Inspiring Children's Day Quotes, Messages
ನವೆಂಬರ್ 14 ಮಕ್ಕಳಿಗಾಗಿಯೇ ಮೀಸಲಾದ ದಿನ. ಮಕ್ಕಳನ್ನು ದೇವರ ಸಮಾನವಾಗಿ ನೋಡುವ ನಮ್ಮಲ್ಲಿ ಅವರ ಖುಷಿ, ಸಂತೋಷವನ್ನು ಮತ್ತಷ್ಟು ದುಪ್ಪಟ್ಟು ಮಾಡಲು ಮೀಸಲಾದ ದಿನ ಇದಾಗಿದೆ. ಆದರೆ ಇದು ಬರೀ ಮಕ್ಕಳಿಗಷ್ಟೇ ಸೀಮಿತವಲ್ಲ. ದೊಡ್ಡವರಿಗೂ ಅವರ ಬಾಲ್ಯದ ದಿನಗಳನ್ನು ಒಂದು ಕ್ಷಣ ಮೆಲುಕು ಹಾಕಿ, ಹಿಂದೆ ಕಳೆದ ಸುಂದರ ಕ್ಷಣಗಳನ್ನು ನೆನಪಿಸಿಕೊಳ್ಳಲು ಇರುವ ದಿನವೂ ಹೌದು. ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರೂ (Pandit Jawaharlal Nehru) ಅವರ ಜನ್ಮದಿನದಂದು ಪ್ರತಿ ವರ್ಷ ನವೆಂಬರ್ 14 ರಂದು ಭಾರತದಲ್ಲಿ ಮಕ್ಕಳ ದಿನವನ್ನು (Children’s Day) ಆಚರಿಸಲಾಗುತ್ತದೆ. ಅವರಿಗೆ ಮಕ್ಕಳೆಂದರೆ ಬಲು ಪ್ರೀತಿ. ಈ ಮಕ್ಕಳು ರಾಷ್ಟ್ರದ ಮುಂದಿನ ಒಳ್ಳೆಯ ಪ್ರಜೆಗಳು ಎಂಬುದನ್ನು ಅವರು ನಂಬಿದ್ದರು. ಅದಕ್ಕಾಗಿಯೇ ಅವರ ಮರಣ ನಂತರ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಇಂತಹ ಒಂದು ಸುಂದರ ದಿನಕ್ಕೆ ಮಕ್ಕಳಿಗೆ ಶುಭಾಶಯಗಳನ್ನು ತಿಳಿಸಲು ಕೆಲವು ಒಳ್ಳೆಯ ಸಂದೇಶಗಳನ್ನು ಇಲ್ಲಿ ನೀಡಲಾಗಿದ್ದು, ನೀವು ಕೂಡ ಮಕ್ಕಳಿಗೆ ಈ ರೀತಿಯಾಗಿ ಶುಭಾಶಯಗಳನ್ನು ತಿಳಿಸಿ ಮಕ್ಕಳನ್ನು ಖುಷಿ ಪಡಿಸಬಹುದಾಗಿದೆ.
ಇಲ್ಲಿವೆ ಮಕ್ಕಳ ದಿನಾಚರಣೆಯ ಶುಭಾಶಯದ ಸಂದೇಶಗಳು:
- ನಿಮ್ಮ ಬಾಲ್ಯವು ನಿರಂತರವಾದ ಸಂತೋಷ, ನಗು ಮತ್ತು ಖುಷಿಯಿಂದ ತುಂಬಿರಲಿ. ಎಲ್ಲ ಮುದ್ದು ಮಕ್ಕಳಿಗೂ ಮಕ್ಕಳ ದಿನದ ಶುಭಾಶಯಗಳು.
- ಮಕ್ಕಳು ಪ್ರಪಂಚದ ಬೆಳಕು. ಎಲ್ಲಾ ಹೊಳೆಯುವ ನಕ್ಷತ್ರಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು.
- ಕನಸುಗಾರರಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು! ಯಾವಾಗಲೂ ಖುಷಿಯಾಗಿರಿ.
- ನಮ್ಮ ಜಗತ್ತನ್ನು ಪ್ರಕಾಶಮಾನವಾಗಿ ಮಾಡುವ ಎಲ್ಲಾ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು!.
- ಮಗುವಿನೊಂದಿಗೆ ಕಳೆಯುವ ಪ್ರತಿಯೊಂದು ಕ್ಷಣವೂ ಅದ್ಭುತ. ನಿನ್ನನ್ನು ಆಶೀರ್ವಾದದ ರೀತಿ ಪಡೆದ ನಾನೇ ಧನ್ಯ. ನಿನಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು.
- ಯುವ ಮನಸ್ಸನ್ನು ಪ್ರೇರೇಪಿಸುವ ಎಲ್ಲಾ ಅದ್ಭುತ ಶಿಕ್ಷಕರಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು. ನಿಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಧನ್ಯವಾದಗಳು.
- ಮಕ್ಕಳು ನಮಗೆ ತಿಳಿದಿರುವುದಕ್ಕಿಂತ ಹೆಚ್ಚು ಕಲಿಸುತ್ತಾರೆ. ಯಾವಾಗಲೂ ದೊಡ್ಡ ಕನಸು ಕಾಣಿರಿ. ನಿಮ್ಮ ಗುರಿಗಳನ್ನು ಎಂದಿಗೂ ಬಿಟ್ಟುಕೊಡಬೇಡಿ. ಮಕ್ಕಳ ದಿನದ ಶುಭಾಶಯ.
- ಇಂದಿನ ಮಕ್ಕಳು ನಾಳೆಯ ಭಾರತವನ್ನು ನಿರ್ಮಿಸುತ್ತಾರೆ. ನಾವು ಅವರನ್ನು ಬೆಳೆಸುವ ವಿಧಾನವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಅವ್ರೆಲ್ಲರಿಗೂ ಮಕ್ಕಳ ದಿನದ ಶುಭಾಶಯ.
- ಮಕ್ಕಳು ಉದ್ಯಾನವನದಲ್ಲಿರುವ ಮೊಗ್ಗುಗಳಂತೆ. ಅವರನ್ನು ತುಂಬಾ ಎಚ್ಚರಿಕೆಯಿಂದ ಮತ್ತು ಪ್ರೀತಿಯಿಂದ ಪೋಷಿಸಬೇಕು. ಯಾಕೆಂದರೆ, ಅವರು ಭಾರತದ ಭವಿಷ್ಯ ಮತ್ತು ನಾಳಿನ ಪ್ರಜೆಗಳು.
- ಮಕ್ಕಳನ್ನು ಸುಧಾರಿಸುವ ಏಕೈಕ ಮಾರ್ಗ ಎಂದರೆ ಅವರನ್ನು ಪ್ರೀತಿಯಿಂದ ಗೆಲ್ಲುವುದು. ಮಕ್ಕಳೊಂದಿಗೆ ಸ್ನೇಹದಿಂದ ಇರದ ಹೊರತು ನೀವು ಅವರ ದಾರಿಗಳನ್ನು ಸರಿಪಡಿಸಲು ಸಾಧ್ಯವಿಲ್ಲ.
- ನಿಮ್ಮ ಕನಸುಗಳು ಎತ್ತರಕ್ಕೆ ಏರಲಿ ಮತ್ತು ನಿಮ್ಮ ಆಶಯಗಳು ದೊಡ್ಡದಾಗಿರಲಿ. ನಿಮಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು!
- ಪ್ರತಿಯೊಂದು ಮಗುವೂ ವಿಭಿನ್ನ ರೀತಿಯ ಹೂವುಗಳು ಮತ್ತು ಈ ಹೂವುಗಳೆಲ್ಲಾ ಒಟ್ಟಾಗಿ ಈ ಜಗತ್ತನ್ನು ಸುಂದರವಾದ ಉದ್ಯಾನವನ್ನಾಗಿ ಮಾಡುತ್ತಾರೆ. ಮಕ್ಕಳ ದಿನಾಚರಣೆಯ ಶುಭಾಶಯಗಳು.
- ಜೀವನದ ಸಂತೋಷ ಹಾಗೂ ಮುಗ್ಧತೆಯನ್ನು ಕಲಿಸಿದ ನಿಮಗೆಲ್ಲಾ ಮಕ್ಕಳ ದಿನಾಚರಣೆಯ ಶುಭಾಶಯಗಳು.
- ಮಕ್ಕಳನ್ನು ಒಳ್ಳೆಯವರನ್ನಾಗಿ ಮಾಡಲು ಉತ್ತಮ ಮಾರ್ಗವೆಂದರೆ ಅವರು ಪ್ರತಿ ಕ್ಷಣ ಸಂತೋಷದಲ್ಲಿರುವಂತೆ ನೋಡಿಕೊಳ್ಳುವುದು. ಮಕ್ಕಳ ದಿನಾಚರಣೆಯ ಶುಭಾಶಯಗಳು.
- ನಿಮ್ಮ ಕಣ್ಣಿನಲ್ಲಿರುವ ಮುಗ್ಧತೆ ಮತ್ತು ನಿಮ್ಮ ಹೃದಯದ ಪರಿಶುದ್ಧತೆ ಶಾಶ್ವತವಾಗಿ ಕಳಂಕರಹಿತವಾಗಿರಲಿ. ನಮ್ಮ ಜೀವನದ ದೇವತೆಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು.
- ನೀವೇ ನಮ್ಮ ಶ್ರೇಷ್ಠ ಗುರುಗಳು. ಪ್ರೀತಿ, ಸಹಾನುಭೂತಿ ಮತ್ತು ದೃಢತೆಯ ನಿಜವಾದ ಅರ್ಥವನ್ನು ನಮಗೆ ಕಲಿಸುವ ಚಿಣ್ಣರಿಗೆ, ಮಕ್ಕಳ ದಿನಾಚರಣೆಯ ಶುಭಾಶಯಗಳು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ