್ಲಿದೆ

ನಿಮ್ಮ ಆಹಾರಶೈಲಿ ಚೆನ್ನಾಗಿರಲಿ:

ಮಕ್ಕಳು ಸಾಮಾನ್ಯವಾಗಿ ತಮ್ಮ ಹೆತ್ತವರ ನಡವಳಿಕೆಯನ್ನು ಅನುಕರಿಸುತ್ತಾರೆ. ಆದ್ದರಿಂದ ನೀವು ಯಾವ ರೀತಿಯ ಆಹಾರಗಳನ್ನು ತಿನ್ನುತ್ತೀರಿ, ಹೇಗೆ ತಿನ್ನುತ್ತೀರಿ ಎಂಬುದು ಕೂಡ ಮುಖ್ಯವಾಗುತ್ತದೆ. ಉತ್ತಮ ಆಹಾರದ ಆಯ್ಕೆಗಳನ್ನು ಮಾಡುವುದು ಮತ್ತು ಅನಾರೋಗ್ಯಕರ ಆಯ್ಕೆಗಳನ್ನು ದೂರ ಇಡುವುದರಿಂದ ನಿಮ್ಮ ಮಕ್ಕಳು ಅದೇ ರೀತಿ ಮಾಡಲು ಪ್ರಭಾವ ಬೀರಬಹುದು.

ಟಿವಿ, ಮೊಬೈಲ್ ನೋಡುವ ಸಮಯವನ್ನು ಕಡಿಮೆ ಮಾಡಿ:

ಮಕ್ಕಳಲ್ಲಿ ಅನಾರೋಗ್ಯಕರ ತಿಂಡಿಗಳ ಹೆಚ್ಚಿದ ಬಳಕೆಗೆ ಅತಿಯಾದ ಟಿವಿ, ಮೊಬೈಲ್ ನೋಡುವಿಕೆ ಕೂಡ ಕಾರಣ. ಸ್ಕ್ರೀನ್ ಸಮಯವನ್ನು ಸೀಮಿತಗೊಳಿಸುವುದರಿಂದ ಈ ಅಭ್ಯಾಸವನ್ನು ದೂರವಿಡಬಹುದು.

ಆರೋಗ್ಯಕರ ತಿಂಡಿಗಳನ್ನು ಸೇವಿಸಿ:

ನಿಮ್ಮ ಮಕ್ಕಳು ಸಕ್ಕರೆ ಅಥವಾ ಖಾರವನ್ನು ಸೇವಿಸಲು ಬಯಸಿದಾಗ ಹಣ್ಣುಗಳು, ನಟ್ಸ್, ಸೀಡ್ಸ್ ಅಥವಾ ಪಾಪ್‌ಕಾರ್ನ್‌ನಂತಹ ಪೌಷ್ಟಿಕಾಂಶದ ಆಹಾರವನ್ನು ನೀಡಿ. ನಿಮ್ಮ ಮಕ್ಕಳಿಗೆ ಆಹಾರದೊಂದಿಗೆ ಆರೋಗ್ಯಕರ ಸಂಬಂಧವನ್ನು ಬೆಳೆಸಲು ಮನೆಯಲ್ಲಿ ಉತ್ತಮ ಆಹಾರ ಪದ್ಧತಿಗಳನ್ನು ಅನುಸರಿಸುವುದು ಬಹಳ ಮುಖ್ಯ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ